Subscribe to Gizbot

ಓಲಾ ಕ್ಯಾಬ್‌ನಲ್ಲಿ ಲ್ಯಾಪ್‌ಟಾಪ್ ಕಳೆದರು, ಪ್ಲೈಟ್ ಮಿಸ್ ಆದ್ರೂ ಚಿಂತೆ ಇಲ್ಲ..!

Written By:

ಜಾಗತಿಕವಾಗಿ ಆಪ್ ಆಧಾರಿತ ಕ್ಯಾಬ್ ಸೇವೆಯನ್ನು ನೀಡುತ್ತಿರುವ ಉಬರ್ ಗೆ ಸೆಡ್ಡು ಹೊಡೆದಿರುವ ಬೆಂಗಳೂರು ಮೂಲದ ಒಲಾ, ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಸೇವೆಯನ್ನು ಆರಂಭಿಸಿದೆ. ತನ್ನ ಕ್ಯಾಬಿನಲ್ಲಿ ಪ್ರಮಾಣಿಸುವವರಿಗೆ ರೂ.1ಕ್ಕೆ ವಿಮೆಯನ್ನು ನೀಡಲಿದೆ. ಇದರಿಂದಾಗಿ ನೀವು ಒಲಾ ಕ್ಯಾಬಿನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ನಿಮ್ಮ ಅಮೂಲ್ಯ ವಸ್ತುಗಳು ಕಳೆದು ಹೊದರೆ, ಫ್ಲೈಟ್ ಮಿಸ್ ಆದರೆ. ಆಕ್ಸಿಡೆಂಟ್ ಆದರೆ ರೂ.5 ಲಕ್ಷದ ವರೆಗೂ ಪರಿಹಾರವನ್ನು ನೀಡಲಿದೆ.

ಓಲಾ ಕ್ಯಾಬ್‌ನಲ್ಲಿ ಲ್ಯಾಪ್‌ಟಾಪ್ ಕಳೆದರು, ಪ್ಲೈಟ್ ಮಿಸ್ ಆದ್ರೂ ಚಿಂತೆ ಇಲ್ಲ..!

ಚಲೋ ಬೇಫಿಕರ್ ಎನ್ನುವ ಇನ್‌ಶ್ಯೂರೆನ್ಸ್ ಯೋಜನೆಯನ್ನು ಘೋಷಿಸಿರುವ ಒಲಾ, ತನ್ನ ಕ್ಯಾಬ್ ಮತ್ತು ಆಟೋ ಪ್ರಯಾಣಿಕರಿಗೆ ರೂ.1 ದರದಲ್ಲಿ ಪ್ರತಿ ಪ್ರಯಾಣಕ್ಕೆ ವಿಮೆಯನ್ನು ನೀಡಲಿದೆ. ದೇಶದಲ್ಲಿ 110 ನಗರಗಳಲ್ಲಿ ಈ ಸೇವೆಯೂ ಲಭ್ಯವಿರಲಿದೆ ಎನ್ನಲಾಗಿದ್ದು, ಬಳಕೆದಾರರಿಗೆ ಇದರಿಂದಾಗಿ ಪ್ರಯಾಣದ ಸುರಕ್ಷತೆಯೂ ದೊರೆಯಲಿದೆ.

ಓದಿರಿ: ಜಿಯೋ ಆಫರ್ ಕೊಟ್ಟ ಗಂಟೆಗಳಲ್ಲಿ ಏರ್‌ಟೆಲ್‌ನಿಂದ ಬೊಂಬಾಟ್ ಆಫರ್‌: IPL ನೋಡಲು ಏರ್‌ಟೆಲ್ ಬೆಸ್ಟ್‌..!

ಇಂಟರ್ ಸಿಟಿ ಪ್ರಯಾಣಿಕರಿಗೆ ರೂ.1ಗೆ ವಿಮೆ, ಒಲಾ ರೆಂಟಲ್ ಸೇವೆಯನಜ್ನು ಪಡೆಯುವವರಿಗೆ ರೂ.10ಕ್ಕೆ ಹಾಗೂ ಒಲಾ ಔಟ್ ಸ್ಟೇಷನ್ ಬಳಕೆದಾರರಿಗೆ ರೂ.15ಕ್ಕೆ ಚಲೋ ಬೇಫಿಕರ್ ಎನ್ನುವ ಇನ್‌ಶ್ಯೂರೆನ್ಸ್ ಸೇವೆಯನ್ನು ನೀಡುವುದಾಗಿ ಒಲಾ ತಿಳಿಸಿದೆ. ಇದರಿಂದಾಗಿ ಒಲಾ ಪ್ರಯಾಣವು ಉಬರ್ ಗಿಂತಲೂ ಸುರಕ್ಷಿತವಾಗಲಿದೆ.

ಓಲಾ ಕ್ಯಾಬ್‌ನಲ್ಲಿ ಲ್ಯಾಪ್‌ಟಾಪ್ ಕಳೆದರು, ಪ್ಲೈಟ್ ಮಿಸ್ ಆದ್ರೂ ಚಿಂತೆ ಇಲ್ಲ..!

ಈ ಚಲೋ ಬೇಫಿಕರ್ ಇನ್‌ಶ್ಯೂರೆನ್ಸ್ ಸೇವೆಯೂ ಪ್ರಮಾಣಿಕರ ಆಯ್ಕೆಯಾಗಿದ್ದು, ಒಲಾ ಆಪ್‌ನಲ್ಲಿ ನೀವು ಇದನ್ನು ಖರೀದಿಸಬಹುದಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಪ್ರಮಾಣಕ್ಕೆ ವಿಮೆಯನ್ನು ನೀಡುತ್ತಿರುವ ಸೇವೆಯಾಗಿದ್ದು, ಅದರಲ್ಲಿಯೂ ಅತೀ ಕಡಿಮೆ ಬೆಲೆಗೆ ದೊರೆಯುವ ಸೇವೆ ಎನ್ನುವ ಖ್ಯಾತಿಗೆ ಪಾತ್ರವಾಗಲಿದೆ.

Bike-Car ಜಾತಕ ಹೇಳುವ ಆಪ್..!

ನೀವು ಸಹ ನಿಮ್ಮ ಒಲಾ ರೈಡ್‌ನಲ್ಲಿ ಸುರಕ್ಷತೆಯನ್ನು ಬಯಸುವವರಾದರೆ ಒಲಾ ವಿಮೆಯನ್ನು ಆಕ್ಟಿವೆಟ್ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಮೆನು> ಪ್ರೋಫೈಲ್ > ರೆಡ್ ಇನ್‌ಸ್ಯೂರೆನ್ಸ್ ಗೆ ಹೋಗಿ ಅಲ್ಲಿ ಸ್ವೀಚ್ ಆನ್ ಮಾಡಿಕೊಳ್ಳಬೇಕಾಗಿದೆ.

English summary
Ola 'Chalo Befikar' In-Trip Insurance Programme Launched for Riders, Can Be Availed at Re. 1. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot