ಈ ಆಪ್ ಇದ್ದರೇ ಸಾಕು ಬೆರಳತುದಿಯಲ್ಲೇ ರೈಲ್ವೆ, ವಿಮಾನ ಟೀಕೆಟ್ ಬುಕಿಂಗ್...!!!!

ದೇಶದ ನರನಾಡಿಯಂತಿರುವ ರೈಲ್ವೆ ಟೀಕೆಟ್ ಬುಕಿಂಗ್ ಸರಳೀಕೃತಗೊಳಿಸುವ ಸಲುವಾಗಿ ಆಪ್ ಬಿಡುಗಡೆ ಮಾಡಿದೆ.

By Precilla Dias
|

ಸದ್ಯ ಭಾರತದಲ್ಲಿ ಡೇಟ ಕ್ರಾಂತಿಯೂ ನಡೆಯುತ್ತಿದ್ದು, ಇಂಟರ್ನೆಟ್ ಎನ್ನುವುದು ಜನ ಸಾಮಾನ್ಯರ ಅಗತ್ಯತೆಗಳಲ್ಲಿ ಒಂದಾಗಿದೆ. ಬೆಳಗ್ಗೆದ್ದು ನ್ಯೂಸ್ ಓದುವುದರಿಂದ ಹಿಡಿದು ರಾತ್ರಿ ಮನೆಗೆ ಬರಲು ಕ್ಯಾಬ್ ಸೇವೆಯನ್ನು ಪಡೆಯುವವರೆಗೂ ಇಂಟರ್ನೆಟ್ ಬೇಕೆ ಬೇಕು ಎನ್ನುವಂತಾಗಿದೆ. ಇದೇ ಮಾದರಿಯಲ್ಲಿ ಕೇಂದ್ರ ಸರಕಾರವೂ ಸಹ ಇಂಟರ್ನೆಟ್ ಸಹಾಯದಿಂದ ಸೇವೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ.

ಈ ಆಪ್ ಇದ್ದರೇ ಸಾಕು ಬೆರಳತುದಿಯಲ್ಲೇ ರೈಲ್ವೆ, ವಿಮಾನ ಟೀಕೆಟ್ ಬುಕಿಂಗ್...!!!!

ಇದೇ ಮಾದರಿಯಲ್ಲಿ ದೇಶದ ನರನಾಡಿಯಂತಿರುವ ರೈಲ್ವೆ ಟೀಕೆಟ್ ಬುಕಿಂಗ್ ಸರಳೀಕೃತಗೊಳಿಸುವ ಸಲುವಾಗಿ ಆಪ್ ಬಿಡುಗಡೆ ಮಾಡಿದ್ದು, ಬೆರಳತುದಿಯಲ್ಲಿ ಟೀಕೆಟ್ ಬುಕ್ ಮಾಡುವುದು, ಕ್ಯಾನ್ಸಲ್ ಮಾಡುವುದು ಸ್ಟೇಟಸ್ ಚೆಕ್ ಮಾಡುವ ಅವಕಾಶವನ್ನು ಸ್ಮಾರ್ಟ್ ಫೋನ್ ಗಳಿಗೆ ನೀಡಿದೆ.

ಸದ್ಯ IRCTC ಟೀಕೆಟ್ ಬುಕಿಂಗ್ ಆಪ್ ಆಂಡ್ರಾಯ್ಡ್, ಐಓಎಸ್ ಮತ್ತು ವಿಂಡೋಸ್ ಫೋನ್ ಗಳಿಗೆ ಸಪೋರ್ಟ್ ಮಾಡಲಿದೆ. ಇದರಲ್ಲಿ ಹಲವಾರು ಆಯ್ಕೆಗಳನ್ನು ನೀಡಲಾಗಿದ್ದು, ಹೊಸ ಆಕೌಂಟ್ ಕ್ರಿಯೇಟ್ ಮಾಡುವುದು, ಸೆಕ್ಯೂರಿಟಿ ಫೀಚರ್, ಮಹಿಳೆಯರಿಗೆ ಖೋಟದಡಿಯಲ್ಲಿ ಟೀಕೆಟ್ ಬುಕ್ ಮಾಡುವುದು, ತತ್ಕಾಲ್, ಪ್ರೀಮಿಯಮ್ ತತ್ಕಾಲ್ ಕೋಟಾ, IRCTC ಇ- ವ್ಯಾಲಟ್, ಮೊಬೈಲ್ ಆಪ್ ಟೀಕೆಟ್ ಬುಕಿಂಗ್ ಮಾಡುವುದು ಸೇರಿದಂತೆ ಹಲವು ಅವಕಾಶವನ್ನು ಮಾಡಿಕೊಡಲಾಗಿದೆ.

ಈ ಆಪ್ ಮೂರು ವರ್ಷದ ಹಿಂದೆ ಲಾಂಚ್ ಆಗಿದ್ದು, ಕಳೆದ ಕೆಲವು ದಿನಗಳ ಹಿಂದೆ ಆಪ್ ಡೇಟ್ ಆಗಿದೆ. 4.2 ರೇಟಿಂಗ್ ಪಡೆದುಕೊಂಡಿದ್ದು, ಬೇರೆ ಟ್ರಾವಲ್ ಆಪ್ ಗಳಿಗಿಂತ ಹೆಚ್ಚಿನ ರೇಟಿಂಗ್ ಪಡೆದಿದೆ.

ಉತ್ತಮ ವಿನ್ಯಾಸ:

ಉತ್ತಮ ವಿನ್ಯಾಸ:

ಯೂಸರ್ ಇಂಟರ್ ಫೆಸ್ ಉತ್ತಮವಾಗಿದ್ದು, ಡಿಸೈಸ್ ಸಹ ಸುಂದರವಾಗಿದೆ. ಈ ಆಪ್ ನಲ್ಲಿ ಸುಲಭವಾಗಿ ಟೀಕೆಟ್ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ಯಾರ ಸಹಾಯವನ್ನು ಪಡೆಯುವ ಅವಶ್ಯಕತೆ ಇಲ್ಲ. ಅಲ್ಲದೇ ಪೇಮೆಂಟ್ ಮಾಡುವುದು ಸಹ ಸಲುಭವಾಗಿದೆ.

ಒಂದೇ ಆಪ್ ನಲ್ಲಿ ಹಲವು ಆಯ್ಕೆ:

ಒಂದೇ ಆಪ್ ನಲ್ಲಿ ಹಲವು ಆಯ್ಕೆ:

ಈ ಒಂದೇ ಆಪ್ ನಲ್ಲಿ ಗ್ರಾಹಕರಿಗೆ ಹಲವು ಆಯ್ಕೆಗಳು ದೊರೆಯಲಿದ್ದು, ಹಿಂದೆ ಬುಕ್ ಮಾಡಿದ ಟೀಕೆಟ್ ವಿವರ, ಸದ್ಯದ ಸ್ಟೇಟಸ್ ಸೇರಿದಂತೆ ಪೇಮೆಂಟ್ ವಿವರಗಳು ದೊರೆಯಲಿದ್ದು, ಅಲ್ಲದೇ ಬೇರೆ ಬೇರೆ ಆಕೌಂಟ್ ನಲ್ಲಿ ಟೀಕೆಟ್ ಬುಕ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಅಲ್ಲದೇ ಈ ಆಪ್ ನಲ್ಲಿ ಮಿಲ್ ಆರ್ಡರ್ ಮಾಡಬಹುದಾಗಿದ್ದು, ವಿಮಾನದ ಟೀಕೆಟ್ ಸಹ ಬುಕ್ ಮಾಡಬಹುದಾಗಿದೆ.

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮೊಬೈಲ್ ಗಳ ಸಂಪೂರ್ಣ ವಿವರ..!!ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮೊಬೈಲ್ ಗಳ ಸಂಪೂರ್ಣ ವಿವರ..!!

ಟೀಕೆಟ್ ಶೇರ್ ಮಾಡಬಹುದು:

ಟೀಕೆಟ್ ಶೇರ್ ಮಾಡಬಹುದು:

ನೀವು ಒಮ್ಮೆ ಟೀಕೆಟ್ ಬುಕ್ ಮಾಡಿದ ಮೇಲೆ, ಹಣವನ್ನು ಪಾವತಿ ಮಾಡಿದ ನಂತರ ಟೀಕೆಟ್ ಅನ್ನು ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಟೀಕೆಟ್ ಪ್ರಿಂಟ್ ಪಡೆಯಬಹುದು. ಅಲ್ಲದೇ ಇ ಟೀಕೆಟ್ ಸಹ ಪಡೆಯಬಹುದು.

Best Mobiles in India

Read more about:
English summary
IRCTC Rail Connect is one such app which helps you book the ticket, cancel it, and view the ticket status at your fingertips.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X