ಜಿಯೋ 1 GB ಡೇಟಾ ಸಾಲಲ್ಲ ಎನ್ನುವವರಿಗೆ ಗೂಗಲ್ ನಿಂದ ಈ ಆಪ್..!

ದೇಶದಲ್ಲಿ ಮೊಬೈಲ್ ಬಳಕೆದಾರರ ಅದರಲ್ಲೂ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿರುವದರಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೆರವಾಗುವಂತಹ ಆಪ್ ವೊಂದನ್ನು ಗೂಗಲ್ ಅಭಿವೃದ್ಧಿ ಪಡಿಸಿದೆ.

|

ಗೂಗಲ್ ಸರ್ಚ್ ಇಂಜಿನ್ ದೈತ್ಯ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಸದ್ಯ ದೇಶದಲ್ಲಿ ಮೊಬೈಲ್ ಬಳಕೆದಾರರ ಅದರಲ್ಲೂ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿರುವದರಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೆರವಾಗುವಂತಹ ಆಪ್ ವೊಂದನ್ನು ಗೂಗಲ್ ಅಭಿವೃದ್ಧಿ ಪಡಿಸಿದೆ.

ಜಿಯೋ 1 GB ಡೇಟಾ ಸಾಲಲ್ಲ ಎನ್ನುವವರಿಗೆ ಗೂಗಲ್ ನಿಂದ ಈ ಆಪ್..!

ಓದಿರಿ: ಜಿಯೋ ಫೀಚರ್ ಫೋನ್ ಎದುರಾಗಿ ನೋಕಿಯಾದಿಂದ 1000ರೂ.ಗೆ ಮತ್ತೊಂದು ಫೀಚರ್ ಪೋನ್..!!

ಸ್ಮಾರ್ಟ್‌ಫೋನ್ ಬಳಕೆದಾರರ ಬಹುದೊಡ್ಡ ಸಮಸ್ಯೆಯಾದ ಮೊಬೈಲ್ ಡೇಟಾ ಬಾಳಿಕೆಯನ್ನು ಹೆಚ್ಚು ಮಾಡುವ ಸಲುವಾಗಿ ಗೂಗಲ್ ಟ್ರೈಯಾಂಗಲ್ ಎನ್ನುವ ಆಪ್ ಅನ್ನು ಬಡುಗಡೆ ಮಾಡಿದೆ. ಇದು ನಿಮ್ಮ ಡೇಟಾ ಸಮಸ್ಯೆಗೆ ಪರಿಹಾರವನ್ನು ನೀಡಲಿದೆ.

ಹೇಗೆ ಕಾರ್ಯನಿರ್ವಹಿಸಲಿದೆ..?

ಹೇಗೆ ಕಾರ್ಯನಿರ್ವಹಿಸಲಿದೆ..?

ಗೂಗಲ್ ಲಾಂಚ್ ಮಾಡಿರುವ ಟ್ರೈಯಾಂಗಲ್ ಆಪ್ ನಿಮ್ಮ ಡೇಟಾ ಬಳಕೆಯ ಮೇಲೆ ಕಣ್ಣಿಟ್ಟಿರುವುದಲ್ಲದೇ , ನಿಮ್ಮ ಡೇಟಾ ಬ್ಯಾಲೆನ್ಸ್ ಚೆಕ್ ಮಾಡಲಿದೆ. ಅಲ್ಲದೇ ಯಾವುದಕ್ಕೆ ಎಷ್ಟು ಡೇಟಾವನ್ನು ಬಳಕೆ ಮಾಡಿಕೊಳ್ಳಲು ನೀಡಬೇಕು ಎಂಬುದನ್ನು ಅದೇ ನಿರ್ಧರಿಸಲಿದೆ. ಅಲ್ಲದೇ ಅನುಪಯುಕ್ತ ಕಾರ್ಯಗಳಿಗೆ ಬಳಕೆಯಾಗುತ್ತಿದ್ದ ಡೇಟಾಕ್ಕೆ ಕಡಿವಾಣ ಹಾಕಲಿದೆ.

ಆಪ್ ಬಗ್ಗೆ ಮಾಹಿತಿ ನೀಡಲಿದೆ:

ಆಪ್ ಬಗ್ಗೆ ಮಾಹಿತಿ ನೀಡಲಿದೆ:

ನಿಮ್ಮ ಫೋನಿನಲ್ಲಿರುವ ಅತೀ ಹೆಚ್ಚು ಡೇಟಾ ತಿನ್ನುತ್ತಿರುವ ಆಪ್ ಯಾವುದು ಎಂದು ಗುರುತಿಸುವುದಲ್ಲದೇ ಅದರ ಬದಲಿಗೆ ಮಾರಕಟ್ಟೆಯಲ್ಲಿ ಕಡಿಮೆ ಡೇಟಾ ಬಳಸುವ ಆಪ್ ಯಾವುದಿದೆ ಎಂಬುದನ್ನು ಹುಡುಕಿ ನಿಮಗೆ ತಿಳಿಸಲಿದೆ.

ಇದಲ್ಲದೇ ಆನ್‌ಲೈನಿನಲ್ಲಿ ಡೇಟಾದ ಬಗ್ಗೆಯೂ ಮಾಹಿತಿ ನೀಡಲಿದೆ:

ಇದಲ್ಲದೇ ಆನ್‌ಲೈನಿನಲ್ಲಿ ಡೇಟಾದ ಬಗ್ಗೆಯೂ ಮಾಹಿತಿ ನೀಡಲಿದೆ:

ಆನ್‌ಲೈನಿನಲ್ಲಿ ಉಚಿತ ಡೇಟಾ ಎಲ್ಲಿ ದೊರೆಯಲಿದೆ ಎಂಬುದನ್ನ ಇದು ಹುಡುಕಲಿದೆ. ಅಲ್ಲದೇ ಈ ಆಪ್ ಡೌನ್ ಲೋಡ್ ಮಾಡಿದರೆ 100 MB ಡೇಟಾ ಸಹ ಬಳಕೆಗೆ ದೊರೆಯಲಿದೆ. ಈ ಆಪ್ ನಿಂದ ನಿಮ್ಮ ಡೇಟಾ ಸೇವ್ ಆಗುವುದಲ್ಲದೇ ಬೇರೆ ಮೂಲಗಳಿಂದ ಡೇಟಾವನ್ನು ಪಡೆಯುವುದು ಹೇಗೆ ಎಂಬುದು ತಿಳಿಯಲಿದೆ.

ಭಾರತದಲ್ಲಿನ್ನೂ ಬಂದಿಲ್ಲ:

ಭಾರತದಲ್ಲಿನ್ನೂ ಬಂದಿಲ್ಲ:

ಸದ್ಯ ಈ ಆಪ್ ಫಿಲಿಫೈನಲ್ಲಿ ಲಾಂಚ್ ಆಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿಯೂ ದೊರೆಯಲಿದೆ ಎನ್ನಲಾಗಿದೆ. ಜಿಯೋ ಖರೀದಿಸಿದ ನಂತರ ಅರ್ಧ ದಿನಕ್ಕೆಲ್ಲ 70% ಡೇಟಾ ಖಾಲಿ ಆಯ್ತು ಎಂದು ಬೊಬ್ಬೆ ಹೊಡೆಯುತ್ತಿರುವವರಿಗೆ ಇದು ಹೇಳಿ ಮಾಡಿಸಿದಂತಹ ಆಪ್ ಆಗಿದೆ.

Best Mobiles in India

Read more about:
English summary
Google has launched a new Triangle app that's aimed at save that precious mobile data from being wasted unnecessarily. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X