ಸ್ವಯಂಚಾಲಿತವಾಗಿ ಮೆಸೇಜ್‌ಗಳನ್ನು ಸೆಂಡ್ ಆಗುವಂತೆ ಸೆಟ್ ಮಾಡುವುದು ಹೇಗೆ?

By Tejaswini P G
|

ನಿಮ್ಮ ಫೋನ್ ನಿಂದ ನಿರ್ದಿಷ್ಟ ಸಮಯಕ್ಕೆ ಆಟೋಮ್ಯಾಟಿಕ್ ಆಗಿ ಮೆಸೇಜ್ ರವಾನೆ ಯಾಗುವಂತೆ ಶೆಡ್ಯೂಲ್ ಮಾಡಲು ಹಲವು ಆಪ್ಗಳು ಪ್ಲೇಸ್ಟೋರ್ ನಲ್ಲಿ ಲಭ್ಯವಿದ್ದು ಈ ಲೇಖನದಲ್ಲಿ ಅಂತಹ ಉತ್ತಮ SMS ಶೆಡ್ಯೂಲರ್ ಆಪ್ಗಳ ಕುರಿತು ಮಾಹಿತಿ ನೀಡಲಾಗಿದೆ.

ನೀವು ಮರೆಯದೇ ಕಳುಹಿಸ ಬಯಸುವ ಗೆಳೆಯರ ಹುಟ್ಟುಹಬ್ಬದ ಶುಭಾಶಯಗಳಿರಬಹುದು, ನಿಮ್ಮ ಬಾಸ್ ಗೆ ತಪ್ಪದೇ ಕಳುಹಿಸಬೇಕಾದ ಸಂದೇಶವಿರಬಹುದು ಹೀಗೆ ಹಲವಾರು ವಿಷಯಗಳನ್ನು ನಾವು ಮರೆಯಬಾರದೆಂದು ಬಯಸುತ್ತೇವೆ. ಆದರೆ ಮರೆವು ಮನುಷ್ಯ ಸಹಜ ಗುಣ. ಹಾಗಾಗಿ ಒಮ್ಮೊಮ್ಮೆ ಇವುಗಳನ್ನು ನಾವು ಮರೆಯುತ್ತೇವೆ.

ಸ್ವಯಂಚಾಲಿತವಾಗಿ ಮೆಸೇಜ್‌ಗಳನ್ನು ಸೆಂಡ್ ಆಗುವಂತೆ ಸೆಟ್ ಮಾಡುವುದು ಹೇಗೆ?


ಇಂತಹ ವಿಷಯಗಳಲ್ಲಿ ಮಶೀನುಗಳು ನಮ್ಮನ್ನು ಮೀರಿಸುತ್ತವೆ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಈ ವಿಷಯದಲ್ಲಿ ನಮ್ಮ ಅಗತ್ಯವನ್ನು ಪೂರೈಸುವ ಅನೇಕ ಆಪ್ ಗಳು ಪ್ಲೇಸ್ಟೋರ್ ನಲ್ಲಿ ಲಭ್ಯವಿದೆ. ಅವುಗಳ ಪೈಕಿ ಉತ್ತಮ ಆಪ್ಗಳನ್ನು ಈ ಲೇಖನದಲ್ಲಿ ನಿಮಗಾಗಿ ಸಂಪಾದಿಸಿದ್ದೇವೆ.
ಸ್ವಯಂಚಾಲಿತವಾಗಿ ಮೆಸೇಜ್‌ಗಳನ್ನು ಸೆಂಡ್ ಆಗುವಂತೆ ಸೆಟ್ ಮಾಡುವುದು ಹೇಗೆ?


ಡು ಇಟ್ ಲೇಟರ್

ಈ ಆಪ್ ಟೆಕ್ಸ್ಟ್ ಮೆಸೇಜ್ಗಳನ್ನು ನಿಗದಿತ ಸಮಯದಲ್ಲಿ ಕಳುಹಿಸುವ ಸಾಮರ್ಥ್ಯ ಹೊಂದಿದೆ. ಮಾತ್ರವಲ್ಲದೆ ಈ ಆಪ್ ಈ ಕೆಳಗಿನ 5 ಪ್ಲ್ಯಾಟ್ಫಾರ್ಮ್ ನಲ್ಲಿ ಕಾರ್ಯನಿರ್ವಹಿಸುತ್ತದೆ.

1.ಜೀಮೇಲ್

2.ಯಾಹೂ

3.ಹಾಟ್ಮೇಲ್

4.ಫೇಸ್ಬುಕ್

5.ಟಿಟ್ಟರ್

ಸರಳ ಇಂಟರ್ಫೇಸ್ ಮತ್ತು ಸರಳ ವಿನ್ಯಾಸ ಹೊಂದಿರುವ ಈ 'ಡು ಇಟ್ ಲೇಟರ್' ಆಪ್ ಪ್ಲೇಸ್ಟೋರ್ ನಲ್ಲಿ ಲಭ್ಯವಿರುವ SMS ಶೆಡ್ಯೂಲರ್ ಆಪ್ ಗಳ ಪೈಕಿ ಉತ್ತಮವಾದುದು ಎನಿಸಿದೆ.

ಈ ಆಪ್ ಮೂಲಕ ನಿಗದಿತ ಸಮಯಕ್ಕೆ ತನ್ನಿಂತಾನೇ ಮೆಸೇಜ್ ಸೆಂಡ್ ಆಗುವಂತೆ ಸೆಟ್ ಮಾಡಲು ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಸಂದೇಶವನ್ನು ಟೈಪ್ ಮಾಡಿ, ಯಾರಿಗೆ ಕಳುಹಿಸಬೇಕೆಂಬುದನ್ನು ಆಯ್ಕೆ ಮಾಡಿ, ಮತ್ತು ನೀವು ಮೆಸೇಜ್ ಕಳುಹಿಸಬಯಸುವ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ ಅದನ್ನು ಸೇವ್ ಮಾಡಿ. ನೀವು ಒಂದು ಮೆಸೇಜ್ ಅನ್ನು ಪದೇ ಪದೇ ಕಳುಹಿಸ ಬಯಸಿದರೆ ರಿಪೀಟ್ ಫ್ರೀಕ್ವೆನ್ಸಿ ಯನ್ನು ಕೂಡ ಸೆಟ್ ಮಾಡಬಹುದು. ಈ ಆಪ್ ಮೆಸೇಜ್ ಅನ್ನು ಸೆಂಡ್ ಮಾಡುವ ಮೊದಲು ನಿಮ್ಮ ಅನುಮತಿಯನ್ನು ಕೇಳುತ್ತದೆ. ಹಾಗಾಗಿ ನೀವು ಒಂದು ವೇಳೆ ಮೆಸೇಜ್ ಕಳುಹಿಸುವದನ್ನು ಕ್ಯಾನ್ಸಲ್ ಮಾಡಬಯಸಿದರೆ ಈ ಹಂತದಲ್ಲಿ ಅದನ್ನು ಮಾಡಬಹುದು.

ಸ್ವಯಂಚಾಲಿತವಾಗಿ ಮೆಸೇಜ್‌ಗಳನ್ನು ಸೆಂಡ್ ಆಗುವಂತೆ ಸೆಟ್ ಮಾಡುವುದು ಹೇಗೆ?


ಆಲ್ಫಾ ಮೆಸೇಜಿಂಗ್

ಆಲ್ಫಾ ಮೆಸೇಜಿಂಗ್ ಆಪ್ ಮೆಸೇಜ್ಗಳನ್ನು ನಿಗದಿತ ಸಮಯಕ್ಕೆ ಕಳುಹಿಸುವ ಸಾಮರ್ಥ್ಯ ಹೊಂದಿದೆ ಅಲ್ಲದೆ ಒಳಬರುವ ಕರೆಗಳಿಗೆ ಮತ್ತು ಸಂದೇಶಗಳಿಗೆ ಪೂರ್ವನಿರ್ಧರಿತ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವನ್ನೂ ಹೊಂದಿದೆ.

ಈ ಆಪ್ ನಲ್ಲಿ ಇವೆಂಟ್ಗಳನ್ನು ( ಇಲ್ಲಿ ಸಂದೇಶಗಳನ್ನು ಕಳುಹಿಸುವ ಸಮಯವನ್ನು ನಿಗದಿಪಡಿಸುವದಕ್ಕೆ ಇವೆಂಟ್ ಎನ್ನುತ್ತಾರೆ) ನಿರ್ದಿಷ್ಟ ದಿನಾಂಕ ಅಥವಾ ವಾರದ ನಿರ್ದಿಷ್ಟ ದಿನಕ್ಕೆ(ವೀಕ್ಲಿ) ಅನುಗುಣವಾಗಿ ಸೆಟ್ ಮಾಡಬಹುದು. ವೀಕ್ಲಿ ಇವೆಂಟ್ಗಳಿಗೆ ನೀವು ಒಂದಕ್ಕಿಂತ ಹೆಚ್ಚಿನ ದಿನಗಳನ್ನೂ ಆಯ್ಕೆ ಮಾಡಬಹುದು . ಆದರೆ ಆಯ್ಕೆ ಮಾಡಿದ ಪ್ರತಿಯೊಂದು ದಿನವೂ ನಿರ್ದಿಷ್ಟ ಸಮಯವನ್ನೇ ಆಯ್ಕೆ ಮಾಡಬೇಕು.

ಪೂರ್ವನಿರ್ಧರಿತ ಪ್ರತಿಕ್ರಿಯೆಗಳನ್ನು ಬಳಸಲು 'ಕ್ವೈಟ್' ಮೋಡ್ ಬಳಸಬೇಕು. ನೀವು ಸ್ವೀಕರಿಸುವ ಕರೆಗಳಿಗೆ ಅಥವಾ ಸಂದೇಶಗಳಿಗೆ ಉತ್ತರವಾಗಿ ಹಲವು ಪ್ರತಿಕ್ರಿಯೆಗಳನ್ನು ನೀವು ಸಿದ್ಧಪಡಿಸಬಹುದು ಮತ್ತು ಟೈಟಲ್ ಮತ್ತು ಮೆಸೇಜ್ಗಳನ್ನು ಸಿದ್ಧಪಡಿಸಿ ಅದನ್ನು ಸೇವ್ ಮಾಡಿ ಇಡಬಹುದು.

ಸ್ವಯಂಚಾಲಿತವಾಗಿ ಮೆಸೇಜ್‌ಗಳನ್ನು ಸೆಂಡ್ ಆಗುವಂತೆ ಸೆಟ್ ಮಾಡುವುದು ಹೇಗೆ?


ಶೆಡ್ಯೂಲ್ SMS

ಶೆಡ್ಯೂಲ್ SMS ಆಪ್ ಗೂಗಲ್ ನ ಸ್ಪೀಚ್-ಟು-ಟೆಕ್ಸ್ಟ್ ಫೀಚರ್ ನ ಬಳಕೆಮಾಡುವ ಮೂಲಕ ಇತರ ಆಪ್ಗಳಿಂದ ವಿಭಿನ್ನವೆನಿಸಿದೆ.

ಸರಳ ಮತ್ತು ಸುಂದರವಾದ ವಿನ್ಯಾಸ ಹೊಂದಿರುವ ಈ ಆಪ್ ಬೇರೆ ಬೇರೆ ವಿಶೇಷ ಸಂಧರ್ಭಗಳಲ್ಲಿ ಬಳಸಬಹುದಾದ ಮೆಸೇಜ್ ಟೆಂಪ್ಲೇಟ್ಗಳನ್ನು ಹೊಂದಿದೆ.

ಈ ಆಪ್ ನ ನ್ಯೂನತೆಯೆಂದರೆ ಇದರಲ್ಲಿ ಒಂದೇ ಮೆಸೇಜ್ ಅನ್ನು ಮತ್ತೆ ಮತ್ತೆ ಕಳುಹಿಸುವಂತೆ ಸೆಟ್ ಮಾಡಲಾಗದು ಮತ್ತು ಇದರಲ್ಲಿ ಬಹಳಷ್ಟು ಜಾಹೀರಾತುಗಳು ಆಗಾಗ ಬಂದು ತೊಂದರೆಯುನ್ನುಂಟು ಮಾಡುತ್ತದೆ.

SMS ಪ್ಲ್ಯಾನಿಂಗ್

ಹೆಸರಿಗೆ ತಕ್ಕಂತೆ SMS ಪ್ಲ್ಯಾನಿಂಗ್ ಆಪ್ SMS ಅನ್ನು ನಿಗದಿತ ಸಮಯಕ್ಕೆ ಆಟೋಮ್ಯಾಟಿಕ್ ಆಗಿ ಸೆಂಡ್ ಮಾಡಲು ಸಹಾಯಮಾಡುತ್ತದೆ. ತುಂಬ ಸರಳ ಮತ್ತು ಸ್ಪಷ್ಟ ವಿನ್ಯಾ ಹೊಂದಿರುವ ಈ ಆಪ್ ನಲ್ಲಿ ಯಾವುದೇ ಆಡ್-ಆನ್ ಗಳ ಕಿರಿಕಿರಿಯಿಲ್ಲ.

ಈ ಆಪ್ ಮೂಲಕ ಕಳುಹಿಸಲಾಗುವ ಎಲ್ಲಾ ಸಂದೇಶಗಳನ್ನು ನಾವು ಟ್ರ್ಯಾಕ್ ಮಾಡಬಹುದಾಗಿದೆ. ಸಂದೇಶವನ್ನು ಕಳುಹಿಸಲಾಗಿದೆಯೇ, ಯಾರಿಗೆ ಕಳುಹಿಸಲಾಗಿದೆ ಮತ್ತು ಯಾವ ಸಮಯಕ್ಕೆ ಕಳುಹಿಸಲಾಗಿದೆ ಮೊದಲಾದ ಮಾಹಿತಿಯೊಂದಿಗೆ ರೆಕಾರ್ಡ್ ಮಾಡಬಹುದಾಗಿದೆ.

ಆದರೆ ಈ ಆಪ್ ನಲ್ಲೂ ಕೆಲವು ನ್ಯೂನತೆಗಳಿವೆ. ಇದು ಬಹಳ ಕಟ್ಟುನಿಟ್ಟಾದ ರಿಪೀಟ್ ಫ್ರೀಕ್ವೆನ್ಸಿ ಯನ್ನು ಹೊಂದಿದೆ. ಈ ಆಪ್ ನಲ್ಲಿ ನೀವು 5/15/30 ನಿಮಿಷಗಳು ಅಥವಾ ನಿರ್ದಿಷ್ಟ ವಾರ/ತಿಂಗಳು/ವರ್ಷಕ್ಕೆ ಅನುಗುಣವಾಗಿ ರಿಪೀಟ್ ಫ್ರೀಕ್ವೆನ್ಸಿ ಸೆಟ್ ಮಾಡಬಹುದು. ಅದನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಲು ಸಾಧ್ಯವಿಲ್ಲ.

ಈ ಆಪ್ ಫೋನ್ ನ ಡೀಫಾಲ್ಟ್ ಸಿಮ್ ಸೆಟ್ಟಿಂಗ್ ಗೆ ಅನುಸಾರವಾಗಿ ಸಂದೇಶ ಕಳುಹಿಸುತ್ತದೆ. ನೀವು ಒಂದು ವೇಳೆ ಡೀಫಾಲ್ಟ್ ಅಲ್ಲದ ಮತ್ತೊಂದು ಸಿಮ್ ನಿಂದ ಮೆಸೇಜ್ ಕಳುಹಿಸಬೇಕಾದರೆ ಫೋನ್ ನ ಡೀಫಾಲ್ಟ್ ಸಿಮ್ ಸೆಟ್ಟಿಂಗ್ ಅನ್ನು ಬದಲಾಯಿಸಬೇಕಾಗುತ್ತದೆ.

Best Mobiles in India

English summary
Here's how you can schedule messages beforehand. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X