ನಿಮ್ಮ ಮೆಸೇಜ್ ಗಳು ಯಾರಿಗೂ ಕಾಣಿಸದಂತೆ ಇಡಲು ಈ ಆಪ್ ಗಳನ್ನು ಬಳಸಿ

By Gizbot Bureau
|

ಆಂಡ್ರಾಯ್ಡ್ ನಲ್ಲಿ ಮೆಸೇಜ್ ಗಳನ್ನು ಹೈಡ್ ಮಾಡುವುದಕ್ಕಾಗಿ ನೀವು ಬೆಸ್ಟ್ ಆಪ್ ನ ಹುಡುಕಾಟದಲ್ಲಿದ್ದೀರಾ? ಒಂದು ವೇಳೆ ಹೌದಾಗಿದ್ದರೆ ನೀವು ಸರಿಯಾದ ವೆಬ್ ಪೇಜ್ ನ್ನೇ ಓದುತ್ತಿದ್ದೀರಿ. ಈ ಲೇಖನದಲ್ಲಿ ನಾವು ಟೆಕ್ಸ್ಟ್ ಮೆಸೇಜ್ ಮತ್ತು ಎಸ್ಎಂಎಸ್ ಗಳನ್ನು ಆಂಡ್ರಾಯ್ಡ್ ನಲ್ಲಿ ಹೈಡ್ ಮಾಡುವುದಕ್ಕೆ ಇರುವ ಕೆಲವು ಬೆಸ್ಟ್ ಆಪ್ ಗಳ ಬಗ್ಗೆ ಹೇಳುತ್ತಿದ್ದೇವೆ. ಆಂಡ್ರಾಯ್ಡ್ 2019 ರ ಅತ್ಯುತ್ತಮ ಎಸ್ಎಂಎಸ್ ಲಾಕರ್ ಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.

ನಿಮ್ಮ ಮೆಸೇಜ್ ಗಳು ಯಾರಿಗೂ ಕಾಣಿಸದಂತೆ ಇಡಲು ಈ ಆಪ್ ಗಳನ್ನು ಬಳಸಿ

ಮುಖಕ್ಕೆ ಮುಖ ಕೊಟ್ಟು ಮಾತನಾಡುವುದಕ್ಕಿಂತ ಮೊಬೈಲ್ ನಲ್ಲಿ ಮೆಸೇಜ್ ಕಳಿಸಿ ಮಾತನಾಡುವ ವಿಭಿನ್ನ ಪ್ರಪಂಚದಲ್ಲಿ ಸದ್ಯ ನಾವು ಜೀವಿಸುತ್ತಿದ್ದೇವೆ.ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿರುವ ಟೆಕ್ಸ್ಟ್ ಮೆಸೇಜಿಂಗ್ ಆಪ್ ಗಳಿಂದ ಇದು ಸಾಧ್ಯವಾಗಿದೆ. ಪ್ರತಿಯೊಬ್ಬರೂ ಕೂಡ ಆಂಡ್ರಾಯ್ಡ್ ಡಿವೈಸ್ ಗಳನ್ನು ಹೊಂದಿರುವುದರಿಂದಾಗಿ ಡೆವಲಪರ್ ಗಳು ಕೂಡ ಸಾಕಷ್ಟು ಹೊಸ ಹೊಸ ಮೆಸೇಜಿಂಗ್ ಆಪ್ ಗಳನ್ನು ಆಂಡ್ರಾಯ್ಡ್ ಡಿವೈಸ್ ಗಳಿಗಾಗಿ ಅಭಿವೃದ್ಧಿ ಪಡಿಸುತ್ತಲೇ ಇದ್ದಾರೆ.

ಮೆಸೇಜಿಂಗ್ ಆಪ್ ಗಳಾಗಿರುವ ಹೈಕ್, ಫೇಸ್ ಬುಕ್ ಮೆಸೇಂಜರ್, ಟೆಲಿಗ್ರಾಂ, ವಾಟ್ಸ್ ಆಪ್ ಇತ್ಯಾದಿಗಳು ಮೆಸೇಜ್ ಗಳನ್ನು ಎಕ್ಸ್ ಚೇಂಜ್ ಮಾಡಿಕೊಳ್ಳುವುದಕ್ಕಾಗಿಯೇ ರಚಿತಗೊಂಡಿವೆ. ಆದರೆ ಈ ಆಪ್ಸ್ ಗಳು ಎಸ್ಎಂಎಸ್ ಇನ್ ಬಾಕ್ಸ್ ನ್ನು ರಿಪ್ಲೇಸ್ ಮಾಡುವುದಕ್ಕೆ ಸಾಧ್ಯವಿಲ್ಲ. ಕೆಲವು ಸೂಕ್ಷ್ಮ ಮಾಹಿತಿಗಳು ಅಂದರೆ ದೃಢೀಕರಣದ ಕೋಡ್ ಗಳು, ಒನ್ ಟೈಮ್ ಪಾಸ್ ವರ್ಡ್ ಗಳು ಇತ್ಯಾದಿಗಳು ಎಸ್ಎಂಎಸ್ ಇನ್ ಬಾಕ್ಸ್ ಗೆ ಬಂದು ಬೀಳುತ್ತವೆ.

ನಾವು ಎಸ್ಎಂಎಸ್ ಇನ್ ಬಾಕ್ಸ್ ಬಗ್ಗೆ ಅಷ್ಟೇನು ಕೇರ್ ತೆಗೆದುಕೊಳ್ಳುವುದಿಲ್ಲ. ಆದರೆ ನಮ್ಮ ಎಸ್ಎಂಎಸ್ ಇನ್ ಬಾಕ್ಸ್ ಗಳು ಬಹಳ ಮಹತ್ವಪೂರ್ಣವಾಗಿರುವ ಕೆಲವು ಮಾಹಿತಿಗಳನ್ನು ಒಳಗೊಂಡಿರುತ್ತದೆ.ಕೆಲವು ಮಾಹಿತಿಗಳು ಎಸ್ಎಂಎಸ್ ಇನ್ ಬಾಕ್ಸ್ ನಲ್ಲಿರುವುದನ್ನು ನಾವು ಯಾರೊಂದಿಗೂ ಕೂಡ ಹಂಚಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಅದೇ ಕಾರಣಕ್ಕಾಗಿ ನಾವು ಆಂಡ್ರಾಯ್ಡ್ ನಲ್ಲಿ ಮೆಸೇಜ್ ಗಳನ್ನು ಹೈಡ್ ಮಾಡಲು ಸಾಧ್ಯವಾಗುವಂತಹ ಕೆಲವು ಆಪ್ ಗಳನ್ನು ಬಳಸಬೇಕಾಗುತ್ತದೆ.

ಆಂಡ್ರಾಯ್ಡ್ ನಲ್ಲಿ ಮೆಸೇಜ್ ಹೈಡ್ ಮಾಡುವುದಕ್ಕಾಗಿ ಬಳಸಬಹುದಾದ ಟಾಪ್ 5 ಆಪ್ಸ್ ಗಳು

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕೆಲವು ಅತ್ಯದ್ಭುತವಾಗಿರುವ ಆಪ್ ಲಾಕರ್ ಗಳು ಅಥವಾ ಟೆಕ್ಸ್ ಮೆಸೇಜ್ ಹೈಡರ್ ಗಳು ಲಬ್ಯವಿದೆ. ಅಂತಹ ಐದು ಆಪ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಗೋ ಎಸ್ಎಂಎಸ್ ಪ್ರೋ( GO SMS Pro)

ಗೋ ಎಸ್ಎಂಎಸ್ ಪ್ರೋ( GO SMS Pro)

ಗೂಗಲ್ ಪ್ಲೇ ಸ್ಟೋರ್ ನಲ್ಲ ಲಭ್ಯವಿರುವ ಅತೀ ಹೆಚ್ಚು ರೇಟಿಂಗ್ ಪಡೆದಿರುವ ಆಂಡ್ರಾಯ್ಡ್ ಮೆಸೇಜಿಂಗ್ ಆಪ್ ಗೋ ಎಸ್ಎಂಎಸ್ ಪ್ರೋ. ಇದು ಸುಮಾರು 100 ಮಿಲಿಯನ್ ಡೋನ್ ಲೋಡ್ ಗಳನ್ನು ಕಂಡಿದೆ ಮತ್ತು ಇದು ಹಲವಾರು ಆಯ್ಕೆಗಳನ್ನು ಬಳಕೆದಾರರಿಗೆ ನೀಡುತ್ತದೆ. ಇದು ನಿಮಗೆ ಪ್ರೈವೇಟ್ ಮೆಸೇಜಿಂಗ್ ವಾಲ್ಟ್ ನ್ನು ನೀಡುತ್ತದೆ ಅಲ್ಲಿ ನೀವು ನಿಮ್ಮ ಕಾಂಟ್ಯಾಕ್ಟ್ ಗಳನ್ನು ಸೇರಿಸಿಕೊಳ್ಳಬಹುದು. ನಂತರ ನೀವು ಅದಕ್ಕೆ ಪಾಸ್ ವರ್ಡ್ ಪ್ರೊಟೆಕ್ಷನ್ ಕೂಡ ನೀಡಬಹುದು. ಹಾಗಾಗಿ ಇದು ಅತ್ಯುತ್ತಮವಾಗಿರುವ ಮೆಸೇಜ್ ಗಳನ್ನು ಹೈಡ್ ಮಾಡುವುದಕ್ಕೆ ಇರುವ ಆಪ್ ಆಗಿದೆ.

ವಾಲ್ಟ್(Vault)

ವಾಲ್ಟ್(Vault)

ವಾಲ್ಟ್ ಹಲವು ಕಾರಣಗಳಿಗೆ ಉಪಯೋಗವಾಗುವ ಆಂಡ್ರಾಯ್ಡ್ ಆಪ್ ಆಗಿದ್ದು ಇದರಲ್ಲಿ ಫೋಟೋಗಳು, ವೀಡಿಯೋಗಳು, ಕಾಲ್ ಲಾಗ್ ಗಳು ಮತ್ತು ಎಸ್ಎಂಎಸ್ ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಹೈಡ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನ ಕಾಲ್ ಮತ್ತು ಎಸ್ಎಂಎಸ್ ಗಳನ್ನು ಸಪರೇಟ್ ಪೆನಲ್ ನಲ್ಲಿ ಹೈಡ್ ಮಾಡುವುದಕ್ಕೆ ಇದರಲ್ಲಿ ಅವಕಾಶವಿರುತ್ತದೆ. ಯಾರ ಎಸ್ಎಂಎಸ್ ಹೈಡ್ ಮಾಡಬೇಕು ಎಂಬ ಬಗ್ಗೆ ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ನ್ನು ಇಂಪೋರ್ಟ್ ಮಾಡಿದರೆ ಸಾಕು.ಪ್ರೈವೇಟ್ ಕಾಂಟ್ಯಾಕ್ಟ್ ಗಳ ನೋಟಿಫಿಕೇಷನ್ ನ್ನು ಕೂಡ ಇದು ಹೈಡ್ ಮಾಡುತ್ತದೆ. ಹಾಗಾಗಿ ಇದು ಮತ್ತೊಂದು ಬೆಸ್ಟ್ ಆಪ್ ಅನ್ನಿಸಿಕೊಂಡಿದೆ.

ಮೆಸೇಜ್ ಲಾಕರ್

ಮೆಸೇಜ್ ಲಾಕರ್

ಹೆಸರೇ ಸೂಚಿಸುವಂತೆ, ಮೆಸೇಜ್ ಲಾಕರ್ ಮತ್ತೊಂದು ಆಂಡ್ರಾಯ್ಡ್ ಆಪ್ ಆಗಿದ್ದು ಮೆಸೇಜ್ ಗಳನ್ನು ಮತ್ತೊಬ್ಬರ ಕಣ್ಣಿನಿಂದ ತಪ್ಪಿಸಿ ನಿಮ್ಮಲ್ಲೇ ಭದ್ರವಾಗಿಟ್ಟುಕೊಳ್ಳುವುದಕ್ಕೆ ನೆರವು ನೀಡುತ್ತದೆ. ಕೇವಲ ಎಸ್ಎಂಎಸ್ ಗಳನ್ನು ಪಾತ್ರವೇ ಅಲ್ಲ ಬದಲಾಗಿ ಪಾಸ್ ವರ್ಡ್ ಗಳನ್ನು ಕೂಡ ಇವು ಪ್ರೊಟೆಕ್ಟ್ ಮಾಡುತ್ತವೆ. ವಾಟ್ಸ್ ಆಪ್, ಜಿಮೇಲ್, ಟೆಲಿಗ್ರಾಂ, ಫೇಸ್ ಬುಕ್ ಮೆಸೇಂಜರ್, ಸ್ಕೈಪ್ ಇತ್ಯಾದಿಗಳ ಮೆಸೇಜ್ ಗಳನ್ನು ನೀವಿಲ್ಲಿ ಸೇವ್ ಮಾಡಿ ಇಡಬಹುದು.ಇದಿಷ್ಟೇ ಅಲ್ಲದೆ ಇದೊಂದು ಸಿಂಪಲ್ ಇಂಟರ್ ಫೇಸ್ ಆಗಿದೆ. ಅದೇ ಕಾರಣಕ್ಕೆ ಇಂದಿನ ದಿನಗಳಲ್ಲಿ ಮೆಸೇಜ್ ಲಾಕರ್ ಹೆಚ್ಚು ಪ್ರಸಿದ್ಧಿಯಾಗುತ್ತಿದೆ.

ಎಸ್ಎಂಎಸ್ ಲಾಕ್

ಎಸ್ಎಂಎಸ್ ಲಾಕ್

ಆಂಡ್ರಾಯ್ ಸ್ಮಾರ್ಟ್ ಫೋನ್ ಗಳಲ್ಲಿ ಎಸ್ಎಂಎಸ್ ಗಳನ್ನು ಸಿಂಪಲ್ ಆಗಿ ಲಾಕ್ ಮಾಡಿ ಇಟ್ಟುಕೊಳ್ಳುವುದಕ್ಕಾಗಿ ಆಂಡ್ರಾಯ್ಡ್ ಆಪ್ ನ್ನು ಹುಡುಕಾಡುತ್ತಿದ್ದರೆ ಎಸ್ಎಂಎಸ್ ಲಾಕ್ ಬೆಸ್ಟ್ ಆಪ್ ಆಗಿದೆ. ಎಸ್ಎಂಎಸ್ ಲಾಕ್ ಹೆಚ್ಚಿನ ಎಲ್ಲಾ ಮೆಸೇಜಿಂಗ್ ಆಪ್ ಗಳಾಗಿರುವ ಮೆಸೆಂಜರ್, ಹ್ಯಾಂಗ್ಸ್ ಔಟ್, ವಿಚಾಟ್ , ಟೆಲಿಗ್ರಾಂ ಇತ್ಯಾದಿಗಳ ಪಾಸ್ ವರ್ಡ್ ಗಳನ್ನು ಸೇವ್ ಮಾಡುತ್ತದೆ. ಮತ್ತು ಸುಲಭದಲ್ಲಿ ಬಳಕೆ ಮಾಡಬಹುದಾದ ಇಂಟರ್ಫೇಸ್ ಇದಾಗಿದೆ.

ಪ್ರೈವೇಟ್ ಮೆಸೇಜ್ ಬಾಕ್ಸ್

ಪ್ರೈವೇಟ್ ಮೆಸೇಜ್ ಬಾಕ್ಸ್

ಪ್ರೈವೇಟ್ ಮೆಸೇಜ್ ಆಪ್ ಮತ್ತೊಂದು ಆಂಡ್ರಾಯ್ಡ್ ಟೆಕ್ಸ್ಟ್ ಮೆಸೇಜ್ ಲಾಕರ್ ಆಗಿದ್ದು ಎಸ್ಎಂಎಸ್ ಇನ್ ಬಾಕ್ಸ್ ಜೊತೆಗೆ ಪಿನ್ ಅಥವಾ ಪಾಸ್ ವರ್ಡ್ ಗಳನ್ನು ಕೂಡ ಇದು ಹೈಡ್ ಮಾಡಿ ಇಡುತ್ತದೆ. ಇದರಲ್ಲಿ ಬಳಕೆದಾರರು ಕಾಂಟ್ಯಾಕ್ಟ್ ಆಡ್ ಮಾಡಿದ ಕೂಡಲೇ ಆ ಕಾಂಟ್ಯಾಕ್ಟ್ ನ ಎಲ್ಲಾ ಮೆಸೇಜ್ ಗಳು ಅಂದರೆ ಇನ್ ಕಮ್ಮಿಂಗ್, ಔಟ್ ಗೋಯಿಂಗ್ ಮೆಸೇಜ್ ಗಳು ಹೈ ಸ್ವಯಂಚಾಲಿತವಾಗಿ ಹೈಡ್ ಆಗುತ್ತದೆ. ಹಿಡನ್ ಎಸ್ಎಂಎಸ್ ಗಳನ್ನು ಆಕ್ಸಿಸ್ ಮಾಡುವುದಕ್ಕಾಗಿ ನೀವು ಪಿನ್ ಅಥವಾ ಪಾಸ್ ವರ್ಡ್ ನ್ನು ಬಳಕೆ ಮಾಡಬೇಕಾಗುತ್ತದೆ. ಅದೇ ಕಾರಣಕ್ಕೆ ಪ್ರೈವೇಟ್ ಮೆಸೇಜ್ ಬಾಕ್ಸ್ ಬೆಸ್ಟ್ ಆಪ್ ಅನ್ನಿಸಿಕೊಂಡಿದೆ.

Best Mobiles in India

Read more about:
English summary
Top 5 Best Apps To Hide Messages On Android 2019

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X