Subscribe to Gizbot

ಇದು ಫೇಸ್‌ಬುಕ್ ಅಲ್ಲ, ಕಾಶ್ಮೀರಕ್ಕಾಗಿ ಬಂದಿದೆ ಕಾಶ್ ಬುಕ್..!!! ಹೊಸ ಸಾಮಾಜಿಕ ಜಾಲತಾಣ...!!

Written By:

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇಂದು ದೇಶವಿದೇಶದಲ್ಲಿಯೂ ತನ್ನ ಬಾಹುಗಳನ್ನು ಚಾಚಿಕೊಂಡಿದೆ. ಮಾಹಿತಿಗಳ ವಿನಿಮಯಕ್ಕೆ ಸಂಪರ್ಕ ಸಾಧನದಂತೆ ವಸ್ತುಗಳನ್ನು ಮಾರಾಟ ಮಾಡಲು, ಜಾಹೀರಾತು ನೀಡಲು ಹೀಗೇ ಅನೇಕ ಮಾದರಿಯಲ್ಲಿ ಫೇಸ್‌ಬುಕ್ ಬಳಕೆಯಾಗುತ್ತಿದೆ, ಇದೇ ಮಾದರಿಯಲ್ಲಿ ಕಾಶ್ಮೀರದ ಯುವಕನೋರ್ವ ಕಾಶ್ಮೀರಕ್ಕಾಗಿಯೇ ಕಾಶ್ ಬುಕ್ ಎಂಬ ಸಾಮಾಜಿಕ ಜಾಲತಾಣವನ್ನು ಅಭಿವೃದ್ಧಿ ಪಡಿಸಿದ್ದಾನೆ.

ಇದು ಫೇಸ್‌ಬುಕ್ ಅಲ್ಲ, ಕಾಶ್ಮೀರಕ್ಕಾಗಿ ಬಂದಿದೆ ಕಾಶ್ ಬುಕ್..!!!

ಜಮ್ಮು ಮತ್ತು ಕಾಶ್ಮೀರ ರಾಜ್ಯದ 16 ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಫೇಸ್‌ಬುಕ್‌ನಂತೆಯೇ ಇರುವ ಹೊಸ ಸಾಮಾಜಿಕ ಜಾಲತಾಣ ಅಭಿವೃದ್ಧಿಪಡಿಸುವ ಮೂಲಕ ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ. ಜೆಯಾನ್ ಶಾಫಿಕ್ ಎಂಬಾತನೇ ಹೊಸ ಜಾಲತಾಣದ ಕಾಶ್ ಬುಕ್ ವಿನ್ಯಾಸಕ ಮತ್ತು ಮಾಲೀಕ.

ಇದು ಫೇಸ್‌ಬುಕ್ ಅಲ್ಲ, ಕಾಶ್ಮೀರಕ್ಕಾಗಿ ಬಂದಿದೆ ಕಾಶ್ ಬುಕ್..!!!

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಸಾಮಾಜಿಕ ಜಾಲತಾಣಗಳದ ಫೇಸ್‌ಬುಕ್, ಟ್ವಿಟರ್, ವಾಟ್ಸ್ ಆಪ್ ಕಾರಣ ಎನ್ನಲಾಗಿದ್ದು, ಇವುಗಳ ಮೂಲಕವೇ ಹಿಂಸೆಗೆ ಪ್ರಯೋದನೆ ದೊರೆಯುತ್ತಿದೆ ಎಂಬ ಕಾರಣಕ್ಕೆ 22 ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಇತ್ತೀಚೆಗೆ ನಿಷೇಧಿಸಿದೆ.

ಹೀಗಾಗಿ ಅಲ್ಲಿನ ಜನರಿಗಾಗಿಯೇ ಹೊಸ ಜಾಲತಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಕಲಿಕೆಯ ವಿದ್ಯಾರ್ಥಿಯೊಬ್ಬಕಡಿಮೆ ಸಮಯದ ಅವಧಿಯಲ್ಲಿ ಕಾಶ್‌ಬುಕ್ ಅಭಿವೃದ್ಧಿಪಡಿಸಿದ್ದು, ಈಗಾಗಲೇ ಈ ಸಾಮಾಜಿಕ ಜಾಲತಾಣದ ಬಳಕೆಯೂ ಆರಂಭವಾಗಿದೆ.

ಇದು ಫೇಸ್‌ಬುಕ್ ಅಲ್ಲ, ಕಾಶ್ಮೀರಕ್ಕಾಗಿ ಬಂದಿದೆ ಕಾಶ್ ಬುಕ್..!!!

ಇದು ಫೇಸ್‌ಬುಕ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಸ್ನೇಹಿತರನ್ನು ಸೇರಿಸುವುದು, ಸಂದೇಶಗಳನ್ನು ಕಳುಹಿಸುವುದು ಮತ್ತಿತರ ಅಂಶಗಳು ಕಾಶ್‌ಬುಕ್‌ನಲ್ಲಿ ಅಡಕವಾಗಿದೆ. ಫೇಸ್‌ಬುಕ್‌ನಲ್ಲಿರುವ ಖರೀದಿ ಮತ್ತು ಮಾರಾಟ ಇಲ್ಲಿಯೂ ಇದೆ. ಒಟ್ಟಿನಲ್ಲಿ ಈ ಹೊಸ ಸಾಮಾಜಿಕ ಜಾಲತಾಣ ಕಾಶ್ಮೀರದಲ್ಲಿ ಸಂಪರ್ಕ ಸೇತುವೆಯಾಗಿದೆ.

Read more about:
English summary
Meet the 16-year-old Zeyan Shafiq who created KashBook, Kashmir's own version of Facebook, and launched mobile app for it too. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot