Subscribe to Gizbot

ಟ್ರೂಕಾಲರ್ ಭಾರತೀಯ ಬಳಕೆದಾರರಿಗೆ ನೀಡದ ಹೊಸ ಆಯ್ಕೆಗಳಿದು.!

Written By: Lekhaka

ಸ್ಮಾರ್ಟ್ ಫೋನ್ ಬಳಕೆದಾರರಲ್ಲಿ ಅತೀ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಕಾಲರ್ ಐಡಿ ಆಪ್ ಟ್ರೂಕಾಲರ್ ಭಾರತೀಯ ಬಳಕೆದಾರರಿಗೆ ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ.

ಟ್ರೂಕಾಲರ್ ಭಾರತೀಯ ಬಳಕೆದಾರರಿಗೆ ನೀಡದ ಹೊಸ ಆಯ್ಕೆಗಳಿದು.!

ನಂಬರ್ ಸ್ಕ್ಯಾನರ್ ಮತ್ತು ಫಾಸ್ಟ್ ಟ್ರಾಕ್ ನಂಬರ್ ಎನ್ನುವ ಎರಡು ಸೇವೆಯನ್ನು ನೀಡಲಿದೆ. ಈ ಆಯ್ಕೆಯೂ ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದ ಎನ್ನಲಾಗಿದೆ.

ಅಪರಿವಚಿತ ಕರೆಗಳನ್ನು ಗುರುತಿಸಲು, ಸ್ಪ್ಯಾಮ್ ಕರೆಗಳು ಮತ್ತು SMSಗಳನ್ನು ಕಂಡುಹಿಡಿಯಲು ಟ್ರೂಕಾಲರ್ ಬಳಕೆದಾರರಿಗೆ ಸಹಾಯಕಾರಿಯಾಗಿದ್ದು, ಈಗ ಹೊಸದಾಗಿ ನಂಬರ್ ಸ್ಕ್ಯಾನರ್, ಇದು ಬಿಸಸೆಸ್ ಕಾರ್ಡ್ ನಲ್ಲಿರುವ ನಂಬರ್ ಅನ್ನು ಸ್ಕ್ಯಾನ್ ಮಾಡಿ ಸೇವ್ ಮಾಡಿಕೊಳ್ಳಲಿದೆ.

ವರ್ಷಕ್ಕೆ 6 ಸಾವಿರ ಎಂಜಿನಿಯರ್‌ಗಳ ನೇಮಕಕ್ಕೆ ಇನ್ಫೋಸಿಸ್ ಅಸ್ತು!!

ಇನ್ನು ಫಾಸ್ಟ್ ಟ್ರಾಕ್ ನಂಬರ್ ಸೇವೆಯೂ ಟೋಲ್ ಫ್ರಿ ಮತ್ತು ತುರ್ತು ಅವಶ್ಯಕತೆ ಇರುವ ಸೇವೆಗಳನ್ನು ಪಡೆದುಕೊಳ್ಳಲು ಸಹಾಯಕಾರಿಯಾಗಲಿದೆ ಎನ್ನಲಾಗಿದೆ. ಇದು ಇಂಟರ್ನೆಟ್ ಕನೆಕ್ಷನ್ ಇಲ್ಲದೇಯೂ ಬಳಕೆ ಮಾಡಿಕೊಳ್ಳಬಹುದಾಗಿದೆ.

ಒಟ್ಟಿನಲ್ಲಿ ಗ್ರಾಹಕರ ಸೇವೆಗೆ ವಿವಿಧ ಹೊಸ ಆಯ್ಕೆಯನ್ನು ನೀಡಿರುವ ಟ್ರೂಕಾಲರ್ ಇನ್ನಷ್ಟು ಬಳಕೆದಾರರನ್ನು ಹೊಂದುವ ಯೋಜನೆಯನ್ನು ಹೊಂದಿದೆ ಎನ್ನಲಾಗಿದೆ.

English summary
Truecaller, which is a popular caller-ID app among smartphone users is adding two new features to its Android version.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot