Just In
- 8 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 10 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Movies
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಂಡ್ರಾಯ್ಡ್ ಗಾಗಿ ಬೆಸ್ಟ್ ಆಫ್ ಲೈನ್ ಜಿಪಿಎಸ್ ನೇವಿಗೇಷನ್ ಆಪ್
ಆಂಡ್ರಾಯ್ಡ್ ನಲ್ಲಿರುವ ನೇವಿಗೇಷನ್ ಆಪ್ ಬಗ್ಗೆ ಮಾತನಾಡುವುದಾದರೆ ಸಾಕಷ್ಟು ನೇವಿಗೇಷನ್ ಆಪ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಾಗುತ್ತದೆ.ಫೋನಿನ ಜಿಪಿಎಸ್ ಫೀಚರ್ ಬಳಸಿ ಈ ಆಪ್ ಗಳು ಕಾರ್ಯ ನಿರ್ವಹಿಸುತ್ತವೆ. ಸಾಮಾನ್ಯವಾಗಿ ಜನರು ನೇವಿಗೇಷನ್ ಅನ್ನೋ ಪದ ಕೇಳಿದ ಕೂಡಲೇ ಗೂಗಲ್ ಮ್ಯಾಪ್ ನ್ನೇ ಯೋಚಿಸುತ್ತಾರೆ.

ಕಳೆದ ಕೆಲವು ವರ್ಷಗಳಿಂದ ಖಂಡಿತ ಗೂಗಲ್ ನ ಗೂಗಲ್ ಮ್ಯಾಪ್ ಇರುವುದರಲ್ಲೇ ಅಗ್ರಶ್ರೇಣಿಯಲ್ಲಿರುವ ನೇವಿಗೇಷನ್ ಆಪ್ ಆಗಿದೆ. ಹಾಗಂದ ಮಾತ್ರಕ್ಕೆ ಇತರೆ ನೇವಿಗೇಷನ್ ಆಪ್ ಗಳು ಲಭ್ಯವಿಲ್ಲ ಎಂದರ್ಥವಲ್ಲ. ಗೂಗಲ್ ಮ್ಯಾಪ್ ಗೆ ಪರ್ಯಾಯವಾಗಿರುವ ಸಾಕಷ್ಟು ಆಪ್ ಗಳು ಆಂಡ್ರಾಯ್ಡ್ ಡಿವೈಸ್ ಗಾಗಿ ಲಭ್ಯವಿದೆ. ನೀವು ಪದೇ ಪದೇ ಪ್ರವಾಸದಲ್ಲಿರುವವರಾಗಿದ್ದಲ್ಲಿ ಖಂಡಿತ ನೀವು ದಾರಿ ಹುಡುಕಾಟಕ್ಕಾಗಿ ಹಲವು ನೇವಿಗೇಷನ್ ಆಪ್ ಗಳ ಬಗ್ಗೆ ಪರಿಚಿತರಾಗಿರುತ್ತೀರಿ.

ಆದರೆ ಒಂದು ವೇಳೆ ನಿಮಗೆ ಆಫ್ ಲೈನ್ ನಲ್ಲಿದ್ದಾಗ ಜಿಪಿಎಸ್ ಲೊಕೇಷನ್ ಬೇಕಾಗಿದ್ದಲ್ಲಿ ಏನು ಮಾಡುತ್ತೀರಿ? ಅದಕ್ಕಾಗಿ ನಿಮ್ಮ ಫೋನಿನಲ್ಲಿ ಯಾವುದಾದರೂ ಜಿಪಿಎಸ್ ಆಪ್ ಲಭ್ಯವಿದೆಯೇ? ಖಂಡಿತ ಇಂತಹ ಸಂದರ್ಬದಲ್ಲಿ ನಿಮ್ಮ ಸಹಾಯಕ್ಕೆ ಆಫ್ ಲೈನ್ ಜಿಪಿಎಸ್ ಆಪ್ ಗಳು ಸಹಾಯಕ್ಕೆ ಬರುತ್ತವೆ. ಆಫ್ ಲೈನ್ ಜಿಪಿಎಸ್ ಅನ್ನುವುದು ಮ್ಯಾಪ್ ಆಪ್ ಗಳಿಗಿರುವ ಒಂದು ಅಧ್ಭುತ ಫೀಚರ್ ಆಗಿದ್ದು ಬಳಕೆದಾರರು ಡಾಟಾ ರೋಮಿಂಗ್ ಆಫ್ ಮಾಡಿದ್ದಾಗಲೂ ಕೂಡ ಸಿಟಿಯ ಮಾರ್ಗಗಳನ್ನು ಗುರುತಿಸುವುದಕ್ಕೆ ಇದು ನೆರವು ನೀಡುತ್ತದೆ.
ಈ ಲೇಖನದಲ್ಲಿ ನಾವು ಕೆಲವು ಆಫ್ ಲೈನ್ ಜಿಪಿಎಸ್ ಆಪ್ಸ್ ಗಳ ಬಗ್ಗೆ ತಿಳಿಸುತ್ತಿದ್ದು ನೀವು ನಿಮ್ಮ ಆಂಡ್ರಾಯ್ಡ್ ಡಿವೈಸ್ ಗಳಲ್ಲಿ ಅದನ್ನು ಬಳಕೆ ಮಾಡಬಹುದಾಗಿದೆ. ಕೆಲವು ಆಪ್ ಗಳು ಸಂಪೂರ್ಣ ಉಚಿತವಾಗಿರುವುದಿಲ್ಲ . ಆಪ್ ನಲ್ಲಿರುವ ನೇವಿಗೇಷನ್ ಗೆ ಸಂಬಂಧಿಸಿದ ಕೆಲವು ಫೀಚರ್ ಗಳನ್ನು ಪಡೆಯುವುದಕ್ಕಾಗಿ ನೀವು ಪಾವತಿ ಕೂಡ ಮಾಡಬೇಕಾಗುತ್ತದೆ.
ಹಾಗಾದ್ರೆ ಆಂಡ್ರಾಯ್ಡ್ ಡಿವೈಸ್ ಗಳಿಗಾಗಿರುವ ಟಾಪ್ 5 ಆಫ್ ಲೈನ್ ಜಿಪಿಎಸ್ ನೇವಿಗೇಷನ್ ಆಪ್ ಗಳು ಯಾವುವು?

ಗೂಗಲ್ ಪ್ಲೇ ನಲ್ಲಿ ನಾವು ಈಗಾಗಲೇ ಹೇಳಿರುವಂತೆ ಹಲವು ಜಿಪಿಎಸ್ ಆಪ್ಸ್ ಗಳು ಲಭ್ಯವಿದೆ. ಆಧರೆ ಕೆಲವು ಮಾತ್ರ ಆಫ್ ಲೈನ್ ಗೆ ಬೆಂಬಲ ನೀಡುತ್ತವೆ. ಹಾಗಾದ್ರೆ 2019 ರಲ್ಲಿ ಆಂಡ್ರಾಯ್ಡ್ ಡಿವೈಸ್ ಗಾಗಿ ಇರುವ ಬೆಸ್ಟ್ ಆಫ್ ಲೈನ್ ನೇವಿಗೇಷನ್ ಆಪ್ ಗಳು ಯಾವುವು ಇಲ್ಲಿವೆ ನೋಡಿ .

#1 ಗೂಗಲ್ ಮ್ಯಾಪ್ಸ್
ಗೂಗಲ್ ಮ್ಯಾಪ್ಸ್ ಜಾಗಗಳು ಮತ್ತು ಸ್ಥಳೀಯ ಪ್ರದೇಶಗಳನ್ನು ಹುಡುಕಾಡುವುದಕ್ಕೆ ಇರುವ ಬೆಸ್ಟ್ ಆಪ್ಸ್ ಗಳಲ್ಲಿ ಒಂದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಗೂಗಲ್ ಮ್ಯಾಪ್ ಬಳಸಿ ಜಗತ್ತನ್ನ ನೀವು ಸುಲಭವಾಗಿ ಸಂಚರಿಸಬಹುದು. ಇದೀಗ ಗೂಗಲ್ ಮ್ಯಾಪ್ ಸುಮಾರು 220 ದೇಶಗಳನ್ನು ಮತ್ತು ಪ್ರದೇಶಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲ ಗೂಗಲ್ ಮ್ಯಾಪ್ 100 ಮಿಲಿಯನ್ ಗೂ ಅಧಿಕ ಬ್ಯುಸಿನೆಸ್ ಮತ್ತು ತಾಣಗಳನ್ನು ಮ್ಯಾಪ್ ನಲ್ಲಿ ಸೇರಿಸಿದೆ.ಗೂಗಲ್ ಮ್ಯಾಪ್ ನ ಪ್ರಮುಖ ಕೆಲವು ಫೀಚರ್ ಗಳೆಂದರೆ ರಿಯಲ್-ಟೈಮ್ ಜಿಪಿಎಸ್ ನೇವಿಗೇಷನ್, ಟ್ರಾಫಿಕ್, ಟ್ರಾನ್ಸಿಟ್, ಆಫ್ ಲೈನ್ ಗೆ ಬೆಂಬಲ. ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದಾದ ಬೆಸ್ಟ್ ಆಫ್ ಲೈನ್ ಜಿಪಿಎಸ್ ನೇವಿಗೇಷನ್ ಆಪ್ ಇದಾಗಿದೆ

#2 ಮ್ಯಾಪ್ಸ್ ಮಿ
ಒಂದು ವೇಳೆ ನೀವು ಉಚಿತ ಜಿಪಿಎಸ್ ಆಪ್ ನ್ನು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಾಗಿ ಹುಡುಕಾಡುತ್ತಿದ್ದು ಆಫ್ ಲೈನ್ ನಲ್ಲೂ ಕೂಡ ಅದು ವರ್ಕ್ ಆಗಬೇಕು ಎಂದು ಬಯಸುತ್ತಿದ್ದರೆ ಮ್ಯಾಪ್ಸ್ ಮಿಯನ್ನು ಖಂಡಿತ ಟ್ರೈ ಮಾಡಬಹುದು. ಆಫ್ ಲೈನ್ ಮೋಡ್ ನಲ್ಲಿ ಮ್ಯಾಪ್ಸ್ ಮಿಯಲ್ಲಿ ಸರ್ಚ್ ಫೀಚರ್, ವಾಯ್ಸ್ ನೇವಿಗೇಷನ್, ಕ್ಯಾಲ್ಕುಲೇಟ್ ರಿ-ರೂಟ್, ಮತ್ತು ಪಬ್ಲಿಕ್ ಟ್ರಾನ್ಸ್ಪೋರ್ಟೇಷನ್ ನ್ನು ನೀವು ಎಂಜಾಯ್ ಮಾಡಬಹುದು. ಇದನ್ನು ಹೊರತು ಪಡಿಸಿ ಸ್ಥಳೀಯ ರೆಸ್ಟೋರೆಂಟ್ ಗಳು, ಎಟಿಎಂಗಳು ಮತ್ತು ಪ್ರಸಿದ್ಧ ಲ್ಯಾಂಡ್ ಮಾರ್ಕ್ ಗಳು ಇತ್ಯಾದಿಗಳು ಕೂಡ ಸಿಗುತ್ತವೆ. ಮ್ಯಾಪ್ಸ್ ಮಿ ಮತ್ತೊಂದು ಆಫ್ ಲೈನ್ ನಲ್ಲಿ ಬಳಸಬಹುದಾದ ಬೆಸ್ಟ್ ನೇವಿಗೇಷನ್ ಆಪ್ ಎನ್ನಿಸಿಕೊಂಡಿದೆ.

#3 ಮ್ಯಾಪ್ ಫ್ಯಾಕ್ಟರ್ ಜಿಪಿಎಸ್ ನೇವಿಗೇಷನ್ ಮ್ಯಾಪ್ಸ್
ಮ್ಯಾಪ್ ಫ್ಯಾಕ್ಟರ್ ಜಿಪಿಎಸ್ ನೇವಿಗೇಷನ್ ಮ್ಯಾಪ್ಸ್ ಅಂತರ್ಜಾಲ ಸಂಪರ್ಕವಿಲ್ಲದೆ ಇದ್ದಾಗಲೂ ಕೂಡ ಯಾರು ದಾರಿಯ ಹುಡುಕಾಟವನ್ನು ಮಾಡಲು ಬಯಸುತ್ತೀರೋ ಅವರಿಗಾಗಿ ಇರುವ ಮತ್ತೊಂದು ಬೆಸ್ಟ್ ಆಪ್ ಆಗಿದೆ.ಮ್ಯಾಪ್ ಫ್ಯಾಕ್ಟರ್ ಜಿಪಿಎಸ್ ಮ್ಯಾಪ್ಸ್ ನ ಪ್ರಮುಖವಾಗಿರುವ ಅಂಶವೆಂದರೆ ಓಪನ್ ಸ್ಟ್ರೀಟ್ ಮ್ಯಾಪ್ಸ್ ನಲ್ಲಿ ಉಚಿತ ಆಫ್ ಲೈನ್ ಮ್ಯಾಪ್ ಸೇವೆಯನ್ನು ಇದು ಒದಗಿಸುತ್ತದೆ. ಈ ಆಪ್ ಸದ್ಯ 200 ದೇಶಗಳನ್ನು ಕವರ್ ಮಾಡುತ್ತದೆ ಮತ್ತು 1000 ಅಧಿಕ ರೆಸ್ಟೋರೆಂಟ್ ಗಳು, ಎಟಿಎಂಗಳು, ಪೆಟ್ರೊಲ್ ಪಂಪ್ ಗಳು ಇತ್ಯಾದಿಗಳಿವೆ. ಆಫ್ ಲೈನ್ ನೇವಿಗೇಷನ್ ನ್ನು ಆಂಡ್ರಾಯ್ಡ್ ನಲ್ಲಿ ಮಾಡುವುದಕ್ಕೆ ಇರುವ ಮತ್ತೊಂದು ಬೆಸ್ಟ್ ಆಪ್ ಇದಾಗಿದೆ.

#4 ಹಿಯರ್ ವಿಗೋ
ಹಿಯರ್ ವಿಗೋ ಗೂಗಲ್ ಪ್ಲೇ ನಲ್ಲಿ ಲಭ್ಯವಿರುವ ಇತರೆ ಜಿಪಿಎಸ್ ನೇವಿಗೇಷನ್ ಆಪ್ ಗಳಿಗೆ ಹೋಲಿಸಿದರೆ ಸ್ವಲ್ಪ ವಿಭಿನ್ನವಾಗಿದೆ. ಈ ಆಪ್ ಆಫ್ ಲೈನ್ ಜಿಪಿಎಸ್ ನೇವಿಗೇಷನ್ ನ್ನು ಆಫರ್ ಮಾಡುತ್ತದೆ ಆದರೆ ಇದು ಹೆಚ್ಚು ಟ್ರಾನ್ಸ್ ಪೋರ್ಟ್ ಗೆ ಇದು ಹೆಚ್ಚು ಗಮನವನ್ನು ಕೇಂದ್ರೀಕರಿಸುವ ಆಪ್ ಆಗಿದೆ. ಉದಾಹರಣೆಗೆ ನೀವು ಎಲ್ಲಿ ಟ್ಯಾಕ್ಸಿಯನ್ನು ಹುಡುಕಬಹುದು, ಸಾರ್ವಜನಿಕ ವಾಹನ ಸೌಲಭ್ಯ ಎಲ್ಲಿ ದೊರಕುತ್ತದೆ ಇತ್ಯಾದಿ ಮಾಹಿತಿಗಳು ಇದರಲ್ಲಿ ಲಭ್ಯವಾಗುತ್ತದೆ. ಅಷ್ಟೇ ಅಲ್ಲ ಆಪ್ ನಲ್ಲಿ ಕಾರ್, ಬೈಕ್, ಟ್ಯಾಕ್ಸಿ, ಸಾರ್ವಜನಿಕ ವಾಹನ ಸೇವೆಗೆ ಯಾವುದು ಬೆಸ್ಟ್ ಮತ್ತು ವೇಗವಾಗಿರುವ ರೂಟ್ ಆಗಿ, ಎಷ್ಟು ಬೆಲೆಯನ್ನು ನೀವು ನಿಮ್ಮ ಪ್ರಯಾಣಕ್ಕೆ ಹಾಕಬೇಕಾಗುತ್ತದೆ ಇತ್ಯಾದಿ ಮಾಹಿತಿಗಳನ್ನು ಈ ಆಪ್ ನಲ್ಲಿ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

#5 ಜೀನಿಯಸ್ ಮ್ಯಾಪ್ಸ್
ಜೀನಿಯಸ್ ಮ್ಯಾಪ್ಸ್ ಆಫ್ ಲೈನ್ ರೂಟ್ ಪ್ಲಾನಿಂಗ್, ಹುಡುಕಾಡುವಿಕೆ, ನೇವಿಗೇಷನ್ ಗೆ ಇರುವ ಮತ್ತೊಂದು ಬೆಸ್ಟ್ ಆಂಡ್ರಾಯ್ಡ್ ಆಪ್ ಆಗಿದೆ. ದಾರಿಯನ್ನು ಹುಡುಕುವುದಕ್ಕಾಗಿ ಈ ಆಪ್ ನಲ್ಲೂ ಕೂಡ ಅಂತರ್ಜಾಲದ ಅವಶ್ಯಕತೆ ಇರುವುದಿಲ್ಲ. ಇದು ಪ್ರೀಮಿಯಂ ಆಪ್ ಆಗಿದೆ ಆದರೆ 7 ದಿನಗಳ ಉಚಿತ ಟ್ರಯಲ್ ಸೇವೆಯನ್ನು ನೀಡುತ್ತದೆ. ಇದರಲ್ಲಿ ಸಂಪೂರ್ಣ ಫಂಕ್ಷನಲ್ ಆಗಿರುವ ಮಾಹಿತಿಗಳು ಮತ್ತು ಟ್ರಾಫಿಕ್ ನ ಲೈವ್ ಅಪ್ ಡೇಟ್ ಲಭ್ಯವಾಗುತ್ತದೆ. ಆಪ್ ಲೈನ್ ಜಿಪಿಎಸ್ ನೇವಿಗೇಷನ್ ಆಪ್ ಗಳಲ್ಲಿ ಇದು ಕೂಡ ಬೆಸ್ಟ್ ಆಪ್ ಎಂದು ಆಂಡ್ರಾಯ್ಡ್ ಫೋನ್ ಗಳಲ್ಲಿ ಅನ್ನಿಸಿಕೊಂಡಿದೆ.
ಈ 5 ಆಪ್ ಗಳು ಜಿಪಿಎಸ್ ನೇವಿಗೇಷನ್ ಆಪ್ ಗಳಾಗಿದ್ದು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆ ಮಾಡಬಹುದು. ಇಂತಹ ಯಾವುದೇ ಇತರೆ ಆಪ್ ಗಳು ನಿಮಗೆ ತಿಳಿದಿದ್ದಲ್ಲಿ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470