Just In
Don't Miss
- News
ಭಾರತದಲ್ಲಿ ಮುಸ್ಲಿಂರ ವಿರುದ್ಧ ಹುನ್ನಾರ: ಇದು ಅಮೆರಿಕನ್ನರ ಮಾತು
- Lifestyle
ಈ ಮುದ್ದು ಪಾಂಡಾಗಳ ಆಟ ನೋಡಿದರೆ ನೀವು ಮನಸು ಬಿಚ್ಚಿ ನಗುವಿರಿ
- Education
UPSC ESE Admit Card 2020: ಇಂಜಿನಿಯರಿಂಗ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ
- Automobiles
ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ರ್ಯಾಪಿಡ್
- Movies
ಹಾಲಿವುಡ್ ಚಿತ್ರದಲ್ಲಿ ಮಿಂಚುತ್ತಿರುವ ಮಲೆನಾಡ ಪ್ರತಿಭೆ
- Sports
ಪಂತ್ ಮತ್ತೆ ವಿಫಲ, ಸ್ಥಾನ ಪಡೆಯಲು ಸಫಲ; ಇದು ಯಾರ ಕೃಪಾಕಟಾಕ್ಷದ ಫಲ
- Finance
ಡಾಲರ್ ಎದುರು ಹೆಚ್ಚಿದ ರುಪಾಯಿ ಬಲ: 6 ವಾರಗಳಲ್ಲಿ ಗರಿಷ್ಠ ಮಟ್ಟ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಡುಪ್ಲಿಕೇಟ್, ಬ್ಲರ್ ಫೋಟೋ ಡಿಲೀಟ್ ಮಾಡಲು ಇರುವ ಬೆಸ್ಟ್ ಆಪ್‌ಗಳಿವು..!
ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಫೋಟೋಗ್ರಾಫರ್ ಗಳೂ ಕೂಡ ಅತ್ಯದ್ಭುತ ಫೋಟೋಗಳನ್ನು ಕ್ಲಿಕ್ಕಿಸುವುದಕ್ಕೆ ಸ್ಮಾರ್ಟ್ ಫೋನ್ ಕ್ಯಾಮರಾಗಳು ಬೆಂಬಲ ನೀಡುತ್ತದೆ. ಆದರೂ ಕೆಲವೊಮ್ಮೆ ನಮ್ಮ ಫೋಟೋಗಳು, ಸೆಲ್ಫೀಗಳು ನಮಗೆ ಉತ್ತಮವಾಗಿದೆ ಎಂದು ಅನ್ನಿಸುವುದಿಲ್ಲ. ಹಾಗಾಗಿ ಅದನ್ನು ಎಡಿಟ್ ಮಾಡುವುದಕ್ಕೆ ಹಲವರು ಪ್ರಯತ್ನಿಸುತ್ತಾರೆ. ಹಾಗಾಗಿ ಸಾಕಷ್ಟು ಮೊಬೈಲ್ ಆಪ್ ಗಳು ಇದಕ್ಕೆ ಸಹಕಾರ ನೀಡುತ್ತದೆ.
ಬಲ್ಕ್ ನಲ್ಲಿ ಫೋಟೋಗಳಿದ್ದಾಗ ಅವುಗಳಲ್ಲಿ ಡುಪ್ಲಿಕೇಟ್ ಫೋಟೋಗಳು, ಸ್ಕ್ರೀನ್ ಶಾಟ್ ಗಳು, ಉತ್ತಮ ಕ್ವಾಲಿಟಿ ಇಲ್ಲದ ಫೋಟೋಗಳನ್ನು ಸಾರ್ಟ್ ಮಾಡಲು ಈ ಆಪ್ ಗಳು ನೆರವು ನೀಡುತ್ತದೆ.

1.ಗೂಗಲ್ ಫೈಲ್ಸ್ ಗೋ (Google Files Go)
ಗೂಗಲ್ ಫೈಲ್ಸ್ ಗೋ ಆಪ್ ನಲ್ಲಿ ಹಲವು ವೈಶಿಷ್ಟ್ಯತೆಗಳು ಲಭ್ಯವಿದ್ದು, ಗೂಗಲ್ ಫೋಟೋಗಳಿಗೆ ಹಲವು ರೀತಿಯ ಸ್ಟೋರೇಜ್ ವ್ಯವಸ್ಥೆಯನ್ನು ಇದು ಮಾಡುತ್ತದೆ. ನೀವು ಯಾವ ಪೋಟೋಗಳನ್ನು ಡಿಲೀಟ್ ಮಾಡಬೇಕು ಎಂಬುದನ್ನು ಈ ಆಪ್ ನಿಂದ ತಿಳಿಯಲು ಸಾಧ್ಯವಾಗುತ್ತದೆ.
ಯಾವ ಫೋಟೋ ಡುಪ್ಲಿಕೇಟ್ ಕಾಪಿಯನ್ನು ಸ್ಟೋರೇಜ್ ನಲ್ಲಿ ಹೊಂದಿದ್ದು, ಸುಮ್ಮನೆ ನಿಮ್ಮ ಸ್ಟೋರೇಜ್ ನ್ನು ತಿನ್ನುತ್ತಿದೆ ಎಂಬುದನ್ನು ಇದು ಗುರುತಿಸುತ್ತದೆ. ಕೇವಲ ಗ್ಯಾಲರಿಯಲ್ಲಿ ಮಾತ್ರವಲ್ಲದೆ ಇತರೆಡೆಗಳಲ್ಲೂ ಕೂಡ ಇರುವ ಫೈಲ್ ನ ಡುಪ್ಲಿಕೇಟ್ ಕಾಪಿಯನ್ನು ಡಿಲೀಟ್ ಮಾಡುವುದಕ್ಕೆ ಇದು ನೆರವಾಗುತ್ತದೆ. ಜಂಕ್ ಇಮೇಜ್ ಗಳನ್ನು ಹೊಂದಿರುವ ಫೋಲ್ಡರ್ ಗಳನ್ನು ಕೂಡ ಇದು ಗುರುತಿಸುತ್ತದೆ. ವಾಟ್ಸ್ ಆಪ್ ಫೋಲ್ಡರ್, ಸ್ಕ್ರೀನ್ ಶಾಟ್ ಫೋಲ್ಡರ್, ಗ್ಯಾಲರಿ ಗಳೆಲ್ಲ ಕಡೆಯೂ ಇದು ತಡಕಾಡುತ್ತದೆ. ದೊಡ್ಡ ದೊಡ್ಡ ಫೈಲ್ ಗಳನ್ನು ಕೂಡ ಇದು ಗುರುತಿಸುತ್ತದೆ . ಇದನ್ನು ಕ್ಲಿಯರ್ ಮಾಡಿ ಜಾಗವನ್ನು ಕ್ಲೀನ್ ಮಾಡಲು ನೀವು ಮ್ಯಾನುವಲ್ ಮೆಥೆಡ್ ನ್ನು ಬಳಸಬಹುದು ಅಥವಾ ಫ್ರೀ-ಅಪ್-ಸ್ಪೇಸ್ ಫಂಕ್ಷನ್ ನ್ನು ಒಂದೇ ಟ್ಯಾಪ್ ನಲ್ಲಿ ಕ್ಲಿಕ್ಕಿಸಿ ಕ್ಲೀನ್ ಮಾಡಬಹುದು..

2. ಗ್ಯಾಲರಿ ಡಾಕ್ಟರ್
ಫೋಟೋ ಕ್ಲೀನರ್ ಗ್ಯಾಲರಿ ಡಾಕ್ಟರ್ ಆಲ್-ಇನ್-ಒನ್ ಫೋಟೋ ಕ್ಲೀನರ್ ಸೆಲ್ಯೂಷನ್ ಆಗಿದೆ ಮತ್ತು ಒಂದು ಅಧ್ಬುತ ಫೋಟೋ ಮ್ಯಾನೇಜ್ ಮೆಂಟ್ ಆಪ್ ಆಗಿದೆ.ಇದು ಡುಪ್ಲಿಕೇಟ್ ಫೋಟೋ,ಸ್ಕ್ರೀನ್ ಶಾಟ್ ಮತ್ತು ಕೆಟ್ಟ ಇಮೇಜ್ ಗಳನ್ನು ಡಿಲೀಟ್ ಮಾಡುವುದಕ್ಕೆ ಸಾಧ್ಯವಾಗುತ್ತದೆ.
ಕೇವಲ ಫೋಲ್ಡರ್ ಗಳನ್ನು ಖಾಲಿ ಮಾಡುವುದು ಮಾತ್ರವೇ ನಿಮ್ಮ ಉದ್ದೇಶವಾಗಿರದೇ, ಫೋಟೋಗಳನ್ನು ಸಾರ್ಟ್ ಮಾಡುವುದು ಕೂಡ ನಿಮ್ಮ ಉದ್ದೇಶವಾಗಿದ್ದರೆ ಖಂಡಿತ ನಿಮಗೆ ಗ್ಯಾಲರಿ ಡಾಕ್ಟರ್ ಸಹಾಯ ಮಾಡಲಿದೆ. ಕೆಟ್ಟ ಕ್ವಾಲಿಟಿ ಇರುವ ಇಮೇಜ್ ಗಳನ್ನು ಆರಿಸಿ, ಯಾವುದು ಅದರಲ್ಲಿ ಬೆಸ್ಟ್ ಎಂದು ಆಯ್ಕೆ ಮಾಡಲು ಈ ಆಪ್ ನಿಮಗೆ ಸಹಾಯ ಮಾಡುತ್ತದೆ. ಬಲ್ಕ್ ನಲ್ಲಿ ಫೋಟೋಗಳನ್ನು ಸಾರ್ಟ್ ಮಾಡಲು ಇದು ಒಂದು ಬೆಸ್ಟ್ ಆಪ್ ಆಗಿ ಕೆಲಸ ಮಾಡುತ್ತದೆ.

3. ಕ್ಲೀನ್ ಮಾಸ್ಟರ್
ಕ್ಲೀನ್ ಮಾಸ್ಟರ್ ನಲ್ಲಿ ಫೋಟೋ ಸಾರ್ಟಿಂಗ್ ಮತ್ತು ಡಿಲೀಟ್ ಮಾಡುವ ಕೆಪಾಸಿಟಿಯೂ ಇದ್ದು ಅದನ್ನು ಹೆಚ್ಚಿನವರು ಗಮನಿಸಿರುವುದೇ ಇಲ್ಲ. ಇದೊಂದು ಅಧ್ಬುತ ಸ್ಟೋರೇಜ್ ಮ್ಯಾನೇಜ್ ಮೆಂಟ್ ಆಪ್ ಆಗಿದ್ದು ಆಂಡ್ರಾಯ್ಡ್ ಡಿವೈಸ್ ಗಳಲ್ಲಿ ಸ್ಪೇಸ್ ಫ್ರೀ ಅಪ್ ಮಾಡಲು ಇದು ಸಹಕಾರಿಯಾಗಿದೆ.ಹಲವು ಫೋಟೋ ಆಪ್ ಗಳು ಲಭ್ಯವಿದ್ದರೂ ಕೂಡ ಎಲ್ಲವೂ ಜಾಹೀರಾತುಗಳಿದ್ದು, ಕೆಲವು ಲಾಕ್ ಮಾಡಿ ಇಡುವ ವೈಶಿಷ್ಟ್ಯತೆಗಳಿರುತ್ತದೆ.
ಆದರೆ ಕ್ಲೀನ್ ಮಾಸ್ಟರ್ ತನ್ನ ಜನರಲ್ ಫೋಕಸ್ ಗೆ ಹೆಚ್ಚು ಮಹತ್ವ ನೀಡುತ್ತದೆ. ಕ್ಲೀನ್ ಮಾಸ್ಟರ್ ನ ಮತ್ತೊಂದು ಪ್ರಮುಖ ವೈಶಿಷ್ಟ್ಯತೆಯೆಂದರೆ ಹಲವು ಒಂದೇ ರೀತಿಯ ಫೋಟೋಗಳಲ್ಲಿ ಯಾವುದು ಅತ್ಯುತ್ತಮ ಫೋಟೋ ಎಂಬ ಬಗ್ಗೆ ಸಲಹೆಗಳನ್ನು ನೀಡುತ್ತದೆ. ಇದು ನಿಮಗೆ ಯಾವುದನ್ನು ಡಿಲೀಟ್ ಮಾಡಬೇಕು ಎಂಬ ಬಗ್ಗೆ ಹೆಚ್ಚು ನಿಖರತೆ ಹೊಂದಲು ಸಹಾಯ ಮಾಡುತ್ತದೆ.

4. ನಾಕ್ಸ್ ಕ್ಲೀನರ್ (NoxCleaner)
ಕ್ಲೀನ್ ಮಾಸ್ಟರ್ ನಂತೆಯೇ ನಾಕ್ಸ್ ಕ್ಲೀನರ್ ಒಂದು ಡುಪ್ಲಿಕೇಟ್ ಫೋಟೋ ಮ್ಯಾನೇಜ್ ಮೆಂಟ್ ಆಪ್ ಅಲ್ಲ. ಆದರೆ ಇದು ನಿಮ್ಮ ಫೋನಿನಲ್ಲಿರುವ ಜಂಕ್ ಇಮೇಜ್ ಗಳನ್ನು ಸ್ವಚ್ಛಗೊಳಿಸುವುದಕ್ಕೆ ಇದು ನೆರವು ನೀಡುತ್ತದೆ. ಈ ಆಪ್ ನಲ್ಲಿ ಡುಪ್ಲಿಕೇಟ್ ಪೋಟೋ ಮ್ಯಾನೇಜ್ ಮೆಂಟ್ ಸೆಕ್ಷನ್ ಕೂಡ ಇದೆ.
ಒಮ್ಮೆ ಈ ಆಪ್ ನಲ್ಲಿ ಸ್ಕ್ಯಾನಿಂಗ್ ಮುಗಿದ ನಂತರ, ಒಂದೇ ರೀತಿಯ ಇಮೇಜ್ ಗಳು, ದೊಡ್ಡ ಪಿಕ್ಚರ್ ಗಳು, ಸ್ಕ್ರೀನ್ ಶಾಚ್ ಗಲು, ಮತ್ತು ಬ್ಲರ್ ಫೋಟೋಗಳು ಬೇರೆಬೇರೆ ಫೋಲ್ಡರ್ ಗಳಲ್ಲಿ ಗುಂಪಾಗಿ ವಿಭಜಿಸಲ್ಪಡುತ್ತದೆ. ಅದನ್ನು ಬಳಕೆದಾರರು ಆರಿಸಿ ಡಿಲೀಟ್ ಮಾಡುವುದಕ್ಕೆ ಸಹಾಯ ವಾಗುತ್ತದೆ. ಮ್ಯಾನುವಲಿ ಸೆಲೆಕ್ಟ್ ಮಾಡುವುದಾದರೆ ಆಟೋ ಸೆಲೆಕ್ಟ್ ನ್ನು ಡಿಸೇಬಲ್ ಮಾಡಿ ಇಟ್ಟುಕೊಳ್ಳಬಹುದು.

5. ರೆಮೊ ಡುಪ್ಲಿಕೇಟ್ ಫೋಟೋಸ್ ರಿಮೂವರ್
ನಿಮ್ಮ ಫೋನ್ ನಲ್ಲಿರುವ ಡುಪ್ಲಿಕೇಟ್ ಕಾಪಿಯನ್ನು ಡಿಲೀಟ್ ಮಾಡಲು ರೆಮೋ ಸಹಾಯ ಮಾಡುತ್ತದೆ. ನೀವು ಕ್ಲಿಕ್ಕಿಸಿರುವ ಫೋಟೋಗಳ ಡುಪ್ಲಿಕೇಟ್ ಕಾಪಿಗಳ ಬಗ್ಗೆ ನೀವು ಚಿಂತಿತರಾಗಿದ್ದಲ್ಲಿ ಖಂಡಿತ ನಿಮಗೆ ಇದು ಒಂದು ಅಧ್ಬುತ ಪರಿಹಾರವಾಗಲಿದೆ. ಒಮ್ಮೆ ರೆಮೊ ಆಪ್ ತನ್ನ ಸ್ಕ್ಯಾನಿಂಗ್ ನ್ನು ಕಂಪ್ಲೀಟ್ ಮಾಡಿದ ನಂತರ, ಇದು ಒಂದೇ ರೀತಿಯ ಫೋಟೋವನ್ನು ಒಂದು ಗುಂಪಾಗಿ ಮಾಡುತ್ತದೆ. ಕೇವಲ ಕೆಟ್ಟ ಲೈಟಿಂಗ್ ನ ಫೋಟೋಗಳಿಗಾಗಿ ಮಾತ್ರವಲ್ಲದೆ, ರೇಡಿಯಂಟ್ ಫೋಟೋಗಳನ್ನು ಕೂಡ ಗುಂಪು ಮಾಡಲು ಇದು ನಿಮಗೆ ನೆರವು ನೀಡುತ್ತದೆ. ಯಾರು ಪದೇ ಪದೇ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೋ ಅವರಿಗೆ ಇದು ಖಂಡಿತ ಸಹಾಯಕ್ಕೆ ಬರುತ್ತದೆ. ಯಾಕೆಂದರೆ ಪ್ರತಿ ಸೋಷಿಯಲ್ ಮೀಡಿಯಾದಲ್ಲೂ ಕೂಡ ಒಂದು ಲೋಕಲ್ ಕಾಪಿ ಇದ್ದೇ ಇರುತ್ತದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090