Subscribe to Gizbot

ವಾಟ್ಸ್‌ಆಪ್ ಪೇಮೆಂಟ್ ಸೌಲಭ್ಯ ಬಳಸುವುದು ಹೇಗೆ?

Posted By: Tejaswini P G

ಫೇಸ್ಬುಕ್ ನ ಸ್ವಾಧಿನಕ್ಕೊಳಗಾದ ನಂತರ ಇನ್ಸ್ಟೆಂಟ್ ಮೆಸೇಜಿಂಗ್ ಆಪ್ ಆದ ವಾಟ್ಸಾಪ್ ಬಹಳಷ್ಟು ಸುಧಾರಣೆಗಳನ್ನು ಕಂಡಿದೆ. ವಾಯ್ಸ್ ಕಾಲ್, ವೀಡಿಯೋ ಕಾಲ್, ಸ್ಟೋರೀಸ್ ಹೀಗೆ ಬಹಳಷ್ಟು ಹೊಸ ಸೌಲಭ್ಯಗಳು ವಾಟ್ಸಾಪ್ ನಲ್ಲಿ ಲಭ್ಯವಾಗಿದೆ. ಇತ್ತೀಚೆಗೆ ವಾಟ್ಸಾಪ್ ಹೊಸತಾದ ಡಿಜಿಟಲ್ ಪೇಯ್ಮೆಂಟ್ ಫೀಚರ್ ಅನ್ನು ನೀಡಿದ್ದು, ನಿಮ್ಮ ಕಾಂಟ್ಯಾಕ್ಟ್ ಗಳಿಗೆ ಫೋಟೋ ಅಥವಾ ವೀಡಿಯೋ ಕಳುಹಿಸುವಷ್ಟೇ ಸರಳವಾಗಿ ಹಣವನ್ನೂ ಆಪ್ ಮುಖೇನ ಪಾವತಿಸಬಹುದಾಗಿದೆ. ಈ ವಾಟ್ಸಾಪ್ ಪೇ ಸೌಲಭ್ಯ ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯವಿದ್ದು ಸಧ್ಯಕ್ಕೆ ಭಾರತದಲ್ಲಿ ಮಾತ್ರ ಈ ಫೀಚರ್ ಲಭ್ಯವಿದೆ.

ವಾಟ್ಸ್‌ಆಪ್ ಪೇಮೆಂಟ್ ಸೌಲಭ್ಯ ಬಳಸುವುದು ಹೇಗೆ?

ವಾಟ್ಸಾಪ್ ಪೇ ನಲ್ಲಿ ಹಣ ವರ್ಗಾವಣೆಯನ್ನು ಯುಪಿಐ ಮೂಲಕ ಮಾಡಲಾಗುತ್ತಿದ್ದು, ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯನ್ನು ಇದರೊಂದಿಗೆ ಲಿಂಕ ಮಾಡಬೇಕು ಮತ್ತು ಈ ವ್ಯವಹಾರವನ್ನು ನಡೆಸಲು ಪ್ರತ್ಯೇಕ ಯುಪಿಐ ಪಿನ್ ಹೊಂದಿರಬೇಕು. ಈ ಲೇಖನದಲ್ಲಿ ವಾಟ್ಸಾಪ್ ಪೇಯ್ಮೆಂಟ್ಸ್ ಮುಖೇನ ಹಣ ಪಾವತಿಸುವ ವಿಧಾನವನ್ನು ತಿಳಿಸಲಿದ್ದೇವೆ.

How to save WhatsApp Status other than taking screenshots!! Kannada
ವಾಟ್ಸಾಪ್ ಪೇಯ್ಮೆಂಟ್ಸ್ ಗೆ ಬ್ಯಾಂಕ್ ಖಾತೆ ಆಡ್ ಮಾಡುವುದು
ವಾಟ್ಸ್‌ಆಪ್ ಪೇಮೆಂಟ್ ಸೌಲಭ್ಯ ಬಳಸುವುದು ಹೇಗೆ?

ಹಂತ 1: ವಾಟ್ಸಾಪ್-> ಸೆಟ್ಟಿಂಗ್ಸ್ -> ಪೇಯ್ಮೆಂಟ್ಸ್ ತೆರೆಯಿರಿ

ಹಂತ 2: ಪೇಯ್ಮೆಂಟ್ ಪುಟದಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಆಡ್ ಮಾಡಿ ಅದರ ವಿವರಗಳನ್ನು ನಮೂದಿಸಿ

ಹಂತ 3: ಅದರ ನಿಯಮಗಳು ಮತ್ತು ಶರತ್ತುಗಳು ನಿಮಗೆ ಒಪ್ಪಿಗೆಯಾದಲ್ಲಿ , 'ಆಕ್ಸೆಪ್ಟ್ ಆಂಡ್ ಕಂಟಿನ್ಯೂ' ಮೇಲೆ ಕ್ಲಿಕ್ ಮಾಡಿ

ಹಂತ 4: 'ವೆರಿಫೈ ವಯಾ SMS’ ಮೇಲೆ ಕ್ಲಿಕ್ ಮಾಡಿ ಬ್ಯಾಂಕ್ ಖಾತೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿ.

ಹಂತ 5: ಈಗ ಯುಪಿಐ ಬೆಂಬಲಿಸುವ ಬ್ಯಾಂಕ್ ಗಳ ಪಟ್ಟಿಯನ್ನು ನಿಮ್ಮ ಮುಂದಿರಿಸಲಾಗುತ್ತದೆ. ಬ್ಯಾಂಕ್ ನ ಹೆಸರು ಮತ್ತು ನಿಮ್ಮ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆಗಳು- ಈ ಮಾದರಿಯಲ್ಲಿ ಪಟ್ಟಿ ಮಾಡಲಾಗುತ್ತದೆ.

ಹಂತ 6: ನೀವು ಒಂದೇ ಬ್ಯಾಂಕ್ ನಲ್ಲಿ ವಿಭಿನ್ನ ಖಾತೆಗಳನ್ನು ಹೊಂದಿದ್ದರೆ, ಅದೆಲ್ಲವನ್ನೂ ಪಟ್ಟಿಮಾಡಲಾಗುತ್ತದೆ. ಅವುಗಳ ಪೈಕಿ ನೀವು ವಾಟ್ಸಾಪ್ ನೊಂದಿಗೆ ಲಿಂಕ್ ಮಾಡಬಯಸುವ ಬ್ಯಾಂಕ್ ಖಾತೆಯನ್ನು ಆಯ್ದುಕೊಳ್ಳಿ.

ಹಂತ 7: ನೀವು ನಿಮಗೆ ಬೇಕಾದ ಬ್ಯಾಂಕ್ ಖಾತೆಯನ್ನು ಆಯ್ದ ನಂತರ ವಾಟ್ಸಾಪ್ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಪಡೆದುಕೊಳ್ಳುತ್ತದೆ ಮತ್ತು ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ತೋರಿಸುತ್ತದೆ. ಈ ಪ್ರಕ್ರಿಯೆ ಮುಗಿದ ನಂತರ , ನಿಮಗೆ ಅದು ಪೂರ್ತಿಗೊಂಡಿರುವುದಾಗಿ ಮೆಸೇಜ್ ದೊರಕುತ್ತದೆ.

ವಾಟ್ಸ್‌ಆಪ್ ಪೇಮೆಂಟ್ ಸೌಲಭ್ಯ ಬಳಸುವುದು ಹೇಗೆ?

ವಾಟ್ಸಾಪ್ ಪೇಯ್ಮೆಂಟ್ಸ್ ಮೂಲಕ ಹಣ ವರ್ಗಾಯಿಸುವುದು

ಹಂತ 1: ನೀವು ಹಣ ಕಳುಹಿಸ ಬಯಸುವ ವಾಟ್ಸಾಪ್ ಕಾಂಟ್ಯಾಕ್ಟ್ ನ ಚ್ಯಾಟ್ ವಿಂಡೋ ತೆರೆಯಿರಿ.

ಹಂತ 2: ಆಂಡ್ರಾಯ್ಡ್ ನಲ್ಲಾದರೆ 'ಅಟಾಚ್ (ಪಿನ್)' ಬಟನ್ ಮೇಲೆ ಕ್ಲಿಕ್ ಮಾಡಿ. ಐಫೋನ್ ನಲ್ಲಾದರೆ ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 3: ಈಗ ಹಣ ವರ್ಗಾಯಿಸಲು 'ಪೇಯ್ಮೆಂಟ್' ಮೇಲೆ ಕ್ಲಿಕ್ ಮಾಡಿ ನೀವು ಕಳುಹಿಸಬೇಕಾದ ಮೊತ್ತವನ್ನು ನಮೂದಿಸಿ. ಜೊತೆಗೆ ಈ ಪಾವತಿಗೆ ಸಂಬಂಧಿಸಿದಂತೆ ಸಂದೇಶವೊಂದನ್ನು ಕೂಡ ನಮೂದಿಸಬಹುದು.

ಹಂತ 4: ಈ ಪಾವತಿಯನ್ನು ಖಚಿತಪಡಿಸಲು ನೀವು ನಮೂದಿಸಿರುವ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಯುಪಿಐ ಪಿನ್ ನಮೂದಿಸಿ.

ಹಂತ 5: ಈ ಟ್ರ್ಯಾನ್ಸಾಕ್ಷನ್ ಮುಗಿದ ನಂತರ ಈ ಮೊತ್ತವನ್ನು ನಿಮ್ಮ ಚ್ಯಾಟ್ ಪುಟದಲ್ಲಿ ಮೆಸೇಜ್ ನಂತೆ ತೋರಿಸಲಾಗುವುದು.

English summary
he money transaction in Whatsapp Pay is done through UPI (Unified Payments Interface) where the user will have to link their bank account and have a separate UPI PIN to initiate the transaction.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot