Subscribe to Gizbot

ಪ್ರಪಂಚದಲ್ಲಿ ಫೆಸ್‌ಬುಕ್ ಬಳಕೆದಾರರ ಸಂಖ್ಯೆ ಎಷ್ಟು ಗೊತ್ತಾ?

Written By:

ಪ್ರಖ್ಯಾತ ಜಾಲತಾಣ ಫೇಸ್‌ಬುಕ್ ಇನ್ನು ಕೆಲವೇ ದಿವಸಗಳಲ್ಲಿ 2 ಶತಕೋಟಿ ಬಳಕೆದಾರರನ್ನು ಹೊಂದಲಿದೆ ಎನ್ನುವ ಮಾಹಿತಿ ಹೋರಬಿದ್ದಿದೆ. ಫೇಸ್‌ಬುಕ್ ತ್ರೈಮಾಸಿಕ ವರದಿಯಂತೆ 2016ರ ವರ್ಷಾಂತ್ಯಕ್ಕೆ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಶೇ.10 ರಷ್ಟು ಏರಿಕೆಯಾಗಿದ್ದು, ಇದೀಗ ಇನ್ನು ಕೆಲವೇ ದಿನಗಳಲ್ಲಿ ಈ ಸಂಖ್ಯೆ 2 ಶತಕೋಟಿಗೇರಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಪ್ರತಿ ತಿಂಗಳು ಸರಾಸರಿ 1 ಲಕ್ಷಕ್ಕೂ ಅಧಿಕ ಜನರು ಫೇಸ್‌ಬುಕ್ ತೆಕ್ಕೆಗೆ ಸೇರುತ್ತಿದ್ದು, ಇದೇ ರೀತಿಯಲ್ಲಿ ಫೇಸ್‌ಬುಕ್ ಬಳಕೆದಾರರರು ಹೆಚ್ಚಿದರೆ ಬಳಕೆದಾರರ ಸಂಖ್ಯೆ ಇನ್ನು ಹೆಚ್ಚುವ ಸಂಭವವಿದೆ. 2012ರಲ್ಲಿ ಸಂಸ್ಥೆಯನ್ನು ಸಾರ್ವಜನಿಕಗೊಳಿಸಿದ ಬಳಿಕ ಸಂಸ್ಥೆಯ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಫೇಸ್‌ಬುಕ್ ಹೇಳಿದೆ.

ಪ್ರಪಂಚದಲ್ಲಿ ಫೆಸ್‌ಬುಕ್ ಬಳಕೆದಾರರ ಸಂಖ್ಯೆ ಎಷ್ಟು ಗೊತ್ತಾ?

ಪ್ರಪಂಚದೆಲ್ಲೆಡೇ ಟ್ರೆಂಡ್ ಆಗಿದೆ ನೋಕಿಯಾ 3310 ಮೊಬೈಲ್ ನೈಜ ಕಥೆ!! ಏನದು?

ಮಾರ್ಚ್ ವೇಳೆಗೆ 2 ಶತಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದ ವಿಶ್ವದ ಮೊದಲ ಸಾಮಾಜಿಕ ಜಾಲತಾಣ ಎಂಬ ಕೀರ್ತಿಗೂ ಫೇಸ್‌ಬುಕ್ ಭಾಜನವಾಗಲಿದೆ ಫೇಸ್‌ಬುಕ್‌ನಲ್ಲಿ 1೦ ಕೋಟಿ ಫೇಕ್ ಅಕೌಂಟ್‌ಗಳು ಇದೇ ಎಂದು ಲೆಕ್ಕಾಚಾರವಿದ್ದು, ಇವುಗಳನ್ನೇಲ್ಲಾ ಕಳೆದರೂ ಫೇಸ್‌ಬುಕ್ 2 ಶತಕೋಟಿ ಗ್ರಾಹಕರನ್ನು ಹೊಂದಲಿದೆ ಎಂದು ಹೇಳಲಾಗಿದೆ.

ಪ್ರಪಂಚದಲ್ಲಿ ಫೆಸ್‌ಬುಕ್ ಬಳಕೆದಾರರ ಸಂಖ್ಯೆ ಎಷ್ಟು ಗೊತ್ತಾ?

2016ನೇ ಸಾಲಿನಲ್ಲಿ ಫೇಸ್ ಬುಕ್ ವಾಣಿಜ್ಯ ವಹಿವಾಟು ಗಣನೀಯ ಪ್ರಮಾಣದಲ್ಲಿ ಏರಿಕೆಯಾದ್ದು,ವಿಡಿಯೋ ಜಾಹಿರಾತು ಪ್ರಸಾರ ಮತ್ತು ಇತರೆ ಜಾಹಿರಾತುಗಳಿಂದ ಸಂಸ್ಥೆಗೆ ವ್ಯಾಪಕ ಲಾಭಾಂಶ ಬಂದಿದೆ ಎಂದು ಫೇಸ್‌ಬುಕ್ ಹೇಳಿದೆ.

Read more about:
English summary
This statistic shows a timeline with the worldwide number of monthly active Facebook users.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot