ಯೂಟ್ಯೂಬ್‌ನಲ್ಲಿ ಈ ವರ್ಷ ಟ್ರೇಂಡ್‌ ಸೃಷ್ಟಿಸಿದೆ ಗೇಮ್..!

|

ಬ್ಯಾಟಲ್ ರಾಯಲ್ ಗೇಮ್ ಗಳಾದ ಪಿಯುಬಿಜಿ ಮತ್ತು ಫೋರ್ಟ್ ನೈಟ್ ಗೇಮ್ ಗಳು ಗೇಮಿಂಗ್ ಇಂಡಸ್ಟ್ರಿಯಲ್ಲಿ ಹವಾ ಸೃಷ್ಟಿ ಮಾಡಿದೆ ಮತ್ತು ಪ್ರತಿಯೊಬ್ಬರೂ ಇದನ್ನು ಆಡಲು ಇಚ್ಛಿಸುತ್ತಾರೆ ಮತ್ತು ಆಡಿದ್ದಾರೆ. ಸದ್ಯ ಈ ಆಟಗಳು ಒಂದು ರೀತಿಯಲ್ಲಿ ಬಿರುಗಾಳಿಯನ್ನೇ ಸೃಷ್ಟಿ ಮಾಡುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾಗರದು. ಹದಿಹರೆಯದವರಿಂದ ಹಿಡಿದು ವಯಸ್ಸಾದವರು ಕೂಡ ಒಮ್ಮೆ ಪ್ಯಾರಾಚೂಟ್ ನಲ್ಲಿ ದ್ವೀಪಕ್ಕೆ ತೆರಳಿ ಯುದ್ಧ ಮಾದರಿಯ ಗೇಮ್ ನಂತ ವರ್ಚುವಲ್ ಜಗತ್ತಿನಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಇದರ ಈ ಪ್ರಸಿದ್ಧಿಯ ಹೊರತಾಗಿಯೂ ಕೂಡ, ಈ ಗೇಮ್ ಗಳು ಎಲ್ಲಾ ಕಡೆಗಳಲ್ಲೂ ಟಾಪ್ ಗೇಮ್ ಗಳಾಗಿಲ್ಲ.

ಯೂಟ್ಯೂಬ್‌ನಲ್ಲಿ ಈ ವರ್ಷ ಟ್ರೇಂಡ್‌ ಸೃಷ್ಟಿಸಿದೆ ಗೇಮ್..!

ಗೇಮಿಂಗ್ ವಿಷಯ ಮತ್ತು ಪಾಲುದಾರಿಕೆಗಳ ಯುಟ್ಯೂಬ್ ನ ಡೈರೆಕ್ಟರ್ ಆಗಿರುವ ರಯಾನ್ ವಾಟ್ಸ್ ದಿ ವರ್ಜ್ಗೆ ತಿಳಿಸಿರುವಂತೆ ಬ್ಯಾಟಲ್ ರಾಯಲ್ ಗೇಮ್ಸ್ ಗಳು ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲೂ ಸುದ್ದಿ ಮಾಡಿ ಪ್ರಸಿದ್ಧಿ ಗಳಿಸಿರುವುದೇನೋ ನಿಜ. ಆದರೆ ವರ್ಜ್ ವರದಿಯ ಪ್ರಕಾರ ಈ ಆಟಗಳನ್ನು ಒಂಬತ್ತು ವರ್ಷ ಹಳೆಯ ಬದುಕುಳಿಯುವ ಆಟ ಎಂದು ಕರೆಸಿಕೊಂಡ ಮೈನ್ ಕ್ರಾಫ್ಟ್( Minecraft) ಆಟವು ಹಿಂದಕ್ಕೆ ತಳ್ಳಿದೆಯಂತೆ.

ಮೈನ್‌ಕ್ರಾಫ್ಟ್‌ ಜನಪ್ರಿಯ

ಮೈನ್‌ಕ್ರಾಫ್ಟ್‌ ಜನಪ್ರಿಯ

ಹೌದು ಫೋರ್ಟ್ ನೈಟ್ ಆಟವು ಗೇಮಿಂಗ್ ಜಗತ್ತಿನ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಿದೆ ಎಂಬುದೇನೋ ನಿಜ ಆದರೆ ಜಗತ್ತಿನಾದ್ಯಂತ ಹೆಚ್ಚು ದೊಡ್ಡ ಆಟವಾಗಿ ಪ್ರಸಿದ್ಧಿಯಾಗಿರುವುದು ಮೈನ್ ಕ್ರಾಫ್ಟ್ ಆಗಿದೆ ಎಂದು ವ್ಯಾಟ್ ತಿಳಿಸಿದ್ದಾರೆ. ಅಂದರೆ ಫೋರ್ಟ್ ನೈಟ್ ಪ್ರತಿಯೊಂದು ಮಾರುಕಟ್ಟೆಯಲ್ಲೂ ಜನಪ್ರಿಯಗೊಂಡಿಲ್ಲ ಎಂಬುದು ಇದರಿಂದ ಅರ್ಥವಾಗುತ್ತದೆ.

2011ರಲ್ಲಿ ರಿಲೀಸ್

2011ರಲ್ಲಿ ರಿಲೀಸ್

ಸ್ಯಾಂಡ್ ಬಾಕ್ಸ್ ವೀಡಿಯೋ ಗೇಮ್ ಆಗಿರುವ ಮೈನ್ಕ್ರಾಫ್ಟ್ 2011 ರಲ್ಲಿ ಸ್ವೀಡಿಷ್ ನ ಗೇಮ್ ಡೆವಲಪರ್ ಆಗಿರುವ ಮಾರ್ಕ್ಯೂಸ್ ಪೆರ್ಸೆನ್ ಎಂಬುವವರಿಂದ ತಯಾರಿಸಲ್ಪಟ್ಟಿದ್ದು ನಂತರದ ದಿನಗಳಲ್ಲಿ ಅದನ್ನು ಮೊಜಂಗ್ ಎಂಬುವವರು ಡೆವಲಪ್ ಮಾಡಿದರು. ಈ ಗೇಮ್ ನಲ್ಲಿ ಆಟಗಾರರು ಬೇರೆಬೇರೆ ವಿಭಿನ್ನ ಬ್ಲಾಕ್ಸ್ ಗಳನ್ನು ಬಳಸಬಹುದು ಮತ್ತು ಆ ಮೂಲಕ 3ಡಿ ಸ್ಟ್ರಕ್ಚರ್ ನ್ನು ಜನರೇಟ್ ಮಾಡಬಹುದು

74 ಮಿಲಿಯನ್ ಸಕ್ರಿಯ ಆಟಗಾರರು

74 ಮಿಲಿಯನ್ ಸಕ್ರಿಯ ಆಟಗಾರರು

ಫೋರ್ಟ್ ನೈಟ್ ನ 3.4 ಮಿಲಿಯನ್ ಆಟಗಾರರಿಗೆ ಹೋಲಿಸಿದರೆ ಇದರಲ್ಲಿ 74 ಮಿಲಿಯನ್ ಆಕ್ಟೀವ್ ಪ್ಲೇಯರ್ ಗಳಿದ್ದಾರೆ. ಒಂದು ದಶಕದ ಹಿಂದಿನ ಆಟವೇ ಆಗಿದ್ದರೂ ಕೂಡ ಮೈನ್ ಕ್ರಾಫ್ಟ್ ನಲ್ಲಿ 2017 ಡಿಸೆಂಬರ್ ಹೊತ್ತಿಗೆ ಸುಮಾರು 74 ಮಿಲಿಯನ್ ಆಕ್ಟೀವ್ ಆಟಗಾರರಿದ್ದಾರೆ.ಇದು ಇತರೆ ಆಟಕ್ಕಿಂತ ಹೆಚ್ಚಿನದ್ದಾಗಿದ್ದು ಇತರೆ ದಾಖಲೆಯನ್ನು ಮುರಿಯುತ್ತದೆ. ಇದಕ್ಕೆ ಹೋಲಿಸಿದರೆ ಫೋರ್ಟ್ ನೈಟ್ ನಲ್ಲಿ ಈ ವರ್ಷದ ಆರಂಭಕ್ಕೂ ಮುನ್ನ ಕೇವಲ 3.4 ಆಕ್ಟೀವ್ ಆಟಗಾರರಿದ್ದರು. ಮೈನ್ ಕ್ರಾಫ್ಟ್ ಹಳೆಯ ಆಟವೇ ಆಗಿದ್ದರೂ ಹೊಸಹೊಸ ಅಪ್ ಡೇಟ್ ಗಳನ್ನು ಆಗಾಗ ಹೊಂದುತ್ತಲೇ ಇರುತ್ತದೆ. ಹಾಗಾಗಿ ಅದರ ಆಟಗಾರರಿಗೆ ಯಾವಾಗಲೂ ಏನೋ ಒಂದು ಹೊಸತು ಲಭ್ಯವಾಗುತ್ತಲೇ ಇರುತ್ತದೆ.

ಯೂಟ್ಯೂಬ್‌ನಲ್ಲಿ ಟ್ರೇಂಡ್

ಯೂಟ್ಯೂಬ್‌ನಲ್ಲಿ ಟ್ರೇಂಡ್

ಯುಟ್ಯೂಬ್ ಗೇಮ್ಸ್ ನ ಟಾಪ್ ಸ್ಥಾನವು ಅದರ ಮಾರ್ಕೆಟ್ ನ್ನು ಕೂಡ ಅವಲಂಬಿಸಿರುತ್ತದೆ. ಮಧ್ಯಪ್ರಾಚ್ಯ ಮತ್ತು ಏಷಿಯಾಗಳಲ್ಲಿ ಟಾಪ್ ಆಗಿ ದೊಡ್ಡ ಟೈಟಲ್ ಪಡೆಯುವ ಗೇಮ್ ಗಳು ಯುಎಸ್ ನಲ್ಲಿ ಹೆಚ್ಚು ಮಾರುಕಟ್ಟೆಯನ್ನು ಸೃಷ್ಟಿಸುವುದಿಲ್ಲ. ಉದಾಹರಣೆಗೆ ಮೊಬೈಲ್ ಮಲ್ಟಿಪ್ಲೇಯರ್ ಆನ್ ಲೈನ್ ಬ್ಯಾಟಲ್ ಅರೆನಾ ಗೇಮ್ಸ್ ಬ್ಯಾಂಗ್ ಬ್ಯಾಂಗ್. ಯುಎಸ್ ಮತ್ತು ಪಶ್ಚಿಮ ಯುರೋಪ್ ನ ಹೊರಭಾಗದಲ್ಲೂ ಕೂಡ ಹಲವು ರೀತಿಯ ವಿಚಾರಗಳು ನಡೆಯುತ್ತದೆ ಮತ್ತು ಅದು ಗೇಮಿಂಗ್ ಜಗತ್ತನ್ನು ಬೆಳೆಸುವಲ್ಲಿ ಹಲವು ಕೊಡುಗೆಗಳನ್ನು ಕೊಡುತ್ತದೆ. ಅದರಲ್ಲಿ ಯುಟ್ಯೂಬ್ ನಲ್ಲಿ ನಡೆಯುವ ಗೇಮಿಂಗ್ ವಿಚಾರಗಳೂ ಕೂಡ ಸಂಬಂಧಿಸಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂಬುದು ವ್ಯಾಟ್ಸ್ ಅವರ ಅಭಿಪ್ರಾಯವಾಗಿದೆ.

Best Mobiles in India

English summary
This is the biggest game on YouTube this year. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X