ನಿಮ್ಮ Phone ಗ್ಯಾಲರಿ ಬೇಗನೆ ಫುಲ್‌ ಆಗುತ್ತಿದ್ದರೇ, ವಾಟ್ಸಾಪ್‌ನಲ್ಲಿ ಹೀಗೆ ಮಾಡಿ!!

By Gizbot Bureau
|

ವಾಟ್ಸಾಪ್ ಜನಪ್ರಿಯ ಇನ್‌ಸ್ಟಂಟ್ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಇದು ಟೆಕ್ಸ್ಟ್ ಮೆಸೆಜ್ ಜೊತೆಗೆ ನಿಮಗೆ ವೀಡಿಯೊ ಮತ್ತು ಫೋನ್ ಮಾಡಲು ಸಹ ಅನುಮತಿಸುತ್ತವೆ. ವಾಟ್ಸಾಪ್‌ ಈಗಾಗಲೇ ತನ್ನ ಬಳಕೆದಾರರಿಗೆ ಅನುಕೂಲಕರ ವೈಶಿಷ್ಟ್ಯಗಳನ್ನು ಲಭ್ಯವಾಗಿಸಿದೆ. ಅಲ್ಲದೇ ತನ್ನ ನೂತನ ಅಪ್‌ಡೇಟ್‌ ಆವೃತ್ತಿಗಳಲ್ಲಿ ಮತ್ತಷ್ಟು ನವೀನ ಫೀಚರ್‌ಗಳನ್ನು ಅಳವಡಿಸಿ ಹೆಚ್ಚಿನ ಜನಪ್ರಿಯತೆ ಪಡೆಯುತ್ತ ಮುನ್ನಡೆದಿದೆ.

ನಿಮ್ಮ Phone ಗ್ಯಾಲರಿ ಬೇಗನೆ ಫುಲ್‌ ಆಗುತ್ತಿದ್ದರೇ, ವಾಟ್ಸಾಪ್‌ನಲ್ಲಿ ಹೀಗೆ ಮಾಡಿ

ವಾಟ್ಸಾಪ್‌ ಫೋಟೊ, ವಿಡಿಯೋ ಮತ್ತು ಡಾಕ್ಯುಮೆಂಟ್‌ ಫೈಲ್‌ ಹಂಚಿಕೊಳ್ಳುವ ಅವಕಾಶ ಹೊಂದಿದೆ. ಇದರೊಂದಿಗೆ ಮೀಡಿಯಾ ಫೈಲ್‌ಗಳನ್ನು ಸೇವ್ ಮಾಡುವ ಆಯ್ಕೆಯನ್ನು ಒದಗಿಸಿದೆ. ಆದರೆ ಹೀಗೆ ವಾಟ್ಸಾಪ್‌ಗೆ ಬರುವ ಎಲ್ಲ ಮೀಡಿಯಾ ಫೈಲ್‌ಗಳು ಸೇವ್ ಆಗುವುದರಿಂದ ಸ್ಟೋರೇಜ್ ಭರ್ತಿ ಆಗುತ್ತದೆ. ಅಲ್ಲದೇ ಡೇಟಾ ಬಳಕೆಯು ಹೆಚ್ಚಾಗುತ್ತದೆ. ಆದರೆ ಬಳಕೆದಾರರು ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಅನಗತ್ಯ ಸ್ಟೋರೇಜ್‌ ಅನ್ನು ತಪ್ಪಿಸಬಹುದಾಗಿದೆ.

ಬಳಕೆದಾರರು ವಾಟ್ಸಾಪ್‌ಗೆ ಬರುವ ಪೋಟೊ, ವಿಡಿಯೋ, ಡಾಕ್ಯುಮೆಂಟ್‌ ಫೈಲ್‌ಗಳನ್ನು ಆಟೋ ಡೌನ್‌ಲೋಡ್‌ ಆಗುವುದನ್ನು ನಿಷ್ಕ್ರಿಯಗೊಳಿಸಬಹುದಾಗಿದೆ. ಆದರೆ ಅನೇಕ ಬಳಕೆದಾರರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ ವಾಟ್ಸಾಪ್‌ಗೆ ಬರುವ ಫೋಟಗಳು ಮತ್ತು ವೀಡಿಯೊಗಳನ್ನು ಫೋನ್‌ನ ಮೆಮೊರಿಯನ್ನು ತುಂಬಿಸಿ ಬಿಡುತ್ತವೆ. ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡುವ ಮೂಲಕ ಮೀಡಿಯಾ ಫೈಲ್‌ಗಳು ಗ್ಯಾಲರಿಗೆ ತಲುಪದಂತೆ ನಿಲ್ಲಿಸಬಹುದಾಗಿದೆ.

ವಾಟ್ಸಾಪನಲ್ಲಿ ಮೀಡಿಯಾ ಸೆಟ್ಟಿಂಗನ್ನು ಬದಲಾಯಿಸಲು ಇವು ಅಗತ್ಯ:

* ವಾಟ್ಸಾಪ್ ನೂತನ ಆವೃತ್ತಿ

* ಸಕ್ರಿಯ ವಾಟ್ಸಾಪ್ ಖಾತೆಯ ಅಗತ್ಯವಿದೆ.

ವಾಟ್ಸಾಪನಲ್ಲಿ ಆಟೋ ಡೌನ್‌ಲೋಡ್ ಆಫ್‌ ಮಾಡುವುದು ಹೇಗೆ?

* ನಿಮ್ಮ ಆಂಡ್ರಾಯ್ಡ್‌ ಫೋನ್ ನಲ್ಲಿ ವಾಟ್ಸಾಪ್ ತೆರೆಯಿರಿ

* ಆಂಡ್ರಾಯ್ಡ್‌ನಲ್ಲಿರುವ ಮೂರು-ಡಾಟ್ ಮೆನು ಕ್ಲಿಕ್ ಮಾಡುವ ಮೂಲಕ ಮತ್ತು ಫೋನ್‌ನಲ್ಲಿರುವ ಬಲ ಭಾಗದ

ಟ್ಯಾಬ್‌ಗೆ ನ್ಯಾವಿಗೇಟ್ ಮಾಡುವ ಮೂಲಕ ಸೆಟ್ಟಿಂಗ್‌ಗಳಿಗೆ ಹೋಗಿರಿ.

* ಸೆಟ್ಟಿಂಗ್‌ಗಳಲ್ಲಿ ಲಭ್ಯವಿರುವ ಚಾಟ್‌ಗಳ ಮೇಲೆ ಟ್ಯಾಪ್ ಮಾಡಿ ಮತ್ತು ಮಾಧ್ಯಮ ಸ್ವಯಂ-ಡೌನ್‌ಲೋಡ್ ವಿಭಾಗಕ್ಕೆ

ಹೋಗಿರಿ.

* ನಂತರ ಮೊಬೈಲ್ ಡೇಟಾವನ್ನು ಬಳಸುವಾಗ - ಎಲ್ಲಾ ಬಾಕ್ಸಗಳನ್ನು ಅನ್ ಚೆಕ್ ಮಾಡಿ ವೈ-ಪೈನಲ್ಲಿ ಸಂಪರ್ಕಿಸಿದಾಗ -

ಎಲ್ಲಾ ಬಾಕ್ಸಗಳನ್ನು ಅನ್ ಚೆಕ್ ಮಾಡಿ ರೋಮಿಂಗ್ ಮಾಡುವಾಗ - ಎಲ್ಲಾ ಬಾಕ್ಸಗಳನ್ನು ಗುರುತಿಸಬೇಡಿ ಇದು

ವಿಪರೀತ ಸೆಟ್ಟಿಂಗ್ ಎಂಬುದನ್ನು ಗಮನಿಸಿ. ನಿಮಗೆ ಯಾವುದು ಸೂಕ್ತ ಎಂದು ನೀವು ನಿರ್ಧರಿಸಬಹುದು ಮತ್ತು

ಅದಕ್ಕೆ ತಕ್ಕಂತೆ ಬದಲಾವಣೆ ಮಾಡಬಹುದು.

* ನೀವು ಆಂಡ್ರಾಯ್ಡ್‌ನಲ್ಲಿ ಚಾಟ್ಸ್ ಸೆಟ್ಟಿಂಗ್‌ಗಳ ಅಡಿಯಲ್ಲಿ 'ಮೀಡಿಯಾ ವಿಸಿಬಿಲಿಟಿ' ಆಯ್ಕೆಯನ್ನು ಕಾಣುತ್ತಿರಿ.

ನಿಮ್ಮ ಫೋನ್‌ನ ಸಂಗ್ರಹಣೆಯಲ್ಲಿ ವಾಟ್ಸಾಪ್ ಫೋಟೋಗಳು ಮತ್ತು ವೀಡಿಯೊಗಳನ್ನು ಸ್ವಯಂಚಾಲಿತವಾಗಿ

ಸೇವ್ ಮಾಡುವುದನ್ನು ನಿಲ್ಲಿಸಲು ನೀವು ಈಗ ಅದನ್ನು ಆಫ್ ಮಾಡಬೇಕಾಗುತ್ತದೆ.

ಎಲ್ಲಾ ಚಾಟಗಳಿಗೆ ಮೀಡಿಯಾ ವಿಸಿಬಿಲಿಟಿಯನ್ನು ನಿಷ್ಕ್ರಿಯಗೂಳಿಸಲು ಈ ಕ್ರಮಗಳನ್ನು ಫಾಲೋ ಮಾಡಿರಿ. ಮೊದಲು ಸೆಟ್ಟಿಂಗಳಿಗೆ ಹೋಗಿ > ಚಾಟ್‌ಗಳು > ಮೀಡಿಯಾ ವಿಸಿಬಿಲಿಟಿ > ಆಪ್ ಮಾಡಿ. ಅದೇ ರೀತಿ ವೈಯಕ್ತಿಕ ಚಾಟಗಳಿಗೆ ಮೀಡಿಯಾ ವಿಸಿಬಿಲಿಟಿಯನ್ನು ಬದಲಿಸಲು ನೀವು ಮೀಡಿಯಾ ವಿಸಿಬಿಲಿಟಿಯನ್ನು ಆಪ್ ಮಾಡಲು ಬಯಸುವ ಚಾಟ್ ನ್ನು ತೆರೆಯಿರಿ ಮತ್ತು ಮೇಲಿನಿಂದ ಚಾಟ್ ಹೆಸರನ್ನು ಟ್ಯಾಪ್ ಮಾಡಿ. ಮೀಡಿಯಾ ವಿಸಿಬಿಲಿಟಿಯನ್ನು ನೋಡಿ ಮತ್ತು ಅದನ್ನು ಆಫ್ ಮಾಡಿ.

Most Read Articles
Best Mobiles in India

English summary
Steps To Change WhatsApp Media Settings To Save Storage Space

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X