ATMನಲ್ಲಿ ಕಾರ್ಡ್ ಇಲ್ಲದೇ ಕ್ಯಾಷ್ ಹಣ ಡ್ರಾ ಮಾಡಿಕೊಳ್ಳಬಹುದು..!

ಆಪಲ್ ಪೇ ಬಳಕೆದಾರರು ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಬಳಕೆ ಮಾಡಿಕೊಳ್ಳದೇ ATMನಲ್ಲಿ ಹಣವನ್ನು ಸ್ವೀಕರಿಸಬಹುದಾಗಿದೆ.

By Lekhaka
|

ದಿನೇ ದಿನೇ ಟೆಕ್ನಾಲಜಿಯೂ ಜನರ ಜೀವನ ಮಟ್ಟವನ್ನು ಸುಧಾರಿಸುತ್ತಿದೆ. ಇದೇ ಮಾದರಿಯಲ್ಲಿ ಬ್ಯಾಕಿಂಗ್ ವ್ಯವಸ್ಥೆಯನ್ನು ತೀರಾ ಸರಳೀಕರಣ ಮಾಡಿದೆ. ಈಗಾಗಲೇ ಮೊಬೈಲ್ ನಲ್ಲಿ ಬ್ಯಾಂಕ್ ಅಕೌಂಟ್ ನಿರ್ವಹಿಸುವ ಪೇಮೆಂಟ್ ಆಪ್ ಗಳು ಕಾಣಿಸಿಕೊಂಡ ಮೇಲೆ ಈಗ ಮತ್ತೊಂದು ಹೊಸ ಸೇವೆಯೂ ಶುರವಾಗಿದ್ದು, ಪೇಮೆಂಟ್ ಆಪ್ ಗಳ ಸಹಾಯದಿಂದ ATMಗಳಲ್ಲಿ ಹಣವನ್ನು ಡ್ರಾ ಮಾಡಿಕೊಳ್ಳಬಹುದಾಗಿದೆ.

ATMನಲ್ಲಿ ಕಾರ್ಡ್ ಇಲ್ಲದೇ ಕ್ಯಾಷ್ ಹಣ ಡ್ರಾ ಮಾಡಿಕೊಳ್ಳಬಹುದು..!

ಹೌದು ಆಪಲ್ ಪೇ ಬಳಕೆದಾರರು ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಬಳಕೆ ಮಾಡಿಕೊಳ್ಳದೇ ATMನಲ್ಲಿ ಹಣವನ್ನು ಸ್ವೀಕರಿಸಬಹುದಾಗಿದೆ. ಈಗಾಗಲೇ ಈ ಸೌಲಭ್ಯವನ್ನು ಅಮೇರಿಕಾದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಈ ಸೌಲಭ್ಯವು ಶೀಘ್ರವೇ ಭಾರತಕ್ಕೂ ಬರಲಿದೆ ಎನ್ನಲಾಗಿದೆ.

ಸದ್ಯ ಆಪಲ್ ಪೇ ಬಳಕೆದಾರಿಗೆ ಮಾತ್ರವೇ ಈ ಸೌಲಭ್ಯವು ದೊರೆಯುತ್ತಿದ್ದು, ಮೊಬೈಲ್ ನಲ್ಲಿರುವ NFC ಆಯ್ಕೆಯ ಮೂಲಕ ಇದು ಕಾರ್ಯನಿರ್ವಹಿಸಲಿದ್ದು, ಇದಕ್ಕಾಗಿ ATMಗಳಲ್ಲಿ ಚಿಪ್ ಒಂದನ್ನು ಅಳವಡಿಸಲಾಗಿರುತ್ತದೆ ಅಲ್ಲಿ ಹೋಗಿ ಮೊಬೈಲ್ ತೋರಿಸಿದರೆ ಸಾಕು ಹಣ ಪಾವತಿಯಾಗಲಿದೆ.

ATMನಲ್ಲಿ ಕಾರ್ಡ್ ಇಲ್ಲದೇ ಕ್ಯಾಷ್ ಹಣ ಡ್ರಾ ಮಾಡಿಕೊಳ್ಳಬಹುದು..!

ಇದು ಕಾರ್ಡ್ ಫ್ರೀ ATM ಬಳಕೆಯನ್ನು ಸಕಾರಗೂಳಿಸಲಿದ್ದು, ಮುಂದಿನ ದಿನಗಳಲ್ಲಿ ಕಾರ್ಡ್ ಇಲ್ಲದೇ ATM ಬಳಕೆ ಮಾಡಿಕೊಳ್ಳುವ ಅವಕಾಶಗಳು ಸೃಷ್ಟಿಯಾಗಲಿದೆ. ಈಗಾಗಲೇ ಅಮೇರಿಕಾದ ATMಗಳು ಈ ಕಾರ್ಯ ಚಟುವಟಿಕೆಗೆ ಹೊಂದಣಿಕೆಯಾಗುತ್ತಿದೆ ಎನ್ನಲಾಗಿದೆ.

ಟ್ವಿಟರ್ ಬಹಿಷ್ಕರಿಸಲು ಇಂದು ವಿಶ್ವದಾಧ್ಯಂತ ಪ್ರತಿಭಟನೆ!!..ಏಕೆ ಗೊತ್ತಾ?ಟ್ವಿಟರ್ ಬಹಿಷ್ಕರಿಸಲು ಇಂದು ವಿಶ್ವದಾಧ್ಯಂತ ಪ್ರತಿಭಟನೆ!!..ಏಕೆ ಗೊತ್ತಾ?

ಈಗಾಗಲೇ ಈ ಸೇವೆಯು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಶೀಘ್ರವೇ ನಮ್ಮ ದೇಶದಲ್ಲಿಯೂ ಈ ಸೇವೆಯೂ ಆರಂಭವಾಗುವ ಸಾಧ್ಯತೆ ಇದೆ. ಕಾರಣ ಭಾರತದಲ್ಲಿಯೂ ಡಿಜಿಟಲ್ ಮತ್ತು ಪೇಮೆಂಟ್ ಆಪ್ ಗಳ ಬಳಕೆಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಕಾರ್ಡ್ ಲೈಸ್ ATM ವ್ಯವಹಾರವೂ ಶೀಘ್ರವೇ ಸಾಧ್ಯವಾಗಲಿದೆ.

Best Mobiles in India

English summary
Apple Pay users amongst others can actually withdraw money without even making use of their actual credit or debit card.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X