Subscribe to Gizbot

ವಾಟ್ಸ್‌ಆಪ್ ವಾಯ್ಸ್ ಮೇಸೆಜ್‌ ಬದಲಾಗಲಿದೆ..!

Written By:

ಈಗಾಗಲೇ ತನ್ನ ಬಳಕೆದಾರರಿಗೆ ಸಾಕಷ್ಟು ಹೊಸ ಹೊಸ ಆಯ್ಕೆಯನ್ನು ಬಳಕೆಗೆ ನೀಡಿರುವ ವಾಟ್ಸ್‌ಆಪ್, ಈ ಬಾರಿ ಮತ್ತೊಂದು ಹೊಸ ಆಯ್ಕೆಯೊಂದಿಗೆ ಆಪ್‌ಡೇಟ್‌ನಲ್ಲಿ ಕಾಣಿಸಿಕೊಂಡಿದೆ. ಸದ್ಯ ವಾಟ್ಸ್‌ಆಪ್ ಪೇಮೆಂಟ್ ಸೇವೆಯೂ ಪರೀಕ್ಷೆಯ ಹಂತದಲ್ಲಿದ್ದು, ದಿನ ಕಳೆದಂತೆ ಬಳಕೆಗೆ ಲಭ್ಯವಾಗಲಿದೆ. ಇದರೊಂದಿಗೆ ವಾಟ್ಸ್ಆಪ್‌ನಲ್ಲಿ ಯೇ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವ ವಾಟ್ಸ್‌ಆಪ್ ವಾಯ್ಸ್ ಮೇಸೆಜ್‌ನಲ್ಲಿ ಬದಲಾವಣೆಯನ್ನು ಮಾಡಲು ಮುಂದಾಗಿದೆ ಎನ್ನಲಾಗಿದೆ.

 ವಾಟ್ಸ್‌ಆಪ್ ವಾಯ್ಸ್ ಮೇಸೆಜ್‌ ಬದಲಾಗಲಿದೆ..!

ವಾಟ್ಸ್‌ಆಪ್ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ವಾಯ್ಸ್ ಮೇಸೆಜ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದುವರೆಗೂ ವಾಯ್ಸ್ ರೆಕಾರ್ಡ್ ಮಾಡಬೇಕಾದರೆ ರೆಕಾರ್ಡಿಂಗ್ ಬಟನ್ ಅನ್ನು ಹಿಡಿದುಕೊಂಡು ರೆಕಾರ್ಡ್ ಆದ ಮೇಲೆ ಬಿಡಬೇಕಾಗಿತ್ತು. ಮಧ್ಯದಲ್ಲದೇ ಬಿಟ್ಟರೆ ಅರ್ಧಕ್ಕೆ ಕಟ್ ಆಗುತ್ತಿತ್ತು. ಆದರೆ ಈಗ ಈ ಸಮಸ್ಯೆಗೆ ಮುಕ್ತಿಯನ್ನು ನೀಡಲು ವಾಟ್ಸ್‌ಆಪ್ ಮುಂದಾಗಿದೆ. ಬಳಕೆದಾರರು ವಾಯ್ಸ್‌ ರೆಕಾರ್ಡರ್ ಅನ್ನು ಲಾಕ್ ಮಾಡುವ ಹೊಸ ಆಯ್ಕೆಯನ್ನು ಪಡೆದುಕೊಂಡಿದ್ದಾರೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಆಂಡ್ರಾಯ್ಡ್ ಬಳಕೆದಾರರಿಗೆ ಈ ಹೊಸ ಆಯ್ಕೆಯೂ ಲಭ್ಯವಿರಲಿದ್ದು, ವಾಯ್ಸ್ ರೆಕಾರ್ಡಿಂಗ್ ಅನ್ನು ಲಾಕ್ ಮಾಡಿ ಎಷ್ಟು ಬೇಕಾದರೂ ರೆಕಾರ್ಡ್ ಮಾಡಿ ಕೊನೆಯಲ್ಲಿ ಲಾಕ್ ಅನ್ನು ಒಪನ್ ಮಾಡಿದರೆ ಸಾಕು ನಿಮ್ಮ ವಾಯ್ಸ್ ಸಂಪೂರ್ಣವಾಗಿ ರೆಕಾರ್ಡ್ ಆಗಲಿದೆ. ಇದು ವಾಟ್ಸ್‌ಆಪ್ ವಾಯ್ಸ್ ಮೇಸೆಜ್ ಬಳಕೆ ಮಾಡಿಕೊಳ್ಳುವವರಿಗೆ ಹೆಚ್ಚಿನ ಸಹಾಯವನ್ನು ಮಾಡಲಿದೆ.

 ವಾಟ್ಸ್‌ಆಪ್ ವಾಯ್ಸ್ ಮೇಸೆಜ್‌ ಬದಲಾಗಲಿದೆ..!

ಸದ್ಯ ಈ ಹೊಸ ಆಯ್ಕೆಯೂ ಬೀಟಾ ಬಳಕೆದಾರರಿಗೆ ಮಾತ್ರವೇ ದೊರೆಯುತ್ತಿದ್ದು, ಶೀಘ್ರವೇ ಎಲ್ಲಾ ಬಳಕೆದಾರರಿಗೆ ಮುಕ್ತವಾಗಲಿದೆ ಎನ್ನಲಾಗಿದೆ. ಈ ಹೊಸ ಆಯ್ಕೆಯೂ ವಾಯ್ಸ್ ಮೇಸೆಜ್ ವಿಭಾಗದಲ್ಲಿ ಸಾಕಷ್ಟು ಬದಲಾವಣೆಗೆ ಸಾಕ್ಷಿಯಾಗಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಬಿಟಾ ಆವೃತ್ತಿ 2.18.102 ಬಳಕೆ ಮಾಡಿದರೆ ಮಾತ್ರ ಸದ್ಯ ಈ ಆಯ್ಕೆಯೂ ದೊರೆಯಲಿದೆ ಎನ್ನಲಾಗಿದೆ. ಇದಲ್ಲದೇ ಇನ್ನು ಹಲವು ಹೊಸ ಆಯ್ಕೆಗಳು ಬಳಕೆದಾರರಿಗೆ ಲಭ್ಯವಿರಲಿದ್ದು, ಪೇಮೆಂಟ್ ಸೇವೆಯೂ ಸಹ ಈ ಲಿಸ್ಟಿನಲ್ಲಿ ಸೇರಿಕೊಂಡಿದೆ.

English summary
WhatsApp Beta for Android Now Lets You Lock Voice Message Recording. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot