ಚಾರ್ಜರ್ ಒಂದು..! ಚಾರ್ಜ್‌ ಆಗುವುದು ಎರಡು ಡಿವೈಸ್‌ಗಳಿಗೆ..!

By GizBot Bureau
|

ಈಗಿನ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ನಾವು ಹೆಚ್ಚೆಚ್ಚು ವೈಶಿಷ್ಟ್ಯತೆಗಳು ಇರಬೇಕು ಎಂದು ಭಾವಿಸುತ್ತೇವೆ. ಅದೇ ಕಾರಣಕ್ಕೆ ತಯಾರಿಕಾ ಕಂಪೆನಿಗಳೂ ಕೂಡ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಹೆಚ್ಚಿನ ಸವಲತ್ತುಗಳನ್ನು ಒಂದೇ ಡಿವೈಸ್ ನಲ್ಲಿ ನೀಡುವಲ್ಲಿ ಶ್ರಮ ವಹಿಸುತ್ತಿವೆ.

ಅದರಲ್ಲೂ ಈ ಮೊಬೈಲ್ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ನಡೆಯುತ್ತಿರುವ ಕ್ರಾಂತಿ ಬಹಳ ದೊಡ್ಡದು. ಅದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಸ್ಯಾಮ್ ಸಂಗ್ ಕಂಪೆನಿ ತನ್ನ ಹೊಸ ಮೊಬೈಲ್ ನಲ್ಲಿ ವೈಶಿಷ್ಟ್ಯತೆಗಳ ಸರಮಾಲೆಯನ್ನೇ ಹೊತ್ತು ಬರುವ ನಿರೀಕ್ಷೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ.

ಚಾರ್ಜರ್ ಒಂದು..! ಚಾರ್ಜ್‌ ಆಗುವುದು ಎರಡು ಡಿವೈಸ್‌ಗಳಿಗೆ..!

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಈ ವರ್ಷದ ಒಂದು ಸ್ಪೆಷಲ್ ಫೋನ್ ಆಗಿದೆ. ಈಗ ಬಿಡುಗಡೆಗೊಂಡಿರುವ ಅದರ ಚಿತ್ರವು ಮತ್ತಷ್ಟು ಮಾಹಿತಿಗಳನ್ನು ಹೊರಹಾಕುತ್ತಿದೆ. ಹೌದು ಟಿಪ್ಸ್ಟರ್ ರೋಲ್ಯಾಂಡ್ ಕ್ವಾಂಡ್ಟ್ ನಲ್ಲಿ ಪೋಸ್ಟ್ ಆಗಿರುವ ಚಿತ್ರವು ಮುಂಬರುವ ಗ್ಯಾಲಕ್ಸಿ ನೋಟ್ 9 ಬಗ್ಗೆ ಕೆಲವು ಕುತೂಹಲಕಾರಿ ಮಾಹಿತಿಗಳನ್ನು ನೀಡುತ್ತಿದೆ. ಅದರಲ್ಲಿರುವ ಚಿತ್ರದ ಅನುಸಾರ ಈ ಫೋನಿನ ಚಾರ್ಜರ್ ವಯರ್ ಲೆಸ್ ಚಾರ್ಜರ್ ಆಗಿರಲಿದೆ.

ಈ ಚಿತ್ರದ ಅನುಸಾರ ಫಾಸ್ಟ್ ಚಾರ್ಜರ್ ಇದಾಗಿದ್ದು ವಯರ್ ಲೆಸ್ ಚಾರ್ಜರ್ ಡುಯೋ ಜೊತೆಗೆ ಮಾಡೆಲ್ ನಂಬರ್ ಇಪಿ-ಎನ್6100 ಮತ್ತು ಔಟ್ ಪುಟ್ 25 ವ್ಯಾಟ್ ಆಗಿರಲಿದೆ ಎಂದು ತಿಳಿಸುತ್ತಿದೆ. ಅಂದರೆ ಇದು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ನ ಸ್ಯಾಮಸಂಗ್ ವಯರ್ ಲೆಸ್ ಚಾರ್ಜರ್ ಡುಯೋ(ಇಪಿ-ಎನ್6100) ಆಗಿದೆ. ಫೋನ್ ಜೊತೆಗೆ ಗ್ಯಾಲಕ್ಸಿ ವಾಚ್ ಕೂಡ ಇದರಲ್ಲಿ ಚಾರ್ಜ್ ಆಗಲಿದೆ. ಜುಲೈ 21,2018 ಕ್ಕೆ ಬಿಡುಗಡೆಗೊಂಡ ಈ ಚಿತ್ರ ಗಮನಿಸಿದರೆ ತಿಳಿಯುತ್ತದೆ.

ಹೌದು, ಗ್ಯಾಲಕ್ಸಿ ನೋಟ್ 9 ನ್ನು ಮಾತ್ರ ಈ ಚಾರ್ಜರ್ ಚಾರ್ಜ್ ಮಾಡುತ್ತದೆ ಎಂದು ಭಾವಿಸಬೇಡಿ. ಒಂದೇ ಚಾರ್ಜರ್ ಒಂದೇ ಸಮಯಕ್ಕೆ ಎರಡೆರಡು ಡಿವೈಸ್ ನ್ನು ಚಾರ್ಜ್ ಮಾಡುವ ವಯರ್ ಲೆಸ್ ಚಾರ್ಜರ್ ಇದಾಗಿದೆ. ಮುಂಬರುವ ದಿನಗಳಲ್ಲಿ ಬಿಡುಗಡೆಗೊಳ್ಳಲಿರುವ ಸ್ಯಾಮ್ ಸಂಗ್ ವಾಚ್ ನ್ನು ಕೂಡ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಈ ವಯರ್ ಲೆಸ್ ಚಾರ್ಜರ್ ಹೊಂದಿರಲಿದೆ ಎಂದು ತಿಳಿದುಬಂದಿದೆ.

ಚಾರ್ಜರ್ ಒಂದು..! ಚಾರ್ಜ್‌ ಆಗುವುದು ಎರಡು ಡಿವೈಸ್‌ಗಳಿಗೆ..!

ಎರಡು ಡಿವೈಸ್ ಗಳಲ್ಲಿ ವಯರ್ ಲೆಸ್ ಆಗಿ ಚಾರ್ಜ್ ಮಾಡುವ ಅನುಭವವನ್ನು ಗ್ರಾಹಕ ಇದುವರೆಗೆ ಪಡೆದಿರಲು ಸಾಧ್ಯವಿಲ್ಲ. ಸ್ಯಾಮ್ ಸಂಗ್ ಮೂಲಕ ಆ ಅನುಭವವು ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆ ಇದೆ ಮತ್ತು ಎರಡೂ ಡಿವೈಸ್ ಗಳೂ ವೇಗವಾಗಿ ಚಾರ್ಜ್ ಆಗುತ್ತದೆ ಎಂದು ಹೇಳಲಾಗುತ್ತಿದೆ.

ವಯರ್ ಲೆಸ್ ಚಾರ್ಜರ್ ಅನ್ನುವುದು ಮುಂದಿನ ದಿನಗಳಲ್ಲಿ ಬೇಝಲ್ ಲೆಸ್ ಡಿಸ್ಪ್ಲೇ ಅಥವಾ ನಾಚ್ ನಂತೆಯೇ ಸ್ಮಾರ್ಟ್ ಫೋನ್ ದುನಿಯಾದ ಆಕರ್ಷಣೆಯಾಗುವ ಸಾಧ್ಯತೆ ಇದೆ. ನಿಮಗೆ ನೆನಪು ಮಾಡುವುದಾದರೆ ಆಪಲ್ ಕೂಡ ಇದೇ ರೀತಿ ಏರ್ ಪವರ್ ಅನ್ನುವ ವಯರ್ ಲೆಸ್ ಮ್ಯಾಟ್ ನ್ನು ಬಿಡುಗಡೆಗೊಳಿಸುವ ಬಗ್ಗೆ ಸುದ್ದಿಗಳು ಬಂದಿತ್ತು ಆದರೆ ಅದು ಇದುವರೆಗೂ ಬಿಡುಗಡೆಯಾಗಲಿಲ್ಲ.

ಆದರೆ ಐಫೋನ್ ಎಕ್ಸ್, ಐಫೋನ್ 8, 8 ಪ್ಲಸ್ ಮತ್ತು ಏರ್ ಪಾಡ್ಸ್, ಆಪಲ್ ವಾಚ್ ನ ಸರಣಿ 3 ಕ್ಕೆ ಹೊಂದಿಕೆಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಈಗಿರುವ ಗಾಳಿಸುದ್ದಿ ಏನೆಂದರೆ ಸೆಪ್ಟೆಂಬರ್ 2018 ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಸ್ಯಾಮ್ ಸಂಗ್ ಅಗಸ್ಟ್ 9 ರಂದು ನ್ಯೂಯಾರ್ಕ್ ನ ಬ್ರೂಕ್ಲಿನ್ ನ ಬಾರ್ಕ್ಲೇಸ್ ಸೆಂಟರ್ ನಲ್ಲಿ ತನ್ನ ಅನ್ ಪ್ಯಾಕ್ಡ್ ಇವೆಂಟ್ ಒಂದರಲಲಿ ಗ್ಯಾಲಕ್ಸಿ ನೋಟ್ 9 ನ್ನು ಬಿಡುಗಡೆಗೊಳಿಸುತ್ತದೆ.ಈಗಿರುವ ಮಾಹಿತಿಯ ಪ್ರಕಾರ 6.4 ಇಂಚಿನ ಸ್ಕ್ರೀನ್ ಡಿಸ್ಪ್ಲೇ ಮತ್ತು 4000mAh ಬ್ಯಾಟರಿಯನ್ನು ಇದು ಹೊಂದಿರಲಿದೆ.

ಸ್ಯಾಮ್ ಸಂಗ್ ಎಸ್ 9+ ನಲ್ಲಿರುವಂತೆ 12ಎಂಪಿ ಸೆನ್ಸರ್ ನ ಹಿಂಭಾಗದ ಕ್ಯಾಮರಾ ಮತ್ತು 8ಎಂಪಿ ಸಾಮರ್ಥ್ಯದ ಸೆಲ್ಫೀ ಕ್ಯಾಮರಾವು ಈ ಮೊಬೈಲ್ ನಲ್ಲೂ ಇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸ್ಯಾಮ್ ಸಂಗ್ ನ ISOCELLL ತಂತ್ರಜ್ಞಾನವನ್ನು ಹೊಂದಿರಲಿದ್ದು ಬೆಳಕಿನ ಸೂಕ್ಷ್ಮತೆಯನ್ನು ಶೇಕಡಾ 15 ರಷ್ಟು ಹೆಚ್ಚಿಸಿಕೊಂಡಿರಲಿದೆ ಎಂಬ ಊಹೆಯನ್ನು ಮಾಡಲಾಗುತ್ತಿದೆ.

ಗ್ಯಾಲಕ್ಸಿ ನೋಟ್ 9 ನಲ್ಲಿ ಬೆರಳಚ್ಚು ತಂತ್ರಜ್ಞಾನವು ಇರುವ ಸಾಧ್ಯತೆ ಇದೆ ಎಂದು ಕೆಲವು ವರದಿಗಳು ಹೇಳುತ್ತಿದೆ.ಗ್ಯಾಲಕ್ಸಿ ನೋಟೋ ಎಸ್ ಪೆನ್ ಬ್ಲೂಟೂತ್ ನ ಕಾರ್ಯಕ್ಷಮತೆ ಮತ್ತು ಸಂಗೀತ ಹಿನ್ನೆಲೆ ಬೆಂಬಲದೊಂದಿಗೆ ಬರುವ ಸಾಧ್ಯತೆಯ ಬಗ್ಗೆ ಕೆಲವು ವದಂತಿಗಳು ಹಬ್ಬಿವೆ. ಇದು ಎಲ್ಲಾ ಸಂದರ್ಬಕ್ಕೂ ಕೂಡ ಒಂದು ಅಧ್ಬುತ ಅಪ್ ಡೇಟ್ ಆಗಿರಲಿದೆ.

ಸ್ಟೋರೇಜ್ ವಿಚಾರವನ್ನು ಪ್ರಸ್ತಾಪಿಸುವುದಾದರೆ ಗ್ಯಾಲಕ್ಸಿ ನೋಟ್ 9 64ಜಿಬಿ ಮತ್ತು 128 ಜಿಬಿ, 256 ಜಿಬಿ ಸಾಮರ್ಥ್ಯದ ಮೂರು ಆವೃತ್ತಿಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ 512 ಜಿಬಿಯ ಇನ್ನೊಂದು ಆವೃತ್ತಿ ಕೂಡ ಬರುತ್ತಿದೆ ಎಂಬ ವದಂತಿಗಳಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ನಲ್ಲಿ ಇದು ರನ್ ಆಗುತ್ತದೆ. ಆದರೆ ಭಾರತೀಯರಿಗೆ ಇತರೆ ಎಲ್ಲಾ ಸ್ಯಾಮ್ ಸಂಗ್ ಫೋನ್ ಗಳಂತೆ Exynos ವೇರಿಯಂಟ್ ನಲ್ಲಿ ಬರುವ ಸಾಧ್ಯತೆ ಇದೆ. ಗ್ಯಾಲಕ್ಸಿ 9 ಆಂಡ್ರಾಯ್ಡ್ ಓರಿಯೋ 8.1ರಲ್ಲಿ ರನ್ ಆಗುತ್ತದೆ.

ಹೊಸ ರೀತಿಯ ಚಾರ್ಜರ್ ನೊಂದಿಗೆ ಬರುವ ಈ ಫೋನ್ ಹೇಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕು.

Best Mobiles in India

English summary
Samsung Wireless Charger Duo may launch on August 9, will charge 2 devices at same time. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X