2017ರ ಮೊಬೈಲ್ ಆ್ಯಪ್ ಲೋಕದಲ್ಲೊಂದು ಸುತ್ತು.

ಈ ಆ್ಯಪ್ ಗಳ ಬೆಳವಣಿಗೆಯನ್ನು ಈ ವರುಷ ನೋಡಲೇಬೇಕು.

|

ಡಿಜಿಟಲ್ ಯುಗದಲ್ಲಿ ಮೊಬೈಲ್ ತಂತ್ರಾಂಶಗಳು ನಮ್ಮ ಜೀವನದ ಭಾಗವೇ ಆಗಿಹೋಗಿದೆ ಎಂದರೆ ತಪ್ಪಾಗಲಾರದು. ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಜನರು ಮೊಬೈಲ್ ಆ್ಯಪ್ ಗಳ ಮೇಲಿನ ಅವಲಂಬನೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ, ಇಡೀ ಪ್ರಪಂಚವೇ ಮೊಬೈಲ್ ಆ್ಯಪ್ ಗಳ ಕಡೆಗೆ ಗಮನ ಹರಿಸಿದೆ.

2017ರ ಮೊಬೈಲ್ ಆ್ಯಪ್ ಲೋಕದಲ್ಲೊಂದು ಸುತ್ತು.

ಕಳೆದ ಕೆಲವು ವರುಷಗಳಿಂದ ಮೊಬೈಲ್ ಆ್ಯಪ್ ಗಳ ಸಂಖೈಯಲ್ಲಿ ಕಂಡು ಕಾಣದಷ್ಟು ಏರಿಕೆಯಾಗಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ ನಲ್ಲಿ ಪ್ರತಿ ವರ್ಷ ನೂರಾರು ಸಾವಿರಾರು ಸಂಖೈಯ ಆ್ಯಪ್ ಗಳು ಸೇರಿಕೊಳ್ಳುತ್ತಿವೆ. ಭವಿಷ್ಯದಲ್ಲೂ ಈ ಸಂಖೈ ಕಡಿಮೆಯಾಗುವ ಯಾವ ಸೂಚನೆಗಳೂ ಸದ್ಯಕ್ಕಿಲ್ಲ. ವರುಷದಿಂದ ವರುಷಕ್ಕೆ ಆ್ಯಪ್ ಮಾರುಕಟ್ಟೆ ಬೆಳೆಯುವ ಲಕ್ಷಣವೇ ಕಾಣುತ್ತಿದೆ.

ಓದಿರಿ: ಸಂಗಾತಿ ಹುಡುಕಲು ಇರುವ 4 ಬೆಸ್ಟ್‌ ಆಪ್‌ಗಳು!..ಈಗಲೇ ಫ್ರೊಫೈಲ್ ಕ್ರಿಯೇಟ್ ಮಾಡಿ!!

2016ರಲ್ಲಿ ಗ್ರಾಸರಿ ಆ್ಯಪ್, ರೈಡ್ ಶೇರಿಂಗ್, ಕ್ಲೌಡ್ ಬೇಸ್ಡ್ ಆ್ಯಪ್ ಗಳು ನೂರಾರು ಸಂಖೈಯಲ್ಲಿ ಬಿಡುಗಡೆಗೊಂಡವು. ಕಳೆದ ವರ್ಷ ಸ್ಮಾರ್ಟ್ ಫೋನ್ ಆ್ಯಪ್ ಗಳ ಜೊತೆಗೆ, ವಾಚ್ ಆ್ಯಪ್ ಗಳು, ಸ್ಮಾರ್ಟ್ ಕಾರುಗಳು, ಐ.ಒ.ಟಿ ಸಾಧನಗಳೂ ಮಾರುಕಟ್ಟೆಗೆ ಬಂದವು.

2017ರಲ್ಲಿ ಕಸ್ಟಮ್ ಮೊಬೈಲ್ ಆ್ಯಪ್ ಗಳು ಹೆಚ್ಚಿನ ಸಂಖೈಯಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಗಳಿವೆ. ಮೊಬೈಲ್ ಆ್ಯಪ್ ಗಳ ಲೋಕದಲ್ಲೊಮ್ಮೆ ಇಣುಕಿ ನೋಡೋಣ ಬನ್ನಿ.

ಆ್ಯಪ್ ಡೆವಲಪರ್ ಗಳ ಹೊಸ ಹಾದಿ ಸ್ವಿಫ್ಟ್.

ಆ್ಯಪ್ ಡೆವಲಪರ್ ಗಳ ಹೊಸ ಹಾದಿ ಸ್ವಿಫ್ಟ್.

ಐ.ಒ.ಎಸ್ ಆ್ಯಪ್ ತಯಾರಕರ ಪ್ರೊಗ್ರಾಮಿಂಗ್ ಭಾಷೆ ಸ್ವಿಫ್ಟ್. ಇದು ಆಬ್ಜೆಕ್ಟೀವ್ ಸಿಗಿಂತ ಸರಳವಾಗಿದೆ ಎನ್ನಲಾಗುತ್ತಿದೆ. 2017ರಲ್ಲಿ ಸ್ವಿಫ್ಟ್ ಖ್ಯಾತಗೊಳ್ಳಲಿದೆ ಎಂಬ ನಿರೀಕ್ಷೆಗಳಿವೆ. ಮೊಬೈಲ್ ಆ್ಯಪ್ ಲೋಕಕ್ಕೆ ಶೀಘ್ರದಲ್ಲೇ ಸ್ವಿಫ್ಟ್ 2 ಪ್ರವೇಶ ಪಡೆಯಲಿದೆಯೆಂಬ ವರದಿಗಳಿವೆ.

ಬಿಯಾಕಾನ್ಸ್ ಮತ್ತು ಲೊಕೇಷನ್ ಆಧಾರಿತ ಸೇವೆಗಳು.

ಬಿಯಾಕಾನ್ಸ್ ಮತ್ತು ಲೊಕೇಷನ್ ಆಧಾರಿತ ಸೇವೆಗಳು.

2017ರಲ್ಲಿ ಲೊಕೇಷನ್ ಆಧಾರಿತ ಸೇವೆಗಳು ಹೆಚ್ಚು ಖ್ಯಾತವಾಗಲಿವೆ. ಕಳೆದ ವರ್ಷವೂ ಲೊಕೇಷನ್ ಆಧಾರಿತ ಆ್ಯಪಲ್ ಐ-ಬಿಯಾಕನ್ ಮತ್ತು ಗೂಗಲ್ ಬಿಯಾಕನ್ ಮಾರುಕಟ್ಟೆಗೆ ಬಂದಿತ್ತು. ಈ ಸೇವೆಗಳು ಹೆಚ್ಚಾಗುತ್ತಿದ್ದಂತೆಯೇ ವೈಫೈ ಬಳಕೆಯು ಕೆಲವೇ ಪ್ರದೇಶಗಳಿಗೆ ಸೀಮಿತವಾಗದೆ ಎಲ್ಲೆಡೆಯೂ ಲಭ್ಯವಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಜನರು ಲೊಕೇಷನ್ ಆಧಾರಿತ ಮಾಹಿತಿಯನ್ನು ಪಡೆಯಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐ.ಒ.ಟಿ.

ಐ.ಒ.ಟಿ.

ಕ್ಲೌಡ್ ಆಧಾರಿತ ತಂತ್ರಾಂಶಗಳಲ್ಲಾದ ಹೆಚ್ಚಳವು ಇಂಟರ್ನೆಟ್ ಆಫ್ ಥಿಂಗ್ಸ್ (ಐ.ಒ.ಟಿ) ಬಳಕೆಯನ್ನು ಹೆಚ್ಚಿಸುತ್ತದೆ. ತಂತ್ರಜ್ಞಾನ ಪ್ರಪಂಚದ ಸದ್ಯದ ದೊಡ್ಡ ಸುದ್ದಿಯೆಂದರೆ ಅದು ಐ.ಒ.ಟಿ. ಆ್ಯಪ್ ಕೇಂದ್ರಿತ ಪ್ರಪಂಚವನ್ನು ಆಳಲು ಐ.ಒ.ಟಿ ಸಿದ್ಧವಾಗುತ್ತಿದೆ ಎಂದು ವರದಿಗಳು ತಿಳಿಸುತ್ತವೆ.

ಎಂ-ಕಾಮರ್ಸ್ ಬೆಳವಣಿಗೆ.

ಎಂ-ಕಾಮರ್ಸ್ ಬೆಳವಣಿಗೆ.

2016ರಲ್ಲಿ ಮೊಬೈಲ್ ಕಾಮರ್ಸ್ ವೇಗವಾಗಿ ಬೆಳೆದಿತ್ತು. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ಬದಲಿಗೆ ಜನರು ವ್ಯಾಲೆಟ್ ಮತ್ತು ಪೇಮೆಂಟ್ ಆ್ಯಪ್ ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಮೊಬೈಲ್ ಕಾಮರ್ಸ್ ಆ್ಯಪ್ ಗಳು 2017ರಲ್ಲಿ ತಮ್ಮ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲಿವೆ, ಹೊಸ ರೂಪ ಪಡೆಯಲಿವೆ. 2017ರಲ್ಲಿ ಎಂ-ಕಾಮರ್ಸ್ ಮತ್ತಷ್ಟು ಬೆಳವಣಿಗೆ ಕಂಡು ಆ್ಯಪ್ ಲೋಕದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಆ್ಯಪ್ ಗಳು ಮತ್ತಷ್ಟು ಸುರಕ್ಷಿತವಾಗಲಿದೆ.

ಆ್ಯಪ್ ಗಳು ಮತ್ತಷ್ಟು ಸುರಕ್ಷಿತವಾಗಲಿದೆ.

ಬಹಳಷ್ಟು ಆ್ಯಪ್ ಗಳು ಸರಳ ಸುರಕ್ಷಾ ಪರೀಕ್ಷೆಯಲ್ಲೂ ಪಾಸ್ ಆಗುವುದಿಲ್ಲ ಎಂದು ಗಾರ್ಟ್ನರ್ ಅಂದಾಜಿಸುತ್ತದೆ. ಈ ರೀತಿಯ ಆ್ಯಪ್ ಗಳಿಂದ ಬಳಕೆದಾರರ ಮಾಹಿತಿಯನ್ನು ಹ್ಯಾಕರ್ ಗಳು ಕದಿಯುತ್ತಾರೆ. 2017ರಲ್ಲಿ ಆ್ಯಪ್ ತಯಾರಕರು ಇನ್ನಷ್ಟು ಎಚ್ಚರಿಕೆಯಿಂದ ಸುರಕ್ಷಿತ ಆ್ಯಪ್ ಗಳನ್ನು ತಯಾರಿಸುತ್ತಾರೆ ಎನ್ನುವ ನಿರೀಕ್ಷೆಯಿದೆ.

ಆಗ್ಮೆಂಟೆಂಡ್ ರಿಯಾಲಿಟಿ ಮತ್ತು ವರ್ಚುಯಲ್ ರಿಯಾಲಿಟಿ.

ಆಗ್ಮೆಂಟೆಂಡ್ ರಿಯಾಲಿಟಿ ಮತ್ತು ವರ್ಚುಯಲ್ ರಿಯಾಲಿಟಿ.

ಟೆಕ್ ಪ್ರಪಂಚದ ಭವಿಷ್ಯತ್ತಿದೆಉ. 2016ರಲ್ಲಿ ಇದನ್ನು ನಾವು ಗಮನಿಸಿದ್ದೇವೆ, 2017ರಲ್ಲಿ ಈ ತಂತ್ರಜ್ಞಾನಗಳು ಮತ್ತಷ್ಟು ವಿಸ್ತಾರಗೊಳ್ಳಲಿವೆ. ವಿ.ಆರ್ ಖ್ಯಾತವಾಗದೇ ಇದ್ದರೂ ಎ.ಆರ್ 2017ರಲ್ಲಿ ಖಂಡಿತವಾಗಿಯೂ ಖ್ಯಾತಿ ಪಡೆಯುತ್ತದೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್.

ಇದು ಟೆಕ್ ಪ್ರಪಂಚದ ಮತ್ತೊಂದು ಮೈಲುಗಲ್ಲಾಗಲಿದೆ. 2017ರಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೇಲೆ ತುಂಬ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯಾಗಲಿದೆ ಎಂದು ಗಾರ್ಟರ್ ವರದಿ ಮಾಡಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಪ್ ಗಳಾದ ಪ್ರಿಸ್ಮಾ, ಗೂಗಲ್ ನೌ 2016ರಲ್ಲಿ ಬಿಡುಗಡೆಯಾಗಿ ಜನಪ್ರಿಯಗೊಂಡವು. ಹೊಸ ವರುಷದಲ್ಲಿ ಇನ್ನೂ ಅನೇಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಪ್ ಗಳು ಬಿಡುಗಡೆಗೊಳ್ಳಲಿವೆ.

ಕ್ಲೌಡ್ ಆಧಾರಿತ ಮೊಬೈಲ್ ಆ್ಯಪ್ ಗಳು.

ಕ್ಲೌಡ್ ಆಧಾರಿತ ಮೊಬೈಲ್ ಆ್ಯಪ್ ಗಳು.

ಕ್ಲೌಡ್ ಆಧಾರಿತ ಸೇವೆಗಳು ಹೆಚ್ಚಾಗುತ್ತಿದೆ. ಮೊಬೈಲ್ ಆ್ಯಪ್ ಗಳಲ್ಲೂ ಈಗ ಕ್ಲೌಡ್ ಕಂಪ್ಯೂಟಿಂಗ್ ನದ್ದೇ ಸದ್ದು. ಇದರಿಂದಾಗಿ ಬಳಕೆದಾರರು ತಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸಬಹುದು, ಎಲ್ಲಿ ಬೇಕೆಂದರಲ್ಲಿ ತಮ್ಮ ಮಾಹಿತಿಯನ್ನು ಪಡೆದುಕೊಳ್ಳಬಹುದು. ಗೂಗಲ್ ಡ್ರೈವ್, ಡ್ರಾಪ್ ಬಾಕ್ಸ್, ಒನ್ ಡ್ರೈವ್ ಇಂತಹ ಕೆಲವು ಆ್ಯಪ್ ಗಳು. ಈ ರೀತಿಯ ಕ್ಲೌಡ್ ಆಧಾರಿತ ಆ್ಯಪ್ ಗಳ ಸಂಖೈ ಮತ್ತಷ್ಟು ಹೆಚ್ಚಲಿದೆ.

ಎಂಟರ್ಪ್ರೈಸ್ ಮತ್ತು ಮೈಕ್ರೊ ಆ್ಯಪ್ಸ್.

ಎಂಟರ್ಪ್ರೈಸ್ ಮತ್ತು ಮೈಕ್ರೊ ಆ್ಯಪ್ಸ್.

ಸ್ಟಾರ್ಟ್ ಅಪ್ ಗಳು ಹೆಚ್ಚು ಕಡಿಮೆ ಪ್ರತಿ ದಿನ ಮೂಡುತ್ತಿರುವ ಹೊತ್ತಿನಲ್ಲಿ ಎಂಟರ್ಪ್ರೈಸ್ ಆ್ಯಪ್ ಗಳು ಖ್ಯಾತವಾಗುತ್ತಿರುವುದು ಅಚ್ಚರಿಯೇನಲ್ಲ. ಈ ಆ್ಯಪ್ ಗಳು ವ್ಯವಹಾರವನ್ನು ನಿರ್ವಹಿಸಲು ಸಹಾಯಕ. ಎಂಟರ್ಪ್ರೈಸ್ ಮತ್ತು ಮೈಕ್ರೋ ಆ್ಯಪ್ ಗಳಾದ ಫೇಸ್ ಬುಕ್ ಮೆಸೆಂಜರ್ ಅಥವಾ ಟು ಡು ಲಿಸ್ಟ್ ನಂತಹ ಆ್ಯಪ್ ಗಳು ಜೀವನವನ್ನು ಸರಳವಾಗಿಸಿದೆ, 2017ರಲ್ಲಿ ಇಂತಹ ಆ್ಯಪ್ ಗಳ ಸಂಖೈಯು ಏರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
App trends to hit the market in 2017.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X