ಗೂಗಲ್ ನ 'ಎಡಿಟ್ ಸ್ಕ್ರೀನ್‌ಶಾಟ್' ಫೀಚರ್ ಬಳಸುವುದು ಹೇಗೆ?

ಗೂಗಲ್ ಸ್ಕ್ರೀನ್ಶಾಟ್ಗಳನ್ನು ಎಡಿಟ್ ಮಾಡಬಲ್ಲ ಫೀಚರ್ ಒಂದನ್ನು ಆಂಡ್ರಾಯ್ಡ್ ನಲ್ಲಿ ಸಂಯೋಜಿಸುವ ಪ್ರಯತ್ನದಲ್ಲಿದೆ. ಈ ಫೀಚರ್ ಬಳಸಿ ನೀವು ಸ್ಕ್ರೀನ್ಶಾಟ್ಗಳನ್ನು ಇತರರಿಗೆ ಕಳುಹಿಸುವ ಮೊದಲು ಅದನ್ನು ಪರಿಷ್ಕರಿಸಬಹುದಾಗಿದೆ.

By Tejaswini P G
|

ಸ್ಮಾರ್ಟ್ಫೋನ್ ನ ಬಹಳವಾಗಿ ಬಳಕೆಯಾಗುವ ಸಾಮಾನ್ಯ ಫೀಚರ್ಗಳ ಪೈಕಿ ಸ್ಕ್ರೀನ್ಶಾಟ್ ಕೂಡ ಒಂದು. ಯಾರಿಗಾದರೂ ತಿಳಿಸಲು ಬಯಸುವ ಅಮೂಲ್ಯ ಮಾಹಿತಿ ಇರಬಹುದು ಅಥವಾ ನಗಿಸುವ ಮೀಮ್ ಗಳಿರಬಹುದು, ಈ ಸಂದರ್ಭಗಳಲ್ಲಿ ಸ್ಕ್ರೀನ್ಶಾಟ್ ಗಳು ಉಪಯುಕ್ತ. ಆದರೆ ಸ್ಕ್ರೀನ್ಶಾಟ್ ಗೆ ಸಂಬಂಧಿಸಿದಂತೆ ಐಫೋನ್ ನಲ್ಲಿರುವ ಆಯ್ಕೆಯೊಂದು ಆಂಡ್ರಾಯ್ಡ್ ನಲ್ಲಿ ಲಭ್ಯವಿಲ್ಲ.

ಇದನ್ನು ಸರಿದೂಗಿಸುವ ಪ್ರಯತ್ನದಲ್ಲಿರುವ ಗೂಗಲ್ ಸ್ಕ್ರೀನ್ಶಾಟ್ಗಳನ್ನು ಎಡಿಟ್ ಮಾಡಬಲ್ಲ ಫೀಚರ್ ಒಂದನ್ನು ಆಂಡ್ರಾಯ್ಡ್ ನಲ್ಲಿ ಸಂಯೋಜಿಸುವ ಪ್ರಯತ್ನದಲ್ಲಿದೆ. ಈ ಫೀಚರ್ ಬಳಸಿ ನೀವು ಸ್ಕ್ರೀನ್ಶಾಟ್ಗಳನ್ನು ಇತರರಿಗೆ ಕಳುಹಿಸುವ ಮೊದಲು ಅದನ್ನು ಪರಿಷ್ಕರಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಪ್ಡೇಟ್ಗಳು ಸಧ್ಯಕ್ಕೆ ಲಭ್ಯವಿಲ್ಲವಾದರೂ ಈ ಫೀಚರ್ ನ ಬೀಟಾ ಆವೃತ್ತಿಯನ್ನು ಗೂಗಲ್ ಆಪ್ ನ 7.21 ಆವೃತ್ತಿಯಲ್ಲಿ ಕಾಣಬಹುದಾಗಿದೆ. ಗೂಗಲ್ ಈ ಫೀಚರ್ ಅನ್ನು ಶೀಘ್ರದಲ್ಲಿಯೇ ಬಿಡುಗಡೆಮಾಡಲಿದೆ ಎಂದು 9to5Google ವರದಿಮಾಡಿದೆ.

ಗೂಗಲ್ ನ 'ಎಡಿಟ್ ಸ್ಕ್ರೀನ್‌ಶಾಟ್' ಫೀಚರ್ ಬಳಸುವುದು ಹೇಗೆ?


ಉಚಿತ ಮತ್ತು ತೆರೆದ ಪ್ಲಾಟ್ಫಾರ್ಮ್ ಆದ ಆಂಡ್ರಾಯ್ಡ್ ತುಂಬಾ ಕಸ್ಟಮೈಸೇಬಲ್ ಆಗಿದ್ದು, ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಬದಲಾವಣೆಗಳನ್ನೊಳಗೊಂಡ ಸ್ಕಿನ್ ಗಳನ್ನು ಹೊಂದಿದೆ. ಈ ಸ್ಕಿನ್ ಗಳು ಈಗಾಗಲೇ ಸ್ಕ್ರೀನ್ಶಾಟ್ ಸೆರೆಹಿಡಿದ ಕೂಡಲೇ ಅದನ್ನು ಎಡಿಟ್ ಮಾಡುವ ಆಯ್ಕೆ ಹೊಂದಿದ್ದರೂ ಮೂಲ ಆಂಡ್ರಾಯ್ಡ್ ಗೆ ಈ ಫೀಚರ್ ಹೊಸದಾಗಿದೆ.

ಯಾವುದೇ ಹೇಳಿಕೆ ನೀಡುವ ಮೊದಲು ಗೂಗಲ್ ಬಹಳ ಗೌಪ್ಯವಾಗಿ ಕೆಲಸ ಮಾಡುತ್ತದೆ ಎಂದು ನಮಗೆಲ್ಲಾ ತಿಳಿದೇ ಇದೆ. ಆದರೆ 9to5Google ನ ವರದಿಗಳ ಅನುಸಾರ ಗೂಗಲ್ ಈ ಹೊಸ ಫೀಚರ್ ಗೆ ಸಂಬಂಧಿಸಿದಂತೆ ಬಹಳ ಸಮಯದಿಂದ ಕೆಲಸಮಾಡುತ್ತಿದ್ದು, ಇದರ ಟೆಸ್ಟಿಂಗ್ ಏಪ್ರಿಲ್ 2017ರಲ್ಲಿ ಪ್ರಾರಂಭವಾಗಿದೆ. ಈ ಫೀಚರ್ ಅನ್ನು ಜನರಿಗೆ ಬಿಡುಗಡೆ ಮಾಡುವ ಮೊದಲು ಗೂಗಲ್ ಅದರಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರುವ ಸಾಧ್ಯತೆಯಿದೆ. ಈ ಫೀಚರ್ ಹೇಗೆ ಕೆಲಸಮಾಡಲಿದೆಯೆಂದು ಕೆಳಗೆ ಸವಿಸ್ತಾರವಾಗಿ ನೀಡಿದ್ದೇವೆ.

ಈ ಅಪ್ಡೇಟ್ ಅನ್ನು ಇನ್ಸ್ಟಾಲ್ ಮಾಡಿದ ನಂತರ 'ಅಕೌಂಟ್ಸ್ ಆಂಡ್ ಪ್ರೈವೆಸಿ' ಯಲ್ಲಿ ಈ ಫೀಚರ್ ಅನ್ನು ಸೇರಿಸಲಾಗುತ್ತದೆ. ಇದನ್ನು ಕಾಣಲು 'ಸೆಟ್ಟಿಂಗ್ಸ್' ಗೆ ಹೋಗಿ 'ಅಕೌಂಟ್ಸ್ ಆಂಡ್ ಪ್ರೈವೆಸಿ' ಮೇಲೆ ಕ್ಲಿಕ್ ಮಾಡಿ. ನಂತರ ಕೆಳಗೆ ಸ್ಕ್ರೋಲ್ ಮಾಡಿದರೆ ಕೊನೆಯಲ್ಲಿ 'ಎಡಿಟ್ ಆಂಡ್ ಶೇರ್ ಸ್ಕ್ರೀನ್ಶಾಟ್ಸ್' ಅನ್ನು ಕಾಣಬಹುದು. ಇದೊಂದು ಟಾಗಲ್ ಬಟನ್ ಆಗಿದ್ದು ನೀವು ಈ ಫೀಚರ್ ಬಳಸುವಿರಾದರೆ ಇದನ್ನು ಆನ್ ಮಾಡಬೇಕು. ಅದರ ಮೇಲೆ ಟ್ಯಾಪ್ ಮಾಡುವ ಮೂಲಕ ಅದನ್ನು ಸಕ್ರಿಯಗೊಳಿಸಿ. ಈ ಬದಲಾವಣೆಗಳನ್ನು ಮಾಡಿದ ನಂತರ ಸ್ಕ್ರೀನ್ಶಾಟ್ ಒಂದನ್ನು ಸೆರೆಹಿಡಿಯಿರಿ. ಈಗ ನಿಮ್ಮ ಪರದೆಯ ಮೇಲೆ ಮೂಡುವ ಪ್ಯಾನಲ್ ನಲ್ಲಿ ಸ್ಕ್ರೀನ್ಶಾಟ್ ಅನ್ನು ಎಡಿಟ್, ಪ್ರಿವ್ಯೂ ಮತ್ತು ಇತರ ಆಪ್ ಗಳ ಮೂಲಕ ಅದನ್ನು ಶೇರ್ ಮಾಡುವ ಆಯ್ಕೆಗಳನ್ನು ನೀವು ಕಾಣಬಹುದು.

ಸ್ಕ್ರೀನ್ಶಾಟ್ ಅನ್ನು ಎಡಿಟ್ ಅಥವಾ ಪರಿಷ್ಕರಿಸಲು ನೀವು 'ಎಡಿಟ್' ಆಯ್ಕೆಯನ್ನು ಆಯ್ದುಕೊಳ್ಳಬೇಕು. ಆಗ ಪಿಕ್ಚರ್ ಎಡಿಟರ್ ಒಂದು ತೆರೆದುಕೊಳ್ಳುತ್ತದೆ. ಇದೊಂದು ಮೂಲಭೂತ ಎಡಿಟರ್ ಆಗಿದ್ದು, ಚಿತ್ರದ ಮೇಲೆ ಡೂಡಲ್ ಮಾಡಲು ಅಥವಾ ಅದರ ಗಾತ್ರವನ್ನು ಬದಲಿಸಲು ಬಳಸಬಹುದು. ನಿಮಗೆ ಬೇಕಾದ ಬದಲಾವಣೆಗಳನ್ನು ಮಾಡಿದ ನಂತರ ಟಿಕ್ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ಅದನ್ನು ಸೇವ್ ಮಾಡಬಹುದು. ನೀವು ಸೆರೆಹಿಡಿಯುವ ಮತ್ತು ಪರಿಷ್ಕರಿಸುವ ಸ್ಕ್ರೀನ್ಶಾಟ್ಗಳು ನಿಮ್ಮ ಫೋನ್ ನಲ್ಲಿ ಈಗಾಗಲೇ ಲಭ್ಯವಿರುವ ಸ್ಕ್ರೀನ್ಶಾಟ್ ಫೋಲ್ಡರ್ ನಲ್ಲಿ ಸಂಗ್ರಹವಾಗುತ್ತದೆ.

ಸ್ಕ್ರೀನ್ಶಾಟ್ ಅನ್ನು ಎಡಿಟ್ ಮಾಡಿ ಸೇವ್ ಮಾಡಿದ ನಂತರ ಆಪ್ ಶೇರ್ ಮೆನು ಅನ್ನು ನಿಮ್ಮ ಮುಂದಿರಿಸುತ್ತದೆ. ಈ ಮೆನು ಮೂಲಕ ನೀವು ಈ ಇಮೇಜ್ ಅನ್ನು ಯಾರಿಗೆ ಕಳುಹಿಸಬಯಸುತ್ತೀರೋ ಅವರನ್ನು ಆಯ್ಕೆ ಮಾಡಿ. ಅಲ್ಲದೆ ಗೂಗಲ್ ಆಪ್ ಅಥವಾ ಕ್ರೋಮ್ ಟ್ಯಾಬ್ ಮೂಲಕ ಇಮೇಜ್ ಅನ್ನು ಬೇರೆ ಆಪ್ಗಳಿಗೆ ಶೇರ್ ಮಾಡುವ ಆಯ್ಕೆಯನ್ನು ನಿಮಗೆ ನೀಡುತ್ತದೆ. ಗೂಗಲ್ ನ ಈ ಫೀಚರ್ ಸರ್ಚ್ ಫಲಿತಾಂಶ, ಫೀಡ್, ಕ್ರೋಮ್ ಟ್ಯಾಬ್ ಮೂಲಕ ಭೇಟಿ ಮಾಡುವ ಎಲ್ಲಾ ವೆಬ್ ಪೇಜ್ ಗಳು , ಹೀಗೆ ಎಲ್ಲಾ ಕಡೆ ಕಾರ್ಯನಿರ್ವಹಿಸುತ್ತದೆ.

Best Mobiles in India

English summary
How to use 'edit screenshot' feature of Google. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X