WhatsAppನಲ್ಲಿ ಇನ್ಮುಂದೆ ಚಾಟಿಂಗ್ ಜೊತೆ Shopping ಸಹ ಮಾಡಬಹುದು!

By Gizbot Bureau
|

ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಇಂದು ಹೊಸ ಫೀಚರ್ ನ್ನು ಬಿಡುಗಡೆಗೊಳಿಸಿದೆ. ವಾಟ್ಸ್ ಆಪ್ ನ ಬ್ಯುಸಿನೆಸ್ ಬಳಕೆದಾರರು ತಮ್ಮ ಪ್ರೊಡಕ್ಟ್ ಗಳನ್ನು ನೇರವಾಗಿ ಫ್ಲ್ಯಾಟ್ ಫಾರ್ಮ್ ಮೂಲಕ ಮಾರಾಟ ಮಾಡುವುದಕ್ಕೆ ಅವಕಾಶವಿರುತ್ತದೆ.ದೇಶದಲ್ಲಿ ಫೇಸ್ ಬುಕ್ ಪಾಲುದಾರರ ಜೊತೆಗೆ ಸಣ್ಣ ಬ್ಯುಸಿನೆಸ್ ಹೊಂದಿರುವವರೂ ಕೂಡ ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು.

WhatsAppನಲ್ಲಿ ಇನ್ಮುಂದೆ ಚಾಟಿಂಗ್ ಜೊತೆ Shopping ಸಹ ಮಾಡಬಹುದು!

ಗ್ರಾಹಕರಿಗೆ ನೋಟಿಫಿಕೇಷನ್ ಮೆಸೇಜ್ ಕಳಿಸುವುದಕ್ಕೂ ಕೂಡ ಈಗಾಗಲೇ ವಾಟ್ಸ್ ಆಪ್ ಶುಲ್ಕವನ್ನು ಖರೀದಿ ಮಾಡುತ್ತದೆ. ಆದಾಯ ಹೊಂದುವುದಕ್ಕೆ ಇದೀಗ ವಾಟ್ಸ್ ಆಪ್ ನ ಹೊಸ ಫೀಚರ್ ನಿಮಗೆ ಅನುವು ಮಾಡಿಕೊಡುತ್ತದೆ.

ಹೆಚ್ಚುವರಿ ಪಾವತಿಯನ್ನು ಇದಕ್ಕಾಗಿ ಮಾಡಬೇಕಾಗುತ್ತದೆ ಮತ್ತು ಯಾವುದೇ ಕೇಸ್ ನಲ್ಲಿ ಫೇಸ್ ಬುಕ್ ಗ್ರಾಹಕರ ಮತ್ತು ಬ್ಯುಸಿನೆಸ್ ಮಾಡುವವರ ಮಾಹಿತಿಯನ್ನು ಶೇರ್ ಮಾಡು ಅಧಿಕಾರವನ್ನು ಹೊಂದಿರುತ್ತದೆ ಎಂಬುದನ್ನು ಎಲ್ಲರೂ ನೆನಪಿನಲ್ಲಿ ಇಡಬೇಕಾಗುತ್ತದೆ .

ಬ್ಯುಸಿನೆಸ್ ನಲ್ಲಿ ಪಾರದರ್ಶಕತೆ ಹೊಂದುವುದಕ್ಕಾಗಿ ಈ ಫೀಚರ್ ಅನುವು ಮಾಡಿಕೊಡುತ್ತದೆ ಮತ್ತು ಹೊಸ ಸೇವೆಯು ಮಾರಾಟ ಪ್ರಕ್ರಿಯೆಯಲ್ಲಿ ಹೊಸ ಕ್ರಾಂತಿಗೆ ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ ವಾಟ್ಸ್ ಆಪ್ ನ ವಕ್ತಾರರು. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿಯು ಹೇಗೆ ಹಂಚಿಕೆಯಾಗುತ್ತದೆ ಎಂಬ ಬಗ್ಗೆ ಕೂಡ ಅವರು ಸಂಪೂರ್ಣ ವಿವರವನ್ನು ನೀಡಿರುತ್ತಾರೆ.

ಹೆಚ್ಚುವರಿಯಾಗಿ ಈ ಫ್ಲ್ಯಾಟ್ ಫಾರ್ಮ್ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಗೆ ಅವಕಾಶ ನೀಡುತ್ತದೆ ಮತ್ತು ಗ್ರಾಹಕರು ಮತ್ತು ಮಾರಾಟಗಾರರ ನಡುವಿನ ಬ್ಯುಸಿನೆಸ್ ಸಾರಾಂಶದ ಗುಪ್ತತೆ ಕಾಪಾಡುವುದಕ್ಕೂ ಕೂಡ ಸಹಾಯ ಮಾಡುತ್ತದೆ.

ಫೇಸ್ ಬುಕ್ ನಲ್ಲಿ ಸೇವೆ ನೀಡುವವರ ಸಾಮರ್ಥ್ಯಕ್ಕೆ ಅನುಗುಣವಾಗಿ ಇದರ ಲಾಭವನ್ನು ಪಡೆಯುವುದಕ್ಕೆ ಅವಕಾಶವಿದೆ ಎನ್ನುತ್ತಾರೆ ವಕ್ತಾರ.

ದೇಶದಲ್ಲಿ ಆಫ್ ಲೈನ್ ಮಾರಾಟಕ್ಕಿಂತ ಇದೀಗ ಆನ್ ಲೈನ್ ಮಾರಾಟ ಪ್ರಕ್ರಿಯೆಯು ಹೆಚ್ಚುಗೊಳ್ಳುತ್ತಿದೆ. ವಾಟ್ಸ್ ಆಪ್ ಬ್ಯುಸಿನೆಸ್ ಕೂಡ ಆನ್ ಲೈನ್ ಮಾರಾಟ ಪ್ರಕ್ರಿಯೆಗೆ ಸಹಾಯ ಮಾಡುವ ಮತ್ತೊಂದು ಅಧ್ಬುತ ಫ್ಲ್ಯಾಟ್ ಫಾರ್ಮ್ ಆಗಿದ್ದು ಹೊಸ ಹೊಸ ಫೀಚರ್ ಗಳ ಮೂಲಕ ಇದೀಗ ಹೆಚ್ಚು ಗ್ರಾಹಕರನ್ನು ತಲುಪುವ ಕೆಲಸಕ್ಕೆ ಮುಂದಾಗುತ್ತಿದೆ. ಸುಮಾರು 175 ಮಿಲಿಯನ್ ಮಂದಿ ವಾಟ್ಸ್ ಆಪ್ ಬ್ಯುಸಿನೆಸ್ ಖಾತೆಯನ್ನು ಜಗತ್ತಿನಾದ್ಯಂತ ಹೊಂದಿರುತ್ತಾರೆ.

ಇತರೆ ಫ್ಲ್ಯಾಟ್ ಫಾರ್ಮ್ ಗಳಾಗಿರುವ ಕೌಟ್ ಲೂಟ್,ಶಾಪ್ ಮ್ಯಾಟಿಕ್ ಗಳೂ ಈ ಸಂದರ್ಬದಲ್ಲಿ ಹೆಚ್ಚು ಅಭಿವೃದ್ಧಿ ಹೊಂದುತ್ತಿವೆ. ಹೊಸ ಫೀಚರ್ ಗಳನ್ನು ವಾಟ್ಸ್ ಆಪ್ ಬ್ಯುಸಿನೆಸ್ ನಲ್ಲಿ ಸೇರಿಸಲಾಗುತ್ತಿರುವುದರಿಂದ ಸದ್ಯ ಬ್ಯುಸಿನೆಸ್ ಇಂಡಸ್ಟ್ರಿಯಲ್ಲಿ ಹೊಸ ಅಲೆ ಸೃಷ್ಟಿಯಾಗಲು ಸಾಧ್ಯವಾಗಬಹುದು.

Most Read Articles
Best Mobiles in India

Read more about:
English summary
WhatsApp For Business Will Let You Shop Directly: Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X