ಆಂಡ್ರಾಯ್ಡ್ ಸ್ಕ್ರೀನ್ ರೆಕಾರ್ಡಿಂಗ್ ಗೆ ಈ 3 ಆಪ್ ಗಳು ಹೇಳಿ ಮಾಡಿಸಿದಂತಿವೆ...!

|

ನಿಮ್ಮ ಫೋನಿನಲ್ಲಿ ಏನು ನಡೀತಿದೆ ಅನ್ನೋದು ನಿಮಗೆ ರೆಕಾರ್ಡ್ ಆಗಬೇಕಾ? ಅದು ಯಾವುದೇ ಕಾರಣಕ್ಕಾಗಿರಬಹುದು, ನೀವು ಆಟವಾಡುತ್ತಿರುವ ಗೇಮ್ ಹೇಗೆ ಅನ್ನೋದನ್ನು ಇನ್ನೊಬ್ಬರಿಗೆ ತೋರಿಸಲು ಇರಬಹುದು, ಅಥವಾ ಯಾವುದೋ ಹೊಸ ಆಪ್ ನ ಬಗ್ಗೆ ಇತರರಿಗೆ ತೋರಿಸಲು ಇರಬಹುದು ಇಲ್ಲವೇ ನಿಮ್ಮ ಫೋಷಕರಿಗೆ ಯಾವುದೋ ಸೆಟ್ಟಿಂಗ್ಸ್ ಬದಲಾಯಿಸುವುದು ಹೇಗೆ ಎಂದು ತಿಳಿಸಲು ಇರಬಹುದು. ಎಸ್ ಈ ಕೆಲಸವನ್ನು ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಮಾಡಲು ಸಾಧ್ಯವಿದೆ. ಆದರೆ IOS ನಲ್ಲಿ ಮಾಡಿದಷ್ಟು ಸುಲಭವಲ್ಲ. ಮೂರನೇ ಅಪ್ಲಿಕೇಷನ್ ಒಂದರ ಸಹಾಯ ಪಡೆದು ಮಾಡಬೇಕಾಗುತ್ತದೆ. ಹಾಗಾಗಿ ನಾವಿಲ್ಲಿ ಇವತ್ತು, ಯಾವ ಆಪ್ ಬಳಸಿ ನೀವು ಈ ಕೆಲಸವನ್ನು ಸುಲಭದಲ್ಲಿ ಮಾಡಬಹುದು. ಆಂಡ್ರಾಯ್ಡ್ ನಲ್ಲಿ ನಿಮ್ಮ ಫೋನಿನ ಸ್ಕ್ರೀನಿನ ರೆಕಾರ್ಡಿಂಗ್ ಮಾಡಲು ಬೆಸ್ಟ್ ಆಗಿರುವ ಆಪ್ ಗಳು ಯಾವುದು ಎಂಬುದನ್ನು ತಿಳಿಸಲಿದ್ದೇವೆ ಮುಂದೆ ಓದಿ.

ಆಂಡ್ರಾಯ್ಡ್ ಸ್ಕ್ರೀನ್ ರೆಕಾರ್ಡಿಂಗ್ ಗೆ ಈ 3 ಆಪ್ ಗಳು ಹೇಳಿ ಮಾಡಿಸಿದಂತಿವೆ...!


ಕೆಲವು ಆಪ್ ಗಳು ಡೌನ್ ಲೋಡ್ ಮಾಡಿದರೆ, ಜಾಹಿರಾತುಗಳು, ಡೊನೆಷನ್ ವಿಡಿಯೋಗಳು, ಕೆಲವು ಪಾಪ್ ಅಪ್ ಗಳಿಂದ ಹಿಂಸೆ ನೀಡುತ್ತವೆ. ಹಾಗಾಗಿ ಯಾವ ಆಪ್ ಈ ಕಿರಿಕಿರಿಯನ್ನು ನಿಮಗೆ ನೀಡದೆ ನಿಮ್ಮ ಆಂಡ್ರಾಯ್ಡ್ ಸ್ಕ್ರೀನಿನ ರೆಕಾರ್ಡಿಂಗ್ ಗೆ ನೆರವಾಗಲಿದೆ ಎಂಬುದನ್ನು ನಾವಿಲ್ಲಿ ತಿಳಿಸಲಿದ್ದೇವೆ.

ಕೆಲವರಿಗೆ ಒಂದು ಅನುಮಾನ ಬರಬಹುದು. ಹೀಗೆ ರೆಕಾರ್ಡ್ ಮಾಡಲು ಆಪ್ ಬಳಸಿದರೆ ಫೋನಿನ ಪರ್ಫಾಮೆನ್ಸ್ ಹಾಳಾಗುವುದಿಲ್ಲವೇ? ಈ ಭಯ ಹೆಚ್ಚಿನವರನ್ನು ಕಾಡುತ್ತೆ.ನಾವು ಈ ಆಪ್ ಗಳನ್ನು ಶಿಯೋಮಿ ಎಂಐ ಮ್ಯಾಕ್ಸ್ 2 ನಲ್ಲಿ ಪ್ರಯತ್ನಿಸಿ ನೋಡಿದ್ದೀವಿ ಮತ್ತು 1080 ಪಿಕ್ಸಲ್ ನಲ್ಲಿ ರೆಕಾರ್ಡ್ ಮಾಡಲು ಸಾಧ್ಯವಾಗಿದ್ದು, ಗೇಮ್ ಗಳನ್ನು ಆಡುವಾಗ ಸಣ್ಣ ಮಟ್ಟದಲ್ಲಿ ಫರ್ಫಾಮೆನ್ಸ್ ಕಡಿಮೆಯಾಗಿದ್ದು ಕಂಡುಬಂದಿದೆ.

ಹಾಗಾದ್ರೆ ಅದು ಯಾವ ಆಪ್ ಗಳು ನಿಮ್ಮ ಸ್ಕ್ರೀನ್ ರೆಕಾರ್ಡಿಂಗ್ ಗೆ ನೆರವಾಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..

1. ಡಿಯು ರೆಕಾರ್ಡರ್ – ಸ್ಕ್ರೀನ್ ರೆಕಾರ್ಡರ್, ವೀಡಿಯೋ ಎಡಿಟರ್, ಲೈವ್

ಆಂಡ್ರಾಯ್ಡ್ ಸ್ಕ್ರೀನ್ ರೆಕಾರ್ಡಿಂಗ್ ಗೆ ಈ 3 ಆಪ್ ಗಳು ಹೇಳಿ ಮಾಡಿಸಿದಂತಿವೆ...!


ಮೊದಲ ದಿ ಬೆಸ್ಟ್ ಆಪ್ ಅಂದರೆ ಅದು ಡಿಯು ರೆಕಾರ್ಡರ್. ಇದು ತುಂಬಾ ಸರಳವಾಗಿದೆ ಮತ್ತು ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಎರಡು ರೀತಿಯಲ್ಲಿ ನೀವು ಇದರ ರೆಕಾರ್ಡಿಂಗ್ ನ್ನು ಕಂಟ್ರೋಲ್ ಮಾಡಬಹುದು. ಒಂದು ಪಾಪ್ ಅಪ್ ವಿಂಡೋ ಮೂಲಕ ಮತ್ತು ನೋಟಿಫಿಕೇಷನ್ ಬಾರ್ ಮೂಲಕ. ಸೆಟ್ಟಿಂಗ್ ನಲ್ಲಿ ವೀಡಿಯೋ ರೆಸೊಲ್ಯೂಷನ್ ನ್ನು ಬದಲಾಯಿಸಬಹುದು(240Pಯಿಂದ-1080P ವರೆಗೆ). ವೀಡಿಯೋ ಕ್ವಾಲಿಟಿಯನ್ನು (1 Mbps ನಿಂದ - 12 Mbps, ಅಥವಾ ಆಟೋ ಆಗಿ ಕೂಡ ಇಡಬಹುದು), ಎಫ್.ಪಿ.ಎಸ್ (15 ಯಿಂದ 60, ಅಥವಾAuto), ಮತ್ತು ರೆಕಾರ್ಡ್ ಆದ ಫೈಲ್ ಎಲ್ಲಿ ಸೇವ್ ಆಗಬೇಕು ಎಂಬುದನ್ನು ಸೆಟ್ ಮಾಡಬಹುದು. ಗೆಷ್ಚರ್ ನ್ನು ಕೂಡ ಆಯ್ಕೆ ಮಾಡಿ ಕಂಟ್ರೋಲ್ ಮಾಡಿ ಇಡಬಹುದು. ಆ ಮೂಲಕ ನಿಮ್ಮ ಫೋನ್ ಶೇಕ್ ಆದ ಕೂಡಲೇ ರೆಕಾರ್ಡಿಂಗ್ ನಿಲ್ಲುತ್ತದೆ. ಅಷ್ಟೇ ಅಲ್ಲ ಟೈಮರ್ ಕಂಟ್ರೋಲ್ ಕೂಡ ಮಾಡಿಡಬಹುದು. ಅದು ಎಡಿಟಿಂಗ್ ಮಾಡುವ ಸಮಯವನ್ನು ಕಡಿತಗೊಳಿಸುತ್ತೆ. ಅಷ್ಟೇ ಅಲ್ಲ, ನೀವು ರೆಕಾರ್ಡ್ ಆದ ಫೈಲನ್ನು ಯಾವ ಫಾರ್ಮೇಟ್ ನಲ್ಲಿ ಸೇವ್ ಮಾಡಲು ಇಚ್ಛಿಸುತ್ತೀರಿ ಎಂಬುದನ್ನು ಕೂಡ ಆಯ್ಕೆ ಮಾಡಬಹುದು. ಉದಾಹರಣೆ.gif ಫೈಲ್ ಆಗಿ ಸೇವ್ ಮಾಡಿಕೊಂಡರೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲು ಸುಲಭವಾಗುತ್ತೆ. ನೀವು ವೀಡಿಯೋಗೆ ವಾಟರ್ ಮಾರ್ಕ್ ಹಾಕುವ ಅವಕಾಶ ಕೂಡ ಇದರಲ್ಲಿ ಇದೆ. ಅಷ್ಟೇ ಅಲ್ಲ ನೀವು ವೀಡಿಯೋವನ್ನು ಎಡಿಟ್ ಮಾಡಬಹುದು, ಮರ್ಜ್ ಮಾಡಬಹುದು ಮತ್ತು ಕನ್ವರ್ಟ್ ಕೂಡ ಮಾಡಬಹುದು.

2. ಎಝಡ್ ಸ್ಕ್ರೀನ್ ರೆಕಾರ್ಡರ್ – ನೋ ರೂಟ್

ಆಂಡ್ರಾಯ್ಡ್ ಸ್ಕ್ರೀನ್ ರೆಕಾರ್ಡಿಂಗ್ ಗೆ ಈ 3 ಆಪ್ ಗಳು ಹೇಳಿ ಮಾಡಿಸಿದಂತಿವೆ...!


ಎರಡನೇ ದಿ ಬೆಸ್ಟ್ ಆಪ್ ಅಂದರೆ ಅದು ಎಝಡ್ ಸ್ಕ್ರೀನ್ ರೆಕಾರ್ಡರ್ . ಇದೂ ಕೂಡ ಫ್ರೀ ಆಪ್ ಆಗಿದೆ. ಆದರೆ ಕೆಲವು ಜಾಹಿರಾತುಗಳು ಇದರಲ್ಲಿ ಬರುತ್ತೆ. ಪಾಪ್ ಅಪ್ ವಿಂಡೋ ಬರಲು ನೀವು ಪರ್ಮಿಷನ್ ನೀಡಬೇಕಾಗುತ್ತೆ. ಮತ್ತು ಆಪ್ ನಿಮ್ಮ ಸ್ಕ್ರೀನಿನಲ್ಲಿ ಕಂಟ್ರೋಲ್ ಗಳನ್ನು ನೀಡುತ್ತೆ .ನೀಲು ಅವುಗಳನ್ನು ಆಕ್ಸಿಸ್ ಮಾಡಿ ರೆಕಾರ್ಡಿಂಗ್ , ರೆಕಾರ್ಡ್ ಆದ ವೀಡಿಯೋ ಸೆಂಡ್ ಮಾಡುವ ಕೆಲಸ ಅಥವಾ ಎಡಿಟ್ ಮಾಡುವ ಕೆಲಸವನ್ನು ಏಕಮಾತ್ರ ಇಂಟರ್ ಫೇಸ್ ನಲ್ಲಿ ಮಾಡಬಹುದಾಗಿದೆ.

ಡಿಯು ರೆಕಾರ್ಡರ್ ನಂತೆ, ಎಝಡ್ ರೆಕಾರ್ಡರ್ ಕೂಡ ಉತ್ತಮ ರೀತಿಯಲ್ಲಿ ಡಿಸೈನ್ ಮಾಡಿದ ಆಪ್ ಆಗಿದೆ. ಇದರಲ್ಲೂ ಅನೇಕ ವೈಶಿಷ್ಟ್ಯಗಳಿವೆ. ರೆಸೋಲ್ಯೂಷನ್ ಸೆಟ್ಟಿಂಗ್, ಫ್ರೇಮ್ ರೇಟ್, ಬ್ರೈಟ್ ನೆಸ್ ಸೆಟ್ಟಿಂಗ್ ಇತ್ಯಾದಿಗಳು, ಟೆಕ್ಸ್ಟ್, ಲೋಗೋ ಗಳನ್ನು ಹಾಕಬಹುದು ಅಷ್ಟೇ ಅಲ್ಲ ರೆಕಾರ್ಡಿಂಗ್ ಗೆ ನಿಮ್ಮ ಫ್ರಂಟ್ ಕ್ಯಾಮರಾ ಕೂಡ ಬಳಸಬಹುದು. ಇದರಲ್ಲೊಂದಿಷ್ಟು ಮ್ಯಾಜಿಕ್ ಬಟನ್ ಗಳಿದ್ದು ಇವು ರೆಕಾರ್ಡಿಂಗ್ ನಲ್ಲಿ ಕಂಟ್ರೋಲ್ ಬಟನ್ ಗಳು ಕಾಣದಂತೆ ನೋಡಿಕೊಳ್ಳುತ್ತೆ. ಸ್ಕ್ರೀನ್ ನಲ್ಲಿ ಡ್ರಾ ಮಾಡುವುದು, ಜಿಐಎಫ್ ಫೈಲ್ ಆಗಿ ಕನ್ವರ್ಟ್ ಮಾಡುವುದು, ಜಾಹಿರಾತುಗಳನ್ನು ರಿಮೂವ್ ಮಾಡುವುದನ್ನು ಬೇಕಿದ್ದರೆ ಮೂಲಕ ರೆಕಾರ್ಡಿಂಗ್ ನಲ್ಲಿ ಹೈಡ್ ಮಾಡಬಹುದು. ಜಸ್ಟ್ ಬೇಗನೆ ರೆಕಾರ್ಡ್ ಮಾಡಿ ಸೆಂಡ್ ಮಾಡಬೇಕು ಅಂತಿದ್ದರೆ ನಿಮಗೆ ಹೆಚ್ಚಿನ ವೈಶಿಷ್ಟ್ಯಗಳು ಬೇಕಾಗಬಹುದು. ಅವುಗಳನ್ನು ಪಡೆಯಲು ನೀವು 190 ರೂಪಾಯಿ ಹೆಚ್ಚು ಪಾವತಿ ಮಾಡಬೇಕಾಗುತ್ತದೆ. ನಿಮಗೆ ಬೇಕಿದ್ದರೆ ಆಯ್ಕೆ ಮಾಡಿ ಕೊಂಡುಕೊಳ್ಳಬಹುದು.

3. ಸ್ಕ್ರೀನ್ ರೆಕಾರ್ಡರ್ – ಫ್ರೀ ನೋ ಆಡ್ಸ್

ಆಂಡ್ರಾಯ್ಡ್ ಸ್ಕ್ರೀನ್ ರೆಕಾರ್ಡಿಂಗ್ ಗೆ ಈ 3 ಆಪ್ ಗಳು ಹೇಳಿ ಮಾಡಿಸಿದಂತಿವೆ...!


ಮೂರನೇ ಆಪ್, ಇದನ್ನು ಇನ್ಸ್ಟಾಲ್ ಮಾಡಿದರೆ ಲಾಭದಾಯಕ ಅಂತ ಹೇಳಲು ಇಚ್ಛಿಸುವುದು ಸ್ಕ್ರೀನ್ ರೆಕಾರ್ಡರ್ ಆಪ್ ಬಗ್ಗೆ. ಇದರಲ್ಲಿ ಯಾವುದೇ ಜಾಹಿರಾತುಗಳಿರುವುದಿಲ್ಲ ಮತ್ತು ಆಪ್ ಪರ್ಚೇಸ್ ಗಳೂ ಇರುವುದಿಲ್ಲ. ಬೇರೆ ಆಪ್ ಗಳಂತೆ ಇದರಲ್ಲೂ ಪಾಪ್ ಅಪ್ ವಿಂಡೋ ಪರ್ಮಿಷನ್ ಬೇಕಾಗುತ್ತೆ ಅದನ್ನು ಹೊರತು ಪಡಿಸಿದರೆ ತೀರ ನೇರವಾಗಿರುವ ಆಪ್ ಇದು. ಇದನ್ನು ಇನ್ಸ್ಟಾಲ್ ಮಾಡಿದರೆ ಚಿಕ್ಕದೊಂದು ಟೂಲ್ ಬ್ರ್ ನಿಮ್ಮ ಸ್ಕ್ರೀನ್ ನ ಕೆಳಭಾಗದಲ್ಲಿ ಕಾಣಿಸುತ್ತೆ. ನೀವು ಎಷ್ಟು ಹೊತ್ತು ರೆಕಾರ್ಡ್ ಮಾಡಬೇಕು ಎಂಬುದನ್ನು ಸೆಟ್ ಮಾಡಬಹುದು. ಡಿಸ್ಪ್ಲೇ ಟರ್ನ್ ಆಫ್ ಮಾಡುವ ಮೂಲಕ ರೆಕಾರ್ಡಿಂಗ್ ಸ್ಟಾಪ್ ಮಾಡಲು ಸಾಧ್ಯವಿದೆ.,

ಜಸ್ಟ್ ಆಪ್ ಲಾಂಚ್ ಮಾಡಿ, ರೆಕಾರ್ಡ್ ಬಟನ್ ಟ್ಯಾಪ್ ಮಾಡಿದರೆ ರೆಕಾರ್ಡಿಂಗ್ ಆರಂಭವಾಗುತ್ತೆ ಮತ್ತು ಸ್ಕ್ರೀನ್ ಆಫ್ ಮಾಡಿದರೆ ರೆಕಾರ್ಡಿಂಗ್ ನಿಲ್ಲುತ್ತದೆ.ಮತ್ತೆ ಸ್ಕ್ರೀನ್ ಆನ್ ಮಾಡಿದಾಗ ನಿಮ್ಮ ರೆಕಾರ್ಡಿಂಗ್ ಸೇವ್ ಆಗಿದೆ ಅನ್ನೋ ನೋಟಿಫಿಕೇಷನ್ ಸಿಗಲಿದೆ. ಮತ್ತೆ ಸ್ಕೀನ್ ರೆಕಾರ್ಡರ್ ಆಪ್ ಗೆ ಹೋಗಿ ರೆಕಾರ್ಡಿಂಗ್ ಪರೀಕ್ಷಿಸಬಹುದು ಮತ್ತು ಶೇರ್ ಮಾಡಬಹುದು, ಟ್ರೀಮ್ ಮಾಡಬಹುದು ಅಥವಾ ಅಗತ್ಯವಿಲ್ಲದಿದ್ದರೆ ಡಿಲೀಟ್ ಮಾಡಬಹುದು. ಕುತೂಹಲವಾದ ವೈಶಿಷ್ಟ್ಯವೆಂದರೆ ಇದರಲ್ಲಿ ಗೇಮ್ ಲಾಂಚರ್ ಅನ್ನೋ ಆಪ್ಶನ್ ಇದೆ. ಇದು ಗೇಮ್ ಗಳನ್ನು ಲಾಂಚ್ ಮಾಡಿ ರೆಕಾರ್ಡ್ ಮಾಡಲು ನೆರವಾಗುತ್ತೆ.

ಇತರೆ ಮಾಹಿತಿಗಳು..

ಇವಿಷ್ಟೇ ಅಲ್ಲ, ಇನ್ನಷ್ಟು ಆಪ್ ಗಳನ್ನು ನಾವು ಟೆಸ್ಟ್ ಮಾಡಿದ್ದೇವೆ. ಆದರೆ ಅವುಗಳಲ್ಲಿ ಮೂರನ್ನು ಮಾತ್ರ ಆಯ್ಕೆ ಮಾಡಿದ್ದೇವೆ, ಉಳಿದವುಗಳನ್ನು ನಾವಿಲ್ಲ ಸೇರಿಸದೇ ಇರಲು ಕಾರಣ ಬಳಕೆದಾರರು ಅವುಗಳಿಂದ ಅಷ್ಟೇನು ಖುಷಿಯಾಗಿಲ್ಲ. ಗೂಗಲ್ ಪ್ಲೇ ನಲ್ಲಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಿಪಡಿಸಿದ್ದಾರೆ ಮತ್ತು ಸಮಸ್ಯೆಗಳನ್ನು ವಿವರಿಸಿದ್ದಾರೆ. ಎಡಿವಿ ಸ್ಕ್ರೀನ್ ರೆಕಾರ್ಡರ್, ಟೆಲಿಸಿನ್, ಮೊಬಿಝಿನ್ ಸ್ಕ್ರೀನ್ ರೆಕಾರ್ಡರ್, ಲಾಲಿಪಾಪ್ ಸ್ಕ್ರೀನ್ ರೆಕಾರ್ಡರ್ ಹೀಗೆ ಹಲವು ಆಪ್ ಗಳಿದ್ದು, ಇವುಗಳೂ ಕೂಡ ಇದೇ ಕೆಲಸವನ್ನೇ ನಿರ್ವಹಿಸುತ್ತವೆ. ಬೇಕಿದ್ದರೆ ಟ್ರೈ ಮಾಡಿ ನೋಡಿ ಮತ್ತು ನಿಮ್ಮ ಅಭಿಪ್ರಾಯವನ್ನು ನಮಗೂ ತಿಳಿಸಿ. ಯಾವ ಫೋನಿನಲ್ಲಿ ನೀವು ಟ್ರೈ ಮಾಡಿದ್ದೀರಿ ಎಂಬ ಬಗ್ಗೆಯೂ ಮಾಹಿತಿ ನೀಡಿ...

Best Mobiles in India

English summary
Three Free Apps to Record Your Screen on Android, DU Recorder has all the features you need and good design. To know more this visit kannada.gizbo.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X