Subscribe to Gizbot

ಜಿಯೋ ಫೀಚರ್ ಫೋನ್ ಎದುರಾಗಿ ನೋಕಿಯಾದಿಂದ 1000ರೂ.ಗೆ ಮತ್ತೊಂದು ಫೀಚರ್ ಪೋನ್..!!

Written By:

ಮತ್ತೆ ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಅಬ್ಬರ ಶುರುವಾಗುವ ಕಾಲ ಸನ್ನಿಹವಾಗಿದೆ ಎನ್ನಲಾಗಿದೆ. ಈಗಾಗಲೇ ಮೂರು ಸ್ಮಾರ್ಟ್‌ಫೋನ್ ಮತ್ತು ಒಂದು ಫೀಚರ್ ಫೋನ್ ಅನ್ನು ಲಾಂಚ್ ಮಾಡಿರುವ ನೋಕಿಯಾ ಭಾರತೀಯ ಮಾರುಕಟ್ಟೆಗೆ ಅನುಸಾರವಾಗಿ ಕಡಿಮೆ ಬೆಲೆಯಲ್ಲಿ ಮತ್ತೊಂದು ಫೀಚರ್ ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಜಿಯೋ ಫೀಚರ್ ಫೋನ್ ಎದುರಾಗಿ ನೋಕಿಯಾದಿಂದ 1000ರೂ.ಗೆ ಮತ್ತೊಂದು ಫೀಚರ್ ಪೋನ್..!!

ಓದಿರಿ: ಪ್ಯಾನ್-ಆಧಾರ ಲಿಂಕ್ ಮಾಡಲು ಜೂನ್ 30 ಕಡೆ ದಿನ: ಇಲ್ಲಿದೆ ಆನ್‌ಲೈನಿನಲ್ಲಿ ಲಿಂಕ್ ಮಾಡಲು ಸುಲಭ ವಿಧಾನ

ಈ ಹಿಂದೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಸಂದರ್ಭದಲ್ಲಿಯೇ ನೋಕಿಯಾ ಮತ್ತಷ್ಟು ಫೀಚರ್ ಫೋನ್ ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿತ್ತು. ಇದೆ ಮಾದರಿಯಲ್ಲಿ ರೂ.1000ದ ಒಳಗಿನ ಬೆಲೆಯಲ್ಲಿ ಫೀಚರ್ ಫೋನ್ ವೊಂದನ್ನು ಬಿಡುಗಡೆ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ TQ 1017:

ನೋಕಿಯಾ TQ 1017:

ನೋಕಿಯಾ ಹೊಸದಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವ ಫೀಚರ್ ಫೋನಿಗೆ ಸದ್ಯ TQ 1017 ಎಂದು ನಾಮಕರಣ ಮಾಡಲಾಗಿದ್ದು, ಈ ಫೋನ್ ಕುರಿತಂತೆ ಚೀನಾದಲ್ಲಿ ಮಾಹಿತಿ ಲೀಕ್ ಆಗಿದೆ. ಈ ಫೋನ್ ಅನ್ನು ನೋಕಿಯಾ ಶೀಗ್ರವೇ ಭಾರತದಲ್ಲಿ ಲಾಂಚ್ ಮಾಡಲಿದೆ ಎನ್ನಲಾಗಿದೆ.

ವಿನ್ಯಾಸ ಹೇಗಿದೆ:

ವಿನ್ಯಾಸ ಹೇಗಿದೆ:

ನೋಕಿಯಾ TQ 1017 ಫೋನಿನಲ್ಲಿ ಸಣ್ಣ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದಲ್ಲದೇ ಹಿಂಭಾಗದಲ್ಲಿ ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ ಫಿಜಿಕಲ್ ಕೀಪ್ಯಾಡ್ ಕಾಣಬಹುದಾಗಿದೆ. ಕೀಪ್ಯಾಡಿಗೆ ಹೆಚ್ಚಿನ ಜಾಗವನ್ನು ನೀಡಲಾಗಿದೆ.

ಜಿಯೋ ವಿರುದ್ದ:

ಜಿಯೋ ವಿರುದ್ದ:

ಜಿಯೋ ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಫೀಚರ್ ಫೋನ್ ಮಾರಾಟ ಮಾಡುವುದಾಗಿ ಈ ಹಿಂದೆಯೆ ತಿಳಿಸಿತ್ತು. ಈ ಹಿನ್ನಲೆಯಲ್ಲಿ ಜಿಯೋಗೆ ಸ್ಪರ್ಧೆಯನ್ನು ನೀಡುವ ಸಲುವಾಗಿ ನೋಕಿಯಾ TQ 1017 ಬಿಡುಗಡೆ ಮಾಡುತ್ತಿದೆ ಎನ್ನಲಾಗಿದೆ.

ಬೆಲೆ ಕಡಿಮೆ:

ಬೆಲೆ ಕಡಿಮೆ:

ಈ ಹಿಂದೆ ಬಿಡುಗಡೆ ಮಾಡಿದ ನೋಕಿಯಾ 3310 ಫೀಚರ್ ಫೋನಿನ ಬೆಲೆ ಹೆಚ್ಚಾಗಿದ್ದ ಕಾರಣ ಮಾಡುಕಟ್ಟೆಯಲ್ಲಿ ಸದ್ದು ಮಾಡಲಿಲ್ಲ. ಆದರೆ ಈ ಬಾರಿ ನೋಕಿಯಾ ರೂ.1000ದ ಒಳಗೆಯೇ ಫೀಚರ್ ಫೋನ್ ಅನ್ನು ಗ್ರಾಹಕರಿಗೆ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
A Nokia-branded feature phone going by the model number TA-1017 was spotted to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot