ಆಂಡ್ರಾಯ್ಡ್ ಸುರಕ್ಷತೆಗಾಗಿ ಇರುವ ಟಾಪ್ 5 ಬೆಸ್ಟ್ ಆಪ್‌ಗಳ ಲೀಸ್ಟ್ ಇಲ್ಲಿದೆ!!

ಆಂಡ್ರಾಯ್ಡ್ ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್ ಅನ್ನು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳುವುದು ಎಂಬುದೇ ದೊಡ್ಡ ತಲೆನೊವ್ವಾದೆ.!

|

ಆಂಡ್ರಾಯ್ಡ್ ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್ ಅನ್ನು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳುವುದು ಎಂಬುದೇ ದೊಡ್ಡ ತಲೆನೊವ್ವಾದೆ.! ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಸುರಕ್ಷತಾ ಆಪ್‌ಗಳು ಕೂಡ ಫೋನ್‌ಗಳ ಮೇಲೆ ವೈರಸ್ ದಾಳಿ ನಡೆಸುತ್ತವೆ ಎಂದರೆ ಇನ್ನು ಯಾರ ಮೇಲೆ ನಂಬಿಕೆ ಇಡುವುದು ಎಂದು ಫೋನ್ ಬಳಕೆದಾರರ ಚಿಂತೆ!!

ಆಂಡ್ರಾಯ್ಡ್ ಸುರಕ್ಷತೆಗಾಗಿ ಇರುವ ಟಾಪ್ 5 ಬೆಸ್ಟ್ ಆಪ್‌ಗಳ ಲೀಸ್ಟ್ ಇಲ್ಲಿದೆ!!

ಗೂಗಲ್ ಏನೊ ಪ್ಲೇಸ್ಟೋರ್‌ನಲ್ಲಿರುವ ಇಂತಹ ಆಪ್‌ಗಳನ್ನು ಕಂಡುಹಿಡಿದು ತೆಗೆಯುವ ಪ್ರಯತ್ನ ಮಾಡುತ್ತಿದೆ. ಆದರೆ, ಈ ಪ್ರಯತ್ನದಲ್ಲಿ ಗೂಗಲ್ ಇನ್ನು ಸಂಪೂರ್ಣವಾಗಿ ಸಫಲವಾಗಿಲ್ಲ. ಹಾಗಾಗಿ, ನಾವಿಂದ ಆಂಡ್ರಾಯ್ಡ್ ಸುರಕ್ಷತೆಗಾಗಿ ಇರುವ ಬೆಸ್ಟ್ ಆಪ್‌ಗಳನ್ನು ಪರಿಚಯ ಮಾಡಿಕೊಡುತ್ತಿದ್ದು, ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

#1 ಆಂಡ್ರಾಯ್ಡ್ ಡಿವೈಸ್ ಮ್ಯಾನೆಜರ್ (Android Device Manager)

#1 ಆಂಡ್ರಾಯ್ಡ್ ಡಿವೈಸ್ ಮ್ಯಾನೆಜರ್ (Android Device Manager)

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಎಲ್ಲಾದರೂ ಮರೆತುಬಿಟ್ಟಿದ್ದರೆ ಮತ್ತು ಕಳೆದಿದ್ದರೆ ಅದನ್ನು ಪತ್ತೆ ಮಾಡಲು ಆಂಡ್ರಾಯ್ಡ್ ಡಿವೈಸ್ ಮ್ಯಾನೆಜರ್ ಆಪ್‌ ನಿಮಗೆ ಸಹಾಯ ಮಾಡುತ್ತದೆ. ಒಂದು ವೇಳೆ ಫೋನ್ ಕಳೆದಿದ್ದರೂ ಸಹ ಫೋನ್‌ ಒಳಗಿರುವ ಡೇಟಾವನ್ನು ಸುರಕ್ಷಿತವಾಗಿ ನೀವಿರುವ ಸ್ಥಳದಿಂದಲೇ ಡಿಲೀಟ್ ಮಾಡಬಹುದಾಗಿದೆ.!!

#2 ನೋ ರೂಟ್ ಫೈರ್ವಾಲ್ (NoRoot Firewall)

#2 ನೋ ರೂಟ್ ಫೈರ್ವಾಲ್ (NoRoot Firewall)

ನಿಮ್ಮ ವಯಕ್ತಿಯ ಮಾಹಿತಿಗಳನ್ನು ಇಂಟರ್‌ನೆಟ್ ಜಾಲಕ್ಕೆ ಹರಿಯದಂತೆ ಕಾಪಾಡುವ ಆಪ್ ''ನೋ ರೂಟ್ ಫೈರ್ವಾಲ್'' ಆಗಿದೆ.!! ನೀವು ಒಂದು ಅಪ್ಲಿಕೇಷನ್ ಮೂಲಕ ಇಂಟರ್‌ನೆಟ್ ಪ್ರವೇಶಿಸಲು ಇಚ್ಚಿಸಿದರೆ ನೋ ರೂಟ್ ಫೈರ್ವಾಲ್' ಈ ಬಗ್ಗೆ ನಿಮ್ಮ ಅನುಮತಿಯನ್ನು ಬೇಡುತ್ತದೆ ಮತ್ತು ನಿಮ್ಮನ್ನು ಸೆಕ್ಯೂರ್ ಮಾಡುತ್ತದೆ.!!

#3 ಸಿಎಮ್ ಸೆಕ್ಯುರಿಟಿ (CM Security)

#3 ಸಿಎಮ್ ಸೆಕ್ಯುರಿಟಿ (CM Security)

ಈಗಾಗಲೇ ಹೆಚ್ಚು ಪ್ರಸಿದ್ದಿಯಾಗಿರುವ ಆಪ್‌ಗಳಲ್ಲಿ ಸಿಎಮ್ ಸೆಕ್ಯುರಿಟಿ ಕೂಡ ಒಂದಾಗಿದ್ದು, ನಿಮ್ಮ ಆಂಡ್ರಾಯ್ಡ್ ಡಿವೈಸ್ ಅನ್ನು ವೈರಸ್‌ಗಳಿಂದ ಸೇಫ್ ಮಾಡಲು ಇದು ಒಂದು ಬೆಸ್ಟ್ ಆಪ್ ಎನ್ನಬಹುದು.!! ನಿಮಗೆ ಗೊತ್ತಾ?.. ಈ ಆಪ್ "ಆಪ್‌ ಲಾಕರ್" ಆಗಿಯೂ ಕಾರ್ಯನಿರ್ವಹಿಸುತ್ತದೆ.!!

#4 ಎಫ್-ಸೆಕ್ಯೂರ್ ಅಪ್ಲಿಕೇಶನ್!! (f-secure application)

#4 ಎಫ್-ಸೆಕ್ಯೂರ್ ಅಪ್ಲಿಕೇಶನ್!! (f-secure application)

ಮೊದಲೇ ಹೇಳಿದಂತೆ ಗೂಗಲ್‌ ಪ್ಲೇಸ್ಟೋರ್‌ನಲ್ಲಿರುವ ಮಿಲಿಯನ್‌ಗಟ್ಟಲೆ ಆಪ್‌ಗಳಲ್ಲಿ ಉತ್ತಮ ಆಪ್‌ ಯಾವುದು ಎಂಬುದನ್ನು ಕಂಡುಹಿಡಿಯಲು ಹರಸಾಹಸವೇ ಪಡಬೇಕಾಗುತ್ತದೆ. ಅಂತಹ ಕೆಲಸಕ್ಕಾಗಿಯೇ ಇರುವ ಆಪ್ ಎಫ್-ಸೆಕ್ಯೂರ್ ಅಪ್ಲಿಕೇಶನ್.! ಈ ಆಪ್‌ ಇದ್ದರೆ ನೀವು ಉತ್ತಮ ಆಪ್‌ಗಳು ಯಾವುವು ಎಂಬುದನ್ನು ತಿಳಿಯಬಹುದು.!!

How to Send a WhatsApp Message Without Saving the Contact in Your Phone - GIZBOT KANNADA
#5 ಅವಸ್ತ ಮೊಬೈಲ್ ಸೆಕ್ಯುರಿಟಿ (Avast Mobile Security & Anti-Theft)

#5 ಅವಸ್ತ ಮೊಬೈಲ್ ಸೆಕ್ಯುರಿಟಿ (Avast Mobile Security & Anti-Theft)

ವಿಶ್ವದಾಧ್ಯಂತ ಅವಸ್ತ ಮೊಬೈಲ್ ಸೆಕ್ಯುರಿಟಿ ಆಪ್ ಅತ್ಯಂತ ಜನಪ್ರಿಯ ಆಂಟಿವೈರಸ್ ಎಂದು ಕರೆಸಿಕೊಂಡಿದೆ. ಅವಸ್ತ ಮೊಬೈಲ್ ಸೆಕ್ಯುರಿಟಿ ಆಂಟಿವೈರಸ್ ನಿಮ್ಮ ಸಾಧನವನ್ನು ದುರುದ್ದೇಶಪೂರಿತ ವೈರಸ್‌ಳಿಂದ ಮತ್ತು ನಿಮ್ಮ ಡೇಟಾವನ್ನು ಕದಿಯುವ ಹಲವಾರು ಸ್ಪ್ಯಾಮ್ ಅಪ್ಲಿಕೇಶನ್‌ಗಳಿಂದ ರಕ್ಷಿಸುತ್ತದೆ.!!

Best Mobiles in India

English summary
Your phone probably has sensitive information on it, so it may be a good idea to installsome security software on it. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X