ಗೂಗಲ್ ಮ್ಯಾಪ್ ಬದಲಾಗಲಿದೆ 'ಹೊಸ ರೂಪ, ಹೊಸ ಕಾರ್ಯ' ನೀವೇ ನೋಡಿ..!
ಗೂಗಲ್ ಮ್ಯಾಪ್ ದಿನೇ ದಿನೇ ಆಪ್‌ಡೇಟ್ ಆಗುತ್ತಿದ್ದು, ಇದೇ ಮಾದರಿಯಲ್ಲಿ ಹೊಸದಾಗಿ ತನ್ನ ಐಕಾನ್‌ಗಳನ್ನು ಸೇರಿದಂತೆ ತನ್ನ ಚಹರೆಯನ್ನು ಬದಲಾಯಿಸಿಕೊಂಡಿದೆ ಎನ್ನಲಾಗಿದೆ. ಅಲ್ಲದೇ ಹಲವು ಹೊಸ ಪೀಚರ್ ನೊಂದಿಗೆ ಬಳಕೆದಾರರ ಮುಂದೆ ಕಾಣಿಸಿಕೊಂಡಿದೆ. ಈ ಹೊಸ ಬದಲಾವಣೆಗಳು ನೋಡಲು ಆಕರ್ಷಕವಾಗಿದೆ.
.photo-feature-table tr:nth-child(even) {
background-color: #fff !important;
}
ಈಗಾಗಲೇ ಭಾರತದಲ್ಲಿ ಗೂಗಲ್ ಮ್ಯಾಪ್ ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ತೀರಾ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ಮ್ಯಾಪ್ ಬದಲಾವಣೆಯನ್ನು ಕಂಡಿದೆ ಎನ್ನಲಾಗಿದೆ. ಡ್ರೈವಿಂಗ್, ನ್ಯಾವಿಗೇಷನ್ ಸೇರಿದಂತೆ ಎಲ್ಲಾ ವಿಷಯಗಳು ಆಪ್‌ಡೇಟ್ ಆಗಿದೆ. ಇದಲ್ಲದೆ ಗೂಗಲ್ ಮ್ಯಾಪ್ ನಿಮ್ಮ ಗೂಗಲ್ ಕ್ಯಾಲೆಂಡರ್ ನೊಂದಿಗೆ ಸಿಂಕ್ ಆಗಲಿದ್ದು, ಅಲ್ಲದೇ ಮೇಲ್ ನೊಂದಿಗೂ ಸಿಂಕ್ ಆಗಲಿದ್ದು, ಹೊಸದಾಗಿ ವಾಂಟು ಗೋ (ಅಲ್ಲಿಗೆ ಹೋಗಬೇಕು) ಎನ್ನುವ ಜಾಗದ ಪಟ್ಟಿಯನ್ನು ತಯಾರಿಸಿಕೊಳ್ಳಲು ಸಹಾಯ ಮಾಡಲಿದೆ. ಗೂಗಲ್ ಮ್ಯಾಪ್ ನಿಮ್ಮ ನೆಚ್ಚಿನ ರೆಸ್ಟೋರೆಂಟ್‌ನಲ್ಲಿ ಎಷ್ಟು ಹೊತ್ತು ಕಾಯಬೇಕಾಗುವುದು ಎನ್ನುವುದನ್ನು ಸಹ ತಿಳಿಸಲಿದೆ. ಜೊತೆಗೆ ಅಲ್ಲದೇ ನಿಮ್ಮ ಲೋಕೆಷನ್ ಹಿಸ್ಟರಿಯೂ ಇದರಲ್ಲಿ ದಾಖಲಾಗಲಿದ್ದು, ನಿಮ್ಮ ಸಹಾಯಕ್ಕೆ ಬರಲಿದೆ. ಗೂಗಲ್ ಮ್ಯಾಪಿನಲ್ಲಿ ರೆಸ್ಟೋರೆಂಟ್‌ಗಳು, ಕಾಫಿ ಶಾಪ್‌ಗಳು ಹಾಗೂ ಆಸ್ಪತ್ರೆ ಸೇರಿದಂತೆ ಹಲವು ಐಕಾನ್‌ಗಳನ್ನು ತೋರಿಸುತ್ತಿತ್ತು, ಆದರೆ ಈ ಬಾರಿ ಈ ಐಕಾನ್‌ಗಳೆಲ್ಲವೂ ಹೊಸದಾಗಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದರಿಂದಾಗಿ ಮ್ಯಾಪ್ ಬಳಕೆ ಇನ್ನಷ್ಟು ಹೊಸತನವನ್ನು ಹೊಂದಲಿದೆ.
ಹೊಸದಾಗಿ ಮ್ಯಾಪ್:

ಗೂಗಲ್ ನೊಂದಿಗೆ ಸಿಂಕ್:

ಹೊಸ ಹೊಸ ಆಯ್ಕೆಗಳು:

ಎಲ್ಲಾ ಐಕಾನ್‌ಗಳು ಹೊಸ ರೂಪ:


Click it and Unblock the Notifications








