ಕೊನೆಗೂ ಭಾರತಕ್ಕೆ ಬಂದಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9+. ನೀವೀಗ ಈ ಸ್ಮಾರ್ಟ್ಫೋನ್ ಗಳನ್ನು ಫ್ಲಿಪ್ಕಾರ್ಟ್, ಸ್ಯಾಮ್ಸಂಗ್ ಶಾಪ್ ಮತ್ತು ಭಾರತದಾದ್ಯಂತ ಇರುವ ಆಫ್ಲೈನ್ ರಿಟೈಲ್ ಮಳಿಗೆಗಳಲ್ಲಿ ಖರೀದಿಸಬಹುದಾಗಿದೆ. ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9+ ಸ್ಮಾರ್ಟ್ಫೋನ್ ಗಳನ್ನು ಬಾರ್ಸಿಲೋನಾ ದಲ್ಲಿ ನಡೆದ MWC, 2018 ನಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು. ಈ ಫ್ಲ್ಯಾಗ್ಶಿಪ್ ಮೊಬೈಲ್ಗಳನ್ನು ಭಾರತದಲ್ಲಿ ಮಾರ್ಚ್ 6 ರಂದು ಲಾಂಚ್ ಮಾಡಲಾಗಿತ್ತು.
ಸ್ಪೆಸಿಫಿಕೇಶನ್ ಗಳ ವಿಷಯದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9+ ಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ. ಈ ಮೊಬೈಲ್ ಗಳಲ್ಲಿ ಪರಿಷ್ಕೃತ ಡಿಸ್ಪ್ಲೇ, ಸುಧಾರಿತ ಕ್ಯಾಮೆರಾ ಗಳು, ಉತ್ತಮ ಆಡಿಯೋ ಸಿಸ್ಟಮ್, AR ಇಮೋಜಿಗಳು ಮತ್ತು ಚುರುಕಾದ ಬಿಕ್ಸ್ಬೀ ಅನುಭವವನ್ನು ನೀಡಲಾಗಿದೆ.

ಗ್ಯಾಲಕ್ಸಿ S9 64GB ಆವೃತ್ತಿಯ ಬೆಲೆ ರೂ 57,900 ಆಗಿದ್ದು, 256 GB ಆವೃತ್ತಿಯ ಬೆಲೆ ರೂ 65,900 ಆಗಿದೆ. ಇನ್ನು ಗ್ಯಾಲಕ್ಸಿ S9+ ನ 64 GB ಆವೃತ್ತಿಯ ಬೆಲೆ ರೂ 64,900 ಆಗಿದ್ದು 256GB ಆವೃತ್ತಿಯ ಬೆಲೆ ರೂ 72,900. ಸ್ಯಾಮ್ಸಂಗ್ ಈ ಸ್ಮಾರ್ಟ್ಫೋನ್ ಗಳ 128GB ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿಲ್ಲ.
ಸ್ಯಾಮ್ಸಂಗ್ ಗ್ಯಾಲಕ್ಸಿ S9 ಸ್ಪೆಸಿಫಿಕೇಶನ್ಗಳು!
ಗ್ಯಾಲಕ್ಸಿ S9 5.8 ಇಂಚ್ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಹೊಂದಿದ್ದು 18.5:9 ಆಸ್ಪೆಕ್ಟ್ ಅನುಪಾತ ಹೊಂದಿದೆ. ಡಿಸ್ಪ್ಲೇ ಯ ಅಂಚುಗಳು ತುಂಬ ತೆಳುವಾಗಿದ್ದು, ಗ್ಯಾಲಕ್ಸಿ S8 ಗಿಂತಲೂ ಹೆಚ್ಚು ತೆಳುವಾಗಿದೆ. ಸ್ಯಾಮ್ಸಂಗ್ ಸಂಸ್ಥೆ ತಿಳಿಸಿರುವಂತೆ ಅವರು ಡಿಸ್ಪ್ಲೇ ಯ ಬ್ರೈಟ್ನೆಸ್ ಹೆಚ್ಚಿಸಿದ್ದು, ಹೊಸತಾದ ಲ್ಯಾಂಡ್ಸ್ಕೇಪ್ ಮೋಡ್ ಅನ್ನು ಈ ಮೊಬೈಲ್ಗಳಲ್ಲಿ ನೀಡಿದ್ದಾರೆ.

ಗ್ಯಾಲಕ್ಸಿ S9 ನ 12MP ಪ್ರೈಮರಿ ಕ್ಯಾಮೆರಾ ಬೆಳಕಿನ ಸ್ಥಿತಿಗೆ ಅನುಸಾರವಾಗಿ ಅಪರ್ಚರ್ ಅನ್ನು f/1.5 ನಿಂದ f/2.4 ವರೆಗೆ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಇದರ ಪ್ರೈಮರಿ ಕ್ಯಾಮೆರಾ ಸ್ಲೋ-ಮೋಶನ್ ವೀಡಿಯೋ ಗಳನ್ನು ಉನ್ನತ ಗುಣಮಟ್ಟದಲ್ಲಿ ಸೆರೆಹಿಡಿಯುವ ಸಾಮರ್ಥ್ಯವನ್ನೂ ಹೊಂದಿದೆ. ಅಷ್ಟೇ ಅಲ್ಲದೆ ಈ ಕ್ಯಾಮೆರಾ AR ಇಮೋಜಿಗಳನ್ನೂ ಹೊಂದಿದೆ. ಇನ್ನು ಸೆಲ್ಫೀ ಗಳಿಗಾಗಿ ಈ ಸ್ಮಾರ್ಟ್ಫೋನ್ ನಲ್ಲಿದೆ 8MP ಫ್ರಂಟ್ ಕ್ಯಾಮೆರಾ.

ಸ್ಯಾಮ್ಸಂಗ್ ಗ್ಯಾಲಕ್ಸಿ S9+ ಸ್ಪೆಸಿಫಿಕೇಶನ್ಗಳು
ಗ್ಯಾಲಕ್ಸಿ S9+ ಹಿರಿದಾದ 6.2 ಇಂಚ್ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಹೊಂದಿದ್ದು 18.5:9 ಆಸ್ಪೆಕ್ಟ್ ಅನುಪಾತ ಹೊಂದಿದೆ. ತಮ್ಮದೇ ಎಕ್ಸಿನೋಸ್ 9810 ಪ್ರಾಸೆಸರ್ ಹೊಂದಿರುವ ಗ್ಯಾಲಕ್ಸಿ S9+ ಸ್ಮಾರ್ಟ್ಫೋನ್ ಜೊತೆಗೆ 6GB RAM ಹೊಂದಿದೆ. ಈ ಸ್ಮಾರ್ಟ್ಫೋನ್ ಎರಡು ಸ್ಟೋರೇಜ್ ಆವೃತ್ತಿಗಳಲ್ಲಿ ಲಭ್ಯವಿದ್ದು, ಮೂಲ ಆವೃತ್ತಿ 64GB ಆಂತರಿಕ ಸ್ಟೋರೇಜ್ ಹೊಂದಿದ್ದರೆ ಉನ್ನತ ಆವೃತ್ತಿ 256GB ಆಂತರಿಕ ಸ್ಟೋರೇಜ್ ಹೊಂದಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ S9+ 3500 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಆಂಡ್ರಾಯ್ಡ್ ಓರಿಯೋ ಓಎಸ್ ಮತ್ತು ಸ್ಯಾಮ್ಸಂಗ್ ನ ನೂತನ ಗ್ರೇಸ್ UX ಹೊಂದಿದೆ.
ಗ್ಯಾಲಕ್ಸಿ S9+ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದ್ದು ಎರಡು 12MP ಸೆನ್ಸರ್ಗಳನ್ನು ಹೊಂದಿದೆ. ಇದರ ಪ್ರೈಮರಿ ಸೆನ್ಸರ್ ವೈಡ್-ಆಂಗಲ್ ಲೆನ್ಸ್ ಮತ್ತು ಡ್ಯುಯಲ್ -ಅಪರ್ಚರ್ ತಂತ್ರಜ್ಞಾನ ಹೊಂದಿದ್ದು, ಅಪರ್ಚರ್ ಅನ್ನು f/1.5 ನಿಂದ f/2.4 ವರೆಗೆ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಸೆಕೆಂಡರಿ ಸೆನ್ಸರ್ 2x ಟೆಲಿಫೋಟೋ ಸೆನ್ಸರ್ ಆಗಿದ್ದು f/2.4 ಅಪರ್ಚರ್ ಹೊಂದಿದೆ.
ಡ್ಯುಯಲ್ ಕ್ಯಾಮೆರಾ ಸೆಟಪ್ ನ ಎರಡೂ ಇಮೇಜ್ ಸೆನ್ಸರ್ ಗಳು OIS ಸಪೋರ್ಟ್ ಹೊಂದಿದೆ. ಅಲ್ಲದೆ ಈ ಸಾಧನದಲ್ಲಿ 8MP ಸೆಲ್ಫೀ ಕ್ಯಾಮೆರಾ ಕೂಡ ಇದೆ. ಗ್ಯಾಲಕ್ಸಿ S9+ ನ ಕ್ಯಾಮೆರಾ ದ ಇತರ ಫೀಚರ್ಗಳು ಗ್ಯಾಲಕ್ಸಿ S9 ನಂತೆಯೇ ಇದೆ.

ಲಾಂಚ್ ಆಫರ್ಗಳು
ಗ್ಯಾಲಕ್ಸಿ S9 ಅಥವಾ S9+ ಅನ್ನು ಖರೀದಿಸುವ ಗ್ರಾಹಕರು ಲಾಂಚ್ ಆಫರ್ ಆಗಿ ರೂ 6000 ದಷ್ಟು ಕ್ಯಾಶ್ಬ್ಯಾಕ್ ಪಡೆಯಬಹುದಾಗಿದ್ದು, ತಮ್ಮ ಪೇಟಿಯಂ QR ಕೋಡ್ ಅನ್ನು ಸ್ಯಾಮ್ಸಂಗ್ ಆನ್ಲೈನ್ ಸ್ಟೋರ್ ಅಥವಾ ಆಫ್ಲೈನ್ ಸ್ಟೋರ್ ಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ಇದನ್ನು ಪಡೆಯಬಹುದಾಗಿದೆ. HDFC ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರೂ ಕೂಡ ರೂ 6000 ಕ್ಯಾಶ್ಬ್ಯಾಕ್ ಪಡೆಯಲು ಅರ್ಹರಾಗಿದ್ದಾರೆ.
ನೀವು ನಿಮ್ಮ ಹಳೆಯ ಸಾಧನವನ್ನು ಗ್ಯಾಲಕ್ಸಿ S9 ಅಥವಾ ಗ್ಯಾಲಕ್ಸಿ S9+ ನೊಂದಿಗೆ ಎಕ್ಸ್ಚೇಂಜ್ ಮಾಡಿದರೆ ಅದಕ್ಕೆ ನಿಗದಿಯಾಗಿರುವ ಮೊತ್ತಕ್ಕೆ ಹೆಚ್ಚುವರಿಯಾಗಿ ರೂ 6000 ಬೋನಸ್ ಪಡೆಯಬಹುದು.
ಏರ್ಟೆಲ್ ಆನ್ಲೈನ್ ಸ್ಟೋರ್ ನಲ್ಲಿ ರೂ 9,900 ಪಾವತಿಸುವ ಮೂಲಕ ಗ್ರಾಹಕರು ಈ ಸ್ಮಾರ್ಟ್ಫೋನ್ ಗಳನ್ನು ಪ್ರಿ-ಆರ್ಡರ್ ಮಾಡಬಹುದಾಗಿದೆ. ಏರ್ಟೆಲ್ ನ ಪೋಸ್ಟ್ಪೇಯ್ಡ್ ಗ್ರಾಹಕರು ಈ ಮೂಲಕ ಕೇವಲ ರೂ 2,499ಕ್ಕೆ 2TB ಡೇಟಾ ಮತ್ತು ಮುಂದಿನ 24 ತಿಂಗಳುಗಳ ಕಾಲ ಇನ್ನೂ ಅನೇಕ ಲಾಭಗಳನ್ನು ಪಡೆಯಬಹುದಾಗಿದೆ.
ರಿಲಯೆನ್ಸ್ ಜಿಯೋ ಗ್ರಾಹಕರು ಗ್ಯಾಲಕ್ಸಿ S9/S9+ ಅನ್ನು ಖರೀದಿಸಿದರೆ ಕೇವಲ ರೂ 4999 ಕ್ಕೆ 12 ತಿಂಗಳುಗಳ ಕಾಳ 1TB ಡೇಟಾ ಪಡೆಯಬಹುದಾಗಿದೆ. ಇನ್ನು ವೊಡಾಫೋನ್ ಪೋಸ್ಟ್ಪೇಯ್ಡ್ ಗ್ರಾಹಕರು ರೂ 999 ಅಥವಾ ಅಧಿಕ ಮೊತ್ತದ ರೀಚಾರ್ಜ್ ಮಾಡುವ ಮೂಲಕ 1 ವರ್ಷದ ಉಚಿತ ನೆಟ್ಫ್ಲಿಕ್ಸ್ ಸಬ್ಸ್ಕ್ರಿಪ್ಶನ್ ಪಡೆಯಬಹುದಾಗಿದೆ. ಇನ್ನು ಪ್ರಿಪೇಯ್ಡ್ ಗ್ರಾಹಕರು ರೂ 199 ರ ರಿಚಾರ್ಜ್ ಮಾಡಿಸಿದರೆ ಅನಿಯಮಿತ ವಾಯ್ಸ್ ಕರೆಗಳು ಮತ್ತು 1.4GB ಡೇಟಾ ಪ್ರತಿ ದಿನ ಪಡೆಯುತ್ತಾರಲ್ಲದೆ ಮುಂದಿನ 10 ರೀಚಾರ್ಜ್ ಗಳಿಗೆ ಪ್ರತಿ ತಿಂಗಳು 10GB ಉಚಿತ ಡೇಟಾ ಪಡೆಯುತ್ತಾರೆ.
ಆಪ್ಗ್ರೇಡ್ ಮಾಡಬೇಕೇ?
ಮೇಲ್ನೋಟಕ್ಕೆ ಸ್ಯಾಮ್ಸಂಗ್ ಗ್ಯಾಲಕ್ಸಿ S9 ನಲ್ಲಿ ಗ್ಯಾಲಕ್ಸಿ S8 ಗೆ ಹೋಲಿಸಿದರೆ ಹೆಚ್ಚೇನೂ ಸುಧಾರಣೆಗಳು ಕಂಡುಬರುವುದಿಲ್ಲ. ಆದರೆ ಈ ಸ್ಮಾರ್ಟ್ಫೋನ್ ನಲ್ಲಿ AR ಇಮೋಜಿ, AKG ಟ್ಯೂನ್ಡ್ ಡ್ಯುಯಲ್ ಫ್ರಂಟ್ ಸ್ಪೀಕರ್ ಮೊದಲಾದ ಹೊಸ ಫೀಚರ್ಗಳಿವೆ.
ಹಾಗೆ ನೋಡಿದರೆ ಗ್ಯಾಲಕ್ಸಿ S9+ ಉತ್ತಮ ಆಯ್ಕೆ ಎನ್ನಬಹುದು. ಹಿರಿದಾದ ಡಿಸ್ಪ್ಲೇ ಮಾತ್ರವಲ್ಲದೆ ಗ್ಯಾಲಕ್ಸಿ S9+ ನಲ್ಲಿ ಹೆಚ್ಚಿನ RAM ಮತ್ತು ಡ್ಯುಯಲ್ ರೇರ್ ಕ್ಯಾಮೆರಾ ಗಳು ಕೂಡ ಇವೆ. ನಿಮಗೆ ಬಜೆಟ್ ನ ತೊಂದರೆ ಇಲ್ಲದಿದ್ದಲ್ಲಿ ನೀವು ಗ್ಯಾಲಕ್ಸಿ S9+ ಅನ್ನು ಖರೀದಿಸುವುದೇ ಉತ್ತಮ ಎಂದು ನಮ್ಮ ಅಭಿಪ್ರಾಯ. ಸ್ಪೆಸಿಫಿಕೇಶನ್ ಮತ್ತು ಫೀಚರ್ಗಳನ್ನು ಗಮನಿಸಿದರೆ ಆಪಲ್ ಐಫೋನ್ X ಗೆ ಸಾಟಿಯಾಗಬಲ್ಲ ಸ್ಮಾರ್ಟ್ಫೋನ್ ಇದೊಂದೇ ಎಂದರೆ ತಪ್ಪಾಗಲಾರದು
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.