Subscribe to Gizbot

ಆಂಡ್ರಾಯ್ಡ್‌ ಬಳಕೆದಾರರಿಗೆ ವಾಟ್ಸ್‌ಆಪ್ ಕೊಟ್ಟ ಹೊಸ ಫೀಚರ್: ಏನದು.? ತಿಳಿಯಲೇಬೇಕಾದದ್ದು..!

Written By:

ಸೋಶಿಯಲ್ ಮೇಸೆಂಜಿಗ್ ತಾಣಗಳಲ್ಲಿ ವಾಟ್ಸ್‌ಆಪ್ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಸುಮಾರು ಬಿಲಿಯನ್ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಹಿನ್ನಲೆಯಲ್ಲಿ ದಿನಕ್ಕೊಂದು ಹೊಸ ಆಯ್ಕೆಗಳನ್ನು ನೀಡುತ್ತಿದೆ. ಈಗಾಗಲೇ ಪೇಮೆಂಟ್ ಸೇವೆಯನ್ನು ನೀಡಲು ಯೋಜನೆಯನ್ನು ಸಿದ್ಧಪಡಿಸುತ್ತಿದ್ದು, ಅದರೊಂದಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ.

ಆಂಡ್ರಾಯ್ಡ್‌ ಬಳಕೆದಾರರಿಗೆ ವಾಟ್ಸ್‌ಆಪ್ ಕೊಟ್ಟ ಹೊಸ ಫೀಚರ್: ಏನದು.?

ವಾಟ್ಸ್‌ಆಪ್ ನೀಡಿರುವ ಹೊಸ ಆಯ್ಕೆಯಿಂದ ವಾಟ್ಸ್‌ಆಪ್ ಬಳಕೆಯೂ ಮತ್ತಷ್ಟು ಸುಲಭ ಮತ್ತು ಜನಪ್ರಿಯವಾಗಲಿದ್ದು, ಈ ಹೊಸ ಆಯ್ಕೆಯಿಂದಾಗಿ ಚಾಟ್‌ನಲ್ಲಿ ಇನ್ನಷ್ಟು ಫೋಟೋಗಳು, ವಿಡಿಯೋಗಳು ರಾರಾಜಿಸಲಿದೆ ಎನ್ನಲಾಗಿದೆ. ಈ ಹೊಸ ಆಯ್ಕೆಯಿಂದ ಬಳಕೆದಾರರ ಸ್ಮಾರ್ಟ್‌ಫೋನಿನಲ್ಲಿಯೂ ಹೆಚ್ಚಿನ ಜಾಗವು ಉಳಿತಾಯವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡೀಲಿಟ್ ಮಾಡಿದ ಮೀಡಿಯಾ:

ಡೀಲಿಟ್ ಮಾಡಿದ ಮೀಡಿಯಾ:

ಒಮ್ಮೆ ನೀವು ಚಾಟ್ ನಲ್ಲಿ ಬಂದಂತಹ ಮೀಡಿಯಾವನ್ನು ಡೌನ್‌ಲೋಡ್ ಮಾಡಿ, ನಂತರ ಡಿಲೀಟ್ ಮಾಡಿದರೆ ಅದನ್ನು ಮತ್ತೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ. ವಾಟ್ಸ್‌ಆಪ್ ಹೊಸ ಆಯ್ಕೆಯಲ್ಲಿ ಮೊಬೈಲ್‌ನಲ್ಲಿ ಡಿಲೀಟ್ ಮಾಡಿದ ಮೀಡಿಯಾ ವಾಟ್ಸ್‌ಆಪ್ ನಲ್ಲಿ ಉಳಿದುಕೊಳ್ಳಲಿದ್ದು, ನೀವು ಬೇಕೆಂದ ಸಂದರ್ಭದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಸರ್ವರ್ ನಲ್ಲಿ ಇರಲಿದೆ:

ಸರ್ವರ್ ನಲ್ಲಿ ಇರಲಿದೆ:

ನೀವು ಒಮ್ಮೆ ಡೌನ್‌ಲೋಡ್ ಮಾಡಿದ ನಂತರ ಮೊಬೈಲ್‌ನಲ್ಲಿ ಡಿಲೀಟ್ ಮಾಡಿದರೂ ಸಹ ವಾಟ್ಸ್‌ಆಪ್ ತನ್ನ ಸರ್ವರ್ ನಲ್ಲಿ ಹಾಗೇ ಇಟ್ಟುಕೊಂಡಿರಲಿದ್ದು, ಬೇಕೆಂದರೆ ಮತ್ತೇ ಡೌನ್‌ಲೋಡ್ ಮಾಡಬಹುದಾಗಿದೆ. ಇದು ಎನ್‌ಸ್ಕಿಪ್ಟ್ ಆಗಿರುವುದರಿಂದ ಯಾರು ಸಹ ನೋಡಲು ಸಾಧ್ಯವಾಗುವುದಿಲ್ಲ.

ಆಂಡ್ರಾಯ್ಡ್ ನಲ್ಲಿ ಮಾತ್ರ:

ಆಂಡ್ರಾಯ್ಡ್ ನಲ್ಲಿ ಮಾತ್ರ:

ಡಿಲೀಟ್ ಮಾಡಿದ ಮೀಡಿಯಾವನ್ನು ಮತ್ತೆ ಹಿಂದಕ್ಕೆ ಪಡೆಯುವ ಆಯ್ಕೆಯನ್ನು ಸದ್ಯ ಆಂಡ್ರಾಯ್ಡ್ ವಾಟ್ಸ್‌ಆಪ್ ಬೀಟಾ ಬಳಕೆದಾರಿಗೆ ಮಾತ್ರವೇ ದೊರೆಯಲಿದ್ದು, ನಂತರದಲ್ಲಿ ಆಪಲ್ ಬಳಕೆದಾರಿಗೂ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಡೆಯುವುದು ಹೇಗೆ:

ಪಡೆಯುವುದು ಹೇಗೆ:

ಒಮ್ಮೆ ನೀವು ಸ್ಮಾರ್ಟ್‌ಫೋನಿನಲ್ಲಿ ವಾಟ್ಸ್ಆಪ್ ಮೀಡಿಯಾಗಳನ್ನು ಡಿಲೀಟ್ ಮಾಡಿದ ಸಂದರ್ಭದಲ್ಲಿ, ಮತ್ತೇ ನೀವು ವಾಟ್ಸ್‌ಆಪ್ ಚಾಟ್ ಗೆ ಹಿಸ್ಟರಿ ನೋಡಿದರೆ ನೀವು ಡಿಲೀಟ್ ಮಾಡಿದ ಮೀಡಿಯಾ ಕಾಣಿಸಿಕೊಳ್ಳಲಿದೆ. ಮತ್ತೇ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಓದಿರಿ: ಕೇಬಲ್-ಇಂಟರ್ನೆಟ್ ಬೇಡ: ಬರಲಿದೆ ಜಿಯೋ ಹೋಮ್ TV..! ಉಚಿತ HD ಚಾನಲ್‌ಗಳು..!

English summary
WhatsApp for Android gets new feature: All you need to know. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot