ಸರ್ಚ್‌ ಪ್ರೈವೆಸಿ ಕಾಪಾಡುವ 5 ಬೆಸ್ಟ್‌ ಬ್ರೌಸರ್‌ಗಳು!

|

ಏನಾದರೂ ಮಾಹಿತಿ ತಿಳಿಯಬೇಕಿದ್ದರೇ ತಕ್ಷಣಕ್ಕೆ ನೆನಪಾಗುವುದೆ ಗೂಗಲ್ ಸರ್ಚ್‌ ಇಂಜಿನ್. ಬಳಕೆದಾರರು ಏನೇ ಮಾಹಿತಿ ಸರ್ಚ್‌ ಮಾಡಿದರೂ ಗೂಗಲ್‌ ಅವುಗಳನ್ನು ದಾಖಲಿಸುತ್ತದೆ. ವೆಬ್‌ ಬ್ರೌಸರ್‌ಗಳು ಸೇರಿದಂತೆ ಹಲವು ಥರ್ಡಪಾರ್ಟಿ ಆಪ್‌ಗಳ ಕಣ್ಣು ಬಳಕೆದಾರರ ಸರ್ಚ್‌ ಮೇಲಿರುತ್ತದೆ. ಇವು ಕುಕ್ಕಿಸ್‌ ಮತ್ತು ಕೇಲವು ಸಾಫ್ಟ್‌ವೇರ್‌ ಮೂಲಕ ಸರ್ಚ್‌ ಮಾಹಿತಿಗಳನ್ನು ಟ್ರಾಕ್‌ ಮಾಡುತ್ತಿರುತ್ತವೆ.

ಸರ್ಚ್‌ ಪ್ರೈವೆಸಿ ಕಾಪಾಡುವ 5 ಬೆಸ್ಟ್‌ ಬ್ರೌಸರ್‌ಗಳು!

ಹೌದು, ವೆಬ್‌ಬ್ರೌಸರ್‌ಗಳ ಕುಕ್ಕಿಸ್‌ಗಳು ಬಳಕೆದಾರರ ಸರ್ಚ್‌ ಮಾಹಿತಿ ಮತ್ತು ಆಸಕ್ತಿಗಳನ್ನು ಟ್ರಾಕ್‌ ಮಾಡುತ್ತವೆ. ಆ ಮಾಹಿತಿಯನ್ನು ಥರ್ಡ್‌ಪಾರ್ಟಿ ಆಪ್‌ಗಳಿಗೆ ನೀಡುತ್ತವೆ. ಆ ಆಧಾರದ ಮೇಲೆ ಥರ್ಡ್‌ಪಾರ್ಟಿ ಆಪ್‌ಗಳು ಬಳಕೆದಾರರಿಗೆ ಆಸಕ್ತಿಕರ ಜಾಹಿರಾತುಗಳು ಫೇಸ್‌ಬುಕ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ನಿಮ್ಮ ಖಾಸಗಿತನ ಕಾಪಾಡುವ ಕೆಲವು ಸುರಕ್ಷಿತ ಬ್ರೌಸರ್‌ಗಳು ಇವೆ. ಹಾಗಾದರೇ 5 ಸುರಕ್ಷಿತ ಬ್ರೌಸರ್‌ಗಳು ಯಾವುವು ಎಂಬುದನ್ನು ನೋಡೋಣ.

ಓದಿರಿ : 4,000mAh ಬ್ಯಾಟರಿ ಫುಲ್‌ ಚಾರ್ಜ್‌ ಆಗಲು ಕೇವಲ 13 ನಿಮಿಷ ಅಷ್ಟೇ ಸಾಕು!ಓದಿರಿ : 4,000mAh ಬ್ಯಾಟರಿ ಫುಲ್‌ ಚಾರ್ಜ್‌ ಆಗಲು ಕೇವಲ 13 ನಿಮಿಷ ಅಷ್ಟೇ ಸಾಕು!

ಸಫಾರಿ ವೆಬ್‌ಬ್ರೌಸರ್‌

ಸಫಾರಿ ವೆಬ್‌ಬ್ರೌಸರ್‌

ಸಫಾರಿ ವೆಬ್‌ಬ್ರೌಸರ್‌ ಆಪಲ್‌ ಸಂಸ್ಥೆಯು ಅಭಿವೃದ್ದಿ ಪಡೆಸಿದ್ದು, ಬಳಕೆದಾರರಿಂದ ಉತ್ತಮ ಸರ್ಚ್‌ ಇಂಜಿನ ಎನಿಸಿಕೊಂಡಿದೆ. ಗೂಗಲ್ ಬ್ರೌಸರ್‌ಗಿಂತ ಉತ್ತಮ ಸುರಕ್ಷತೆಯ ಆಯ್ಕೆಗಳನ್ನು ಒಳಗೊಂಡಿದೆ. ಆಯಂಟಿ ಫಿಂಗರ್‌ಪ್ರಿಂಟ್ ಪ್ರೊಟೆಕ್ಷನ್‌ ಆಯ್ಕೆ ಇದ್ದು, ಜಾಹಿರಾತು ಕಂಪನಿಗಳು ನಿಮ್ಮ ಸರ್ಚ್‌ ಮಾಹಿತಿಯನ್ನು ಟ್ರಾಕ್‌ ಮಾಡುವುದನ್ನು ತಡೆಯಲಿದೆ. ನಿಮ್ಮ ಇ-ಮೇಲ್‌ ಹೈಡ್‌ ಮಾಡುವ ಆಯ್ಕೆ ಸಹ ಇದೆ.

ಬ್ರೇವ್‌ (Brave)

ಬ್ರೇವ್‌ (Brave)

ಬ್ರೇವ್‌ ಸಾಫ್ಟ್‌ವೇರ್‌ Inc ನವರು ಈ ಬ್ರೌಸರ್‌ ಅನ್ನು ಅಭಿವೃದ್ದಿಪಡೆಸಿದ್ದು, ಇದೊಂದು ಓಪೆನಸೋರ್ಸ್‌ ಬ್ರೌಸರ್‌ ಆಗಿದೆ. ಜಾಹಿರಾತು ಬ್ಲಾಕ್‌ ಮಾಡುವ ಮತ್ತು ಟ್ರಾಕ್‌ ಮಾಡುವುದನ್ನು ತಡೆಯುವ ಆಯ್ಕೆ ಇದೆ. ಎಷ್ಟು ಜಾಹಿರಾತುದಾರರು ಮತ್ತು ಟ್ರಾಕರ್ಸ್‌ಗಳು ಬ್ಕಾಕ್‌ ಆಗಿದ್ದಾರೆ ಎಂಬುದನ್ನು ನೋಡಬಹುದಾಗಿದೆ. ಪ್ರೈವೆಸಿ ಸೆಟ್ಟಿಂಗ್‌ನಲ್ಲಿ ಆಯ್ಕೆಗಳಿವೆ.

ಓದಿರಿ : BSNL 'ಸೂಪರ್‌ ಸ್ಟಾರ್‌ 300' ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌!.ಹಾಟ್‌ಸ್ಟಾರ್‌ ಉಚಿತ!ಓದಿರಿ : BSNL 'ಸೂಪರ್‌ ಸ್ಟಾರ್‌ 300' ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌!.ಹಾಟ್‌ಸ್ಟಾರ್‌ ಉಚಿತ!

ಎಪಿಕ್ ಬ್ರೌಸರ್‌

ಎಪಿಕ್ ಬ್ರೌಸರ್‌

ಎಪಿಕ್‌ ಬ್ರೌಸರ್‌ ಸುರಕ್ಷತೆಗೆ ಬೆಸ್ಟ್‌ ಬ್ರೌಸರ್ ಎನಿಸಿಕೊಂಡಿದೆ. ಈ ಬ್ರೌಸರ್‌ ಸರ್ಚ್‌ನ ಅಡ್ರೆಸ್‌ ಬಾರ್‌ ಮತ್ತು ಯುಆರ್‌ಎಲ್‌ ಟ್ರಾಕಿಂಗ್ ತೆಗೆದು ಹಾಕಲಿದ್ದು, ಹೀಗಾಗಿ ಬಳಕೆದಾರರ ಮಾಹಿತಿಯನ್ನು ಥರ್ಡ್‌ಪಾರ್ಟಿ ಸೈಟ್‌ಗಳು ಟ್ರಾಕ್‌ ಮಾಡಲು ಆಗದು. ಈ ಬ್ರೌಸರ್‌ ಬಳಕೆದಾರರ ಪಾಸ್‌ವರ್ಡ್‌ಗಳನ್ನು ಸೇವ್ ಮಾಡಿಕೊಳ್ಳುವುದಿಲ್ಲ. ಇದನ್ನು ಹಿಡೆನ್‌ ರಿಫ್ಲೇಕ್ಸ್‌ ಸಾಫ್ಟ್‌ವೇರ್‌ ಸಂಸ್ಥೆ ಅಭಿವೃದ್ದಿ ಮಾಡಿದೆ.

ಟಾರ್‌ ಬ್ರೌಸರ್‌ (Tor)

ಟಾರ್‌ ಬ್ರೌಸರ್‌ (Tor)

ಈ ಟಾರ್‌ ಬ್ರೌಸರ್‌ ಫೈರ್‌ಫೋಕ್ಸ್‌ ಸಂಸ್ಥೆಯದಾಗಿದ್ದು, 2002ರಲ್ಲಿ ಶುರುವಾಗಿದೆ. ಈ ಬ್ರೌಸರ್‌ನಲ್ಲಿ ಬಳಕೆದಾರರು ಏನಾದರೂ ಸರ್ಚ್‌ ಮಾಡಿದರೇ ಕುಕ್ಕಿಸ್‌ಗಳು ಆಟೋಮ್ಯಾಟಿಕ್ ಆಗಿ ಡಿಲೀಟ್‌ ಆಗಲಿವೆ. ಥರ್ಡ್‌ಪಾರ್ಟಿ ಸೈಟ್‌ಗಳು ಟ್ರಾಕ್‌ ಮಾಡದಂತೆ ಆಗಲಿದೆ. ಡಾರ್ಕ್‌ವೆಬ್‌ ಆಕ್ಸಸ್‌ ಮಾಡುವ ಸೌಲಭ್ಯವು ಈ ಬ್ರೌಸರ್‌ನಲ್ಲಿ ಬಳಕೆದಾರರಿಗೆ ಸೀಗಲಿದೆ.

ಫೈರ್‌ಫೊಕ್ಸ್‌ ಬ್ರೌಸರ್‌

ಫೈರ್‌ಫೊಕ್ಸ್‌ ಬ್ರೌಸರ್‌

ಮೊಜಿಲ್ಲಾ ಕಾರ್ಪೊರೇಶನ ಸಂಸ್ಥೆಯು ಫೈರ್‌ಫೊಕ್ಸ್‌ ಬ್ರೌಸರ್ ಅನ್ನು ಅಭಿವೃದ್ದಿ ಮಾಡಿದೆ. ಟ್ರಾಕ್‌ ಮಾಡುವ ಮೂಲಗಳನ್ನು ಬ್ಲಾಕ್‌ ಮಾಡುವ ಆಯ್ಕೆಯು ಈ ಬ್ರೌಸರ್‌ನಲ್ಲಿ ಬಳಕೆದಾರಿಗೆ ಲಭ್ಯ. ಫೈರ್‌ಫೊಕ್ಸ್‌ನಲ್ಲಿ ಬಳಕೆದಾರರ ಆನ್‌ಲೈನ್‌ ಸರ್ಚ್‌ ಸುರಕ್ಷಿತವಾಗಿರಲಿದ್ದು, ಜಾಹಿರಾತು ಕಂಪನಿಗಳಿಗೆ ಮಾಹಿತಿ ಸೋರಿಕೆಯಾಗದು. ಕಂಟೆಟ್‌ ಬ್ಲಾಕ್‌ ಆಯ್ಕೆಯು ಸಹ ಇದೆ.

ಓದಿರಿ : ಐಫೋನ್‌ ಖರೀದಿಗೆ ಸಕಾಲ!..ಆಪಲ್ ಐಫೋನ್‌ XR ಬೆಲೆ ಇಳಿಕೆ! ಓದಿರಿ : ಐಫೋನ್‌ ಖರೀದಿಗೆ ಸಕಾಲ!..ಆಪಲ್ ಐಫೋನ್‌ XR ಬೆಲೆ ಇಳಿಕೆ!

Best Mobiles in India

English summary
web browsers that minimize the data-scraping. And for added security, invest in a virtual private network that will keep your location data private. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X