ಕ್ಯಾಮೆರಾ ಆನ್‌ ಮಾಡಿ ವಿದೇಶಿ ಪದಗಳ ಅರ್ಥ ತಿಳಿಯಿರಿ

By Suneel
|

ಟೆಕ್‌ ವಿಜ್ಞಾನಿಗಳು ಸಾಮಾನ್ಯ ಜನರು ಊಹಿಸಲು ಸಾಧ್ಯವಾಗದಂತಹ ಹಲವು ಹೊಸ ಹೊಸ ಅಭಿವೃದ್ದಿಗಳ ಪಥದಲ್ಲಿ ಸಾಗುತ್ತಿರುತ್ತಾರೆ. ಇಷ್ಟುದಿನ ಯಾವುದಾದರೂ ಇತರೆ ಭಾಷೆ ಪದದ ಅರ್ಥವನ್ನು ನೋಡಬೇಕಾದರೆ ಆ ಪದವನ್ನು ಗೂಗಲ್‌ ಭಾಷಾಂತರದಲ್ಲಿ ಟೈಪ್‌ ಮಾಡಿ ತಿಳಿಯ ಬೇಕಾಗಿತ್ತು. ಆ ಸಂಪ್ರದಾಯ ಇನ್ನುಮುಂದೆ ಬದಲಾಗಲಿದೆ.

ಓದಿರಿ: ಫೋನ್ ಕೊಳ್ಳುಗರಿಗೆ ಟಾಪ್ 10 ಭರ್ಜರಿ ಫೋನ್ಸ್

ಬೃಹತ್‌ ದೊಡ್ಡ ಮಾಹಿತಿ ಸರ್ಚ್ ಇಂಜಿನ್ ಗೂಗಲ್‌, ಗೂಗಲ್‌ ಭಾಷಾಂತರವನ್ನು ಅಪ್‌ಡೇಟ್‌ ಮಾಡಿದ್ದು, ರಿಯಲ್‌ ಟೈಮ್‌ ನಲ್ಲಿ ಯಾವುದೇ ಫೋಟೋ ತೆಗೆಯದೇ, ಅರ್ಥ ತಿಳಿಯಬೇಕಾದ ಪದವನ್ನು ಟೈಪ್‌ ಕೂಡ ಮಾಡದೇ ಅರ್ಥ ತಿಳಿಯಬಹುದಾದ ಮಾರ್ಗವನ್ನು ಅಭಿವೃದ್ಧಿಗೊಳಿಸಿದೆ. ಅದು ಹೇಗೆ ಎಂಬುದನ್ನು ಈ ಕೆಳಗಿನ ಗಿಜ್‌ಬಾಟ್‌ ಲೇಖನದಿಂದ ತಿಳಿಯಿರಿ.

ಗೂಗಲ್‌ ಭಾಷಾಂತರ

ಗೂಗಲ್‌ ಭಾಷಾಂತರ

ಗೂಗಲ್‌ ಭಾಷಾಂತರ, ತನ್ನ ಅಪ್‌ಡೇಟ್‌ ಅಪ್ಲಿಕೇಶನ್‌ನಿಂದ ಪದದ ಫೋಟೊ ತೆಗೆಯದೇ ಉತ್ತಮವಾಗಿ ಪದದ ಅರ್ಥ ತಿಳಿಯಬಹುದಾದ ಮಾರ್ಗ ಅಭಿವೃದ್ದಿಗೊಳಿಸಿದೆ.

ಗೂಗಲ್‌ ಭಾಷಾಂತರದ ಹೊಸ ಅಪ್‌ಡೇಟ್‌

ಗೂಗಲ್‌ ಭಾಷಾಂತರದ ಹೊಸ ಅಪ್‌ಡೇಟ್‌

ಹೊಸ ಭಾಷಾಂತರ ಅಪ್‌ಡೇಟ್‌ ಇಬ್ಬರು ಬೇರೆ ಬೇರೆ ಭಾಷೆ ಮಾತನಾಡುವವರ ವ್ಯಕ್ತಿಗಳಿಗೆ ಒಂದೇ ಸಮಯದಲ್ಲಿ ಅರ್ಥವನ್ನು ಭಾಷಾಂತರ ಮಾಡಿ ಕೊಡುತ್ತದೆ.

ವರ್ಲ್ಡ್ ಲೆನ್ಸ್‌ ಕಾರ್ಯವೈಖರಿ

ವರ್ಲ್ಡ್ ಲೆನ್ಸ್‌ ಕಾರ್ಯವೈಖರಿ

ಗೂಗಲ್‌ ಭಾಷಾಂತರ ಅಪ್‌ಡೇಟ್‌ನ ಪ್ರಮುಖ ಅಭಿವೃದ್ದಿಯಲ್ಲಿ ವರ್ಲ್ಡ್ ಲೆನ್ಸ್‌ ಅತ್ಯಾಕರ್ಷಕವಾದುದು. ಈ ಅಪ್ಲಿಕೇಶನ್‌ನಲ್ಲಿ ಡಿವೈಸ್ ಕ್ಯಾಮೆರಾ ಫೋಕಸ್‌ ಆನ್‌ ಫಾರಿನ್ ಟೆಕ್ಟ್ಸ್ ಫೀಚರ್‌ ಇದ್ದು, ಅಪ್ಲಿಕೇಶನ್‌ನಿಂದ ಈ ಫೀಚರ್‌ ಆನ್‌ ಮಾಡಿ ಯಾವುದಾದರೂ ವಿದೇಶಿ ಪದದ ಮೇಲೆ ಕ್ಯಾಮೆರಾ ಫೋಕಸ್‌ ಮಾಡಿದರೆ ಅದರ ಅರ್ಥವನ್ನು ರಿಯಲ್‌ ಟೈಮ್‌ನಲ್ಲಿ ನೀಡುತ್ತದೆ.

ಗೂಗಲ್‌ ಹಿಂದಿನ ಭಾಷಾಂತರ

ಗೂಗಲ್‌ ಹಿಂದಿನ ಭಾಷಾಂತರ

ಗೂಗಲ್‌, ಆಂಡ್ರಾಯ್ಡ್‌ಗೆ 2013 ರ ಅಂತ್ಯದಲ್ಲಿ ನೀಡಿದ್ದ ಭಾಷಾಂತರ ಅಪ್ಲಿಕೇಶನ್‌ನಲ್ಲಿ ಏಕಕಾಲದಲ್ಲಿ ಒಬ್ಬರ ಭಾಷೆಯನ್ನು ಮಾತ್ರ ಭಾಷಾಂತರಿಸುತ್ತಿತ್ತು.

ಭಾಷಾಂತರ ಅಪ್ಲಿಕೇಶನ್‌ ಫೀಚರ್

ಭಾಷಾಂತರ ಅಪ್ಲಿಕೇಶನ್‌ ಫೀಚರ್

ಗೂಗಲ್‌ ಭಾಷಾಂತರ ಅಪ್ಲಿಕೇಶನ್‌ ಹೊಂದಿರುವವರು ಅಪ್ಲಿಕೇಶನ್‌ ಓಪೆನ್‌ ಮಾಡಿ ಮೈಕ್ರೋಫೋನ್‌ ಬಟನ್‌ ಮೇಲೆ ಟ್ಯಾಪ್‌ ಮಾಡಿ. ನಂತರದಲ್ಲಿ ವಿದೇಶಿ ಭಾಷೆ ಡಿಟೆಕ್ಟ್‌ ಆಗಿ ಸ್ಥಳೀಯ ನಿಮ್ಮ ಭಾಷೆಗೆ ಅರ್ಥವನ್ನು ನೀಡುತ್ತದೆ.

ಭಾಷಾಂತರ ಅಪ್ಲಿಕೇಶನ್‌ ಫೀಚರ್

ಭಾಷಾಂತರ ಅಪ್ಲಿಕೇಶನ್‌ ಫೀಚರ್

ವಿದೇಶಿ ವ್ಯಕ್ತಿ ಜೋರಾಗಿ ಮಾತನಾಡಿದಾಗ ಅಪ್ಲಿಕೇಶನ್‌ನಲ್ಲಿ ಭಾಷಾಂತರಗೊಂಡು ಸ್ಕ್ರೀನ್‌ ಮೇಲೆ ಅರ್ಥ ಪ್ರದರ್ಶಿತವಾಗುತ್ತದೆ.

ವಿದೇಶಿಗರ ಭಾಷೆಯಲ್ಲಿ ನೀವು ಉತ್ತರಿಸಿ

ವಿದೇಶಿಗರ ಭಾಷೆಯಲ್ಲಿ ನೀವು ಉತ್ತರಿಸಿ

ಅವರ ಮಾತುಗಳನ್ನು ಅರ್ಥೈಸಿ, ಉತ್ತರಿಸಲು ಮೈಕ್ರೊಫೋನ್‌ಬಟನ್‌ ಮೇಲೆ ಟ್ಯಾಪ್ ಮಾಡಿ ಉತ್ತರಿಸಿ, ಏಕಕಾಲದಲ್ಲಿ ಅಪ್ಲಿಕೇಶನ್‌ ಎರಡು ಭಾಷೆಗಳಲ್ಲೂ ಉತ್ತರಿಸಲು ಅವಕಾಶ ಮಾಡಿಕೊಡುತ್ತದೆ.

ಇಬ್ಬರು ಸಂವಹಿಸಿ

ಇಬ್ಬರು ಸಂವಹಿಸಿ

ಒಮ್ಮೆ ಮೇಲಿನಂತೆ ಪ್ರಕ್ರಿಯೆ ನೆಡೆಸಿದ ಮೇಲೆ ಅಪ್ಲಿಕೇಶನ್‌ ಎರಡು ಭಾಷೆಯನ್ನು ನೆನಪು ಮಾಡಿಕೊಳ್ಳುತ್ತದೆ. ನಿರ್ದಿಷ್ಟ ಎರಡು ಭಾಷೆಗಳಲ್ಲೂ ನಿರಂತರವಾಗಿ ಮಾತನಾಡುವ ಮುಖಾಂತರ ಭಾಷಾಂತರ ಆಗುತ್ತಾ ಹೋಗುತ್ತದೆ. ಪದೇ ಪದೇ ಮೈಕ್ರೋಫೋನ್‌ ಟ್ಯಾಪ್‌ ಮಾಡುವ ಅಗತ್ಯತೆ ಇರುವುದಿಲ್ಲ.

ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ ಎರಡು ಸಹ ಈ ರೀತಿಯ ವ್ಯಾಖ್ಯಾನವನ್ನು ಅಪ್ಲಿಕೇಶನ್‌ ಮೂಲಕ ಮಾಡಬಲ್ಲವು.

ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ ಎರಡು ಸಹ ಈ ರೀತಿಯ ವ್ಯಾಖ್ಯಾನವನ್ನು ಅಪ್ಲಿಕೇಶನ್‌ ಮೂಲಕ ಮಾಡಬಲ್ಲವು.

ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ ಎರಡು ಸಹ ಈ ರೀತಿಯ ವ್ಯಾಖ್ಯಾನವನ್ನು ಅಪ್ಲಿಕೇಶನ್‌ ಮೂಲಕ ಮಾಡಬಲ್ಲವು.

ಗೂಗಲ್‌ ಭಾಷಾಂತರದ ಹಿಂದಿನ ವರ್ಸನ್‌

ಗೂಗಲ್‌ ಭಾಷಾಂತರದ ಹಿಂದಿನ ವರ್ಸನ್‌

ಗೂಗಲ್‌, ಹಿಂದಿನ ವರ್ಸನ್‌ನಲ್ಲಿ ಮೊದಲು ಫೋಟೋ ತೆಗೆದು ನಂತರದಲ್ಲಿ ಅಪ್ಲಿಕೇಶನ್‌ ಮೂಲಕ ಭಾಷಾಂತರಗೊಳಿಸಲು ಅವಕಾಶ ಇತ್ತು , ಆದರೆ ಪ್ರಸ್ತುತದಲ್ಲಿ ರಿಯಲ್‌ ಟೈಮ್‌ನಲ್ಲಿ ಕ್ಯಾಮೆರಾ ಫೋಕಸ್‌ನಿಂದ ಅರ್ಥ ಭಾಷಾಂತರ ಪ್ರಕ್ರಿಯೆ ದೊರೆಯುತ್ತದೆ.

ವರ್ಲ್ಡ್‌ ಲೆನ್ಸ್‌

ವರ್ಲ್ಡ್‌ ಲೆನ್ಸ್‌

ವರ್ಲ್ಡ್‌ ಲೆನ್ಸ್‌ ಪ್ರಸ್ತುತದಲ್ಲಿ ಇಂಗ್ಲೀಷ್, ಜರ್ಮನ್‌, ಫ್ರೆಂಚ್, ಪೋರ್ಚುಗೀಸ್, ಸ್ಪ್ಯಾನಿಶ್, ರಷ್ಯನ್, ಇಟಾಲಿಯನ್‌ ಭಾಷೆಗೆಗಳಿಗೆ ಮಾತ್ರ ಭಾಷಾಂತರ ನೀಡುತ್ತಿದೆ.

ಐಓಎಸ್ ಮತ್ತು ಆಂಡ್ರಾಯ್ಡ್‌ಗಳಿಗೆ ಅಪ್‌ಡೇಟ್‌

ಐಓಎಸ್ ಮತ್ತು ಆಂಡ್ರಾಯ್ಡ್‌ಗಳಿಗೆ ಅಪ್‌ಡೇಟ್‌

ಮುಂದಿನ ಕೆಲವು ದಿನಗಳಲ್ಲಿ ಇತರ ಎಲ್ಲಾ ಭಾಷೆಗಳಲ್ಲೂ ಅನುವಾದವನ್ನು ಮಾಡುವಂತೆ ಐಓಎಸ್ ಮತ್ತು ಆಂಡ್ರಾಯ್ಡ್‌ಗಳಿಗೆ ಅಪ್‌ಡೇಟ್‌ ಮಾಡಲಾಗುವುದು ಎಂದು ಗೂಗಲ್‌ ಹೇಳಿದೆ.

ಭಾಷೆ ಕಲಿಯಲು ಉತ್ತಮ ಮಾರ್ಗ

ಭಾಷೆ ಕಲಿಯಲು ಉತ್ತಮ ಮಾರ್ಗ

ಇತರ ಭಾಷೆಗಳನ್ನು ಕಲಿಯಲು ಹೆಚ್ಚು ಆಸಕ್ತಿ ಇರುವವರು ಈ ಅಪ್ಲಿಕೇಶನ್‌ ಬಳಸಿ ಹೆಚ್ಚು ಉಪಯೋಗಿಸಿ, ಇತರ ಭಾಷೆಗಳನ್ನು ಕಲಿಯಬಹುದಾಗಿದೆ.

ಸಂವಹನ ಸುಲಭ

ಸಂವಹನ ಸುಲಭ

ವಿದೇಶಿಗರೊಂದಿಗೆ ಮತ್ತು ಇತರ ಭಾಷೆ ವ್ಯಕ್ತಿಗಳೊಂದಿಗೆ ಸಂವಹನ ನೆಡೆಸಲು ಗೂಗಲ್‌ ಭಾಷಾಂತರ ಅಪ್‌ಡೇಟ್‌ ಅಪ್ಲಿಕೇಶನ್‌ ರಿಯಲ್‌ ಟೈಮ್‌ನಲ್ಲಿ ಸರಳ ಮತ್ತು ಸುಲಭವಾಗಿ ಸಹಾಯವಾಗಬಲ್ಲದು.

Most Read Articles
Best Mobiles in India

English summary
Technology has advanced quite a lot over the last few years and the ideas that seemed preposterous have become a reality now. Who would have thought that one day we’d be able to translate different languages and hence, talk to people who speak different languages than us in real-time.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more