ಫೇಸ್‍ಬುಕ್ ನೊಂದಿಗೆ ಸ್ಪರ್ಧಿಸಲು ಸ್ನಾಪ್‍ಚಾಟ್ ಹೊಸ ಫೀಚರ್ ಹೊರ ತಂದಿದೆ

  ನಾವು ಸ್ನಾಪ್‍ಚಾಟ್ ಇನ್ನು ಮುಂದೆ ಆಸಕ್ತಿದಾಯಕವಾಗಿರುವುದಿಲ್ಲಾ ಎಂದು ಯೋಚಿಸುತ್ತಿರುವಾಗಲೇ, ಅದು ತನ್ನ ಇನ್ನೊಂದು ಫೀಚರ್ ನೊಂದಿಗೆ ಬಂದಿದೆ. ಬೇರೆ ಬಳಕೆದಾರರು ಪೋಸ್ಟ್ ಮಾಡಿದ ಕಥೆಗಳನ್ನು ಹುಡುಕಲು ಅವಕಾಶ ನೀಡಿದೆ. ಸ್ನಾಪ್ ಐಎನ್‍ಸಿ ನಿನ್ನೆ ಘೋಷಿಸಿದೆ.

  ಫೇಸ್‍ಬುಕ್ ನೊಂದಿಗೆ ಸ್ಪರ್ಧಿಸಲು  ಸ್ನಾಪ್‍ಚಾಟ್ ಹೊಸ ಫೀಚರ್ ಹೊರ ತಂದಿದೆ

  ಈ ಹೆಜ್ಜೆ ಇಡಲು ಮುಖ್ಯ ಕಾರಣ ಅದರ ಪ್ರತಿಸ್ಪರ್ಧಿ ಫೇಸ್‍ಬುಕ್ ಸ್ನಾಪ್‍ಚಾಟ್ ನಂತಹುದೇ ತಂದದ್ದು. ಮುಖ್ಯ ಮೊಬೈಲ್ ಆಪ್ ನಲ್ಲಿ ಫಿಲ್ಟರ್‍ಗಳೊಂದಿಗೆ ಕಥೆಗಳ ರೂಪ ಇರುವ ಫೀಚರ್ ನೀಡಿತು. ಈ ಫೀಚರ್ ಆಗಲೆ ಸ್ನಾಪ್‍ಚಾಟ್ ನಲ್ಲಿ 'ಅವರ್ ಸ್ಟೋರಿ’ ಎನ್ನುವ ಆಯ್ಕೆ ಮೊದಲೇ ಇತ್ತು, ಇದರಲ್ಲಿ ಬಳಕೆದಾರರು ಜನರು ಸಾರ್ವಜನಿಕವಾಗಿ ಪೋಸ್ಟ್ ಮಾಡಿದ ಚಿತ್ರಗಳನ್ನು ನೋಡಬಹುದಿತ್ತು. ಈಗ ಶಬ್ದಗಳ ಆಧಾರದ ಮೇಲೆ ಕಥೆಗಳನ್ನು ಹುಡುಕಬಹುದಾಗಿದೆ. ಅದೇನಿದ್ದರೂ ಆ ಚಿತ್ರಗಳು ಮತ್ತು ವೀಡಿಯೊಗಳು 24 ಗಂಟೆಗಳ ವರೆಗೆ ಹೋಗುವುದಿಲ್ಲಾ.

  ಉದಾಹರಣೆಗೆ, ಈಗ ನೀವು ಹುಡುಕುವ ಫೀಚರ್ ಅನ್ನು ನಾಯಿಮರಿಗಳ ವಿಷಯ ಘಟನೆಗಳಿಗೆ ಸಂಬಂಧಿಸಿದ ಸಂಗೀತ ದಂತಹ 'ಸ್ನಾಪ್ಸ್’ ಹುಡುಕಲು ಉಪಯೋಗಿಸಬಹುದು.

  “ನಾವು ಸ್ನಾಪ್ಸ್ ನಲ್ಲಿ 'ಅವರ್ ಸ್ಟೋರಿ’ ಕಳಿಸಿದ ಮೇಲೆ ಏನಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಲು ಮತ್ತು ಆಧುನಿಕ ಯಂತ್ರ ಕಲಿಕೆಯಿಂದ ಹೊಸ ಕಥೆ ರಚಿಸಲು ಹೊಸ ದಾರಿಯನ್ನು ಕಂಡುಹಿಡಿದಿದ್ದೇವೆ. ಅದರ ಫಲಿತಾಂಶ ಅದ್ಭುತವಾಗಿದೆ. ನೀವು 1 ಮಿಲಿಯನ್ ಗಿಂತ ಹೆಚ್ಚಿನ ಏಕ ಮಾತ್ರ ಕಥೆಗಳನ್ನು ಹುಡುಕಬಹುದು” ಎಂದು ಕಂಪನಿ ಬ್ಲೊಗ್ ಪೊಸ್ಟ್ ನಲ್ಲಿ ಹೇಳಿತು.

  ಓದಿರಿ: ಕಂಫರ್ಟ್ ಎನ್ನಿಸುವ ಬಟ್ಟೆ ನೀಡುತ್ತದೆ ಈ ತಂತ್ರಜ್ಞಾನ!!

  ಶುಕ್ರವಾರದಿಂದ ಬಳಕೆದಾರರು ಈ ಸರ್ಚ್ ಫೀಚರ್ ಉಪಯೋಗಿಸಿ 1 ಮಿಲಿಯನ್ ಗಿಂತ ಹೆಚ್ಚಿನ ಕಥೆಗಳನ್ನು ಹುಡುಕಬಹುದೆಂದು ಕೂಡ ತಿಳಿಸಿದರು. ಕಂಪನಿ ಈಗಾಗಲೇ ಯುಎಸ್ ನ ಕೆಲ ಪಟ್ಟಣಗಳಲ್ಲಿ ಇದನ್ನು ಅನ್ವಯಿಸಲಾಗಿದೆ. ಇನ್ನೊಂದು ವಿಷಯವೇನೆಂದರೆ ಈ ಹುಡುಕಾಟದ ಸಂಗ್ರಹದಲ್ಲಿ ಯಾವುದೇ ಜಾಹಿರಾತುಗಳಿರುವುದಿಲ್ಲಾ. ಈಗ ಈ ಆಪ್ ತುಂಬಾ ನಿರತಗೊಳ್ಳಲಿದೆ.

  ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಡಿಜಿಟಲ್ ನಲ್ಲಿ ಶೃಂಗಾರಗೊಳಿಸುವ ಪರಿಕಲ್ಪನೆಯನ್ನು ಪರಿಚಯಗೊಳಿಸಿದ ಶ್ರೇಯ ಸ್ನಾಪ್ ಚಾಟ್ ಗೆ ಹೋಗುತ್ತದೆ ಜೊತೆಗೆ ಯುವಕರಲ್ಲಿ ಇದು ತುಂಬಾ ಜನಪ್ರೀಯವಾಗಿದೆ. ಆದರೂ ಇದು ಸತತವಾಗಿ ಫೇಸ್‍ಬುಕ್ ಮತ್ತು ಇನ್ಸ್‍ಟಾಗ್ರಾಮ್ ನಂತಹ ದೈತ್ಯರೊಡನೆ ಸ್ಪರ್ಧೆಯನ್ನು ಎದುರಿಸಬೇಕಾಗಿದೆ.

  ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  Read more about:
  English summary
  Snapchat has added a new search feature that will enable the users to look for publicly posted pictures and videos from anywhere.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more