ಗೂಗಲ್ ಮ್ಯಾಪ್ ನಲ್ಲಿ ಪಾದಾಚಾರಿಗಳಿಗೆ ಅನುಕೂಲವಾಗುವ ಮತ್ತೊಂದು ಫೀಚರ್

By Gizbot Bureau
|

ಗೂಗಲ್ ಮ್ಯಾಪ್ ಒಂದು ಪ್ರಸಿದ್ಧ ನೇವಿಗೇಷನ್ ಟೂಲ್ ಆಗಿದ್ದು ಇದೀಗ ಪಾದಾಚಾರಿಗಳಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗುವಂತಹ ಹೊಸ ಫೀಚರ್ ನ್ನು ಸೇರಿಸುವ ಭರವಸೆ ನೀಡುತ್ತಿದೆ. XDA ಡೆವಲಪರ್ ಗಳ ವರದಿಯು ತಿಳಿಸುವಂತೆ, ಅಂತರ್ಜಾಲದ ಹುಡುಕಾಟದ ದೈತ್ಯ ಸದ್ಯ ಹೊಸದಾಗಿ ತನ್ನ ಮ್ಯಾಪ್ ಆಪ್ ಗೆ “ಲೇಯರ್” ಅನ್ನು ಪರಿಚಯಿಸುವುದಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದು ಅದನ್ನು ಲೈಟನಿಂಗ್ ಎಂದು ಕರೆಯಲಾಗುತ್ತದೆ. ಈ ವೈಶಿಷ್ಟ್ಯತೆಯು ಬೀದಿದೀಪಗಳ ಮಾಹಿತಿಯನ್ನು ನೀಡುತ್ತದೆ ಎನ್ನಲಾಗಿದೆ..

ಬೇಟಾ ವರ್ಷನ್ ನಲ್ಲಿ ಲಭ್ಯ:

ಬೇಟಾ ವರ್ಷನ್ ನಲ್ಲಿ ಲಭ್ಯ:

ಗೂಗಲ್ ಮ್ಯಾಪ್ ಆಪ್ ನ ಬೇಟಾ ವರ್ಷನ್ 10.31.0 ಈ ಹೊಸ ಫೀಚರ್ ಬಗ್ಗೆ ಕೆಲವು ಸುಳಿವುಗಳನ್ನು ನೀಡಿದೆ. ಈ ಸುಳಿವಿನಲ್ಲಿರುವ ವಿವರದ ಪ್ರಕಾರವೇ ಹೇಳುವುದಾದರೆ ಗೂಗಲ್ ಮ್ಯಾಪ್ ಉತ್ತಮವಾದ ಬೀದಿ ದೀಪಗಳಿರುವ ದಾರಿಯನ್ನು ಹಳದಿ ಬಣ್ಣದಿಂದ ತೋರಿಸುತ್ತದೆ ಎಂದು XDA ಡೆವಲಪರ್ ಗಳು ಹೇಳಿದ್ದರೆ.

ಮೂರು ಕೆಟಗರಿಗಳು:

ಮೂರು ಕೆಟಗರಿಗಳು:

ಗೂಗಲ್ ಮ್ಯಾಪ್ ನ ಲೈಟನಿಂಗ್ ಫೀಚರ್ ನಲ್ಲಿರುವ ಕೆಟಗರಿಗಳು ಬೀದಿಗಳಲ್ಲಿರುವ ಬೀದಿ ದೀಪಗಳ ಲಭ್ಯತೆ ಮತ್ತು ದೀಪಗಳೇ ಇಲ್ಲದ ದಾರಿಗಳ ಮಾಹಿತಿಯನ್ನು ನಿಖರವಾಗಿ ತೋರಿಸುತ್ತದೆ. ಇದರಲ್ಲಿ ಮೂರು ಕೆಟಗರಿಗಳಿರುತ್ತದೆ. ಮೊದಲನೆಯದು "ಬೀದಿ ದೀಪಗಳ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ", "ಕಡಿಮೆ ಬೆಳಕಿನ ಲಭ್ಯತೆ ಇರುವ ದಾರಿ", "ಉತ್ತಮ ಬೆಳಕಿರುವ ದಾರಿ" ಎಂದು ವಿಭಾಗಿಸಲಾಗಿರುತ್ತದೆ.ಆದರೆ ಬಳಕೆದಾರರು ಲೈಟನಿಂಗ್ ನೋಟದಲ್ಲಿ ದಾರಿಯನ್ನು ಗೂಗಲ್ ಮ್ಯಾಪ್ ನಲ್ಲಿ ನೋಡುತ್ತಿರುವಾಗ ಕೆಲವು ದಾರಿಗಳಲ್ಲಿ ಝೂಮ್ ಇನ್ ಮಾಡಿ ನೋಡುವುದಕ್ಕೆ ಅವಕಾಶವಿಲ್ಲದೇ ಇರುವ ಸಾಧ್ಯತೆಗಳಿವೆ.

ಯಾವಾಗ,ಎಲ್ಲಿ, ಹೇಗೆ ಲಭ್ಯ:

ಯಾವಾಗ,ಎಲ್ಲಿ, ಹೇಗೆ ಲಭ್ಯ:

ಗೂಗಲ್ ಮ್ಯಾಪ್ ನಲ್ಲಿ ಈ ಫೀಚರ್ ಹೇಗೆ ಕಾಣುತ್ತದೆ ಎಂಬ ಬಗ್ಗೆ ತಿಳಿಸುವುದಕ್ಕಾಗಿ ಸದ್ಯ ಯಾವುದೇ ಸ್ಕ್ರೀನ್ ಶಾಟ್ ಗಳು ಕೂಡ ಲಭ್ಯವಿಲ್ಲ. ಇನ್ನು ಈ ಫೀಚರ್ ಯಾವಾಗ ಬಿಡುಗಡೆಗೊಳ್ಳುತ್ತದೆ ಎಂಬ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಿಲ್ಲ ಅಥವಾ ಯಾವ ಪ್ರದೇಶದಲ್ಲಿ ಮೊದಲನೆಯದಾಗಿ ಈ ಫೀಚರ್ ಲಭ್ಯವಾಗುತ್ತದೆ ಎಂಬುದೂ ಕೂಡ ಖಾತ್ರಿಯಿಲ್ಲ.

ವಿದೇಶ ಪ್ರಯಾಣ ಮಾಡುವವರಿಗೆ ವರದಾನ:

ವಿದೇಶ ಪ್ರಯಾಣ ಮಾಡುವವರಿಗೆ ವರದಾನ:

ವಿದೇಶ ಪ್ರಯಾಣ ಮಾಡುವವರಿಗೆ ಈ ಫೀಚರ್ ಖಂಡಿತ ವರದಾನವಾಗಿ ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗೆ ಸರ್ಚ್ ದೈತ್ಯ ಗೂಗಲ್ ಮ್ಯಾಪ್ ನಲ್ಲಿ ಗೂಗಲ್ ಟ್ರಾನ್ಸ್ ಲೇಟರ್(ಅನುವಾದಕ)ವನ್ನು ಕೂಡ ಇಂಟಿಗ್ರೇಟ್ ಮಾಡಿರುವುದರಿಂದಾಗಿ ತಮ್ಮದೇ ಸ್ಥಳೀಯ ಭಾಷೆಯಲ್ಲಿ ಅರ್ಥೈಸಿಕೊಳ್ಳುವುದಕ್ಕೆ ಬಳಕೆದಾರರಿಗೆ ಅನುಕೂಲವಾಗುತ್ತದೆ.

ಅಧಿಕೃತ ಬ್ಲಾಗ್ ಪೋಸ್ಟ್:

ಅಧಿಕೃತ ಬ್ಲಾಗ್ ಪೋಸ್ಟ್:

ಅಧಿಕೃತ ಬ್ಲಾಗ್ ಪೋಸ್ಟ್ ನಲ್ಲಿ ಗೂಗಲ್ " ಹೆಸರು ಅಥವಾ ವಿಳಾಸವಿರುವ ಪಕ್ಕದಲ್ಲಿ ಹೊಸ ಸ್ಪೀಕರ್ ಬಟನ್ ನ್ನು ಸಿಂಪಲ್ ಆಗಿ ಟ್ಯಾಪ್ ಮಾಡಿ ಮತ್ತು ಗೂಗಲ್ ಮ್ಯಾಪ್ ಗಟ್ಟಿಯಾಗಿ ನಿಮಗೆ ತಿಳಿಸುತ್ತದೆ ಮತ್ತು ನಿಮ್ಮ ಮುಂದಿನ ಪ್ರಯಾಣವನ್ನು ಸರಳವಾಗಿಸುತ್ತದೆ.ಆಳವಾದ ಸಂಭಾಷಣೆಯನ್ನು ಬಯಸಿದಾಗ ಗೂಗಲ್ ಮ್ಯಾಪ್ ಗೂಗಲ್ ಅನುವಾದಕ ಆಪ್ ಗೆ ತ್ವರಿತವಾಗಿ ಲಿಂಕ್ ಮಾಡಿ ನಿಮಗೆ ಸಹಾಯ ಮಾಡುತ್ತದೆ" ಎಂದು ತಿಳಿಸಿದೆ.

Best Mobiles in India

Read more about:
English summary
New Google Maps Feature To Highlight Well-Lit Streets

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X