Subscribe to Gizbot

ಈ ಡಿವೈಸ್ ಇದ್ದರೆ ಬೈಕು, ಕಾರು ಕದಿಯಲು ಚಾನ್ಸೆ ಇಲ್ಲ.!! ಏಕೆ? ಬೆಲೆ ಎಷ್ಟು?

Written By:

ಬೈಕು ಮತ್ತು ಕಾರು ಕಳೆದುಹೋಗುತ್ತದೆ ಎಂಬ ಚಿಂತೆ ಬಳಕೆದಾರರಿಗೆ ಇದ್ದೆ ಇದೆ. ಏಕೆಂದರೆ ಒಮ್ಮೆ ಕಳೆದುಹೋದ ಬೈಕ್ ಸಿಕ್ಕುವುದು ಅಸಾಧ್ಯ.!! ಅಥವಾ ಸಿಕ್ಕಿದರೂ ಕೂಡ 2/3 ವರ್ಷಗಳಾದ ಮೆಲೆ.!! ಸಿಕ್ಕಿದ ನಂತರ ನಿಮ್ಮ ಬೈಕ್ ಅಧವಾ ಕಾರ್ ಹೆಗಿರುತ್ತದೆ ಥಿಂಕ್ ಮಾಡಿ.!!

ಹಾಗಾಗಿ, ಇದಕ್ಕೆಲ್ಲಾ ವಿರಾಮ ಹಾಕುವುದಕ್ಕಾಗಿಯೇ ಕ್ಯಾಲಿಫೋರ್ನಿಯಾದ ಕಂಪೆನಿಯೊಂದು ಡಿವೈಸ್ ಒಂದನ್ನು ತಯಾರಿಸಿದೆ.!! ಆಪ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಕಾರ್ಯನಿರ್ವಹಿಸುವ ಈ ಡಿವೈಸ್ ನಿಮ್ಮ ಬೈಕ್ ಅಥವಾ ಕಾರ್ ಎಲ್ಲೆ ಇದ್ದರು ಅದನ್ನು ಹುಡುಕಲು ಸಹಾಯ ಮಾಡಲಿದೆ.

ಆದ್ದರಿಂದ, ಇಂದಿನ ತಂತ್ರಜ್ಞಾನ ಯುಗದಲ್ಲಿ, ಕಡಿಮೆ ವೆಚ್ಚದಲ್ಲಿ ಬೈಕ್ ಕಳೆದುಹೋಗದಂತೆ ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯಾವುದು ಡಿವೈಸ್ ಇದು.!!

ಯಾವುದು ಡಿವೈಸ್ ಇದು.!!

ಆಪ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಕಾರ್ಯನಿರ್ವಹಿಸುವ ಈ ಡಿವೈಸ್ "ಟ್ರ್ಯಾಕ್ ಆರ್" ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟ್ರ್ಯಾಕ್ ಆರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಈ ಡಿವೈಸ್ ಅನ್ನು ನಿಮ್ಮ ಬೈಕ್ ಅಥವಾ ಕಾರಿನಲ್ಲಿ ಅಳವಡಿಸಿಕೊಳ್ಳಬಹುದು.!!

ಟ್ರ್ಯಾಕ್ ಆರ್ ಹೇಗೆ ಕಾರ್ಯನಿರ್ವಹಿಸುತ್ತದೆ

ಟ್ರ್ಯಾಕ್ ಆರ್ ಹೇಗೆ ಕಾರ್ಯನಿರ್ವಹಿಸುತ್ತದೆ

ಟ್ರ್ಯಾಕ್ ಆರ್ ಡಿವೈಸ್‌ಗೆ ಟ್ರ್ಯಾಕ್ ಆರ್ ಅಪ್ಲಿಕೇಶನ್( ಆಪ್ ) ಸಂಪರ್ಕಿಸಿದರೆ ಎರಡೂ ಕನೆಕ್ಟ್ ಆಗುತ್ತದೆ.!! ನಂತರ ಆ ಡಿವೈಸ್ ಎಲ್ಲೇ ಇದ್ದರೂ ಸಹ ಟ್ರ್ಯಾಕ್ ಆರ್ ಅಪ್ಲಿಕೇಶನ್ನಲ್ಲಿ ತೋರಿಸುತ್ತಿರುತ್ತದೆ.!! ಹಾಗಾಗಿ, ನಿಮ್ಮ ಬೈಕ್ ಮತ್ತು ಕಾರ್ ಸೇಫ್ ಆಗಿರುತ್ತದೆ.!!

ಎಲ್ಲವನ್ನು ಪತ್ತೆ ಮಾಡಬಹುದು.!!

ಎಲ್ಲವನ್ನು ಪತ್ತೆ ಮಾಡಬಹುದು.!!

ಬ್ರೀಫ್‌ಕೇಸ್, ವಾಲೆಟ್ ಸೇರಿದಂತೆ ಯಾವುದಕ್ಕಾದರೂ ಈ ಡಿವೈಸ್ ಇಟ್ಟುಕೊಳ್ಳಬಹುದು. ಹಾಗಾಗಿ, ನಿಮ್ಮ ಯಾವುದೇ ವಸ್ತುಗಳು ಕಳೆದರೂ ಸಹ ಟ್ರ್ಯಾಕ್ ಆರ್ ಡಿವೈಸ್ ಮಿಸ್ ಆಗಿರುವ ವಸ್ತುಗಳನ್ನು ಹುಡುಕಿಕೊಡುವಲ್ಲಿ ಸಹಾಯ ಮಾಡಲಿದೆ.!!

ಟ್ರ್ಯಾಕ್ ಆರ್ ದರ ಎಷ್ಟು?

ಟ್ರ್ಯಾಕ್ ಆರ್ ದರ ಎಷ್ಟು?

ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ದುಬಾರಿ ಜಿಪಿಎಸ್ ಟ್ರ್ಯಾಕಿಂಗ್ ಯೂನಿಟ್‌ಗಳಿಗಿಂತ ಟ್ರ್ಯಾಕ್ ಆರ್ ಕಡಿಮೆ ವೆಚ್ಚದ್ದಾಗಿದೆ. ಮಾರುಕಟ್ಟೆಯಲ್ಲಿ $29 (2000ರೂ) ಬೆಲೆಯದ್ದಾಗಿದ್ದು, ಮುಂದಿನ ದಿವಸಗಳಲ್ಲಿ ಟ್ರ್ಯಾಕ್ ಆರ್ ಡಿವೈಸ್ ಅನ್ನು ಖರೀದಿಸಬಹುದಾಗಿದೆ.

ಓದಿರಿ:ಆಧಾರ್-ಸಿಮ್ ಲಿಂಕ್ ಮಾಡಲು ಕೊನೆ ದಿನಾಂಕ ಯಾವಾಗ?..ಏಕೆ ಮಾಡಿಸಲೇಬೇಕು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Have you ever lost your car. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot