ಜಿಯೋ ನೀಡುತ್ತಿರುವ ಬೆಲೆಕಟ್ಟಲಾದ ಉಚಿತ ಸೇವೆಗಳಿದು..!!!

Written By:

ದೇಶದಲ್ಲಿ ಸದ್ಯ ಜಿಯೋ ಸದ್ದು ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ ನೀಡುತ್ತಿರುವ ಸೇವೆಗಳೇನು ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ಜಿಯೋ ಕೇವಲ ಉಚಿತ ಡೇಟಾವನ್ನು ನೀಡುತ್ತಿಲ್ಲ. ಬದಲಿಗೆ ಇನ್ನು ಹಲವು ಬೆಲೆಕಟ್ಟಲಾಗದ ಸೇವೆಗಳ ತನ್ನ ಗ್ರಾಹಕರಿಗೆ ನೀಡುತ್ತಿದೆ.

ಜಿಯೋ ನೀಡುತ್ತಿರುವ ಬೆಲೆಕಟ್ಟಲಾದ ಉಚಿತ ಸೇವೆಗಳಿದು..!!!

ಓದಿರಿ: ಆಧಾರ್ ಕಾರ್ಡ್ ಕಳೆದ ಹೋದರೆ ಮಾಡಬೇಕಾದ್ದೇನು..?

ಜಿಯೋ ಕೇವಲ ಉಚಿತ ಕರೆ ಮತ್ತು ಡೇಟಾವನ್ನು ನೀಡುತ್ತಿದೆ ಎಂದುಕೊಂಡೆರೆ ತಪ್ಪು. ಜಿಯೋ ಇದರೊಂದಿಗೆ ತನ್ನ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಲು ನೀಡುತ್ತಿದೆ. ಅವುಗಳು ಯಾವುದು, ಅದರ ಉಪಯೋಗವೇನು ಎಂಬುದನ್ನು ತಿಳಿಯುವ.

ಓದಿರಿ: BSNL 'ದಿಲ್ ಕೋಲ್‌ ಕೇ ಬೋಲೋ' ಆಫರ್: ರೂ. 339ಕ್ಕೆ ದಿನಕ್ಕೆ 3 GB ಡೇಟಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈ ಜಿಯೋ ಆಪ್‌:

ಮೈ ಜಿಯೋ ಆಪ್‌:

ಜಿಯೋ ಬಳಕೆದಾರು ಕಡ್ಡಾಯವಾಗಿ ಹೊಂದಲೇ ಬೇಕಾದಂತಹ ಆಪ್ ಇದಾಗಿದೆ. ಮೈ ಜಿಯೋ ಆಪ್‌ ನಿಮ್ಮ ಆಕೌಂಟ್ ನೋಡಿಕೊಳ್ಳಲು ಸಹಾಯಕವಾಗಲಿದ್ದು, ಬ್ಯಾಲೆನ್ಸ್, ಕೊಡುಗೆ ಮತ್ತು ಇನ್ನು ಹಲವು ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿ ದೊರೆಯಲಿದೆ. ಇದು ಬಳಕೆಗೆ ಬೇಕಾಗಿದೆ.

ಜಿಯೋ ಚಾಟ್:

ಜಿಯೋ ಚಾಟ್:

ಜಿಯೋ ತನ್ನ ಬಳಕೆದಾರಿಗೆ ಸಾಮಾಜಿಕ ಜಾಲತಾಣದ ರೀತಿಯಲ್ಲಿ ಸೋಶಿಯಲ್ ಮೇಸೆಂಜಿಗ್ ಆಪ್ ಒಂದನ್ನು ಬಿಟ್ಟಿದ್ದು, ಅದೇ ಜಿಯೋ ಚಾಟ್. ಇದು ನಿಮ್ಮ ಸ್ನೇಹಿತತೊಂದಿಗೆ ಸಂಪರ್ಕ ಸಾಧಿಸಲು ಸಹಾಯಕವಾಗಿದೆ. ಇದು ನಿಮ್ಮನ್ನು ಸ್ನೇಹಿತರ ಸನಿಹಕ್ಕೆ ಸೇರಿಸಲಿದೆ. ಮತ್ತು ವಿಡಿಯೋ ಕಾಲಿಂಗ್ ಅವಕಾಶವು ಇದೇ.

 ಜಿಯೋ ಟಿವಿ:

ಜಿಯೋ ಟಿವಿ:

ಜಿಯೋ ಟಿವಿ, ತನ್ನ ಬಳಕೆದಾರರಿಗೆ ಹೆಚ್ಚಿನ ವೇಗದ ಇಂಟರ್‌ನೆಟ್ ನೀಡಿರುವ ಜಿಯೋ, ಮೊಬೈಲ್‌ನಲ್ಲೇ ಟಿವಿ ಚಾನಲ್‌ಗಳನ್ನು ನೋಡಲಿ ಎನ್ನುವ ಸಲುವಾಗಿ ಲೈವ್ ಟಿವಿ ಆಪ್‌ ಜಿಯೋ ಟಿವಿಯನ್ನು ಬಳಕೆಗೆ ಕೊಟ್ಟಿದೆ.

ಜಿಯೋ ಸಿನಿಮಾ:

ಜಿಯೋ ಸಿನಿಮಾ:

ದೇಶ-ವಿದೇಶದ ಸಿನಿಮಾ ಭಂಡಾರವೇ ಜಿಯೋ ಸಿನಿಮಾ ಆಗಿದ್ದು, ಬಿಡುಗಡೆಯಾದ ಬಹುತೇಕ ಎಲ್ಲಾ ಸಿನಿಮಾಗಳು ಇಲ್ಲಿ ಲಭ್ಯವಿದೆ. ಬೇರೆ ಯಾವುದೇ ಆಪ್‌ಗಳಲ್ಲೂ ಇಷ್ಟು ಪ್ರಮಾಣದ ಸಿನಿಮಾ ಕಲೆಕ್ಷನ್‌ಗಳಿಲ್ಲ ಎನ್ನಬಹುದು.

 ಜಿಯೋ ಮ್ಯೂಸಿಕ್:

ಜಿಯೋ ಮ್ಯೂಸಿಕ್:

ಜಿಯೋ ತನ್ನ ಬಳಕೆದಾರರ ಖುಷಿ ಪಡಿಸುವ ಸಲುವಾಗಿ ಜಿಯೋ ಮ್ಯೂಸಿಕ್ ಆಪ್‌ ಬಿಡುಗಡೆ ಮಾಡಿದೆ. ಹಾಡು ಕೇಳಲು ಇದು ಸಹಾಯಕವಾಗಿದೆ. ಹೊಸ ಹೊಸ ಹಾಡುಗಳು ಇಲ್ಲಿ ಲಭ್ಯವಿದೆ.

ಜಿಯೋ ಮಗ್ಸ್:

ಜಿಯೋ ಮಗ್ಸ್:

ಜಿಯೋ ಮಗ್ಸ್ ಪುಸ್ತಕಗಳ ಭಂಡಾರ ಎನ್ನಬಹುದಾಗಿದೆ. ಇಲ್ಲಿ ನಿಮ್ಮ ನೆಚ್ಚಿನ ಮ್ಯಾಗ್ ಜಿನ್‌ಗಳು ಇಲ್ಲಿ ದೊರೆಯಲಿದೆ. ಬೇಕಾದ ಸಂದರ್ಭದಲ್ಲಿ ಪುಸ್ತಕಗಳನ್ನು ಓದಬಹುದಾಗಿದೆ. ಸಿನಿಮಾ ಬೇಡ ಎಂದವರಿಗೆ ಇದು ಒಳ್ಳೆಯ ಆಯ್ಕೆ ಎನ್ನಬಹುದು.

ಜಿಯೋ ಏಕ್ಸ್‌ಪ್ರೆಸ್ ನ್ಯೂಸ್‌:

ಜಿಯೋ ಏಕ್ಸ್‌ಪ್ರೆಸ್ ನ್ಯೂಸ್‌:

ಜಿಯೋ ಬಳಕೆದಾರರು ದೇಶ-ವಿದೇಶದ ವಿದ್ಯಮಾನಗಳನ್ನು ಬೇಗನೇ ಪಡೆಯಬೇಕು ಎನ್ನುವ ಕಾರಣಕ್ಕಾಗಿ ಜಿಯೋ ಏಕ್ಸ್‌ಪ್ರೆಸ್ ನ್ಯೂಸ್‌ ಆಪ್ ನೀಡಿದೆ. ಇದರಲ್ಲಿ ಕ್ಷಣ ಕ್ಷಣದ ಸುದ್ದಿಗಳು ದೊರೆಯಲಿದೆ.

ಜಿಯೋ ಕ್ಲೌಡ್:

ಜಿಯೋ ಕ್ಲೌಡ್:

ಜಿಯೋ ತನ್ನ ಬಳಕೆದಾರರ ಡೇಟಾವನ್ನು ಅನ್‌ಲೈನಿನಲ್ಲಿ ಸುರಕ್ಷಿತವಾಗಿಡುವ ಸಲುವಾಗಿ ಜಿಯೋ ಕ್ಲೌಡ್ ಸೇವೆಯನ್ನು ನೀಡುತ್ತಿದೆ. ಇದು ಮೊಬೈಲ್ ಮತ್ತು ಕಂಪ್ಯೂಟರ್‌ನಲ್ಲಿ ಬಳಕೆಗೆ ಮುಕ್ತವಾಗಿದೆ.

ಜಿಯೋ 4G ವಾಯ್ಸ್:

ಜಿಯೋ 4G ವಾಯ್ಸ್:

ಜಿಯೋ ಡೇಟಾ ಬೆಸ್ ಕರೆ ಸೇವೆಯನ್ನು ನೀಡುತ್ತಿರುವುದರಿಂದ ಜಿಯೋ ಬಳಕೆದಾರರು ಕರೆ ಮಾಡುವ ಸಲುವಾಗಿ ಜಿಯೋ 4G ವಾಯ್ಸ್ ಆಪ್‌ ಬಳಕೆ ಮಾಡಬಹುದಾಗಿದೆ. ಇದು ನಿಮ್ಮ ಕಾಲರ್ ಐಡಿಯಾಗಿಯೂ ಕಾರ್ಯ ನಿರ್ವಹಿಸಲಿದೆ.

ಜಿಯೋ ಮನಿ:

ಜಿಯೋ ಮನಿ:

ಸದ್ಯ ದೇಶದಲ್ಲಿ ಡಿಜಿಟಲ್ ವ್ಯವಹಾರವು ಹೆಚ್ಚಾಗಿರುವ ಹಿನ್ನಲೆಯಲ್ಲಿ ಜಿಯೋ ಮನಿ ಸೇವೆಯನ್ನು ನೀಡಲು ಮುಂದಾಗಿದೆ. ಇದರಲ್ಲಿ ನಿವು ರೀಚಾರ್ಜ್ ಸೇರಿದಂದೆ ಖರೀದಿಯನ್ನು ಮಾಡಬಹುದಾಗಿದೆ.

ಜಿಯೋ ಸೆಕ್ಯೂರಿಟಿ:

ಜಿಯೋ ಸೆಕ್ಯೂರಿಟಿ:

ಜಿಯೋ ತನ್ನ ಬಳಕೆದಾರರ ಮೊಬೈಲ್ ಸುರಕ್ಷತೆಗಾಗಿ ಜಿಯೋ ಸೆಕ್ಯೂರಿಟಿ ಆಪ್ ಬಿಟ್ಟಿದ್ದು, ಇದು ನಿಮ್ಮ ಡೇಟಾವನ್ನು ಭದ್ರವಾಗಿಡಲಿದೆ. ನಿಮ್ಮ ಫೋನ್‌ ಅನ್ನು ಸುರಕ್ಷಿತವಾಗಿಡಲು ಕಾರ್ಯನಿರ್ವಹಿಸಲಿದೆ.

ಜಿಯೋ ನ್ಯೂಸ್‌ ಪೇಪರ್:

ಜಿಯೋ ನ್ಯೂಸ್‌ ಪೇಪರ್:

ಜಿಯೋ ನ್ಯೂಸ್‌ ಪೇಪರ್ ಆಪ್ ಮೊಬೈಲ್‌ನಲ್ಲಿಯೇ ವಿವಿಧ ಭಾಷೆಗಳ, ವಿವಿಧ ನ್ಯೂಸ್‌ ಪೇಪರ್‌ಗಳನ್ನು ಓದುವ ಅವಕಾಶವನ್ನು ಮಾಡಿಕೊಡಲಿದೆ. ಇದರಿಂದ ಗ್ರಾಹಕರು ಬೇರೆ ಬೇರೆ ಆಪ್ ಬಳಸುವುದು ತಪ್ಪಲಿದೆ.

 ಜಿಯೋ ನೆಟ್:

ಜಿಯೋ ನೆಟ್:

ಜಿಯೋ ತನ್ನ ಬಳಕೆದಾರಿಗೆ ಇಂಟರ್‌ನೆಟ್ ಹಂಚಿಕೊಳ್ಳಲು ಜಿಯೋ ನೆಟ್ ಆಪ್ ಬಿಡುಗಡೆ ಮಾಡಿದೆ. ಇಲ್ಲಿ ಲಾಂಗ್ ಇನ್ ಆದರೆ ಉಚಿತ ಹೈ ಸ್ಪಿಡ್ ವೈ-ಫೈ ಪಡೆಯಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Reliance Jio’s offer deadlines have ended now and its free services are no longer available for free. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot