ನಿಮ್ಮ ಪೋಸ್ಟ್‌ನಲ್ಲಿ ಈ ಎಮೋಜಿಗಳಿದ್ದರೆ ಫೇಸ್‌ಬುಕ್‌, ಇನ್‌ಸ್ಟಾ ಬ್ಲಾಕ್‌..!

By Gizbot Bureau
|

ಎಮೋಜಿಗಳನ್ನು ಯಾರು ಇಷ್ಟಪಡುವುದಿಲ್ಲ ಹೇಳಿ..? ಎಲ್ಲರೂ ಎಮೋಜಿಗಳನ್ನು ಮೆಸೇಜ್‌ನೊಂದಿಗೆ ಬಳಸುತ್ತೇವೆ. ನಮ್ಮ ಭಾವನೆಗಳನ್ನು ಮತ್ತು ಆಲೋಚನೆಗಳನ್ನು ವ್ಯಕ್ತಪಡಿಸಲು ಎಮೋಜಿ ಮೋಜಿನ ಮಾರ್ಗವಾಗಿದೆ. ಪ್ರತಿವರ್ಷ ಹೊಸ ಎಮೋಜಿಗಳನ್ನು ಯುನಿಕೋಡ್ ಕನ್ಸೋರ್ಟಿಯಂ ಬಿಡುಗಡೆ ಮಾಡುತ್ತದೆ. ಆದರೆ, ಕೆಲವು ಎಮೋಜಿಗಳು ಉತ್ತಮ ಉದ್ದೇಶಕ್ಕಾಗಿ ಬಳಸುತ್ತಿಲ್ಲ ಎಂಬುದು ಗೊತ್ತಾಗುತ್ತಿದ್ದು, ಅಶ್ಲೀಲ ಮೆಸೇಜ್‌ಗಳಿಗೆ ಬಳಕೆಯಾಗುತ್ತಿದೆ ಎಂಬುದು ವರದಿಯಾಗಿದೆ.

ಇನ್‌ಸ್ಟಾಗ್ರಾಂ

ಹೌದು, ವಯಸ್ಕ ವ್ಯವಹಾರ ವೆಬ್‌ಸೈಟ್‌ ಎಕ್ಸ್‌ಬಿಜ್ ವರದಿಯ ಪ್ರಕಾರ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಇತ್ತೀಚೆಗೆ ತಮ್ಮ ‘ಸಮುದಾಯ ಮಾನದಂಡಗಳನ್ನು' ನವೀಕರಿಸುವ ಮೂಲಕ ಹೊಸ ಮಾರ್ಗಸೂಚಿಗಳನ್ನು ಹೊಂದಿದೆ.

ಅಕೌಂಟ್‌ ಫ್ಲ್ಯಾಗ್‌

ಅಕೌಂಟ್‌ ಫ್ಲ್ಯಾಗ್‌

ಹೊಸ ಮಾರ್ಗಸೂಚಿಯ ಪ್ರಕಾರ ನಗ್ನ ಚಿತ್ರಗಳನ್ನು ಅಥವಾ ಯಾವುದೇ ಲೈಂಗಿಕ ಸಂಬಂಧಿತ ವಿಷಯಗಳನ್ನು ಉಲ್ಲೇಖಿಸಿ ಬಿಳಿಬದನೆ ಅಥವಾ ಪೀಚ್ ಎಮೋಜಿಯನ್ನು ಬಳಸುವುದರಿಂದ ಇನ್‌ಸ್ಟಾಗ್ರಾಂ ಖಾತೆಯನ್ನು ಫ್ಲ್ಯಾಗ್ ಅಥವಾ ತೆಗೆದುಹಾಕಬಹುದು ಎಂದು ಉಲ್ಲೇಖಿಸಲಾಗಿದೆ. ಫಾಕ್ಸ್‌ ಬ್ಯುಸಿನೆಸ್‌ ವರದಿಯ ಪ್ರಕಾರ, ಬಿಳಿಬದನೆ ಅಥವಾ ಪೀಚ್ ಎಮೋಜಿಯನ್ನು ಜೋಡಿಸುವುದು ಈಗ ಲೈಂಗಿಕ ವಿಜ್ಞಾಪನೆಯಾಗಿದೆ. ಹೊಸ ನಿಯಮಗಳಂತೆ ಅಶ್ಲೀಲ ವಿಷಯವನ್ನು ನೀಡುವ ಪುಟಗಳಿಗೆ ಲಿಂಕ್‌ ಮಾಡುವ ಪೋಸ್ಟ್‌ಗಳಿದ್ದರೆ ಬಳಕೆದಾರರ ಖಾತೆಗಳನ್ನು ಫ್ಲ್ಯಾಗ್ ಮಾಡಲಾಗುತ್ತದೆ.

ಹಳೇ ನಿಯಮಗಳು

ಹಳೇ ನಿಯಮಗಳು

ಫೇಸ್‌ಬುಕ್ ಸಮುದಾಯ ಗುಣಮಟ್ಟವನ್ನು ಈ ಜುಲೈನಲ್ಲಿ ನವೀಕರಿಸಿದ್ದು, ಆಗಸ್ಟ್‌ನಲ್ಲಿ ತಿದ್ದುಪಡಿಯೊಂದಿಗೆ ಜಾರಿಗೆ ತಂದಿದೆ ಎಂದು ವರದಿ ಹೇಳುತ್ತದೆ. ಈ ಕುರಿತಂತೆ ಫೇಸ್‌ಬುಕ್ ವಕ್ತಾರರು, ನೀತಿ ಅಥವಾ ಅದನ್ನು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಏನೂ ಬದಲಾಗಿಲ್ಲ. ನಮ್ಮ ಸಮುದಾಯಕ್ಕೆ ಸ್ಪಷ್ಟವಾಗುವಂತೆ ಭಾಷೆಯನ್ನು ಮಾತ್ರ ನವೀಕರಿಸಿದ್ದೇವೆ ಎಂದಿದ್ದಾರೆ.

ಇನ್ಸ್‌ಟಾಗ್ರಾಂನಲ್ಲೂ ಬ್ಲಾಕ್‌

ಇನ್ಸ್‌ಟಾಗ್ರಾಂನಲ್ಲೂ ಬ್ಲಾಕ್‌

ಫೇಸ್‌ಬುಕ್ ಮತ್ತು ಇನ್ಸ್‌ಟಾಗ್ರಾಂನಿಂದ ವಿಷಯವನ್ನು ಅಳಿಸಬೇಕೆಂದರೆ, ಆ ಪೋಸ್ಟ್‌ ಲೈಂಗಿಕ ಎಮೋಜಿ, ನಗ್ನ ಚಿತ್ರಣ, ಲೈಂಗಿಕ ಸಂಭಾಷಣೆಗಳು ಸೂಚ್ಯವಾಗಿ ಅಥವಾ ಪರೋಕ್ಷವಾಗಿ ಕಾಣಬೇಕು. ಕೇವಲ ಎಮೋಜಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಆಗಲ್ಲ ಎಂದು ಇನ್ಸ್‌ಟಾಗ್ರಾಂ ವಕ್ತಾರರು ಹೇಳಿದ್ದಾರೆ.

ಆಪಲ್‌ನಲ್ಲಿ ಹೊಸ ಎಮೋಜಿ

ಆಪಲ್‌ನಲ್ಲಿ ಹೊಸ ಎಮೋಜಿ

ಆಪಲ್‌ನ ಇತ್ತೀಚಿನ ಐಒಎಸ್ 13.2 ಅಪ್‌ಡೇಟ್‌ನಲ್ಲಿ 398 ಹೊಸ ಎಮೋಜಿಗಳನ್ನು ನೀಡಿದೆ. ಇವುಗಳಲ್ಲಿ ಕೆಲವು ಹೊಸ ಎಮೋಜಿಗಳಾಗಿದ್ದರೆ, ಇತರ ಎಮೋಜಿಗಳು ಈಗಾಗಲೇ ಅಸ್ತಿತ್ವದಲ್ಲಿರುವವುಗಳಾಗಿದ್ದು, ನವೀಕರಣಗೊಂಡಿವೆ. ವಿಕಲಾಂಗರು, ಲಿಂಗ-ತಟಸ್ಥ ಎಮೋಜಿಗಳು ಮತ್ತು ಹೆಚ್ಚಿನದನ್ನು ಪ್ರತಿನಿಧಿಸುವ ಎಮೋಜಿಗಳನ್ನು ಈ ಪಟ್ಟಿ ಒಳಗೊಂಡಿದೆ. ಎಮೋಜಿಪೀಡಿಯಾ ಹೇಳಿಕೆಯಂತೆ ಈ ವರ್ಷದ ಎಮೋಜಿಗಳನ್ನು ವಿಶ್ವ ಎಮೋಜಿ ದಿನದಲ್ಲಿ ಪ್ರದರ್ಶಿಸಲಾಗಿದ್ದು, ಐಒಎಸ್ ಬೀಟಾ ಆವೃತ್ತಿಗಳಲ್ಲಿ ಲಭ್ಯವಿದೆ.

ಆಪಲ್‌ ಮೊದಲು

ಆಪಲ್‌ ಮೊದಲು

ಎಮೋಜಿಪೀಡಿಯಾದ ಬ್ಲಾಗ್ ಪೋಸ್ಟ್ ಪ್ರಕಾರ, ಹೊಸ ಎಮೋಜಿ 12.1 ರ ಶಿಫಾರಸುಗಳನ್ನು ಘೋಷಿಸಿದ ಒಂದು ತಿಂಗಳೊಳಗೆ ಕಾರ್ಯಗತಗೊಳಿಸಿದ ಮೊದಲ ಕಂಪನಿಯಾಗಿ ಆಪಲ್ ಗುರುತಿಸಿಕೊಂಡಿದೆ.

Best Mobiles in India

Read more about:
English summary
Instagram And Facebook Blames These Emojis For Porn Problem

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X