ಯೂಟ್ಯೂಬ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡಲು ಬೆಸ್ಟ್ ಡೌನ್‌ಲೋಡ್ ಆಪ್ ಅನ್ನು ನೀವು ಹುಡುಕುತ್ತಿದ್ದೀರಾ? ಯಾವುದೇ ಗುಣಮಟ್ಟದಲ್ಲಿಯೂ ವಿಡಿಯೋ ಡೌನ್‌ಲೋಡ್ ಮಾಡಬೇಕಾದ ಆಯ್ಕೆ ನಿಮಗೆ ಬೇಕೆ? ಹಾಗಾದರೆ, ಖಂಡಿತವಾಗಿಯೂ ನೀವು ನೂತನ ಮಾದರಿಯ "ಓಜಿಯೂಟ್ಯೂಬ್" )(OGYouTube) ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.!
ಹೌದು, ನೂತನ ಮಾದರಿಯ "ಓಜಿಯೂಟ್ಯೂಬ್" )(OGYouTube)ಆಪ್ ಬಹಳಷ್ಟು ಅಪ್‌ಡೇಟ್ ಆಗಿದ್ದು, ಯವುದೇ ಕ್ವಾಲಿಟಿಯಲ್ಲಿ ಅನಿಮಿಯತ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದಾದ ಆಯ್ಕೆಯನ್ನು ತಂದಿದೆ. ವೀಡಿಯೊಗಳನ್ನು ಮಾತ್ರವಲ್ಲದೇ MP3 ಫೈಲ್‌ಗಳನ್ನು ನೇರವಾಗಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿಗೆ ಡೌನ್‌ಲೋಡ್ ಮಾಡಬಹುದಾಗಿದೆ!

ಮೂಲತಃ ಯುಟ್ಯೂಬ್ ಡೌನ್ಲೋಡರ್ ಹೊಂದಿರುವ ಈ ಸೂಪರ್ ಆಂಡ್ರಾಯ್ಡ್ ಅಪ್‌ನಲ್ಲಿ ಯಾವುದೇ ಗುಣಮಟ್ಟದಲ್ಲಿಯೂ ವಿಡಿಯೋ ಡೌನ್‌ಲೋಡ್ ಮಾಡುವ ವೈಶಿಷ್ಟ್ಯಗಳ ಜೊತೆಗೆ ಹಲವು ಅತ್ಯುತ್ತಮ ಆಯ್ಕೆಗಳನ್ನು ನೀಡಲಾಗಿದೆ.! ಹಾಗಾದರೆ, ಓಜಿಯೂಟ್ಯೂಬ್ ಆಪ್ ಹೊಂದಿರುವ ಇತರೆ ಕೆಲವು ಪ್ರೀಮಿಯಂ ವೈಶಿಷ್ಟ್ಯಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!
ಬಯಸುವ ಗುಣಮಟ್ಟದಲ್ಲಿ ವೀಡಿಯೊ!!
ಓಜಿಯೂಟ್ಯೂಬ್ ಆಪ್ ಸಹಾಯದಿಂದ, ನಿಮ್ಮ ಮೆಚ್ಚಿನ ಯೂಟ್ಯೂಬ್ ವೀಡಿಯೊಗಳನ್ನು ನೀವು ಡೌನ್ಲೋಡ್ ಮಾಡಬಹುದು. 144p ನಿಂದ 1080p HD ವರೆಗೆ ನೀವು ಬಯಸುವ ಗುಣಮಟ್ಟದಲ್ಲಿ ವೀಡಿಯೊಗಳನ್ನು ನೀವು ಡೌನ್ಲೋಡ್ ಮಾಡಬಹುದು.!!
ಗೌಪ್ಯತೆ ವೈಶಿಷ್ಟ್ಯಗಳು!!
ಓಜಿಯೂಟ್ಯೂಬ್ ಆಪ್ ಇತ್ತೀಚಿನ ವೀಕ್ಷಿಸಿದ ವೀಡಿಯೊ ಇತಿಹಾಸ, ಇತ್ತೀಚಿನ ಹುಡುಕಾಟ ಇತಿಹಾಸ, ವಿರಾಮ ಇತಿಹಾಸ ಮತ್ತು ಹೆಚ್ಚಿನದನ್ನು ತೆರವುಗೊಳಿಸುವುದರಂತಹ ಕೆಲವು ಗೌಪ್ಯತೆ ವೈಶಿಷ್ಟ್ಯಗಳೊಂದಿಗೆ ಸಹ ಬರುತ್ತದೆ.
ಜಾಹಿರಾತು ಕಾಣಿಸುವುದಿಲ್ಲ. !!
ಓಜಿಯೂಟ್ಯೂಬ್ ಯಾವುದೇ ಜಾಹೀರಾತುಗಳನ್ನು ತೋರಿಸುವುದಿಲ್ಲ. ಇದರಿಂದ, ಓಜಿಯೂಟ್ಯೂಬ್ ಸಹಾಯದಿಂದ ನೀವು ಡೌನ್‌ಲೋಡ್ ಮಾಡಿದ ವೀಡಿಯೊಗಳಲ್ಲಿ ಜಾಹಿರಾತು ಕಾಣಿಸುವುದಿಲ್ಲ. ಹಾಗಾಗಿ, ನೀವು ವಿಡಿಯೊ ಸ್ಟ್ರೀಮಿಂಗ್ ಅನುಭವವನ್ನು ಪಡೆಯುತ್ತೀರಿ.
ಹಿನ್ನೆಲೆಯಲ್ಲಿ ಸಂಗೀತ
ಓಜಿಯೂಟ್ಯೂಬ್ ಆಪ್‌ನಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಯೂಟ್ಯೂಬ್ ವೀಡಿಯೊವನ್ನು ಹಿನ್ನೆಲೆಯಲ್ಲಿ ಸಂಗೀತ ಪ್ಲೇಯರ್ ಆಗಿ ಪ್ಲೇ ಮಾಡಲು ಅನುಮತಿಸುತ್ತದೆ. ಇದು ಓಜಿಯೂಟ್ಯೂಬ್ ಆಪ್‌ನ ಅತ್ಯುತ್ತಮ ವೈಶಿಷ್ಟ್ಯಗಳಲ್ಲಿ ಒಂದೆಂದು ಹೇಳಬಹುದು.!!
ಬಳಕೆದಾರ-ಸ್ನೇಹಿ ಆಪ್!!
ಓಜಿಯೂಟ್ಯೂಬ್ ಆಪ್ ಅಪ್ಲಿಕೇಶನ್ ತುಂಬಾ ಕಡಿಮೆ ಗ್ರಾತ್ರದಲ್ಲಿ ಬಿಡುಗಡೆಯಾಗಿದೆ. ಎಲ್ಲಾ ಬಳಕೆದಾರರಿಗೂ ಬಳಸಲು ಸುಲಭವಾಗಿರುವ ಈ ಆಪ್ ಉತ್ತಮ ಬಳಕೆದಾರ-ಸ್ನೇಹಿ ವಿನ್ಯಾಸವನ್ನು ಹೊಂದಿದೆ. ವಿಶೇಷವೆಂದರೆ ಇದು ನಿಮ್ಮ ಆಂಡ್ರಾಯ್ಡ್ ಸಾಧನವನ್ನುನಿಧಾನಗೊಳಿಸುವುದಿಲ್ಲವಂತೆ.!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.