Subscribe to Gizbot

ವಾಟ್ಸಪ್ ಆಪ್ ಓಪನ್ ಮಾಡದೆಯೇ ಎಲ್ಲಾ ಸೇವೆಗಳನ್ನು ಶಾರ್ಟ್ಕಟ್ನಲ್ಲಿ ಬಳಸಬಹುದು!!

By: Prathap T

ಇನ್ನು ಮುಂದೆ ವಾಟ್ಸಪ್ ಬಳಸಲು ಆಪ್ ಓಪನ್ ಮಾಡದೆ ಚಾಟ್ ಮಾಡಬಹುದು. ಫೋಟೋ ತೆಗೆದು ಕಳುಹಿಸಬಹುದು, ಸ್ಟಾರ್ಡ್ ಮೇಸೇಜ್ಗಳನ್ನು ಓದಬಹುದು!!

ವಾಟ್ಸಪ್ ಆಪ್ ಓಪನ್ ಮಾಡದೆಯೇ ಎಲ್ಲಾ ಸೇವೆಗಳನ್ನು ಶಾರ್ಟ್ಕಟ್ನಲ್ಲಿ ಬಳಸಬಹುದು!!

ಹೌದು, ಆಶ್ಚರ್ಯವಾದರೂ ನಂಬಲೇ ಬೇಕಾದ ಸತ್ಯ. ಆಸಕ್ತಿದಾಯಕ ವೈಶಿಷ್ಟ್ಯಗಳೊಂದಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ವಾಟ್ಸಪ್ ಬೀಟಾ ಆವೃತ್ತಿಯನ್ನು ಪರಿಚಯಿಸಲಾಗಿದ್ದು, ಆಮೂಲಕ ವಾಟ್ಸಪ್ನಲ್ಲಿರುವ ಎಲ್ಲಾ ಸೇವೆಗಳನ್ನು ಶಾರ್ಟ್ಕಟ್ನಲ್ಲಿ ಬಳಸಬಹುದಾಗಿದೆ. ಹೀಗಾಗಿ ಆಪ್ ಓಪನ್ ಮಾಬೇಕಾದ ಪ್ರಮೇಯವೇ ಇಲ್ಲದೇ ಅತ್ಯಂತ ಸರಳವಾಗಿ ಬಳಕೆಗೆ ಅನುವು ಮಾಡಿಕೊಡಲಾಗಿದೆ.

ಆಂಡ್ರಾಯ್ಡ್ ಪೊಲೀಸ್ ವರದಿಯ ಪ್ರಕಾರ, ಆಂಡ್ರಾಯ್ಡ್ 7.1 ನೊಗಾಟ್ ಹೊಂದಿರುವ ಸ್ಮಾರ್ಟ್ಫೋನಿನಲ್ಲಿ ಮಾತ್ರ ಈ ಹೊಸ ಬೀಟಾ ವಾಟ್ಸಪ್ ಸೇವೆ ಪಡೆಯಬಹುದಾಗಿದೆ. ಈ ಸ್ಮಾರ್ಟ್ಫೋನಿನಲ್ಲಿ ವಾಟ್ಸಪ್ ಬೀಟಾ ವರ್ಸನ್ 2.17.277 ಇನ್ಸ್ಟಾಲ್ ಮಾಡಿಕೊಂಡರೆ ಎಲ್ಲಾ ಸೇವೆಗಳ ಶಾರ್ಟ್ಕಟ್ನಲ್ಲಿ ಲಭ್ಯವಾಗಲಿವೆ. ಆಮೂಲಕ ಅಪ್ಲಿಕೇಶನ್ ಓಪನ್ ಮಾಡದೆಯೇ ಶಾರ್ಟ್ಕಟ್ನಲ್ಲಿ ಆಸಕ್ತಿದಾಯಕ ವೈಶಿಷ್ಟ್ಯತೆಯೊಂದಿಗೆ ವಾಟ್ಸಪ್ ಬಳಕೆಯ ಹೊಸ ಅನುಭವ ಪಡೆಯಬಹುದಾಗಿದೆ.

ಡಿಎಲ್‌ಗೂ ಆಧಾರ್ ಲಿಂಕ್ ಕಡ್ಡಾಯ!!..ಉಪಯೋಗ ಏನು?.ಲಿಂಕ್ ಮಾಡುವುದು ಹೇಗೆ?

ನಿಮ್ಮ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 7.1 ನೊಗಟ್ ರನ್ ಆಗಿದ್ದರೆ, ವಾಟ್ಸಪ್ ಇತ್ತೀಚಿನ ಬೀಟಾ ವರ್ಸನ್ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ವಾಟ್ಸಪ್ ಐಕಾನ್ ಅನ್ನು ಲಾಂಕ್ ಪ್ರೆಸ್ ಮಾಡಿ ಒತ್ತಿದರೆ ಅಪ್ಲಿಕೇಶನ್ನ ಶಾರ್ಟ್ಕಟ್ಗಳನ್ನು ಪಡೆಯಹುದಾಗಿದೆ.

ಹಾಗೆ ಮಾಡಿದಾಗ ಬಳಕೆದಾರರು ಸ್ಟಾರ್ಡ್ ಮೆಸೇಜ್ಗಳು, ಹೊಸ ಚಾಟ್, ಮತ್ತು ಕ್ಯಾಮರಾಗಳಿಗಾಗಿ ಆಯ್ಕೆಗಳನ್ನು ಪಡೆಯುತ್ತಾರೆ. ಹೋಮ್ ಪರದೆಯಿಂದ ನೇರವಾಗಿ ಹೊಸ ಸಂದೇಶಕ್ಕೆ ಹಾದು ಹೋಗುವ ಸಾಮರ್ಥ್ಯವು ಬಳಕೆದಾರರಿಗೆ ಬಹಳ ಸಹಾಯಕವಾಗಿದೆಯೆಂದು ಸಾಬೀತುಪಡಿಸುತ್ತದೆ.

ಹೋಮ್ ಪರದೆಯಲ್ಲಿನ ಅಪ್ಲಿಕೇಶನ್ ಶಾರ್ಟ್ಕಟ್ಗಳಿಂದ ಸ್ಟಾರ್ರೆಡ್ ಮೆಸೇಜ್ಗಳ ಆಯ್ಕೆಗೆ ಸಹ ಪ್ರವೇಶವನ್ನು ಅಪ್ಲಿಕೇಶನ್ ಅನ್ನು ತೆರೆಯದೆಯೇ ಮತ್ತು ಸ್ಟಾರ್ರೆಡ್ ಮೆಸೇಜ್ಗಳಿಗೆ ಹೋಗುವಿಲ್ಲದೆಯೇ ನಂತರ ಅವುಗಳನ್ನು ವೀಕ್ಷಿಸಲು ಸಂದೇಶಗಳನ್ನು ಹೊಂದಿರುವವರಿಗೆ ಉತ್ತಮವಾಗಿರುತ್ತದೆ. ಕ್ಯಾಮರಾ ಶಾರ್ಟ್ಕಟ್ ಎನ್ನುವುದು ಸ್ನ್ಯಾಪ್ಚಾಟ್ ಸ್ಟೋರೀಸ್ನಂತೆಯೇ ಇರುವ ಸ್ಥಿತಿಯಲ್ಲಿಯೇ ವೈಶಿಷ್ಟ್ಯವನ್ನು ವಾಟ್ಸಪ್ ತೆರೆಯುವಂತೆ ಪ್ರಯತ್ನಿಸುತ್ತಿರುವ ಒಂದು ಮಾರ್ಗವಾಗಿದೆ.

ಅಪ್ಲಿಕೇಶನ್ ಶಾರ್ಟ್ಕಟ್ಗಳನ್ನು ಹೋಮ್ ಸ್ಕೋನ್ನಲ್ಲಿ ಎಳೆದು ಬಿಡುವುದರ ಮೂಲಕ ಎಲ್ಲಿಯಾದರೂ ಸ್ಥಳಾಂತರಿಸಬಹುದು. ಅದನ್ನು ಹೋಮ್ ಸ್ಕೋನ್ನ ಪರದೆಯಲ್ಲಿ ಸ್ವತಂತ್ರ ಶಾರ್ಟ್ಕಟ್ಗಳಾಗಿ ಬಳಸಬಹುದಾಗಿದೆ. ಈ ವೈಶಿಷ್ಟ್ಯವು ಪರೀಕ್ಷೆಯ ಹಂತದಲ್ಲಿದೆ. ವಾಟ್ಸಪ್ಗೆ ಬರುವ ಇತ್ತೀಚಿನ ಕರೆಗಳು ಮತ್ತು ಸಂಭಾಷಣೆಗಳನ್ನು ಶಾರ್ಟ್ಕಟ್ಗೆ ಸೇರ್ಪಡೆಗೊಳಿಸುವ ಸಾಧ್ಯತೆಯಿದ್ದು, ಇದು ಬಳಕೆದಾರರಿಗೆ ಇನ್ನಷ್ಟು ಉಪಯುಕ್ತವಾಗಿದೆ.

Read more about:
English summary
The App Shortcuts will be available for those users who have the WhatsApp beta version 2.17.277 installed on their device.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot