Just In
Don't Miss
- News
'ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ' ಕೊಡಿಶ್ರೀಗಳ ರಾಜಕೀಯ ಭವಿಷ್ಯ
- Sports
ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ
- Automobiles
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- Movies
Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಟಿಕ್‌ಟಾಕ್' ಆಪ್ ಬಗ್ಗೆ ನೀವು ತಿಳಿಯಬೇಕಾದ ಕುತೂಹಲಕಾರಿ ಸಂಗತಿಗಳು!
ನಮ್ಮಲ್ಲಿರುವ ಪ್ರತಿಭೆ ಮತ್ತು ಕ್ರಿಯೆಟಿವಿಟಿಯನ್ನು ಜಗತ್ತಿಗೆ ತೋರಿಸಲು, ಯೂಟ್ಯೂಬ್, ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಅನೇಕ ಆಪ್ಸ್‌ಗಳು ನೆರವಾಗಿವೆ. ಆದ್ರೆ ಇತ್ತೀಚಿಗೆ ಪರಿಚಿತವಾಗಿರುವ ಚೀನಾ ಮೂಲದ ಶಾರ್ಟ್ ವಿಡಿಯೊ ಅಪ್ಲಿಕೇಶನ್ 'ಟಿಕ್‌ಟಾಕ್', ಬಹುಬೇಗನೆ ಬಳಕೆದಾರರನ್ನು ಹೆಚ್ಚಿಸಿಕೊಂಡಿದ್ದು, ವಿಶ್ವದಲ್ಲಿಯೇ ಜನಪ್ರಿಯ ಅಪ್ಲಿಕೇಶನ್ ಆಗಿ ಹೊರಹೊಮ್ಮಿದೆ.

ಹೌದು, ಟಿಕ್‌ಟಾಕ್ 2016ರಲ್ಲಿ ವಿಶ್ವಮಟ್ಟದಲ್ಲಿ ಬಿಡುಗಡೆಯಾಗಿದ್ದು, 2017ರಲ್ಲಿ ಭಾರತವನ್ನು ಪ್ರವೇಶಿಸಿತು. ಆರಂಭದಲ್ಲಿಯೇ 200ಮಿಲಿಯನ್ ಬಳಕೆದಾರರನ್ನು ಹೊಂದಿತ್ತು. ಕೇವಲ 15 ಸೆಕೆಂಡ್‌ಗಳ ಕಿರು ವಿಡಿಯೊ ಮಾಡುವುದು ಮತ್ತು ಅದನ್ನು ಶೇರ್ ಮಾಡುವ ಫೀಚರ್‌ಗಳಿಂದ ಬಳಕೆದಾರರನ್ನು ಬಹಳಷ್ಟು ಬೇಗನೇ ಸೆಳೆಯುತ್ತಾ ಸಾಗಿ ಬಂದಿರುವ ಟಿಕ್‌ಟಾಕ್ ಆಪ್, ಎಲ್ಲ ವಯೋಮಾನದವರಲ್ಲಿಯೂ ಸಿಕ್ಕಾಪಟೆ ಕ್ರೇಜ್ ಮೂಡಿಸಿದೆ.

ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ಸ್ ಸ್ಟೋರ್‌ನಲ್ಲಿ ಎರಡರಲ್ಲಯೂ ಉಚಿತ ಆಪ್‌ಗಳ ಲಿಸ್ಟ್‌ನಲ್ಲಿ ಟಿಕ್‌ಟಾಕ್ ಆಪ್ ಮುಂಚೂಣಿಯ ಶ್ರೇಣಿಯಲ್ಲಿ ಗುರುತಿಸಿಕೊಂಡಿದೆ. ವಿಶ್ವಾದ್ಯಂತ 700 ಮಿಲಿಯನ್‌ಗಿಂತಲೂ ಅಧಿಕ ಬಳಕೆದಾರರನ್ನು ಟಿಕ್‌ಟಾಕ್ ಒಳಗೊಂಡಿದೆ ಎಂದು ಮಿಂಟ್ ವರದಿ ಮಾಡಿದೆ. ಹಾಗಾದರೇ ಟಿಕ್‌ಟಾಕ್ ಆಪ್ ಕುರಿತ ಇನ್ನಷ್ಟು ಕುತೂಹಲಕರ ಸಂಗತಿಗಳನ್ನು ಮುಂದೆ ನೋಡೋಣ ಬನ್ನಿರಿ.

ಬೈಟ್‌ಡ್ಯಾನ್ಸ್ ಸಂಸ್ಥೆಯ ಆಪ್
ಚೀನಾ ಮೂಲದ ಬೈಟ್‌ಡ್ಯಾನ್ಸ್ ಕಂಪನಿಯ ಆಪ್ ಆಗಿದ್ದು, ಪ್ರತಿ ತಿಂಗಳು 1.5 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಒಳಗೊಂಡಿದೆ. ಆರಂಭದಲ್ಲಿ ಟಿಕ್‌ಟಾಕ್ ಆಪ್ ಹೆಸರು ಮ್ಯೂಸಿಕ್‌ಲಿ (Musical.ly) ಆಗಿತ್ತು. ಆನಂತರ 2018ರಲ್ಲಿ ಟಿಕ್‌ಟಾಕ್ ಎಂದು ಹೆಸರಿಸಲ್ಪಟ್ಟಿತು. ಹೆಲ್ಲೊ, ವಿಗೋ ವಿಡಿಯೊ, ಬಜ್ ವಿಡಿಯೊ ಮತ್ತು ನ್ಯೂಸ್ ಆಪ್ ಸೇರಿದಂತೆ ಇತರೆ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ.

ಫ್ಲ್ಯಾಗ್‌ಶಿಪ್ ಅಪ್ಲಿಕೇಶನ್
ಮೊದಲು ಚೀನಾದಲ್ಲಿ ಶುರುವಾದ ಈ ಜನಪ್ರಿಯತೆಗಳಿಸಿದಂತೆ ಇತರೆ ರಾಷ್ಟ್ರಗಳಿಗೂ ಆಪ್ ಅನ್ನು ವಿಸ್ತರಿಸಲಾಯಿತು. ಭಾರತ ಸೇರಿದಂತೆ ಸುಮಾರು 150 ರಾಷ್ಟ್ರಗಳಲ್ಲಿ ಚಾಲ್ತಿ ಇದ್ದು, ಹಾಗೆಯೇ ಸುಮಾರು 75 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಮಿನಿ ವಿಡಿಯೊ ಮೇಕರ್ ಟಿಕ್‌ಟಾಕ್ ಕಂಪನಿಯ ಫ್ಲ್ಯಾಗ್‌ಶಿಪ್ ಅಪ್ಲಿಕೇಶನ್ ಆಗಿ ಸದ್ಯ ವಿಶ್ವದೆಲ್ಲೆಡೆ ಮಿಂಚುತ್ತಿದೆ.

ನಿರಂತರ ಅಪ್‌ಡೇಟ್
ಟಿಕ್‌ಟಾಕ್ ಆಪ್ ನಿರಂತರ ತನ್ನ ಎಡಿಟಿಂಗ್ ಟೂಲ್ ಅಪ್‌ಡೇಟ್ ಮಾಡಿಕೊಳ್ಳುತ್ತಾ ಸಾಗಿದ್ದು, ಇಮೇಜ್ ಫೀಲ್ಟರ್, ಫ್ರೇಮ್ಸ್, ಆನಿಮೇಶನ್, ಸೇರಿದಂತೆ ಹಲವು ನೂತನ ಫೀಚರ್ಸ್‌ಗಳನ್ನು ಸೇರಿಸುತ್ತಲೆ ಇದೆ. ನೇರವಾಗಿ ಫೇವರೇಟ್ ಕಾಂಟ್ಯಾಕ್ಸ್‌ಗಳಿಗೆ ಶೇರ್ ಮಾಡುವ ಆಯ್ಕೆ ಸಹ ಸೇರಿಸಿದೆ. ಈ ಬದಲಾವಣೆಗಳನ್ನು ಎಡಿಟ್ ಆಯ್ಕೆಯಲ್ಲಿ ಕಾಣಬಹುದಾಗಿದೆ.

ಲಾಗಿನ್ ಅಗತ್ಯವಿಲ್ಲ
ಟಿಕ್‌ಟಾಕ್ ಆಪ್‌ನಲ್ಲಿ ವಿಡಿಯೊಗಳನ್ನು ವೀಕ್ಷಿಸಲು ಆಪ್‌ನಲ್ಲಿ ಲಾಗಿನ್ ಆಗಬೇಕೆಂದಿಲ್ಲ. ವಿಡಿಯೊ ಕ್ರಿಯೆಟ್ ಮಾಡಿ ಅಪ್‌ಲೋಡ್ ಮಾಡುವುದಿದ್ದರೇ ಆಗ ಲಾಗ್‌ಇನ್ ಆಗಲೇಬೇಕು. ಲಾಗ್ ಆದ ಬಳಿಕ ಹೊಸದಾಗಿ ವಿಡಿಯೊ ಸಹ ಮಾಡಿ ಅಪ್‌ಲೋಡ್ ಮಾಡಬಹುದು ಅಥವಾ ಈಗಾಗಲೇ ಆಪ್‌ನಲ್ಲಿರುವ ವಿಡಿಯೊಗಳನ್ನೇ ಆಯ್ದುಕೊಂಡು ವಿಡಿಯೊ ಮಾಡಬಹುದಾದ ಆಯ್ಕೆಗಳಿವೆ.

ಜಾಹಿರಾತು ತಾಣವಾಗಿದೆ
ಟಿಕ್‌ಟಾಕ್ ಆಪ್‌ನಲ್ಲಿ ನಾಲ್ಕು ಮಾದರಿಯ ಜಾಹಿರಾತು ಮಾದರಿಗಳನ್ನು ಕಾಣಬಹುದಾಗಿದೆ. ಅವುಗಳೆಂದರೇ ಇನ್‌ಫೀಡ್ ವರ್ಟಿಕಲ್ ವಿಡಿಯೊ,(in-feed vertical video), ಬ್ರ್ಯಾಂಡೆಡ್ ಫಿಲ್ಟರ್ಸ್ (branded filters), ಪುಲ್‌ಸ್ಕ್ರೀನ್ ಟೆಕ್‌ಓವರ್ (full-screen takeovers) ಮತ್ತು ಹ್ಯಾಶ್‌ಟ್ಯಾಗ್ (hashtag) ಆಗಿವೆ. ಇದರಲ್ಲಿ ಕಂಫನಿಯು ಹ್ಯಾಶ್‌ಟ್ಯಾಗ್ campaign ಫಾರ್ಮೆಟ್ ಆಗಿ ಬಳಸಲಾಗುತ್ತಿದೆ. ಉದಾಹರಣೆಗೆ : ಇತ್ತೀಚಿಗೆ ಬಾಟಲ್ ಕ್ಯಾಪ್ ತೆರೆಯುವ ಚಾಲೆಂಜ್‌ನಡಿ (#DewFlipChallenge) 1.8 ಬಿಲಿಯನ್ ವಿಡಿಯೊಗಳು ಸೇರಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470