ಕೃಷಿ ಕಾರ್ಮಿಕರ ಸಮಸ್ಯೆಗೆ ಬಂದಿದೆ ಪರಿಹಾರ..! ಬೆಳೆ ಕೊಯ್ಲು ಮಾಡುತ್ತದೆ ಈ ರೋಬೊಟ್..!

|

ಬೆಳೆ ಕಟಾವಿಗೆ ಬಂದಿದೆ. ಕೊಯ್ಯಲು ಕಾರ್ಮಿಕರೇ ಸಿಗುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಯಾವುದಾದರೂ ಕೊಯ್ಲಿಗೆ ಸಹಾಯ ಮಾಡುವ ಮೆಷಿನ್ ಇರಬಾರದಿತ್ತಾ ಅಂತ ಅದೆಷ್ಟೋ ಸಂದರ್ಬಗಳಲ್ಲಿ ರೈತರು ಅಂದುಕೊಳ್ಳುವುದಿದೆ. ಖಂಡಿತ ನಿಮ್ಮ ಈ ಸಮಸ್ಯೆಗೆ ಪರಿಹಾರ ನೀಡುವ ಕಾಲ ಸನ್ನಿಹಿತವಾಗುತ್ತಿದೆ ಎಂದೆನಿಸುತ್ತದೆ.

ಕಾರ್ಮಿಕರ ಸಮಸ್ಯೆಗೆ ಬಂದಿದೆ ಪರಿಹಾರ..! ಬೆಳೆ ಕೊಯ್ಲು ಮಾಡುತ್ತದೆ ಈ ರೋಬೊಟ್..!

ಹೌದು ನಿಮ್ಮ ಬೆಳೆಯನ್ನು ಕಟಾವು ಮಾಡುವ, ತರಕಾರಿಗಳು ಮಾಗಿದ್ದರೆ ಅದನ್ನು ಕೊಯ್ದು ಕೊಡುವ ರೋಬೊಟ್ ಒಂದನ್ನು ಜಗತ್ತಿಗೆ ಪರಿಚಯಿಸಲಾಗಿದೆ. ಹೌದು ಒಂದೇ ಕಾಂಡದಲ್ಲಿ ಬೆಳೆಯುವ ಸಾಲು ಬೆಳೆ ವ್ಯವಸ್ಥೆ ಅಂದರೆ ಸದ್ಯಕ್ಕೆ ಸಿಹಿ ಮೆಣಸಿನಕಾಯಿ ಕೊಯ್ಲಿಗೆ ನೆರವು ನೀಡುವ ರೋಬೊಟ್ ಒಂದನ್ನು ಅಧ್ಯಯನಕಾರರು ಜಗತ್ತಿಗೆ ಪರಿಚಯಿಸಿದ್ದಾರೆ.

ರೋಬೊಟ್ ಹೆಸರೇನು ಗೊತ್ತಾ?

ರೋಬೊಟ್ ಹೆಸರೇನು ಗೊತ್ತಾ?

ಈ ರೋಬೊಟ್ ಗೆ "ಸ್ವೀಪರ್" ಎಂದು ನಾಮಕರಣ ಮಾಡಲಾಗಿದೆ. ಇದು ಕ್ರಮಬದ್ಧವಾಗಿ ಮತ್ತು ನಿಖರವಾಗಿ ಬೆಳೆಗಳನ್ನು ಕೊಯ್ಲಿಗೆ ಆರಿಸುತ್ತದೆ ಎಂದು ಹೇಳುತ್ತಾರೆ ಇಸ್ರೇಲಿನ ಬೀರ್ಷೆಬಾದಲ್ಲಿರುವ ನೆಗೆವ್ ಬೆನ್-ಗುರಿಯನ್ ವಿಶ್ವವಿದ್ಯಾಲಯದ ಸಹ ಲೇಖಕರಾಗಿರುವ ಪೋಲಿನಾ ಕರ್ಟ್ಸರ್.

ಈ ರೋಬೋಟ್ 24 ಸೆಕೆಂಡ್ ಗಳಲ್ಲಿ ಸುಮಾರು ಶೇಕಡಾ 62 ರಷ್ಟು ಮಾಗಿದ ಹಣ್ಣುಗಳನ್ನು ಯಶಸ್ವಿಯಾಗಿ ಕೊಯ್ಲು ಮಾಡಲು ಸಮರ್ಥವಾಗಿದೆ. ಅಗತ್ಯ ಪರಿಸ್ಥಿತಿಯಲ್ಲಿ ವಾಣಿಜ್ಯಿಕವಾಗಿ ಲಭ್ಯವಿರುವ ಬೆಳೆಗಳನ್ನು ಕೊಯ್ಯುವುದಕ್ಕೆ ಇದು ನೆರವು ನೀಡುತ್ತದೆ.

ಎಷ್ಟು ತಾಸು ಕಾರ್ಯ ನಿರ್ವಹಿಸುತ್ತದೆ?

ಎಷ್ಟು ತಾಸು ಕಾರ್ಯ ನಿರ್ವಹಿಸುತ್ತದೆ?

ಈ ರೋಬೊಟ್ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ನಂತರ ದಿನದ 24 ತಾಸು ಕೆಲಸ ಮಾಡಲು ಶಕ್ತವಾಗಿರುತ್ತದೆ. ಕಾರ್ಮಿಕ ವೆಚ್ಚ ಅಥವಾ ಕೂಲಿ ವೆಚ್ಚ ಜೊತೆಗೆ ಮಾರುಕಟ್ಟೆ ಏರಿಳಿತಗಳಿಂದ ತಮ್ಮನ್ನ ಸುರಕ್ಷಿತವಾಗಿಟ್ಟುಕೊಳ್ಳುವುದಕ್ಕೆ ರೈತರಿಗೆ ಇದು ನೆರವು ನೀಡುತ್ತದೆ ಎಂಬುದು ಈ ರೋಬೊಟ್ ನ ತಯಾರಕರಲ್ಲಿ ಒಬ್ಬರಾದ ಕುರ್ಸರ್(Kurtser ) ಅವರ ಅಭಿಪ್ರಾಯವಾಗಿದೆ.

ಎಲ್ಲಿ ತಯಾರಿಸಿದ ರೋಬೊಟ್:

ಎಲ್ಲಿ ತಯಾರಿಸಿದ ರೋಬೊಟ್:

ಬೆಲ್ಜಿಯಂ ನ ಸೈಂಟ್ ಕೆಟೆಲಿಜೆನ್ ವೇವರ್ ನಲ್ಲಿರುವ ರೀಸರ್ಚ್ ಸ್ಟೇಷನ್ ಫಾರ್ ವೆಜಿಟೇಬಲ್ ಪ್ರೊಡಕ್ಷನ್ ನಲ್ಲಿ ಕಳೆದ ವಾರ ಈ ರೋಬೊಟ್ ನ್ನು ಪರಿಚಯಿಸಲಾಯಿತು.

ಇತ್ತೀಚೆಗೆ ನಡೆಯುತ್ತಿರುವ ಅಧ್ಯಯನಗಳನ್ನು ಆಧರಿಸಿ ಸಿಹಿ ಮೆಣಸಿನಕಾಯಿ ಬೆಳೆ ಕೊಯ್ಲು ಮಾಡುವ ರೋಬೊಟ್ ನಾಲ್ಕರಿಂದ ಐದು ವರ್ಷಗಳಲ್ಲಿ ವಾಣಿಜ್ಯಿಕವಾಗಿ ಲಭ್ಯವಿರುತ್ತದೆ ಎಂದು "ಸ್ವೀಪರ್" ಒಕ್ಕೂಟವು ನಿರೀಕ್ಷೆ ಮಾಡುತ್ತಿದೆ ಮತ್ತು ಈ ತಂತ್ರಜ್ಞಾನವನ್ನು ಇತರೆ ಬೆಳೆಗಳ ಕೊಯ್ಲಿಗೂ ಬಳಸಬಹುದಾಗಿದೆ ಎಂದು ಅಧ್ಯಯನಕಾರರು ಅಭಿಪ್ರಾಯ ಪಡುತ್ತಾರೆ.

ರೋಬಾಟಿಕ್ ವ್ಯವಸ್ಥೆಯ ಲಾಭಗಳು: 

ರೋಬಾಟಿಕ್ ವ್ಯವಸ್ಥೆಯ ಲಾಭಗಳು: 

ರೋಬೊಟ್ ವ್ಯವಸ್ಥೆಯು ಬೆಳೆಕೊಯ್ಲು ಮಾಡುವುದರ ಪರಿಣಾಮವಾಗಿ ಕೃಷಿ ಕ್ಷೇತ್ರದ ಅರ್ಥಶಾಸ್ತ್ರದಲ್ಲೊಂದು ಕ್ರಾಂತಿ ಹುಟ್ಟುಹಾಕಲಿದೆ ಮತ್ತು ಆಹಾರ ಪದಾರ್ಥಗಳು ತ್ಯಾಜ್ಯವಾಗಿ ದುಂದುವೆಚ್ಚವಾಗುವುದು ಕಡಿಮೆಗೊಳ್ಳಲಿದೆ ಎಂಬ ಅಭಿಪ್ರಾಯವನ್ನು ಅಧ್ಯಯನಕಾರರು ತಿಳಿಸುತ್ತಾರೆ.
ಈ ತಂಡವು ಕಂಪ್ಯೂಟರ್ ತಂತ್ರಜ್ಞಾನದ ದೃಷ್ಟಿಯನ್ನು ಬಳಸಿ ಮಾಗಿದ ಫಸಲು ಯಾವುದು ಎಂಬುದನ್ನು ಪತ್ತೆ ಹಚ್ಚುವ ಸಾಮರ್ಥ್ಯವನ್ನು ರೋಬೊಟ್ ನಲ್ಲಿ ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ರೋಬೊಟ್ ನ ಹಾರ್ಡ್ವೇರ್ ಮತ್ತು ಸಾಫ್ಟ್ ವೇರ್ ಗಳ ಅಭಿವೃದ್ಧಿಯೆಡೆಗೆ ಗಮನ ಕೇಂದ್ರೀಕರಿಸಲಾಗಿದೆ ಜೊತೆಗೆ ಇದರ ಒಟ್ಟಾರೆ ಚಟುವಟಿಕೆಯ ನಿಯಂತ್ರಣವನ್ನು ಇನ್ನಷ್ಟು ಬಲಪಡಿಸಲು ಅಧ್ಯಯನಕಾರರು ಪ್ರಯತ್ನಿಸುತ್ತಿದ್ದಾರೆ.

ಭವಿಷ್ಯದ ಕೃಷಿಗೊಂದು ಅಡಿಪಾಯ:

ಭವಿಷ್ಯದ ಕೃಷಿಗೊಂದು ಅಡಿಪಾಯ:

ರೋಬೊಟ್ ನ ಕೆಲಸದ ವೇಗ ಹೆಚ್ಚಿಸುವಿಕೆ ಮತ್ತು ಹೆಚ್ಚಿನ ಸುಗ್ಗಿ ಕಾಲದಲ್ಲಿ ಬೆಳೆಯ ಒಟ್ಟಾರೆ ಮೊತ್ತಕ್ಕೆ ತಕ್ಕಂತೆ ಇದರ ಕೆಪಾಸಿಟಿಯನ್ನು ಹೆಚ್ಚಿಸಲು ಏನು ಮಾಡಬಹುದು ಎಂಬ ಬಗ್ಗೆಯೂ ಕೆಲಸಗಳು ನಡೆಯುತ್ತಿದೆ. ಈಗ ನಡೆದಿರುವ ಅಧ್ಯಯನವು ಒಂದು ಪ್ರಾರಂಭಿಕ ಹಂತ ಅಷ್ಟೇ.ಇದು ಭವಿಷ್ಯದ ಕೃಷಿ ಕ್ಷೇತ್ರಕ್ಕೆ ಒಂದು ಅಡಿಪಾಯ ಹಾಕಿಕೊಡುತ್ತಿದೆ.

Best Mobiles in India

English summary
This robot may help in harvesting crops. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X