ವಾಟ್ಸ್ ಆಪ್ ನಲ್ಲಿ ತನ್ನಷ್ಟಕ್ಕೇ ಡಿಲೀಟ್ ಆಗಲಿದೆ ನಿಮ್ಮ ಎಲ್ಲಾ ಮೆಸೇಜ್ ಗಳು!

|

ಎಲ್ಲರಿಗೂ ತಿಳಿದಿರುವ ಮತ್ತು ಅತೀ ಹೆಚ್ಚು ಮಂದಿ ಬಳಕೆ ಮಾಡುವ ಮೆಸೇಜಿಂಗ್ ಆಪ್ ಅಂದರೆ ಅದು ವಾಟ್ಸ್ ಆಪ್. ಇತ್ತೀಚೆಗೆ ಬಂದಿರುವ ಸುದ್ದಿಯ ಪ್ರಕಾರ ವಾಟ್ಸ್ ಆಪ್ ನಿಮ್ಮ ಎಲ್ಲಾ ಮೆಸೇಜ್ ಗಳನ್ನು ಡಿಲೀಟ್ ಮಾಡಲಿದೆಯಂತೆ. ಒಂದು ವೇಳೆ ನಿಮಗೆ ನಿಮ್ಮ ಮೆಸೇಜ್ ಗಳು ಬೇಕಿದ್ದಲ್ಲಿ ನೀವೇನು ಮಾಡಬೇಕು ಗೊತ್ತಾ? ತಿಳಿಯಲು ಈ ಲೇಖನದ ಮುಂದಿನ ಭಾಗವನ್ನು ಓದಿ.

ವಾಟ್ಸ್ ಆಪ್ ನಲ್ಲಿ ತನ್ನಷ್ಟಕ್ಕೇ ಡಿಲೀಟ್ ಆಗಲಿದೆ ನಿಮ್ಮ ಎಲ್ಲಾ ಮೆಸೇಜ್ ಗಳು!

ಸುಮಾರು 1.5 ಬಿಲಿಯನ್ ಬಳಕೆದಾರರು ಮತ್ತು ಪ್ರತಿ ದಿನ ಸುಮಾರು 60 ಬಿಲಿಯನ್ ನಷ್ಟು ಮೆಸೇಜ್ ಗಳನ್ನು ಕಳುಹಿಸುವ ಎಲ್ಲರೂ ತಿಳಿದಿರುವ ಮೆಸೇಜಿಂಗ್ ಅಪ್ಲಿಕೇಷನ್ ಅಂದರೆ ಅದು ವಾಟ್ಸ್ ಆಪ್. ಸದ್ಯ ಇತರೆ ಎಲ್ಲಾ ಮೆಸೇಜಿಂಗ್ ಸೇವೆಗಳಿಗಿಂತ ಅತೀ ಹೆಚ್ಚು ಬಳಕೆಯಲ್ಲಿರುವುದು ವಾಟ್ಸ್ ಆಪೇ ಆಗಿದೆ.

ಖಂಡಿತವಾಗಲೂ ಇನ್ಸೆಂಟ್ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ ಆಪ್ ಇತರೆ ಎಲ್ಲಾ ಮೆಸೇಜಿಂಗ್ ಫ್ಲಾಟ್ ಫಾರ್ಮ್ ಗಳಿಗಿಂತ ಅತ್ಯದ್ಭುತವಾಗಿರುವ ಮತ್ತು ವಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಲು ಇರುವ ಬೆಸ್ಟ್ ಆಪ್ ಅನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಇತ್ತೀಚೆಗೆ ಹರಿದಾಡುತ್ತಿರುವ ಸುದ್ದಿಗಳಿಂದಾಗಿ ವಾಟ್ಸ್ ಆಪ್ ಬಳಕೆಯ ಬಗ್ಗೆ ಬಳಕೆದಾರರಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿದೆ.

ಇತ್ತೀಚೆಗೆ ವಾಟ್ಸ್ ಆಪ್ ಹಲವು ಕಾರಣಗಳಿದಾಗಿ ಸುದ್ದಿಯಲ್ಲಿದೆ. ವಾಟ್ಸ್ ಆಪ್ ನ್ನು ಇನ್ನಷ್ಟು ಉತ್ತಮಗೊಳಿಸಲು ವಾಟ್ಸ್ ಆಪ್ ಸಂಸ್ಥೆ ಪ್ರಯತ್ನಿಸುತ್ತಿದೆ. ವಾಟ್ಸ್ ಆಪ್ ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡಲು ಮತ್ತು ಉತ್ತಮ ಸೇವೆಯನ್ನು ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ವಾಟ್ಸ್ ಆಪ್ ಗ್ರಾಹಕರು ಗಮನ ಹರಿಸುವುದು ಬಹಳ ಮುಖ್ಯವಾಗಿದೆ.

ಹಲವು ದಿನಗಳಿಂದ ವಾಟ್ಸ್ ಆಪ್ ನಲ್ಲೇ ಆಕ್ಟೀವ್ ಆಗಿರುವ ಗ್ರಾಹಕರಿಗೆ ವಾಟ್ಸ್ ಆಪ್ ಒಂದು ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆ ಇದೆ. ಅದೇನೆಂದರೆ ಅವರ ಡಾಟಾಗಳು ಇನ್ನು ವಾಟ್ಸ್ ಆಪ್ ನಲ್ಲಿ ಸೇವ್ ಆಗಿ ಇರುವುದಿಲ್ಲ. ಹೌದು ನಿಮ್ಮ ಹಳೆಯ ವಾಟ್ಸ್ ಆಪ್ ಮೆಸೇಜ್ ಗಳೆಲ್ಲವೂ ಸ್ವಯಂಚಾಲಿತವಾಗಿ ಇನ್ನು ಮುಂದೆ ಡಿಲೀಟ್ ಆಗುತ್ತದೆ. ನಿಮ್ಮ ಅಗತ್ಯದ ಮೆಸೇಜ್ ಗಳು ನಿಮಗೆ ಬೇಕಿದ್ದರೆ ನೀವದನ್ನು ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳಬೇಕು.

ಆದರೆ ಇದು ಶಾಕ್ ಕೊಡುವ ಸುದ್ದಿಯೇನಲ್ಲ. ಯಾಕೆಂದರೆ ಈ ಬಗ್ಗೆ ಈಗಾಗಲೇ ವಾಟ್ಸ್ ಆಪ್ ಸಂಸ್ಥೆ ಈ ವರ್ಷದ ಅಗಸ್ಟ್ ನಲ್ಲಿಯೇ ಪ್ರಕಟಣೆ ನೀಡಿತ್ತು. ನಿಮಗೆ ಅಗತ್ಯವಿರುವ ಡಾಟಾವನ್ನು ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳುವಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಸೂಚಿಸಲಾಗಿತ್ತು. ಗೂಗಲ್ ಡ್ರೈವ್ ನಲ್ಲಿ ಸ್ಟೋರ್ ಮಾಡಿ ಇಡುವುದಕ್ಕೆ ವಾಟ್ಸ್ ಆಪ್ ಬಳಕೆದಾರರಿಗೆ ಅವಕಾಶವಿರುತ್ತದೆ. ಗೂಗಲ್ ಡ್ರೈವ್ ನಲ್ಲಿ ಉಚಿತವಾಗಿ ಸ್ಟೋರೇಜ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವಾಟ್ಸ್ ಆಪ್ ಡಾಟಾವನ್ನು ಸ್ಟೋರ್ ಮಾಡಲು ಗೂಗಲ್ ಡ್ರೈವ್ ನಲ್ಲಿ ಜಾಗವಿಲ್ಲ ಎಂದು ಗ್ರಾಹಕರು ಚಿಂತಿಸುವ ಅಗತ್ಯವಿಲ್ಲ.

ನವೆಂಬರ್ 12 ರಿಂದ ವಾಟ್ಸ್ ಆಪ್ ತನ್ನ ಹಳೆಯ ವಾಟ್ಸ್ ಆಪ್ ಮೆಸೇಜ್ ಗಳ ಕಾಪಿಗಳನ್ನು ಡಿಲೀಟ್ ಮಾಡುವುದಕ್ಕೆ ಪ್ರಾರಂಭಿಸಿದ್ದು ಯಾವ ಬಳಕೆದಾರರು ಬ್ಯಾಕ್ ಅಪ್ ತೆಗೆದಿಟ್ಟುಕೊಂಡಿಲ್ಲವೋ ಅವರ ಮೆಸೇಜ್ ಗಳು ಡಿಲೀಟ್ ಆಗಲಿದೆ. ಒಂದು ವೇಳೆ ನಿಮ್ಮ ವಾಟ್ಸ್ ಆಪ್ ಚಾಟ್ ನ ಹೊಸ ಬ್ಯಾಕ್ ಅಪ್ ಕಾಪಿ ಇಲ್ಲದೇ ಇದ್ದಲ್ಲಿ ಕೂಡಲೇ ಯಾವುದೇ ರಿಸ್ಕ್ ತೆಗೆದುಕೊಳ್ಳದೇ ಫೈಲ್ ಗಳನ್ನು ಸ್ಟೋರ್ ಮಾಡಿಕೊಳ್ಳಿ. ಇಲ್ಲದೇ ಇದ್ದರೆ ನಿಮ್ಮ ಡಾಟಾಗಳು ಡಿಲೀಟ್ ಆಗಲಿದೆ.

ವಾಟ್ಸ್ ಆಪ್ ಮೆಸೇಜ್ ಗಳನ್ನು ಬ್ಯಾಕ್ ಅಪ್ ತೆಗೆದುಕೊಳ್ಳುವುದು ಹೇಗೆ?

ನಿಮ್ಮ ಬ್ಯಾಕ್ ಅಪ್ ಆಕ್ಟೀವ್ ಆಗಿ ಇರಬೇಕು ಎಂದರೆ ಬ್ಯಾಕ್ ಅಪ್ಸ್ ನ್ನು ಅನೇಬಲ್ ಮಾಡಿ ಇರಬೇಕು.ಹೊಸದಾಗಿ ಒಂದು ಬ್ಯಾಕ್ ಅಪ್ ತೆಗೆದಿಟ್ಟುಕೊಂಡಿರಿ. ಅದನ್ನು ಸಾಧಿಸಲು ನೀವು ಸೆಟ್ಟಿಂಗ್ಸ್> ಕಾನ್ವರ್ಸೇಷನ್> ಬ್ಯಾಕ್ ಅಪ್ ನ್ನು ಆಯ್ಕೆ ಮಾಡಿಕೊಳ್ಳಬಹುದು. ಅಂತಿಮವಾಗಿ ಫುಲ್ ಬ್ಯಾಕ್ ಅಪ್ ನ್ನು ಆಯ್ಕೆ ಮಾಡಿಕೊಳ್ಳಿ.

ಇದಿಷ್ಟೇ ಅಲ್ಲದೆ ಇತರೆ ಆಯ್ಕೆಗಳೂ ಇದ್ದು ಸ್ವಯಂಚಾಲಿತವಾಗಿ ಮತ್ತು ನಿಗದಿತ ಸಮಯಕ್ಕೆ ಬ್ಯಾಕ್ ಅಪ್ ಆಗುವಂತೆ ಮಾಡಬಹುದು. ಆದರೆ ಈ ಬ್ಯಾಕ್ ಅಪ್ ಪ್ರೊಸೀಜರ್ ಗಳು ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ಅನ್ವಯಿಸುತ್ತದೆ. ಒಂದು ವೇಳೆ ಆಪಲ್ ಐಓಎಸ್ ಆಗಿದ್ದಲ್ಲಿ ಐಕ್ಲೌಡ್ ನಲ್ಲಿ ಈ ಡಾಟಾಗಳು ಸೇವ್ ಆಗಿ ಇರುತ್ತದೆ.

Best Mobiles in India

English summary
WARNING! WhatsApp To Delete All Your Messages

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X