999 ರುಪಾಯಿಗೆ ರೆಡ್ಮಿ ನೋಟ್ 5, ರೆಡ್ಮಿ ನೋಟ್ 5 ಪ್ರೋ ಖರೀದಿಸುವುದು ಹೇಗೆ ಗೊತ್ತಾ..?

|

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಶಿಯೋಮಿ ಈ ವರ್ಷ ಬಿಡುಗಡೆಗೊಳಿಸಿರುವ ಎರಡು ಸ್ಮಾರ್ಟ್ ಫೋನ್ ಗಳೆಂದರೆ ಅವು ರೆಡ್ಮಿ ನೋಡ್ 5 ಮತ್ತು ರೆಡ್ಮಿ ನೋಟ್ 5 ಪ್ರೋ. ಎರಡೂ ಸ್ಮಾರ್ಟ್ ಫೋನ್ ಕಡಿಮೆ ಬಜೆಟ್ ಗೆ ಹೊಂದಿವಂತಿದ್ದು, ಭಾರತೀಯ ಮಾರುಕಟ್ಟೆಯ ದರಕ್ಕೆ ಹೇಳಿಮಾಡಿದಂತಿದೆ. ಮತ್ತು ಫ್ಲಿಫ್ ಕಾರ್ಟ್ ಮೂಲಕ ಭಾರೀ ರಿಯಾಯಿತಿಯೂ ದೊರೆಯುತ್ತಿರುವುದರಿಂದಾಗಿ ಜನಸಾಮಾನ್ಯರಿಗೆ ಕೈಗೆಟುಕುವಂತಿದೆ. ನಿಮಗೆ ಆಶ್ಚರ್ಯವಾಗಬಹುದು. ಆದರೆ ಫ್ಲಿಪ್ ಕಾರ್ಟ್ ನಲ್ಲಿ ರೆಡ್ಮಿ ನೋಟ್ 5, ರೆಡ್ಮಿ ನೋಟ್ 5 ಪ್ರೋ ಸ್ಮಾರ್ಟ್ ಫೋನಿನ ಬೆಲೆ ಕೇವಲ 999 ರುಪಾಯಿಗಳು ಮಾತ್ರ. ಎರಡೂ ಸ್ಮಾರ್ಟ್ ಫೋನ್ ಗಳಿಗೆ ಈ-ಟೇಲರ್ ವೆಬ್ ಸೈಟ್ ನಲ್ಲಿ ಬೇರೆಬೇರೆ ರೀತಿಯ ಆಫರ್ ಗಳಿದ್ದು ಅದರಲ್ಲಿ ಪ್ರಮುಖವಾದುದ್ದೆಂದರೆ ಎಕ್ಸ್ ಚೇಂಜ್ ಆಫರ್,..ಎರಡೂ ಮೊಬೈಲ್ ಗಳಿಗೆ 11000 ರುಪಾಯಿಯ ಎಕ್ಸ್ ಚೇಂಜ್ ಬೆಲೆ ಇದೆ.

999 ರುಪಾಯಿಗೆ ರೆಡ್ಮಿ ನೋಟ್ 5, ರೆಡ್ಮಿ ನೋಟ್ 5 ಪ್ರೋ ಖರೀದಿಸುವುದು ಹೇಗೆ ಗೊತ್ತಾ


ಶಿಯೋಮಿ ರೆಡ್ ಮಿ ನೋಟ್ 5 ಎರಡು ವಿಧದಲ್ಲಿ ಬರಲಿದ್ದು, 64ಜಿಬಿ ಮತ್ತು32ಜಿಬಿ ಯ ಬೆಲೆ ಕ್ರಮವಾಗಿ11,999ರೂಪಾಯಿ ಮತ್ತು 9,999 ರುಪಾಯಿಯಾಗಿದೆ. ಕಂಪೆನಿಯು 64 ಜಿಬಿಯ ಮೊಬೈಲ್ ಗೆ 11000 ರುಪಾಯಿಯ ಎಕ್ಸ್ ಚೇಂಜ್ ಆಫರ್ ನೀಡುತ್ತಿದ್ದು, ಮೊಬೈಲ್ ಬೆಲೆ 999 ರುಪಾಯಿಯಾಗಿರಲಿದೆ. ಇನ್ನು 32ಜಿಬಿಯ ಮೊಬೈಲ್ ಗೆ 9000 ರುಪಾಯಿಯ ಎಕ್ಸ್ ಜೇಂಜ್ ಬೆಲೆ ನೀಡುತ್ತಿದ್ದು, ಇದರ ಬೆಲೆಯೂ ಕೂಡ 999 ರುಪಾಯಿಗಳಾಗಿರಲಿದೆ. ಪರಿಪೂರ್ಣ ಎಕ್ಸ್ ಸೇಂಜ್ ಮೊತ್ತವನ್ನು ಪಡೆಯಬೇಕೆಂದರೆ ನಿಮ್ಮ ಹಳೆ ಮೊಬೈಲ್ ಕೂಡ ಸರಿಯಾದ ಕಾರ್ಯನಿರತ ಸ್ಥಿತಿಯಲ್ಲಿರಬೇಕು. ಇದರ ಜೊತೆಗೆ ಆಕ್ಸಿಸ್ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಬಳಕೆ ದಾರರಿಗೆ ಹೆಚ್ಚುವರಿ ಶೇಕಡಾ 5 ರಷ್ಟು ರಿಯಾಯಿತಿ ದೊರೆಯಲಿದೆ. ಅಷ್ಟೇ ಅಲ್ಲ ತಿಂಗಳ ಕಂತಿನಲ್ಲೂ ಕೂಡ ಈ ಮೊಬೈಲ್ ಗಳನ್ನು ಖರೀದಿಸಬಹುದಾಗಿದ್ದು,582 ರೂಪಾಯಿ ತಿಂಗಳ ಕಂತು ಕಟ್ಟಬೇಕಾಗುತ್ತದೆ.

ಇನ್ನು,ಶಿಯೋಮಿ ರೆಡ್ ಮಿ ನೋಟ್ 5 ಪ್ರೋ 64 ಜಿಬಿಯ ವರ್ಷನ್ ನ ಬೆಲೆಯು 14999 ರುಪಾಯಿ. ಆದರೆ ಫ್ಲಿಪ್ ಕಾರ್ಟ್ ನಲ್ಲಿ 14000 ರುಪಾಯಿಯ ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ಆಫರ್ ಇದ್ದು, ಕೇವಲ 999 ರುಪಾಯಿಗೆ ಈ ಮೊಬೈಲ್ ನ್ನೂ ಕೂಡ ನೀವು ಖರೀದಿಸಬಹುದಾಗಿದೆ. ಅಷ್ಟೇ ಅಲ್ಲ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಫರ್ ಕೂಡ ಇದ್ದು ಹೆಚ್ಚುವರಿ 5 ಶೇಕಡಾ ರಿಯಾಯಿತಿ ದೊರೆಯಲಿದೆ. ಇನ್ನು ಕಂತಿನ ಲೆಕ್ಕದಲ್ಲಿ ಖರೀದಿಸುತ್ತೀರಾದರೆ, ತಿಂಗಳಿಗೆ 728 ರೂಪಾಯಿ ಪಾವತಿಸಿ ಖರೀದಿಸಬಹುದು.

ಫ್ಲಿಪ್ ಕಾರ್ಟ್ ನ ಈ ಆಫರ್ ಗಳನ್ನು ಹೊರತು ಪಡಿಸಿದರೆ, ರಿಲಯನ್ಸ್ ಜಿಯೋ ಕೂಡ ರೆಡ್ ಮಿ ನೋಟ್ 5 ಮತ್ತು ರೆಡ್ ಮಿ ನೋಟ್ 5 ಪ್ರೋ ಗೆ ಕ್ಯಾಷ್ ಬ್ಯಾಕ್ ಆಫರ್ ನೀಡಿದ್ದು,2200 ರೂಪಾಯಿ ಮರುಪಾವತಿಯಾಗಲಿದೆ. ಕ್ಯಾಷ್ ಬ್ಯಾಕ್ ಆಫರ್ 44 ವೋಚರ್ ಗಳ ರೂಪದಲ್ಲಿದ್ದು, ಪ್ರತಿಯೊಂದು ವೋಚರ್ ನ ಬೆಲೆ 50 ರುಪಾಯಿಯಾಗಿರಲಿದೆ. ವೋಚರ್ ನ ಹಣವು ನೇರವಾಗಿ ಮೈಜಿಯೋ ಅಪ್ಲಿಕೇಷನ್ ನಲ್ಲಿ ಬರಲಿದ್ದು, ರೂಪಾಯಿ 198 ಅಥವಾ 299 ರ ಪ್ಲಾನಿನ ರಿಚಾರ್ಜ್ ಮಾಡಿದಾಗ ವೋಚರ್ ಹಣ ಕ್ರೆಡಿಟ್ ಆಗಲಿದೆ. ನಂತರ ಬಳಕೆದಾರರು ವೋಚರ್ ಹಣವನ್ನು ಮುಂದಿನ ಖರೀದಿಗೆ ಬಳಸಬಹುದಾಗಿದೆ.

How to send WhatsApp Payments invitation to others - GIZBOT KANNADA
Best Mobiles in India

English summary
Both the smartphones are listed on the e-tailer’s website with various offers and one such offer is of exchange.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X