TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಗೂಗಲ್ ಮ್ಯಾಪ್‌ನಲ್ಲಿ ಇನ್ಮೂಂದೆ ಬರಲಿದೆ 'ಸ್ಪೀಡ್ ಲಿಮಿಟ್'!
ವಿನೂತನ ತಂತ್ರಜ್ಞಾನಗಳಿಂದ ಟೆಕ್ ಪ್ರಿಯರ ಮನಗೆದ್ದಿರುವ ಅಂತರ್ಜಾಲ ದಿಗ್ಗಜ ಸಂಸ್ಥೆ 'ಗೂಗಲ್' ಇದೀಗ ಮತ್ತೊಂದು ಹೊಸತನದ ಫೀಚರ್ ಅನ್ನು ತನ್ನ ಗೂಗಲ್ ಮ್ಯಾಪ್ ಬಳಕೆದಾರರಿಗೆ ಪರಿಚಯಿಸಲು ರೆಡಿಯಾಗಿದೆ. ಗೂಗಲ್ ಪರಿಚಯಿಸಲು ಮುಂದಾಗಿರುವ ಈ ಹೊಸ ಫೀಚರ್ ಡ್ರೈವಿಂಗ್ ಮಾಡುವವರಿಗೆ ತುಂಬಾ ಉಪಯುಕ್ತವಾಗಲಿದೆ. ಹಾಗಾದರೇ ಯಾವುದು ಆ ಫೀಚರ್.?
ಉಪಯುಕ್ತ ಮತ್ತು ಅಗತ್ಯ ಮಾಹಿತಿಯನ್ನು ಗೂಗಲ್ ಮ್ಯಾಪ್ ತನ್ನ ಬಳಕೆದಾರರಿಗೆ ನೀಡುತ್ತಿರುವುದು ತುಂಬಾ ಅನುಕೂಲಕರವಾಗಿದ್ದು, ಇದರ ಮುಂದುವರಿದ ಭಾಗವಾಗಿ ಗೂಗಲ್ ತನ್ನ ಮ್ಯಾಪ್‌ನಲ್ಲಿ 'ಸ್ಪೀಡ್ ಲಿಮಿಟ್' ಮಾಹಿತಿಯ ಫೀಚರ್‌ನ್ನು ಇನ್ನು ಮುಂದೆ ಪರಿಚಯಿಸಲಿದೆ ಎಂದು ತಿಳಿದುಬಂದಿದೆ. ಗೂಗಲ್‌ನ ಮ್ಯಾಪ್ ಅನ್ನು ತೆರೆದಾಗ ಎಡಭಾಗದಲ್ಲಿ ಈ ಸ್ಪೀಡ್ ಲಿಮಿಟ್ ಫೀಚರ್ ಕಾಣಿಸಿಕೊಳ್ಳಲಿದೆ ಎಂದು ಗೂಗಲ್ ಸಂಸ್ಥೆ ತಿಳಿಸಿದೆ.
ಗೂಗಲ್ ಮ್ಯಾಪ್‌ನ ಸ್ಪೀಡ್ ಲಿಮಿಟ್ ತನ್ನ ತಂತ್ರಜ್ಞಾನದ ಮೂಲಕ ರಸ್ತೆಯಲ್ಲಿ ವಾಹನದ ವೇಗದ ಮಿತಿಯ ಬಗ್ಗೆ ಮಾಹಿತಿಯನ್ನು ಸೂಚಿಸುತ್ತದೆ. ಇದರಿಂದ ವಾಹನ ಚಾಲಕರಿಗೆ ತುಂಬಾ ಅನುಕೂಲವಾಗಲಿದ್ದು, ಗೂಗಲ್‌ನ ಈ ನೂತನ ಪ್ರಯತ್ನವು ರಸ್ತೆ ಅವಘಡಗಳನ್ನು ತಡೆಯಲು ನೆರವಾಗಬಹುದು ಎನ್ನಲಾಗುತ್ತಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಬ್ಬರಿಗೂ ಇದು ಲಭ್ಯವಿದೆ ಎಂದು ತಿಳಿದುಬಂದಿದೆ.
ಕ್ಯಾಲಿಫೊರ್ನಿಯಾದ ಸ್ಯಾನ್‌ಫ್ರಾನ್ಸಿಸ್ಕೋ ಮತ್ತು ಬ್ರೆಜಿಲ್ ರಿಯೋ ದೇ ಜನೆರಿಯೋ ಗಳಲ್ಲಿ 2017 ರಿಂದಲೇ ಲಭ್ಯವಿದ್ದ ಈ ಸ್ಪೀಡ್ ಲಿಮಿಟ್ ಫೀಚರ್ ಅನ್ನು ಇದೀಗ್ ಗೂಗಲ್ ಸಂಸ್ಥೆಯು ಆಸ್ಟ್ರೇಲಿಯ, ಬ್ರೆಜಿಲ್, ಕೆನಡಾ, ಭಾರತ, ಇಂಡೊನೆಷ್ಯಾ, ಮೆಕ್ಸಿಕೊ, ಮತ್ತು ರಷ್ಯಾ ದೇಶಗಳಿಗೂ ವಿಸ್ತರಿಸುತ್ತಿದ್ದು, ಈ ರಾಷ್ಟ್ರಗಳ ಬಳಕೆದಾರರಿಗೂ ಇನ್ಮೂಂದೆ ಈ ಫೀಚರ್ ಬಳಕೆಗೆ ದೊರೆಯಲಿದೆ ಎನ್ನುತ್ತಿದೆ ಗೂಗಲ್.