ಗೂಗಲ್ ಫೋಟೋಸ್ ನಲ್ಲಿ ಇದೀಗ ಚಾಟ್ ಫೀಚರ್- ಇದರಲ್ಲಿ ನೀವೇನು ಮಾಡಬಹುದು?

By Gizbot Bureau
|

ಗೂಗಲ್ ಫೋಟೋಸ್ ನಲ್ಲಿ ಹೊಸ ಫೀಚರ್ ಲಭ್ಯವಾಗಿದ್ದು ಬಳಕೆದಾರರು ಆಪ್ ನ ಒಳಗೆ ಚಾಟ್ ಮಾಡುವುದಕ್ಕೆ ಈ ಫೀಚರ್ ಅವಕಾಶ ನೀಡುತ್ತದೆ. ಹೊಸ ಫೀಚರ್ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಜಿಐಎಫ್ ಜೊತೆಗೆ ಬ್ಲಾಗ್ ಪೋಸ್ಟ್ ನಲ್ಲಿ ಗೂಗಲ್ ಅಧಿಕೃತವಾಗಿ ಪ್ರಕಟಿಸಿದೆ. ಹೊಸ ಫೋಟೋ ಶೇರಿಂಗ್ ಫೀಚರ್ ಆಂಡ್ರಾಯ್ಡ್,ಐಓಎಸ್ ಮತ್ತು ವೆಬ್ ನಲ್ಲಿ ಮುಂದಿನ ವಾರದಲ್ಲಿ ಬಿಡುಗಡೆಗೊಳ್ಳಲಿದೆ ಎಂಬ ಬಗ್ಗೆ ಗೂಗಲ್ ಹೇಳಿದೆ.

ಫೀಚರ್

ಈ ಫೀಚರ್ ಬಿಡುಗಡೆಗೊಂಡ ನಂತರ ಗೂಗಲ್ ಫೋಟೋಸ್ ಆಪ್ ನಲ್ಲಿ ನೀವು ಪಿಕ್ಚರ್ ಗಳನ್ನು ವಯಕ್ತಿಕ ಕಾನ್ವರ್ಸೇಷನ್ ನಲ್ಲಿ ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಅದಕ್ಕಾಗಿ ನೀವು ಶೇರ್ ಐಕಾನ್ ನ್ನು ಟ್ಯಾಪ್ ಮಾಡಿದರೆ ಸಾಕಾಗುತ್ತದೆ ಮತ್ತು "Send in Google Photos." ನ್ನು ಸೆಲೆಕ್ಟ್ ಮಾಡಬೇಕು. ಇಷ್ಟು ಮಾತ್ರವಲ್ಲ ಬದಲಾಗಿ ಫೋಟೋ ಶೇರಿಂಗ್ ಆಪ್ ಇನ್ಸ್ಟಾಗ್ರಾಂನಲ್ಲಿ ಪಿಕ್ಚರ್ ನ ಹಾರ್ಟ್ ಐಕಾನ್ ನ್ನು ಟ್ಯಾಪ್ ಮಾಡುವ ಮೂಲಕ ಲೈಕ್ ಮಾಡಬಹುದು ಮತ್ತು ಕಮೆಂಟ್ ನ್ನು ಶೇರ್ ಮಾಡಬಹುದು.

ಸಾಮಾಜಿಕ ಮೀಡಿಯಾ

ಸಾಮಾಜಿಕ ಮೀಡಿಯಾ ಆಪ್/ಚಾಟ್ ಆಪ್ ನ ಫೀಚರ್ ಬಳಸಿ ಗೂಗಲ್ ಏನು ಮಾಡಲು ಹೊರಡುತ್ತಿದೆ ಎಂಬ ಬಗ್ಗೆ ನಿಮಗೆ ಅನುಮಾನಗಳಾಗಬಹುದು. ಆದರೆ ಈ ಫೀಚರ್ ಮೂಲಕ ಗೂಗಲ್ ಚಾಟ್ ಆಪ್ ನ ರಿಪ್ಲೇಸ್ಮೆಂಟ್ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ನೀವು ಭಾವಿಸುವುದು ಬೇಡ. ಇದು ಕೇವಲ ನಿಮ್ಮ ನೆನಪುಗಳನ್ನು ಸ್ನೇಹಿತರೊಂದಿಗೆ ಅಥವಾ ಕುಟುಂಬಸ್ಥರೊಂದಿಗೆ ಹಂಚಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತಿರುವುದು ಅಷ್ಟೇ ಎಂದು ಗೂಗಲ್ ಬ್ಲಾಗ್ ಪೋಸ್ಟ್ ನಲ್ಲಿ ಹೇಳಿದೆ.

ಕಳೆದ ವರ್ಷ ಫೇಸ್ ಬುಕ್

ಈ ಫೀಚರ್ ಬಳಕೆ ಮಾಡುವುದಕ್ಕೆ ಪ್ರಮುಖವಾಗಿ ಅಗತ್ಯವಾಗಿರುವ ಅಂಶವೆಂದರೆ ಫೋಟೋ ಕಳುಹಿಸುವವರು ಮತ್ತು ಪಡೆಯುವವರು ಇಬ್ಬರ ಬಳಿಯೂ ಕೂಡ ಗೂಗಲ್ ಫೋಟೋಸ್ ಖಾತೆ ಇರಬೇಕು. ಇದು ಪ್ರಮುಖವಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗುತ್ತದೆ.

ಕಳೆದ ವರ್ಷ ಫೇಸ್ ಬುಕ್ ಪ್ರಕಟಿಸಿದ " ಡೇಟಾ ವರ್ಗಾವಣೆ ಯೋಜನೆ"ಯ ಭಾಗವಾಗಿ ಫೇಸ್ ಬುಕ್ ನಿಂದ ಗೂಗಲ್ ಫೋಟೋಸ್ ಗಳಿಗೆ ನೇರವಾಗಿ ಫೋಟೋಗಳನ್ನು ವೀಡಿಯೋಗಳನ್ನು ವರ್ಗಾಯಿಸಲು ಬಳಕೆದಾರರಿಗೆ ಅವಕಾಶ ನೀಡುವ ಹೊಸ ಸಾಧನವನ್ನು ಫೇಸ್ ಬುಕ್ ಘೋಷಣೆ ಮಾಡಿದ ವಾರದಲ್ಲೇ ಈ ಫೀಚರ್ ಕೂಡ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

ಕಳೆದ ತಿಂಗಳು, ಗೂಗಲ್ ಹೊಸದಾಗಿ "ಮಾರ್ಕ್ ಅಪ್" ಫೀಚರ್ ನ್ನು ಫೋಟೋಸ್ ಆಪ್ ಗೆ ಸೇರಿಸಿದೆ. ಇದು ಬಳಕೆದಾರರಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಇಮೇಜ್ ಗಳ ಮೇಲೆ ಸೇವ್ ಮಾಡುವ ಮುನ್ನ ಅಥವಾ ಇತರರಿಗೆ ಕಳುಹಿಸುವ ಮುನ್ನ ಡ್ರಾ ಮಾಡುವುದಕ್ಕೆ ಅವಕಾಶ ನೀಡುತ್ತದೆ. ವಿಭಿನ್ನ ಗೆರೆಗಳನ್ನು ಅಥವಾ ಬಣ್ಣಗಳನ್ನು ಇಮೇಜ್ ಗಳ ಮೇಲೆ ಬಿಡಿಸಬಹುದು. ಬಳಕೆದಾರರು ಗುರುತಿಸಿದಂತೆ (ಆಂಡ್ರಾಯ್ಡ್ ಪೋಲೀಸ್ ಮೂಲಕ) ಹೊಸ ಫೀಚರ್ ಮಾರ್ಕರ್ ಮತ್ತು ಬ್ರಷ್ ಗಳಂತ ಎರಡು ಡ್ರಾಯಿಂಗ್ ಟೂಲ್ ಗಳನ್ನು ಹೊಂದಿದೆ. ಏಳು ಬಣ್ಣಗಳ ಆಯ್ಕೆಗಳಿರುತ್ತದೆ- ಕಪ್ಪು, ಕೆಂಪು, ಹಳದಿ,ಹಸಿರು, ನೀಲಿ, ಬಿಳಿ ಮತ್ತು ನೇರಳೆ ಬಣ್ಣಗಳ ಆಯ್ಕೆ ಇರುತ್ತದೆ.

Most Read Articles
Best Mobiles in India

Read more about:
English summary
Google Photos private chat feature helps you share photos and videos faster

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X