ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಅಲೆಕ್ಸಾ ಬಳಕೆ ಮಾಡಿಕೊಳ್ಳುವುದು ಹೇಗೆ..?
ಅಮೆಜಾನ್ ಅಲೆಕ್ಸಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜಾದು ಶುರು ಮಾಡಿದೆ. ಅಮೆಜಾನ್ ಲಾಂಚ್ ಮಾಡಿರುವ ಅಲೆಕ್ಸಾ ವಾಯ್ಡ್ ಅಸಿಸ್ಟೆಂಟ್ ಸೇವೆಯನ್ನು ಹೊಂದಿರುವ ಸ್ಮಾರ್ಟ್ ಸ್ಪೀಕರ್ ಗಳು ಹೆಚ್ಚು ಪ್ರಮಾಣದಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಇನ್ನಷ್ಟು ಸ್ಮಾರ್ಟ್ ಸ್ಪೀಕರ್ ಗಳು ಕಾಲಿಡಲಿದೆ. ಇದಲ್ಲದೇ ಅಲೆಕ್ಸಾ ವಾಯ್ಡ್ ಅಸಿಸ್ಟೆಂಟ್ ಬಳಕೆ ಮಾಡಿಕೊಳ್ಳುವವ ಸಂಖ್ಯೆಯೂ ಅಧಿಕವಾಗುತ್ತಿದೆ.

ಈ ಹಿನ್ನಲೆಯಲ್ಲಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿಯೂ ನೀವು ಅಲೆಕ್ಸಾ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಇದನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನವು ಇದಾಗಿದೆ. ಹೀಗೆ ಮಾಡುವ ಮೂಲಕ ನಿಮ್ಮ ಸ್ಮಾರ್ಟ್ ಫೋನಿನಲ್ಲಿಯೇ ಅಲೆಕ್ಸಾವನ್ನು ಹಾಕಿಕೊಳ್ಳಬಹುದಾಗಿದೆ.
ಓದಿರಿ: ಮೊಟೊ E5 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ, ಬಿಗ್ ಸ್ಕ್ರಿನ್...!
ಹಂತ 01: ಅಮೆಜಾನ್ ಅಲೆಕ್ಸಾ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಇನ್ ಸ್ಟಾಲ್ ಮಾಡಿಕೊಳ್ಳಿ.
ಹಂತ 02: ಆಪ್ ಒಪನ್ ಮಾಡಿದ ನಂತರದಲ್ಲಿ ಕೆಳಭಾಗದಲ್ಲಿ ನೀವು ನೀಲಿ ಬಣ್ಣದ ಬಟನ್ ವೊಂದನ್ನು ಕಾಣಬಹುದಾಗಿದೆ.
ಹಂತ 03: ನೀವು ಮೊದಲ ಬಾರಿಗೆ ಬಟನ್ ಪ್ರೆಸ್ ಮಾಡಿದ ಸಂದರ್ಭದಲ್ಲಿ ಹಲವು ಪರ್ಮಿಷನ್ ಗಳನ್ನು ಕೇಳಲಿದೆ.
ಹಂತ 04: ಅಲ್ಲಿ ಎಲ್ಲವುಕ್ಕೂ ಅಲೋ ಮಾಡಿದೆ. ಅಲ್ಲದೇ ಅಲೆಕ್ಸಾ ಆಡಿಯೋ ರೆಕಾರ್ಡ್ ಮಾಡಿಕೊಳ್ಳಲು ಬಿಡಿ.
ಹಂತ 05: ಅಲ್ಲದೇ ನಿಮ್ಮ ಲೋಕೆಷನ್ ಅನ್ನು ತಿಳಿದುಕೊಳ್ಳಲು ಅವಕಾಶ ಮಾಡಿಕೊಡಿ
ಹಂತ 06: ನಂತರ ಡನ್ ಬಟನ್ ಪ್ರೆಸ್ ಮಾಡಿದ. ಮಾಡಿದ ನಂತರದಲ್ಲಿ ಅಲೆಕ್ಸಾ ಸೇವೇ ಶುರುವಾಗಿಲಿದೆ.


Click it and Unblock the Notifications








