ಸ್ನ್ಯಾಪ್‌ಟ್ಯೂಬ್‌ ಆಪ್‌ ಬಳಸುವ ಮುನ್ನ ಎಚ್ಚರ..! ಕಂಡಿದೆ ಅನುಮಾನಾಸ್ಪದ ಚಟುವಟಿಕೆ..!

By Gizbot Bureau
|

ಗೂಗಲ್ ಪ್ಲೇ ಸ್ಟೋರ್‌ನಲ್ಲಿ 40 ಮಿಲಿಯನ್ ಡೌನ್‌ಲೋಡ್‌ಗಳನ್ನು ಕಂಡಿರುವ ಆಂಡ್ರಾಯ್ಡ್‌ ಆಪ್‌ ಒಂದು ತನ್ನ ಬಳಕೆದಾರರ ಜ್ಞಾನದ ಹೊರತಾಗಿ ಅನುಮಾನಾಸ್ಪದ ವಹಿವಾಟು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಪ್‌ಸ್ಟ್ರೀಮ್‌ನ ಭದ್ರತಾ ಪ್ಲಾಟ್‌ಫಾರ್ಮ್ ಸೆಕ್ಯೂರ್-ಡಿ ವರದಿಯ ಪ್ರಕಾರ, ಸ್ನ್ಯಾಪ್‌ಟ್ಯೂಬ್ ಎಂಬ ಆಪ್‌ ಅದೃಶ್ಯ ಜಾಹೀರಾತುಗಳನ್ನು ಗ್ರಾಹಕರಿಗೆ ತಲುಪಿಸುತ್ತಿದೆ, ಆಫ್‌ಲೈನ್ ವೀಕ್ಷಣೆಗಾಗಿ ಯೂಟ್ಯೂಬ್‌ನಿಂದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಬಳಕೆದಾರರನ್ನು ಅನುಮತಿಸುವ ಆಪ್‌ ಸ್ನಾಪ್‌ಟ್ಯೂಬ್‌ ಆಗಿದೆ. ಅದೃಶ್ಯ ಜಾಹೀರಾತುಗಳು, ನಾನ್‌-ಹ್ಯೂಮನ್‌ ಕ್ಲಿಕ್‌ಗಳು ಮತ್ತು ಖರೀದಿಗಳನ್ನು ನಡೆಸುತ್ತಿದೆ. ನಂತರ, ಇವುಗಳನ್ನೇ ಆಪ್‌ ನೈಜ ವೀಕ್ಷಣೆಗಳು, ಕ್ಲಿಕ್‌ಗಳು ಎಂದು ವರದಿ ಮಾಡಿ, ಜಾಹೀರಾತು ನೆಟ್‌ವರ್ಕ್‌ಗಳಿಗೆ ನೀಡುತ್ತಿದೆ.

70 ದಶಲಕ್ಷಕ್ಕೂ ಹೆಚ್ಚು ವಹಿವಾಟು

70 ದಶಲಕ್ಷಕ್ಕೂ ಹೆಚ್ಚು ವಹಿವಾಟು

ಅಪ್‌ಸ್ಟ್ರೀಮ್‌ ವರದಿಯ ಪ್ರಕಾರ, ಸ್ನ್ಯಾಪ್‌ಟ್ಯೂಬ್ ಕೇವಲ ಆರು ತಿಂಗಳಲ್ಲಿ 4.4 ಮಿಲಿಯನ್ ಸಾಧನಗಳಿಂದ 70 ದಶಲಕ್ಷಕ್ಕೂ ಹೆಚ್ಚಿನ ಅನುಮಾನಾಸ್ಪದ ವಹಿವಾಟುಗಳನ್ನು ನಡೆಸಿದೆ. ಸೆಕ್ಯೂರ್-ಡಿ ಈ ವಹಿವಾಟುಗಳನ್ನು ನಿರ್ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸ್ನ್ಯಾಪ್‌ಟ್ಯೂಬ್‌ ತನ್ನ ಬಳಕೆದಾರರಿಗೆ 91 ಮಿಲಿಯನ್ ಡಾಲರ್‌ವರೆಗೆ ಅನಗತ್ಯ ಪ್ರೀಮಿಯಂ ಶುಲ್ಕವನ್ನು ವಿಧಿಸಿದೆ ಎಂದು ಹೇಳಿದೆ.

ಬ್ರೆಜಿಲ್‌, ಈಜಿಪ್ಟ್‌ನಲ್ಲಿ ಹೆಚ್ಚು

ಬ್ರೆಜಿಲ್‌, ಈಜಿಪ್ಟ್‌ನಲ್ಲಿ ಹೆಚ್ಚು

ಸ್ನ್ಯಾಪ್‌ಟ್ಯೂಬ್‌ನ ಅನುಮಾನಾಸ್ಪದ ದಾಳಿ ಬ್ರೆಜಿಲ್, ಈಜಿಪ್ಟ್, ಶ್ರೀಲಂಕಾ, ಮಲೇಷ್ಯಾ ಮತ್ತು ದಕ್ಷಿಣ ಆಫ್ರಿಕಾದ ಬಳಕೆದಾರರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಅಪ್‌ಸ್ಟ್ರೀಮ್ ಹೇಳಿದೆ. ಅಪ್‌ಸ್ಟ್ರೀಮ್‌ನ ಸಿಇಒ ಗೈ ಕ್ರೀಫ್ ಹೇಳುವಂತೆ, ಜಾಹೀರಾತುಗಳನ್ನು ಡೌನ್‌ಲೋಡ್ ಮಾಡಿ ಕ್ಲಿಕ್ ಮಾಡಿದರೆ ಹ್ಯಾಂಡ್‌ಸೆಟ್ ಪರದೆಗಳಲ್ಲಿ ಏನನ್ನೂ ತೋರಿಸುವುದಿಲ್ಲ. ಆದರೆ, ವಿಡಿಯೋ ಆಪ್‌ ಸ್ಕ್ರೀನ್‌ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡುಬಂದಿದೆ.

ಎಚ್ಚರಿಕೆ ವಹಿಸಿ

ಎಚ್ಚರಿಕೆ ವಹಿಸಿ

ಅಪ್‌ಸ್ಟ್ರೀಮ್‌ ಪ್ರತಿದಿನ ಹೊಸ ಸಮಸ್ಯೆಗಳನ್ನು ನಿರ್ಬಂಧಿಸುತ್ತಿದೆ. ಸ್ನ್ಯಾಪ್‌ಟ್ಯೂಬ್ ಅಪ್ಲಿಕೇಶನ್ ಬಳಸುವ ಯಾರಾದರೂ ತಮ್ಮ ಫೋನ್ ಬಿಲ್‌ಗಳನ್ನು ಎಚ್ಚರಿಕೆಯಿಂದ ವೀಕ್ಷಿಸಬೇಕಾಗಿದ್ದು, ಅಧಿಕೃತಗೊಳಿಸದ ಯಾವುದೇ ಚಂದಾದಾರಿಕೆಗಳು ಅಥವಾ ಶುಲ್ಕಗಳ ಪಾವತಿಯಾದರೆ ನಿಮ್ಮ ಆಪರೇಟರ್‌ಗೆ ತಕ್ಷಣ ವರದಿ ಮಾಡಿ ಎಂದು ಗೈ ಕ್ರೀಪ್‌ ಹೇಳುತ್ತಾರೆ.

ಆರೋಪದ ಬಗ್ಗೆ ಪ್ರತಿಕ್ರಿಯೆ

ಆರೋಪದ ಬಗ್ಗೆ ಪ್ರತಿಕ್ರಿಯೆ

ಈ ಬಗ್ಗೆ ಸ್ನ್ಯಾಪ್‌ಟ್ಯೂಬ್ ಹೇಳಿಕೆ ಬಿಡುಗಡೆ ಮಾಡಿದ್ದು, ಮ್ಯಾಂಗೋ ಎಸ್‌ಡಿಕೆ ಜಾಹೀರಾತು ವಂಚನೆ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬುದು ನಮಗೆ ತಿಳಿದಿರಲಿಲ್ಲ, ಇದು ನಮಗೆ ಬ್ರಾಂಡ್ ರೆಪ್ಯುಟೇಶನ್‌ನಲ್ಲಿ ದೊಡ್ಡ ನಷ್ಟ ತಂದಿದೆ. ಮ್ಯಾಂಗೋ ಎಸ್‌ಡಿಕೆ ದುರುದ್ದೇಶಪೂರಿತ ನಡವಳಿಕೆಯ ಬಗ್ಗೆ ಬಳಕೆದಾರರು ದೂರು ನೀಡಿದ ನಂತರ ಶೀಘ್ರವಾಗಿ ಸಮಸ್ಯೆ ಬಗೆಹರಿಸಿದ್ದೇವೆ. ನಮ್ಮ ಅಧಿಕೃತ ಸೈಟ್‌ನಲ್ಲಿನ ಆವೃತ್ತಿಗಳು ಮತ್ತು ನಿರ್ವಹಿಸಲಾದ ವಿತರಣಾ ಚಾನಲ್‌ಗಳು ಈಗಾಗಲೇ ಈ ಸಮಸ್ಯೆಯಿಂದ ಮುಕ್ತವಾಗಿವೆ ಎಂದು ಹೇಳಿದೆ.

Best Mobiles in India

English summary
This Android App With 40 Million Downloads Is Stealing From Its Users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X