ಇನ್‌ಸ್ಟಾಗ್ರಾಂ ಸ್ಟೋರಿಗೆ ಹೊಸ ಫೀಚರ್‌..! ಬಂದಿದೆ ಮ್ಯೂಸಿಕ್‌ ಸ್ಟಿಕ್ಕರ್‌..!

By Gizbot Bureau
|

ಜನಪ್ರಿಯ ಫೋಟೋ ಶೇರಿಂಗ್‌ ಆಪ್‌ ಇನ್‌ಸ್ಟಾಗ್ರಾಂ ಭಾರತದಲ್ಲಿ ಹೊಸ ಫೀಚರ್‌ ಒಂದನ್ನು ಗ್ರಾಹಕರ ಕೈಗಿಟ್ಟಿದೆ. ಹೌದು, ಇನ್‌ಸ್ಟಾಗ್ರಾಂ ಸ್ಟೋರಿಗಳಿಗಾಗಿ ಮ್ಯೂಸಿಕ್ ಸ್ಟಿಕರ್ ಬೆಂಬಲವನ್ನು ಭಾರತೀಯ ಗ್ರಾಹಕರಿಗೆ ಕಂಪನಿ ನೀಡಿದೆ. ಆದರೆ, ಈ ಫೀಚರ್‌ನ್ನು ಜೂನ್ 2018ರಲ್ಲಿಯೇ 51 ದೇಶಗಳಲ್ಲಿ ಈ ಮೊದಲೇ ಪರಿಚಯಿಸಿತ್ತು. ಆ ಪಟ್ಟಿಯಲ್ಲಿ ಭಾರತ ಇದ್ದಿಲ್ಲ. ಈಗ ಕಂಪನಿ ಯಾವುದೇ ಅಧಿಕೃತ ಪ್ರಕಟಣೆಯಿಲ್ಲದೆ ಹೊಸ ಫೀಚರ್‌ನ್ನು ಸದ್ದಿಲ್ಲದೇ ಹೊರತಂದಿದ್ದು, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ ಎರಡರಲ್ಲೂ ಕಾರ್ಯನಿರ್ವಹಿಸಲಿದೆ.

ಮ್ಯೂಸಿಕ್ ಟೂ ಸ್ಟೋರಿ

ಮ್ಯೂಸಿಕ್ ಟೂ ಸ್ಟೋರಿ

ಈ ಫೀಚರ್‌ ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಅವರು ಪೋಸ್ಟ್ ಮಾಡುವ ಸ್ಟೋರಿಗಳ ಭಾಗವಾಗಿ ಸಂಗೀತ ಅಥವಾ ಹಾಡುಗಳನ್ನು ಸೇರಿಸಲು ಅನುಮತಿಸುತ್ತದೆ. ಹೋಮ್ ಸ್ಕ್ರೀನ್‌ನ ಕೆಳಗೆ ಮ್ಯೂಸಿಕ್‌ ಆಯ್ಕೆಯನ್ನು ಬಳಕೆದಾರರು ನೋಡಬಹುದು. ಈ ರೀತಿಯಾಗಿ ಬಳಕೆದಾರರು ಮ್ಯೂಸಿಕ್‌ ಆಯ್ಕೆಯನ್ನು ಆರಿಸಿದ ನಂತರ ಸ್ಟೋರಿಗಳನ್ನು ಸೃಷ್ಟಿಸಬಹುದು. ಮ್ಯೂಸಿಕ್‌ ಸ್ಟಿಕ್ಕರ್ ಮೂಲಕ ಬಳಕೆದಾರರು ಸ್ಟೋರಿ ರಚಿಸಿದ ನಂತರ ಸಂಗೀತ ಸೇರಿಸುವ ಪರ್ಯಾಯ ಆಯ್ಕೆಯು ಇದೆ.

ಮೂರು ವಿಧಗಳು

ಮೂರು ವಿಧಗಳು

ನೀವು ಮ್ಯೂಸಿಕ್‌ ಟ್ಯಾಬ್‌ ಕ್ಲಿಕ್‌ ಮಾಡಿದ ನಂತರ ಜನಪ್ರಿಯ, ಮೂಡ್‌ ಮತ್ತು ಪ್ರಕಾರಗಳಂತಹ ಮೂರು ಕಾಲಮ್‌ಗಳು ನಿಮಗೆ ಕಾಣಸಿಗುತ್ತವೆ. ಮೂಡ್‌ ವಿಭಾಗದಲ್ಲಿ ಪಾರ್ಟಿ ಹಿಟ್ಸ್, ವಿನೋದ, ಸ್ಪೂರ್ತಿದಾಯಕ ಮತ್ತಿತರ ಹತ್ತು ವಿಭಿನ್ನ ಆಯ್ಕೆಗಳು ಇವೆ. ಇನ್ನು, ಜಾನರ್‌ಗಳಡಿಯಲ್ಲಿ ರಾಕ್, ಪಾಪ್ ಮತ್ತು ಪ್ರಾದೇಶಿಕ ಭಾಷಾ ಸಂಗೀತಗಳನ್ನು ಕಾಣಬಹುದು.

ಮ್ಯೂಸಿಕ್‌ ಲಿರಿಕ್ಸ್‌

ನೀವು ಹಾಡನ್ನು ಆಯ್ಕೆ ಮಾಡಿದ ನಂತರ, ಫಿಲ್ಟರ್‌ಗಳನ್ನು ಸೇರಿಸಬಹುದು ಮತ್ತು ಹಾಡಿಗೆ ಸಾಹಿತ್ಯವನ್ನು ಸಕ್ರಿಯಗೊಳಿಸಬಹುದು. ಆದರೆ, ಸದ್ಯಕ್ಕೆ ಎಲ್ಲಾ ಹಾಡುಗಳಿಗೆ ಸಾಹಿತ್ಯ ಲಭ್ಯವಿಲ್ಲ. ಪಲ್ಸ್‌, ಗ್ಲಿಚ್, ವಿಸಿಆರ್, ವಿಂಟೇಜ್ ಮತ್ತು ಗ್ಲೋ ಸಂಗೀತದೊಂದಿಗೆ ಸ್ಟೋರಿಗಳನ್ನು ರಚಿಸುವ ಮೊದಲು ಫಿಲ್ಟರ್ ಸೇರಿಸಬಹುದು. ಸ್ಟೋರಿ ರಚಿಸಿದ ನಂತರ, ನಿಮ್ಮ ಸ್ಟೋರಿಗೆ ಯಾವ ಹಾಡು ಚಂದವಾಗುತ್ತಾ ಅದನ್ನು ಸೇರಿಸಬಹುದು. ಈ ವರ್ಷದ ಜುಲೈನಲ್ಲಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಲಿರಿಕ್ಸ್‌ಗೆ ಬೆಂಬಲ ಸಿಕ್ಕಿದೆ. ಮ್ಯೂಸಿಕ್ ಸ್ಟಿಕ್ಕರ್‌ನೊಂದಿಗೆ ಬಳಕೆದಾರರು ಸೇರಿಸುವ ಸೌಂಡ್‌ಟ್ರಾಕ್‌ಗೆ ಲಿರಿಕ್ಸ್‌ನ್ನು ಸಿಂಕ್ ಮಾಡಲಾಗುತ್ತದೆ.

ದೊಡ್ಡ ಅಭಿವ್ಯಕ್ತಿ ಮಾಧ್ಯಮ

ದೊಡ್ಡ ಅಭಿವ್ಯಕ್ತಿ ಮಾಧ್ಯಮ

ಇನ್‌ಸ್ಟಾಗ್ರಾಮ್‌ನಲ್ಲಿ ಸಂಗೀತವು ಅಭಿವ್ಯಕ್ತಿಯ ಒಂದು ದೊಡ್ಡ ಭಾಗವಾಗುತ್ತದೆ. ಸ್ಟೋರಿಗಳಿಗೆ ಸಂಗೀತ ಸೇರಿಸುವುದು, ಕಲಾವಿದರೊಂದಿಗೆ ಸಂಪರ್ಕ ಸಾಧಿಸುವುದು, ಹಾಡಿನ ರೆಕಾರ್ಡ್‌‌ಗಳನ್ನು ಹಿಂದಕ್ಕೆ, ಮುಂದಕ್ಕೆ ಕಳುಹಿಸುವುದು ಸೇರಿ ಅನೇಕ ಮಾರ್ಗಗಳು ಇನ್‌ಸ್ಟಾಗ್ರಾಂನಲ್ಲಿವೆ. ಈಗ, ನಾವು ನಮ್ಮ ಸಂಗೀತ ವೈಶಿಷ್ಟ್ಯಗಳನ್ನು ನಿರ್ಮಿಸುತ್ತಿದ್ದೇವೆ ಮತ್ತು ನಿಮ್ಮ ಸ್ಟೋರಿಗೆ ಹಾಡನ್ನು ಸೇರಿಸಿದಾಗ ಸಾಹಿತ್ಯವನ್ನು ಸೇರಿಸುವ ಸಾಮರ್ಥ್ಯವನ್ನು ಪರಿಚಯಿಸುತ್ತಿದ್ದೇವೆ ಎಂದು ಇನ್‌ಸ್ಟಾಗ್ರಾಂನ ವಕ್ತಾರ ಹೇಳಿದ್ದಾರೆ.

Best Mobiles in India

English summary
Instagram Music Now Available In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X