Subscribe to Gizbot

ಒಮ್ಮೆಗೆ ಒಂದಕ್ಕಿಂತ ಹೆಚ್ಚು ಜಿಯೋ ಫೋನ್ ಬುಕ್ ಮಾಡುವುದು ಹೇಗೆ..?

Written By:

ಈಗಾಗಲೇ ಸದ್ದು ಮಾಡುತ್ತಿರುವ ಜಿಯೋ ಫೋನ್ ಇದೇ ತಿಂಗಳು ಲಾಂಚ್ ಆಗಲಿದ್ದು, ಬುಕಿಂಗ್ ಸಹ ಶುರುವಾಗಲಿದೆ. ಬಿಡುಗಡೆಯ ಸಂದರ್ಭದಲ್ಲಿಯೇ ಒಬ್ಬರಿಗೆ ಒಂದೇ ಫೋನ್ ಎನ್ನುವ ನಿಯಮವನ್ನು ಅಂಬಾನಿ ಹೇಳಿದಿದ್ದರು. ಈ ಹಿನ್ನಲೆಯಲ್ಲಿ ನಿಮಗೆ ಒಂದಕ್ಕಿಂತ ಹೆಚ್ಚಿನ ಫೋನ್ ಬೇಕಿದ್ದಲ್ಲಿ ಪಡೆಯುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಓದಿರಿ: ಪೇಟಿಎಂ ಮಾಲ್ ಆಫರ್: ಸ್ಮಾರ್ಟ್‌ಫೋನ್‌ಗಳ ಮೇಲೆ ರೂ.20000 ಕ್ಯಾಷ್ ಬ್ಯಾಕ್.!

ಒಮ್ಮೆಗೆ ಒಂದಕ್ಕಿಂತ ಹೆಚ್ಚು ಜಿಯೋ ಫೋನ್ ಬುಕ್ ಮಾಡುವುದು ಹೇಗೆ..?

ಆಗಸ್ಟ್ 24ರಿಂದ ಈ ಫೋನ್ ಬುಕಿಂಗ್ ಶುರುವಾಗಲಿದ್ದು, ಸೆಪ್ಟಂಬರ್ ತಿಂಗಳಿನಿಂದ ಈ ಫೋನ್ ಗ್ರಾಹಕರಿಗೆ ದೊರಯಲಿದೆ. ಅದುವೇ ಆದ್ಯತೆ ಮೇರೆಗೆ. ಒಟ್ಟು 50 ಕೋಟಿ ಫೋನ್‌ಗಳನ್ನು ಮಾರಾಟ ಮಾಡುವ ಯೋಜನೆಯನ್ನು ರೂಪಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಬ್ಬರಿಗೆ ಒಂದೇ ಫೋನ್:

ಒಬ್ಬರಿಗೆ ಒಂದೇ ಫೋನ್:

ಈಗಾಗಲೇ ಜಿಯೋ ಫೋನ್ ಪರಿಚಯಿಸುವ ಸಂದರ್ಭದಲ್ಲಿಯೇ ಒಬ್ಬರಿಗೆ ಒಂದೇ ಫೋನ್ ದೊರೆಯಲಿದೆ. ಕಾರಣ ಬೇಡಿಕೆ ಹೆಚ್ಚಿರುವುದರಿಂದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನಿಮಗೆ ಒಂದಕ್ಕಿಂತ ಹೆಚ್ಚಿನ ಫೋನ್ ಬೇಕಾಗಿದ್ದಲ್ಲಿ ಅದನ್ನು ಹೇಗೆ ಪಡೆಯುವುದು ಎಂಬುದನ್ನು ಮುಂದೆ ನೋಡುವ.

ಆನ್‌ಲೈನಿನಲ್ಲಿ ಮಾತ್ರವೇ ಸಾಧ್ಯ:

ಆನ್‌ಲೈನಿನಲ್ಲಿ ಮಾತ್ರವೇ ಸಾಧ್ಯ:

ಮೊದಲಿಗೆ ಜಿಯೋ ವೆಬ್‌ಸೈಟಿಗೆ ಭೇಟಿ ನೀಡಿ, ವೆಬ್‌ಸೈಟಿನಲ್ಲಿ ಹಾಕಿರುವ ' ಇಂಡಿಯಾ ಕಾ ಸ್ಮಾರ್ಟ್‌ಫೋನ್ ಜಿಯೋ ಫೋನ್' ಚಿತ್ರದೊಂದಿಗೆ ಇರುವ '"Keep me posted" ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ವೈಯಕ್ತಿಕ ಮತ್ತು ಬಿಸನೆಸ್ ಎಂಬ ಎರಡು ಆಯ್ಕೆಗಳು ಕಾಣಿಸಿಕೊಳ್ಳಲಿದೆ.

ಬಿಸನೆಸ್ ಆಯ್ಕೆ ಮಾಡಿಕೊಳ್ಳಿ:

ಬಿಸನೆಸ್ ಆಯ್ಕೆ ಮಾಡಿಕೊಳ್ಳಿ:

ಬಿಸನೆಸ್ ಆಯ್ಕೆ ಮಾಡಿಕೊಂಡ ನಂತರದಲ್ಲಿ ನಿಮ್ಮ ಮಾಹಿತಿಗಳನ್ನು ಅಲ್ಲಿ ತುಂಬಿರಿ, ಅಲ್ಲದೇ ನಿಮಗೆ ಎಷ್ಟು ಫೋನ್‌ಗಳು ಬೇಕು ಎಂಬುದನ್ನು ನಿರ್ಧರಿಸಿ. ಒಂದಕ್ಕಿಂತ ಹೆಚ್ಚಿನ ಫೋನ್ ಬುಕ್ ಮಾಡಬೇಕಾಗಿದ್ದರೇ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಒಪ್ಪಿಗೆ ಸೂಚಿಸಿ:

ಒಪ್ಪಿಗೆ ಸೂಚಿಸಿ:

ಅಲ್ಲಿ ಕೇಳಿರುವ ಮಾಹಿತಿಯನ್ನು ತುಂಬಿದ ನಂತರ ಟರ್ಮ್ಸ್ ಅಂಡ್ ಕಂಡಿಷನ್ ಆಯ್ಕೆಯ ಮೇಲೆ ಒಪ್ಪಿಗೆ ಸೂಚಿಸಿ ಇಷ್ಟು ಮಾಡಿದ ನಂತರದಲ್ಲಿ ನಿಮ್ಮ ರಿಕ್ವೇಸ್ಟ್ ಅನ್ನು ಸಬ್‌ಮಿಟ್ ಮಾಡಿರಿ.

50 ಕೋಟಿ ಪೋನ್ ಮಾರಾಟ:

50 ಕೋಟಿ ಪೋನ್ ಮಾರಾಟ:

ರಿಲಯನ್ಸ್ ಮಾಲೀಕತ್ವದ ಜಿಯೋ ಹೊಸದಾಗಿ ಬಿಡುಗಡೆ ಮಾಡಲಿರುವ ಜಿಯೋ ಫೋನ್ ಅನ್ನು ಸುಮಾರು 50 ಭಾರತೀಯರ ಕೈಗೆ ಸೇರಿಸಲು ಮುಂದಾಗಿದೆ. 2G-3G ಗ್ರಾಹಕರಿಗೆ 4G ಸೇವೆಯ ರುಚಿ ತೋರಿಸಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Jio Phone booking date is August 24, and you can get updates regarding the 4G mobile via SMS and email. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot