ಹೊಸ ವಿನ್ಯಾಸದೊಂದಿಗೆ ಸ್ನ್ಯಾಪ್‌ಚಾಟ್ ಬಳಕೆದಾರರೆಡೆಗೆ

By: Shwetha PS

ಸ್ನ್ಯಾಪ್‌ಚಾಟ್‌ನ ಪೋಷಕ ಕಂಪನಿಯಾದ ಸ್ನ್ಯಾಪ್ ಅಪ್ಲಿಕೇಶನ್‌ನ ಮೂರನೇ ತ್ರೈಮಾಸಿಕದ ಆದಾಯವನ್ನು ವರದಿ ಮಾಡಿದೆ. ವರದಿಯ ಪ್ರಕಾರ ಸ್ನ್ಯಾಪ್‌ಚಾಟ್ ದಿನಕ್ಕೆ 4.5 ಮಿಲಿಯನ್ ಬಳಕೆದಾರರನ್ನು ಮಾತ್ರ ಮೂರನೇ ತ್ರೈಮಾಸಿಕದಲ್ಲಿ ಪಡೆದುಕೊಂಡಿದೆ. ಅದಾಗ್ಯೂ ಸ್ನ್ಯಾಪ್‌ಚಾಟ್ ಸಿಇಒ ಇವಾನ್ ಸ್ಪೈಗಲ್ ಆಸಕ್ತಿಕರವಾದ ಅಂಶವೊಂದನ್ನು ಬಹಿರಂಗಪಡಿಸಿದ್ದಾರೆ.

ಹೊಸ ವಿನ್ಯಾಸದೊಂದಿಗೆ ಸ್ನ್ಯಾಪ್‌ಚಾಟ್ ಬಳಕೆದಾರರೆಡೆಗೆ

ಅದೇನೆಂದರೆ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಾಗಿ ಅಪ್ಲಿಕೇಶನ್ ಸಂಪೂರ್ಣ ಮರುವಿನ್ಯಾಸಗೊಳ್ಳಲಿದೆ ಎಂದಾಗಿದೆ. ಇನ್ನಷ್ಟು ಸರಳ ಹಂತಗಳಲ್ಲಿ ಸ್ನ್ಯಾಪ್‌ಚಾಟ್ ಬಳಕೆದಾರ ಸ್ನೇಹಿಯಾಗಲಿದೆ. ಆದರೆ ಈ ಅಪ್ಲಿಕೇಶನ್‌ನ ಮರುವಿನ್ಯಾಸ ಆವೃತ್ತಿಯ ದಿನಾಂಕವನ್ನು ಸ್ಪೈಗಲ್ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ ಡಿಸೆಂಬರ್ 4 ರಂದು ಇದು ಹೊರಬರಲಿದೆ ಎಂದಾಗಿದೆ.

ಅಪ್ಲಿಕೇಶನ್‌ನ ಕೆಲವು ಭಾಗಗಳು ಹಿಂದಿನಂತೆಯೇ ಇರಲಿದೆ. ಅಂದರೆ ಕ್ಯಾಮರಾ ತೆರೆಯುವಿಕೆ, ಫೋಟೋಗಳು ಮತ್ತು ವೀಡಿಯೊಗಳನ್ನು ತೆರೆಯುವುದು ಹಿಂದಿನ ಸೆಟ್ಟಿಂಗ್‌ನಂತೆಯೇ ಇರಲಿದೆ. ಆದರೆ ಮೂಲೆಯ ಎಡಕ್ಕೆ ಇದು ಬರಲಿದೆ. "ಅವರ್ ಸ್ಟೋರೀಸ್" ಹೆಸರಿನಲ್ಲಿ ಕ್ರೀಡಾ ಸುದ್ದಿಗಳು ಹೊರಬರಲಿದೆ.

ಮಿ ಮಿಕ್ಸ್ 2 ಹೊಸ ಆವೃತ್ತಿ ಮಾರುಕಟ್ಟೆಗೆ: ವಿಶೇಷತೆಗಳೇನು.?

ಸ್ನ್ಯಾಪ್‌ಚಾಟ್ ಪಾಲುದಾರ ಕಂಪನಿಗಳಾದ ಸಿಎನ್‌ಬಿಸಿ ಮತ್ತು ಬಜ್‌ಫೀಡ್ ಕೆಲವೊಂದು ವೀಡಿಯೊಗಳನ್ನು ಅಪ್ಲಿಕೇಶನ್‌ನ ಬಲಭಾಗದಲ್ಲಿ ಪ್ರಸ್ತುತಪಡಿಸಲಿವೆ. ಬಳಕೆದಾರರು ಬಲಕ್ಕೆ ಸ್ಕ್ರಾಲ್ ಮಾಡಿದಂತೆಲ್ಲಾ ಸೆಲೆಬ್ರಿಟಿಗಳು ಸಿದ್ಧಪಡಿಸಿದ ವೀಡಿಯೊಗಳು ದೊರೆಯಲಿವೆ.

ವೀಡಿಯೊ ಸ್ಟ್ರೀಮಿಂಗ್‌ಗೆ ಏನೂ ತೊಡಕಾಗದಂತೆ ಸ್ನ್ಯಾಪ್‌ಚಾಟ್ ಕೆಲವೊಂದು ತಂತ್ರಗಳನ್ನು ಬಳಸಿಕೊಳ್ಳಲಿದ್ದು ಬಳಕೆದಾರರಿಗೆ ಸಹಕಾರಿಯಾಗಲಿದೆ. ಸ್ವಲ್ಪ ಸಮಯ ಈ ಬದಲಾವಣೆಗಳಿಂದ ಕಂಪನಿಗೆ ಹಾನಿ ಕೂಡ ಇರಲಿದೆ. ಹಾಗಿದ್ದರೆ ಹೊಸ ವಿನ್ಯಾಸದಿಂದ ಕೂಡಿದ ಸ್ನ್ಯಾಪ್‌ಚಾಟ್‌ ಅನ್ನು ಸ್ವೀಕರಿಸಲು ಮುಂದಿನ ತಿಂಗಳು ನೀವು ಸಿದ್ಧರಾಗಿದ್ದೀರಾ? 

Read more about:
English summary
After the makeover, Snapchat will become more user-friendly with easier ways.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot