ಗ್ರಾಹಕರಿನ್ನು 'ಗೂಗಲ್‌ ಪೇ' ಆಪ್‌ನಲ್ಲಿ ಚಿನ್ನ ಖರೀದಿಸಬಹುದು!

|

ಜನಪ್ರಿಯ ಗೂಗಲ್‌ ಪೇ ಆಪ್‌ ತನ್ನ ಸೇವೆಗಳ ಪಟ್ಟಿಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದ್ದು, ಇತ್ತೀಚಿಗಷ್ಟೆ ರೇಲ್ವೆ ಟಿಕೆಟ್‌ ಬುಕ್ಕಿಂಗ್ ಮಾಡುವ ಸೌಲಭ್ಯವನ್ನು ಪರಿಚಯಿಸಿದೆ. ಇದೀಗ ಮತ್ತೆ ಹೊಸದೊಂದು ಸೇವೆಯನ್ನು ಬಿಡುಗಡೆ ಮಾಡಲಿದ್ದು, ಈ ಸೇವೆಯ ಬಗ್ಗೆ ಕೇಳಿದರೇ ನಿಜಕ್ಕೂ ನೀವು ಶಾಕ್‌ ಆಗ್ತಿರಾ. ಏಕೆಂದರೇ ಚಿನ್ನ ಖರೀದಿ ಮಾಡಲು ಇನ್ಮುಂದೆ ಗೋಲ್ಡ್‌ ಶಾಪ್‌ಗೆ ಹೋಗಬೇಕಿಲ್ಲ.

ಗ್ರಾಹಕರಿನ್ನು 'ಗೂಗಲ್‌ ಪೇ' ಆಪ್‌ನಲ್ಲಿ ಚಿನ್ನ ಖರೀದಿಸಬಹುದು!

ಹೌದು, ಗೂಗಲ್ ಪೇ ಆಪ್ ಗೋಲ್ಡ್‌ ಖರೀದಿ ಮತ್ತು ಮಾರಾಟ ಮಾಡುವ ಹೊಸ ಫೀಚರ್ ಅನ್ನು ಪರಿಚಯಿಸಲಿದ್ದು, ಇನ್ಮುಂದೆ ಬಳಕೆದಾರರು ಆಪ್‌ ಮೂಖಾಂತರವೇ ಚಿನ್ನವನ್ನು ಖರೀದಿಸಬಹುದಾಗಿದೆ ಮತ್ತು ಮಾರಾಟ ಮಾಡಬಹುದಾಗಿದೆ. ಎಂಎಂಟಿಸಿ-ಪಿಎಎಂಪಿ ಇಂಡಿಯಾ ಪ್ರೈ.ಲಿಮಿಟೆಡ್(MMTC-PAMP India Pvt. Ltd) ಕಂಪನಿಯ ಜೊತೆಗೂಡಿ ಬಳಕೆದಾರರಿಗೆ ಈ ಫೀಚರ್ ಒದಗಿಸಲಿದೆ.

ಗ್ರಾಹಕರಿನ್ನು 'ಗೂಗಲ್‌ ಪೇ' ಆಪ್‌ನಲ್ಲಿ ಚಿನ್ನ ಖರೀದಿಸಬಹುದು!

ಗೂಗಲ್‌ ಪೇ ಆಪ್‌ನಲ್ಲಿ ಗ್ರಾಹಕರು 24 ಕ್ಯಾರೆಟ್‌ ಶುದ್ಧ ಬಂಗಾರವನ್ನು ಸಹ ಖರೀದಿಸಲು ಅವಕಾಶ ಇರಲಿದ್ದು, ಚಿನ್ನವು LBMA ಯಿಂದ ಶುದ್ಧಿಕರಣ ಮಾನ್ಯತೆ ಪಡೆದಿರಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಚಿನ್ನದ ಬೆಲೆಯ ಅಪ್‌ಡೇಟ್‌ ಮಾಹಿತಿ ಆಪ್‌ನಲ್ಲಿ ನೀಡಲಾಗುತ್ತದೆ. ಹೀಗಾಗಿ ಯಾವುದೇ ಸಮಯದಲ್ಲಾದರೂ ಮಾರುಕಟ್ಟೆಯ ದರದಲ್ಲಿಯೇ ಗ್ರಾಹಕರು ಚಿನ್ನವನ್ನು ಖರೀದಿಸಬಹುದಾಗಿದೆ.

ಗ್ರಾಹಕರಿನ್ನು 'ಗೂಗಲ್‌ ಪೇ' ಆಪ್‌ನಲ್ಲಿ ಚಿನ್ನ ಖರೀದಿಸಬಹುದು!

ಚಿನ್ನಕ್ಕೆ ದೇಶದಲ್ಲಿ ಒಂದು ಪರಂಪರೇ ಇದ್ದು, ಪ್ರಪಂಚದಲ್ಲಿಯೇ ಅತೀ ಹೆಚ್ಚು ಚಿನ್ನವನ್ನು ಬಳಸುವ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಈ ಅಂಶವನ್ನು ಗಮನಿಸಿಯೇ ಗೂಗಲ್ ತನ್ನ ಆಪ್‌ನಲ್ಲಿ ಚಿನ್ನ ಖರೀದಿಸುವ ಮತ್ತು ಮಾರಾಟ ಮಾಡುವ ಹೊಸ ಫೀಚರ್‌ ಅನ್ನು ರಿಲೀಸ್‌ ಮಾಡುತ್ತಿದೆ ಎಂದು ಭಾರತೀಯ ಗೂಗಲ್‌ ಪೇಯ ನಿರ್ದೇಶಕ ಮತ್ತು ಪ್ರೊಡಕ್ಟ್ ಮ್ಯಾನೆಜರ್ ಅಂಬರೀಶ್ ಕೆಂಗೆ ಹೇಳಿದ್ದಾರೆ.

ಗೂಗಲ್‌ ಪೇ ಆಪ್‌ ನಲ್ಲಿ ಮಾರುಕಟ್ಟೆಯ ಚಿನ್ನದ ದರ ಏರಿಳಿತವನ್ನು ಪ್ರತಿ ಸೆಕೆಂಡ್ ಅಪ್‌ಡೇಟ್‌ ಮಾಡಲಾಗಲಿದ್ದು, ಗ್ರಾಹಕರಿಗೆ ಆ ಸಮಯದ ನಿಖರ ಬೆಲೆ ಗೊತ್ತಾಗಲಿದೆ. ಖರೀದಿಯಲ್ಲಿ ಗೊಂದಲ ಮೂಡಿಸುವುದಿಲ್ಲ. ಗೂಗಲ್‌ನ ಈ ಹೊಸ ಪ್ರಯತ್ನಕ್ಕೆ ಗ್ರಾಹಕರಂತು ಶಾಕ್‌ ಆಗಿರುತ್ತಾರೆ.

Best Mobiles in India

English summary
Google Pay users can now buy gold from app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X