Just In
Don't Miss
- News
ಮೈಸೂರು ಅರಮನೆಯ ಕ್ಯಾಂಡಲ್ ಹೋಲ್ಡರ್ ಗಳ ಅನ್ ಲೈನ್ ಹರಾಜು
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 28ರ ಚಿನ್ನ, ಬೆಳ್ಳಿ ದರ
- Automobiles
ಬ್ಯಾಂಕುಗಳಿಗೆ ವಂಚಿಸಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಖದೀಮರು ಕೊನೆಗೂ ಅಂದರ್
- Sports
ಸೌರವ್ ಗಂಗೂಲಿಗೆ ಎರಡನೇ ಆ್ಯಂಜಿಯೋಪ್ಲಾಸ್ಟಿ ಯಶಸ್ವಿ, 2 ಸ್ಟಂಟ್ ಅಳವಡಿಕೆ
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Movies
ಸುದೀಪ್ ಪುತ್ರಿಯ ಹಾಡು ವೈರಲ್: ಸಾನ್ವಿಯ ಸುಮಧುರ ಕಂಠಕ್ಕೆ ನಟ ಜೆಕೆ ಫಿದಾ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗೂಗಲ್ ಮೆಸೇಜಸ್‌ನಲ್ಲಿ ಹೊಸ ಫೀಚರ್..! ಸ್ಪ್ಯಾಮ್‌ನಿಂದ ರಕ್ಷಿಸುತ್ತೆ ವೆರಿಫೈಯಡ್ ಎಸ್‌ಎಂಎಸ್..!
ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಭಾರತದಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚುತ್ತಿದೆ. ಜನರು ಸಾಮಾನ್ಯವಾಗಿ ವ್ಯಾಪಾರಿಗಳ ಜೊತೆ ಹೇಗೆ ಸಂವಹನ ನಡೆಸುತ್ತಾರೆ, ಅವರೊಂದಿಗೆ ಯಾವ ಮಾಹಿತಿ ಹಂಚಿಕೊಳ್ಳುತ್ತಾರೆ ಮತ್ತು ಈ ಸಂವಹನಗಳ ಸುತ್ತಲಿನ ಗೌಪ್ಯತೆ ಮತ್ತು ಸುರಕ್ಷತೆಯ ಕಾಳಜಿಗಳ ಬಗ್ಗೆ ದೊಡ್ಡ ಟೆಕ್ ಕಂಪನಿಗಳು ಹೆಚ್ಚು ಗಮನ ಹರಿಸುತ್ತವೆ. ಈಗ, ಗೂಗಲ್ ತನ್ನ ಮೆಸೇಜಸ್ ಆಪ್‌ನಲ್ಲಿ ಪರಿಶೀಲಿಸಿದ ಎಸ್‌ಎಂಎಸ್ ವೈಶಿಷ್ಟ್ಯ ಪರಿಚಯಿಸುವ ಮೂಲಕ ಈ ದಾರಿಯಲ್ಲಿ ಒಂದು ಸಣ್ಣ ಹೆಜ್ಜೆ ಇಟ್ಟಿದೆ.

ಗೂಗಲ್ ಮೆಸೇಜಸ್ ಆಪ್ ಅನೇಕ ದೇಶಗಳಲ್ಲಿ ಅತ್ಯಂತ ಜನಪ್ರಿಯವಾದ SMS ಅಪ್ಲಿಕೇಶನ್ ಆಗಿದ್ದು, ಬಹಳಷ್ಟು ಜನ ಬಳಸುತ್ತಿದ್ದಾರೆ. ಜನರು ಸ್ವೀಕರಿಸುವ ಬಹಳಷ್ಟು ಸಂದೇಶಗಳು ವ್ಯಾಪಾರಕ್ಕೆ ಸಂಬಂಧಪಟ್ಟಿರುತ್ತವೆ. ಭಾರತ ಮತ್ತು ಇತರ ಆಯ್ದ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಹೊಸ ವೈಶಿಷ್ಟ್ಯ ನಿಮಗೆ SMS ಕಳುಹಿಸುವ ವ್ಯಾಪಾರದ ಸತ್ಯಾಸತ್ಯತೆಯನ್ನು ನಿಮ್ಮ ಮುಂದಿಡುತ್ತದೆ. ಇದಲ್ಲದೆ, ಬಳಕೆದಾರರು ನಿರ್ದಿಷ್ಟ ವ್ಯವಹಾರದಿಂದ ಸ್ವೀಕರಿಸಿದ ಸಂದೇಶಕ್ಕೆ ಗಮನ ಕೊಡಬೇಕೇ ಅಥವಾ ಬೇಡವೇ ಎಂಬುದನ್ನು ಗುರುತಿಸಲು ಅನುಮತಿಸುತ್ತದೆ, ಅಥವಾ ಸ್ಪ್ಯಾಮ್ ಎಂದು ನಿರ್ಲಕ್ಷಿಸಲು ಸಹ ಅನುವು ಮಾಡಿಕೊಡುತ್ತದೆ.

ವ್ಯಾಪಾರಕ್ಕಾಗಿ ಪರಿಶೀಲಿಸಿದ SMS
ಈ ಹೊಸ ವೈಶಿಷ್ಟ್ಯದೊಂದಿಗೆ, ಅಪ್ಲಿಕೇಶನ್‌ನ ಕ್ರಿಯಾತ್ಮಕತೆಯನ್ನು ಉತ್ತಮಗೊಳಿಸಲು ಮತ್ತು ಜನರಿಗೆ ಎಸ್‌ಎಂಎಸ್ ಮಾಡುವ ವ್ಯಾಪಾರಿಗಳ ವಿಶ್ವಾಸಾರ್ಹತೆಯನ್ನು ಸುಧಾರಿಸುವ ಗುರಿಯನ್ನು ಗೂಗಲ್ ಹೊಂದಿದೆ. ಅಲ್ಲದೆ, ಸಂದೇಶ ಕಳುಹಿಸುವ ವ್ಯವಹಾರವನ್ನು ಗ್ರಾಹಕರು ನಂಬಬೇಕೆ ಅಥವಾ ಬೇಡವೇ ಎಂಬುದನ್ನು ಗುರುತಿಸುವಲ್ಲಿ ಇದು ಸಹಾಯ ಮಾಡುತ್ತದೆ.

ಲೋಗೊ ಮತ್ತು ಪರಿಶೀಲನೆ ಬ್ಯಾಡ್ಜ್
ಗೂಗಲ್‌ನ ಪ್ರಕಾರ, ಹೊಸ ವೈಶಿಷ್ಟ್ಯವು ಎಸ್‌ಎಂಎಸ್ ಥ್ರೆಡ್‌ನಲ್ಲಿ ಪರಿಶೀಲನೆ ಬ್ಯಾಡ್ಜ್‌ನೊಂದಿಗೆ ವ್ಯಾಪಾರದ ಹೆಸರು ಮತ್ತು ಲೋಗೊವನ್ನು ಪ್ರದರ್ಶಿಸುತ್ತದೆ. ಜನರಿಗೆ ಸಂದೇಶ ಕಳುಹಿಸುವ ವ್ಯವಹಾರ ನಿಜವಾದದ್ದು ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಪರಿಶೀಲನೆ ಬ್ಯಾಡ್ಜ್ ಸ್ವೀಕರಿಸಲು ವ್ಯವಹಾರಗಳು ಗೂಗಲ್‌ನಲ್ಲಿ ನೋಂದಣಿಯಾಗಬೇಕಾಗುತ್ತದೆ.

ಅನೇಕ ಕಂಪನಿಗಳ ಸೈನ್ ಅಪ್
ವ್ಯವಹಾರಗಳಿಗಾಗಿ ಪರಿಶೀಲನಾ ಕೋಡ್ ರಚಿಸಲು ಎಸ್‌ಎಂಎಸ್ ಸ್ವೀಕರಿಸುವ ಬಳಕೆದಾರರ ಫೋನ್ ಸಂಖ್ಯೆಯನ್ನು ಬಳಸುವುದಾಗಿ ಗೂಗಲ್ ಹೇಳಿದೆ. ವ್ಯವಹಾರಗಳಿಗಾಗಿ ಪರಿಶೀಲಿಸಿದ ಎಸ್‌ಎಂಎಸ್‌ನ ಮೊದಲ ರೋಲ್‌ಔಟ್‌ನಲ್ಲಿ, ಪರಿಶೀಲನೆ ಕೋಡ್ ಪಡೆಯುವಲ್ಲಿ ಗೂಗಲ್ ಪೇನಂತಹ ಘಟಕಗಳು ಮೊದಲಿವೆ. ಈ ವ್ಯವಹಾರಗಳನ್ನು ಅನುಸರಿಸಿ, 1-800-ಫ್ಲವರ್ಸ್, ಬ್ಯಾಂಕೊ ಬ್ರಾಡೆಸ್ಕೊ, ಕಯಾಕ್, ಪೇಬ್ಯಾಕ್ ಮತ್ತು ಸೋಫಿಯಂತಹ ಇತರ ಕಂಪನಿಗಳು ಸಹ ಗೂಗಲ್ ಪರಿಶೀಲಿಸಿದ ಎಸ್‌ಎಂಎಸ್‌ಗೆ ದಾಖಲಾಗುತ್ತವೆ.

9 ದೇಶಗಳಲ್ಲಿ ಫೀಚರ್
ವೆರಿಫೈಡ್ ಎಸ್‌ಎಂಎಸ್ ವೈಶಿಷ್ಟ್ಯವನ್ನು ಭಾರತದಲ್ಲಿ ಮಾತ್ರವಲ್ಲದೇ ಯುಎಸ್, ಮೆಕ್ಸಿಕೊ, ಬ್ರೆಜಿಲ್, ಯುಕೆ, ಫ್ರಾನ್ಸ್, ಫಿಲಿಪೈನ್ಸ್, ಸ್ಪೇನ್ ಮತ್ತು ಕೆನಡಾ ಸೇರಿ 9 ದೇಶಗಳು ಈ ವೈಶಿಷ್ಟ್ಯವನ್ನು ಪಡೆಯುತ್ತಿವೆ.

ಸ್ಪ್ಯಾಮ್ ಪ್ರೊಟೆಕ್ಷನ್ ವೈಶಿಷ್ಟ್ಯ
ಮೆಸೇಜಸ್ ಆಪ್‌ನಲ್ಲಿ ಗೂಗಲ್‌ನಿಂದ ಮತ್ತೊಂದು ಜನಪ್ರಿಯ ವೈಶಿಷ್ಟ್ಯವೆಂದರೆ ಸ್ಪ್ಯಾಮ್ ರಕ್ಷಣೆ. ಈ ವೈಶಿಷ್ಟ್ಯವನ್ನು ಈಗ ಯುಎಸ್ಎದಲ್ಲಿ ವ್ಯಾಪಕವಾಗಿ ಹೊರತರುತ್ತಿದೆ. ಗೂಗಲ್‌ನ ಪ್ರಕಾರ ಸ್ಪ್ಯಾಮ್ ಸಂರಕ್ಷಣಾ ವೈಶಿಷ್ಟ್ಯ ಬಳಕೆದಾರರನ್ನು ಸ್ಪ್ಯಾಮ್‌ನಿಂದ ರಕ್ಷಿಸುತ್ತದೆ ಮತ್ತು ಸಂದೇಶವನ್ನು ಖಾಸಗಿಯಾಗಿರಿಸಿಕೊಳ್ಳುತ್ತದೆ ಮತ್ತು ಸಂದೇಶ ಡೇಟಾವನ್ನು ಮಾತ್ರ ಬಳಸುತ್ತದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190