Subscribe to Gizbot

ಹೊಸ ಅಧ್ಯಾಯ ಬರೆದ ಜಿಯೋ ಫೋನ್ ಗೂಗಲ್ ಆಸಿಸ್ಟೆಂಟ್..!

Posted By: -

ಜಿಯೋ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ಹವಾ ಎಬ್ಬಿಸಿದೆ. ಇದಲ್ಲದೇ ತನ್ನ ಫೀಚರ್ ಪೋನಿನಲ್ಲಿ ಮೊದಲ ಬಾರಿಗೆ ಗೂಗಲ್ ಅಸಿಸ್ಟೆಂಟ್ ಅಳವಡಿಸಿದ ಮೇಲೆ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗಿದೆ. ಕಳೆದ ವರ್ಷವೇ ಗೂಗಲ್ ಅಸಿಸ್ಟೆಂಟ್ ಪರಿಚಯ ಮಾಡುವುದಾಗಿ ತಿಳಿಸಿದ್ದ ಜಿಯೋ, ಈಗಾಗಲೇ ಫೂರ್ಣ ಪ್ರಮಾಣದಲ್ಲಿ ಗೂಗಲ್ ಅಸಿಸ್ಟೆಂಟ್ ಅನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದೆ.

ಹೊಸ ಅಧ್ಯಾಯ ಬರೆದ ಜಿಯೋ ಫೋನ್ ಗೂಗಲ್ ಆಸಿಸ್ಟೆಂಟ್..!

ಗೂಗಲ್ ಅಸಿಸ್ಟೆಂಟ್ ಹೊಂದಿರುವ ಮೊದಲ ಫೀಚರ್ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಜಿಯೋ ಫೋನ್, ಹೆಚ್ಚಿನ ಜನರನ್ನು ತಲುಪಲು ಮುಂದಾಗಿದೆ. ಲಾಂಚ್ ಆದ ನಂತರದಿಂದ ಇಲ್ಲಿಯ ವರೆಗೂ ಗೂಗಲ್ ಆಸಿಸ್ಟೆಂಟ್ ಬಳಕೆದಾರರ ಸಂಖ್ಯೆಯೂ ಆರು ಪಟ್ಟು ಹೆಚ್ಚಾಗಿದೆ ಎನ್ನುವ ಮಾಹಿತಿಯೂ ದೊರೆತಿದೆ.

ಇಗಾಗಲೇ ಒಂದು ಬಿಲಿಯನ್ ಮಂದಿ ಗೂಗಲ್ ಆಸಿಸ್ಟೆಂಟ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ದೇಶದಲ್ಲಿ ಅತೀ ಹೆಚ್ಚಿನ ಮಂದಿ ಜಿಯೋ ಫೋನ್ ಮೂಲಕವೇ ಗೂಗಲ್ ಆಸಿಸ್ಟೆಂಟ್ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಶೀಘ್ರವೇ ಗೂಗಲ್ ಆಸಿಸ್ಟೆಂಟ್ ಎಲ್ಲಾ ಭಾಷೆಗಳನ್ನು ಕಾರ್ಯನಿರ್ವಹಿಸುವಂತೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಹೊಸ ಅಧ್ಯಾಯ ಬರೆದ ಜಿಯೋ ಫೋನ್ ಗೂಗಲ್ ಆಸಿಸ್ಟೆಂಟ್..!

ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಪ್ರಾದೇಶಿಕ ಭಾಷೆಗಳೊಂದಿಗೆ ಇಂಗ್ಲೀಷ್ ಭಾಷೆಯನ್ನು ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ಅಧಿಕವಾಗಲಿದ್ದು, ಈಹಿನ್ನಲೆಯಲ್ಲಿ ದೇಶದಲ್ಲಿ ಸ್ಥಳೀಯ ಭಾಷೆಗಳಲ್ಲಿಯೂ ಕಾರ್ಯನಿರ್ವಹಿಸುವಂತೆ ಗೂಗಲ್ ಆಸಿಸ್ಟೆಂಟ್ ಅಭಿವೃದ್ಧಿ ಮಾಡುವ ಸಾಧ್ಯತೆ ಇದೆ ಎಂದು ಗೂಗಲ್ ಮೂಲಗಳು ತಿಳಿಸಿವೆ.

ಗೂಗಲ್ ಆಸಿಸ್ಟೆಂಟ್ ಹೆಚ್ಚಿನ ಬಳಕೆದಾರರನ್ನು ಪಡೆದುಕೊಳ್ಳುವ ಸಲುವಾಗಿ, ಬ್ರೆಜಿಲ್, ಚೀನಾ, ಭಾರತ, ಇಂಡೋನೇಷ್ಯಾ ಮತ್ತು ನೈಜಿರಿಯಾಗಳಿಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡುತ್ತಿದ್ದು, ಇದರಿಂದಾಗಿ ಅಲ್ಲಿನ ಸ್ಥಳಿಯ ಭಾಷೆಗೆ ಆದ್ಯತೆಯನ್ನು ನೀಡಿ ಗೂಗಲ್ ಆಸಿಸ್ಟೆಂಟ್ ಅಭಿವೃದ್ದಿ ಮಾಡುತ್ತಿದೆ.

English summary
Google Voice Assistant witnessed 6-fold growth with JioPhones. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot