ಜಿಯೋ ಆಫರ್ ಕೊಟ್ಟ ಗಂಟೆಗಳಲ್ಲಿ ಏರ್‌ಟೆಲ್‌ನಿಂದ ಬೊಂಬಾಟ್ ಆಫರ್‌: IPL ನೋಡಲು ಏರ್‌ಟೆಲ್ ಬೆಸ್ಟ್‌..!

|

ಜಿಯೋ ತನ್ನ ಬಳಕೆದಾರರಿಗೆ IPL ಕ್ರಿಕೆಟ್ ಮ್ಯಾಚ್ ನೋಡುವ ಸಲುವಾಗಿ ಹೆಚ್ಚು ಡೇಟಾ ಹೊಂದಿರುವ ಪ್ಲಾನ್‌ವೊಂದನ್ನು ಲಾಂಚ್ ಮಾಡಿದ ಕೆಲವೇ ಗಂಟೆಗಳಲ್ಲಿ ಏರ್‌ಟೆಲ್, ಜಿಯೋಗೆ ಸೆಡ್ಡು ಹೊಡೆಯುವಂತಹ ಆಫರ್‌ವೊಂದನ್ನು ತನ್ನ ಬಳಕೆದಾರರಿಗೆ ನೀಡಿದೆ. IPL ಕ್ರಿಕೆಟ್ ಮ್ಯಾಚ್ ಅನ್ನು ಲೈವ್ ಆಗಿ ನೀಡುವ ಹಾಟ್‌ಸ್ಟಾರ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ತನ್ನ ಬಳಕೆದಾರರಿಗೆ ಹಾಟ್‌ಸ್ಟಾರ್ ಸ್ಟೋಡ್ಸ್ ಪ್ಯಾಕ್ ಆನ್ನು ಉಚಿತವಾಗಿ ನೀಡಲು ಮುಂದಾಗಿದೆ. ಈ ಮಾರುಕಟ್ಟೆಯಲ್ಲಿ ಮತ್ತೊಂದು ಮಾದರಿಯ ಸವಾಲನ್ನು ಜಿಯೋಗೆ ಒಡ್ಡಿದೆ ಎನ್ನಲಾಗಿದೆ.

ಜಿಯೋ ಆಫರ್ ಕೊಟ್ಟ ಗಂಟೆಗಳಲ್ಲಿ ಏರ್‌ಟೆಲ್‌ನಿಂದ ಬೊಂಬಾಟ್ ಆಫರ್‌:

ಏರ್‌ಟೆಲ್ ರೂ.299 ಪ್ಲಾನ್ ರೀಚಾರ್ಜ್ ಮಾಡಿಸಿಕೊಂಡವರು ಈ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಹಾಟ್ ಸ್ಟಾರ್‌ನಲ್ಲಿ ಲೈವ್ IPL ಮ್ಯಾಚ್ ಅನ್ನು ಯಾವುದೇ ಅಡೆತಡೆಗಳಿಲ್ಲದೆ ನೋಡಬಹುದಾಗಿದೆ. ಈ ಲೈವ್ ಮ್ಯಾಚ್ ಅನ್ನು ಏರ್‌ಟೆಲ್ ಬಳಕೆದಾರರು ಏರ್‌ಟೆಲ್ ಟಿವಿ ಆಪ್ ಮೂಲಕ ನೋಡಬೇಕಾಗಿದೆ. ಅಮೆಜಾನ್ ಪ್ರೈಮ್ ಮಾದರಿಯಲ್ಲಿ ಇದು ಸಹ ಏರ್‌ಟೆಲ್ ಟಿವಿ ಆಪ್ ನಲ್ಲಿಯೇ ಕಾಣಿಸಿಕೊಂಡಿದೆ.

ಓದಿರಿ: IPL ಪ್ರಿಯರಿಗೆ ಜಿಯೋ ಭರ್ಜರಿ ಆಫರ್: ಮೊಬೈಲ್‌ನಲ್ಲೇ ಮ್ಯಾಚ್ ನೋಡಲು 2 ರೂ.ಗೆ 1GB 4G ಡೇಟಾ.!

ಈಗಾಗಲೇ ಏರ್‌ಟೆಲ್ ತನ್ನ ಪೋಸ್ಟ್ ಪೇಯ್ಡ್ ಬಳಕೆದಾರರಗೆ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಉಚಿತವಾಗಿ ನೀಡಿದ್ದು, ಈ ಮೂಲಕ ಜಿಯೋ ಆಪ್‌ಗೆ ಸೆಡ್ಡು ಹೊಡೆದಿತ್ತು. ಈ ಬಾರಿ ಹಾಟ್ ಸ್ಟಾರ್ ಅನ್ನು ಉಚಿತವಾಗಿ ನೀಡುವ ಮೂಲಕ ಬಳಕೆದಾರರಿಗೆ ಹೊಸ ಆಫರ್ ಮಾಡಿದೆ. ಈ ಮೂಲಕವೂ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ. IPL ಕ್ರಿಕೆಟ್ ಮ್ಯಾಚ್ ಅನ್ನು ಯಾವುದೇ ಅಡೆತಡೆ ಇಲ್ಲದೇ ಮೊಬೈಲ್‌ನಲ್ಲಿಯೇ ನೋಡಲು ಅವಕಾಶ ಮಾಡಿಕೊಟ್ಟಿದೆ.

ಜಿಯೋ ಆಫರ್ ಕೊಟ್ಟ ಗಂಟೆಗಳಲ್ಲಿ ಏರ್‌ಟೆಲ್‌ನಿಂದ ಬೊಂಬಾಟ್ ಆಫರ್‌:

ಈ ಸೇವೆಯ ಲಾಭವನ್ನು ಪಡೆಯುವ ಸಲುವಾಗಿ ಬಳಕೆದಾರರು ಹಾಟ್‌ಸ್ಟಾರ್ ಆಪ್‌ ಅನ್ನು ತಮ್ಮ ಸ್ಮಾರ್ಟ್‌ಫೋನಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಇದಾದ ನಂತರದಲ್ಲಿ ಏರ್‌ಟೆಲ್ ಟಿವಿ ಆಪ್ ತೆಗೆದ ಅದರಲ್ಲಿ ಲೈವ್‌ ಸ್ಟ್ರೀಮ್ ಚಾನಲ್‌ಗಳನ್ನು ಒಪನ್ ಮಾಡಿದರೆ ಅದು ಹಾಟ್ ಸ್ಟಾರ್ ನೊಂದಿಗೆ ಕನೆಕ್ಟ್ ಆಗಲಿದೆ. ಆ ನಂತರ ನೀವು ಲೈವ್‌ ಮ್ಯಾಚ್ ಅನ್ನು ಆನಂದಿಸಬಹುದಾಗಿದೆ.

ಜಿಯೋ IPLಗಾಗಿಯೇ ಗೇಮ್ ಆಡುವ ಮತ್ತು ಮ್ಯಾಚ್ ನೋಡುವ ಆಫರ್ ನೀಡಿತ್ತು. ಒಟ್ಟಿನಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲಿ ಏರ್‌ಟೆಲ್-ಜಿಯೋ ನಡುವಿನ ಕಿತ್ತಾಟವೂ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುತ್ತಿದೆ. ಬಳಕೆದಾರರು ಹೆಚ್ಚಿನ ಲಾಭ ಮತ್ತು ಸೇವೆಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆಯುತ್ತಿದ್ದಾರೆ.

Best Mobiles in India

English summary
Bharti Airtel Users to Get Free Hotstar Sports Pack Subscription Through Airtel TV App. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X