ಆಯ್ದ ಆಂಡ್ರಾಯ್ಡ್ ಆಪ್ ಗಳ ಅಪ್ಡೇಟ್ ಅನ್ನು ಶಾಶ್ವತವಾಗಿ ತಡೆಗಟ್ಟುವುದು ಹೇಗೆ?

By Tejaswini P G
|

"ಹಲವು ಅನುಭವಗಳು ಒಟ್ಟಾಗಿ ಸೇರಿದರೆ ನಾವಾಗುತ್ತೇವೆ. ಆ ಅನುಭವಗಳು ಒಳ್ಳೆಯದೇ ಇರಲಿ ಅಥವಾ ಕೆಟ್ಟದೇ ಇರಲಿ, ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ" ಎನ್ನುವ ಮಾತನ್ನು ನಾವೆಲ್ಲಾ ಒಪ್ಪುತ್ತೇವೆ.

ಇದೇ ಮಾತು ನಮ್ಮ ಫೋನ್ ಗೂ ಅನ್ವಯಿಸುತ್ತದೆ. ನಮ್ಮ ಫೋನ್ ನಲ್ಲಿರುವ ಆಪ್ಗಳು ಮತ್ತು ಅದರ ಅಪ್ಡೇಟ್ಗಳು ಆ ಫೋನ್ ಗೆ ಒಂದು ವ್ಯಕ್ತಿತ್ವವನ್ನು ನೀಡುತ್ತದೆ. ಹೇಗೆ ಎಲ್ಲಾ ಅನುಭವಗಳು ಒಳ್ಳೆಯದಾಗಿರುವುದಿಲ್ಲವೋ ಹಾಗೆಯೇ ಎಲ್ಲಾ ಅಪ್ಡೇಟ್ಗಳು ಒಳ್ಳೆಯದಾಗಿರುವುದಿಲ್ಲ. ಕೆಲ ಅಪ್ಡೇಟ್ಗಳು ಹೆಚ್ಚು ಬ್ಯಾಟರಿ ಶಕ್ತಿ ಬಳಸಿದರೆ ಇನ್ನು ಕೆಲವು ಫೋನ್ ನ ಪ್ರಾಸೆಸಿಂಗ್ ಸಾಮರ್ಥ್ಯವನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದನ್ನು ತಡೆಗಟ್ಟಲು ಉತ್ತಮ ಉಪಾಯವೆಂದರೆ ಫೋನ್ ನ ಎಲ್ಲಾ ಆಪ್ಗಳ ಆಟೋ-ಅಪ್ಡೇಟ್ ಸಾಮರ್ಥ್ಯವನ್ನು ತಡೆಗಟ್ಟುವುದು. ಆದರೆ ಹೀಗೆ ಮಾಡುವುದು ವ್ಯಾವಹಾರಿಕವಾಗಿ ಉತ್ತಮ ಪರಿಹಾರವಲ್ಲ.

ಆಯ್ದ ಆಂಡ್ರಾಯ್ಡ್ ಆಪ್ ಗಳ ಅಪ್ಡೇಟ್ ಅನ್ನು ಶಾಶ್ವತವಾಗಿ ತಡೆಗಟ್ಟುವುದು ಹೇಗೆ?

ಆದರೆ ಆಯ್ದ ಕೆಲ ಆಪ್ ಗಳ ಅಪ್ಡೇಟ್ ಅನ್ನು ಶಾಶ್ವತವಾಗಿ ತಪ್ಪಿಸುವುದು ಸಾಧ್ಯವಿದ್ದು ಅದಕ್ಕಾಗಿ ಮೊದಲು ಈ ಕೆಳಗಿನ ವಿಷಯಗಳನ್ನು ಹೊಂದುವುದು ಅಗತ್ಯವಾಗಿದೆ.

1) ಪಿಸಿ ಯಲ್ಲಿ ವಿನ್ರಾರ್

2) ಕಂಪ್ಯೂಟರ್ನಲ್ಲಿ ಆಂಡ್ರಾಯ್ಡ್ ಸ್ಟುಡಿಯೋ ಪಿಸಿ ಆವೃತ್ತಿ ಇನ್ಸ್ಟಾಲ್ ಮಾಡಬೇಕು

3) ಆಂಡ್ರಾಯ್ಡ್ ನಲ್ಲಿ ಅಪರಿಚಿತ ಮೂಲಗಳಿಂದ ಆಪ್ ಇನ್ಸ್ಟಾಲ್ ಮಾಡುವುದು ಸಾಧ್ಯವಿರಬೇಕು


ಆಯ್ದ ಆಂಡ್ರಾಯ್ಡ್ ಆಪ್ಗಳು ಅಪ್ಡೇಟ್ ಅನ್ನು ಶಾಶ್ವತವಾಗಿ ತಡೆಗಟ್ಟಲು ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ

ಹಂತ 1: ನಿಮ್ಮ ಪಿಸಿ ಯಲಿ ಆಂಡ್ರಾಯ್ಡ್ ಸ್ಟುಡಿಯೋ ಟೂಲ್ ಅನ್ನು ತೆರೆದು keytool.exe ಎಂಬ ಫೈಲ್ ಅನ್ನು ಹುಡುಕಿ. ಈ ಫೋಲ್ಡರ್ ಗೆ ಮತ್ತೆ ಭೇಟಿ ನೀಡುವ ಅವಶ್ಯಕತೆ ಇರುವುದರಿಂದ ಅದನ್ನು ಹಾಗೇ ತೆರೆದೇ ಇಡಿ.

ಹಂತ 2: ವಿಂಡೋಸ್ +X ಒತ್ತಿ ಅಥವಾ ಸ್ಟಾರ್ಟ್ ಬಟನ್ ಮೇಲೆ ರೈಟ್ ಕ್ಲಿಕ್ ಮಾಡಿ. ನಂತರ A ಒತ್ತುವ ಮೂಲಕ ಅಥವಾ ಕಮಾಂಡ್ ಪ್ರಾಂಪ್ಟ್(ಎಡ್ಮಿನ್) ಆಯ್ಕೆ ಮಾಡುವ ಮೂಲಕ ಕಮಾಂಡ್ ಪ್ರಾಂಪ್ಟ್ ತೆರೆಯಿರಿ. ಅಥವಾ ಸ್ಟಾರ್ಟ್ ಬಟನ್ ಒತ್ತುವ ಮೂಲಕ ಕಮಾಂಡ್ ಪ್ರಾಂಪ್ಟ್ ಹುಡುಕಿ , ಬರುವ ಫಲಿತಾಂಶದ ಮೇಲೆ ರೈಟ್-ಕ್ಲಿಕ್ ಮಾಡಿ " ರನ್ ಆಸ್ ಅಡ್ಮಿನಿಸ್ಟ್ರೇಟರ್" ಆಯ್ಕೆ ಮಾಡಿ.

ಹಂತ 3: cd ಕಮಾಂಡ್ ಬಳಸುವ ಮೂಲಕ ಕಮಾಂಡ್ ಪ್ರಾಂಪ್ಟ್ ನಲ್ಲಿ keytool.exe ಫೈಲ್ ನ ಪಾತ್ ಹುಡುಕಿ. ಅದರ ಲೊಕೇಶನ್ ಗೆ ಹೋದ ನಂತರ ಆ ಫೈಲ್ ನ ಲೊಕೇಶನ್ ಬದಲಿಸಲು ಈ ಕೆಳಗಿನ ಕಮಾಂಡ್ ಗಳನ್ನು ಚಲಾಯಿಸಿ

key tool -genkey -v –keystore

C:first-key.keystore -alias alias_has_no_name –keyalg

RSA -key size 2048 -validity 10000

ಇಲ್ಲಿ first-key ಮತ್ತು alias_has_no_name ಬದಲಿಗೆ ನಿಮ್ಮ ಆಯ್ಕೆಯ ಹೆಸರುಗಳನ್ನು ಬಳಸಿ.

ಹಂತ 4: ಈ ಕಮಾಂಡ್ ಗಳನ್ನು ಚಲಾಯಿಸಿದ ನಂತರ ಅದು ನಿಮ್ಮನ್ನು ಪಾಸ್ವರ್ಡ್ ನಮೂದಿಸುವಂತೆ ವಿನಂತಿಸುತ್ತದೆ. ಪಾಸ್ವರ್ಡ್ ನಮೂದಿಸಿದ ನಂತರ ಬರುವ ಪ್ರಾಂಪ್ಟ್ ಗಳಿಗೆ Y ಒತ್ತುವ ಮೂಲಕ ಸಮ್ಮತಿ ಸೂಚಿಸಿ.

ಹಂತ 5: ನೀವು ಪದೇ ಪದೇ ಅಪ್ಡೇಟ್ ಸ್ವೀಕರಿಸಲು ಬಯಸದ ಆಪ್ ಗಳ APK ಡೌನ್ಲೋಡ್ ಮಾಡಿ. keytool.exe ಫೈಲ್ ನ ಬದಲಿಗೆ ಈ APK ಫೈಲ್ ಅನ್ನು ಹಾಕಿ. ಎಕ್ಸ್ಟ್ರಾಕ್ಟರ್ ಅಥವಾ ವಿನ್ರಾರ್ ಮೂಲಕ APK ಫೈಲ್ ತೆರೆದು META-INF ಫೋಲ್ಡರ್ ಅನ್ನು ಡಿಲೀಟ್ ಮಾಡಿ.

ಹಂತ 6: ಈ ಕೆಳಗಿನ ಕಮಾಂಡ್ಗಳನ್ನು ಚಲಾಯಿಸಿ.

jarsinger -verbose –sigalg

SHA1withRSA –digestalg SHA1

–keystore C:first-key.keystore

Quickpic.apk

alias_has_no_name

ಇಲ್ಲಿ first-key ಮತ್ತು alias_has_no_name ಬದಲಿಗೆ ನೀವು ಈ ಮೊದಲು ಬಳಸಿದ ಹೆಸರುಗಳನ್ನು ಬಳಸಿ.

ಹಂತ 7: ಈ APK ಫೈಲ್ ಅನ್ನು ನಿಮ್ಮ ಫೋನ್ ಗೆ ಕಾಪಿ ಮಾಡಿ, ಇನ್ಸ್ಟಾಲ್ ಮಾಡಿ ನಂತರ ರನ್ ಮಾಡಿ. ಇಷ್ಟು ಮಾಡಿದ ನಂತರ ಆ ಆಪ್ ಗೆ ನೀವು ಮುಂದೆಂದೂ ಅಪ್ಡೇಟ್ ಗಳನ್ನು ಪಡೆಯುವುದಿಲ್ಲ.

Best Mobiles in India

English summary
How to stop updates to select Android apps permanently. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X